ಮುಖ್ಯ ವಿಷಯಕ್ಕೆ ಹೋಗಿ (Skip to main content)
ದಾಂಪತ್ಯ ಯೋಗ
ಹೊಸ ಬಿಡುಗಡೆ11% ರಿಯಾಯಿತಿ
ವಿಮರ್ಶೆ

ದಾಂಪತ್ಯ ಯೋಗ

ಲೇಖಕ: ಡಾ. ನಾ. ಮೊಗಸಾಲೆ

₹160₹18011% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ದಾಂಪತ್ಯ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ನ್ಯಾಯಾಲಯದ ಕಟಕಟೆ ಹತ್ತಿದವರಲ್ಲಿ ವಿದ್ಯಾವಂತರು, ಬುದ್ಧಿವಂತರು, ಪ್ರಬುದ್ಧರು ಹಾಗೂ ಸಮಾಜದಲ್ಲಿ ಪ್ರತಿಷ್ಠಿತರು ಎನ್ನಿಸಿಕೊಂಡವರೇ ಅಧಿಕ. ಬಡವರು, ಅಶಿಕ್ಷಿತರು ನ್ಯಾಯಾಲಯಗಳ ಹತ್ತಿರ ಸುಳಿದವರು ಅಪರೂಪದಲ್ಲಿ ಅಪರೂಪ. ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಅಂತಹ ಪ್ರತಿಷ್ಠಿತರಲ್ಲಿ ಸುಮಾರು ಶೇಕಡಾ ಇಪ್ಪತ್ತರಷ್ಟು ದಂಪತಿಗಳಿಗೆ ಲೈಂಗಿಕ ವಿಜ್ಞಾನದ ಸರಳ ಪರಿಚಯವೂ ಇರಲಿಲ್ಲ. ತಪ್ಪರಿಮೆಯಿಂದ ನ್ಯಾಯಾಲಯದ ಕಟಕಟೆ ಹತ್ತಿದ್ದಾರೆ ಎಂದರೆ ಆಶ್ಚರ್ಯವಾಗದಿರದು. ನಮ್ಮ ಸಮಾಜದಲ್ಲಿ ಲೈಂಗಿಕತೆಯ ಬಗ್ಗೆ ಅನಾವಶ್ಯಕ ಮಡಿವಂತಿಕೆ ಭಾವನೆ ತುಂಬಿತುಳುಕುತ್ತಿದೆ. ಅದರ ಬಗ್ಗೆ ಹುಸಿ ಕಲ್ಪನೆಗಳು ಮತ್ತು ತಪ್ಪು ಗ್ರಹಿಕೆಗಳು ದಾಂಪತ್ಯ ಜೀವನದಲಲಿ ಹಾಸು ಹೊಕ್ಕು, ದಾಂಪತ್ಯ ಜೀವನವೇ ನರಕಸದೃಶವಾಗಿರುವುದು ಸುಳ್ಳಲ್ಲ. ಅವುಗಳಲ್ಲಿ ಕೆಲವೊಂದು ಪ್ರಕರಣಗಳನ್ನು ಇಲ್ಲಿ ಪ್ರಸ್ತಾಪಿಸಿದರೆ ತಪ್ಪಾಗಲಾರದು. ಪ್ರಥಮ ರಾತ್ರಿಯ ಸಂಭೋಗದಲ್ಲಿ ಪತ್ನಿಯ ಕನ್ಯಾಪೊರೆ ಹರಿದು ರಕ್ತ ಸ್ರಾವವಾಗಲಿಲ್ಲ. ಅವಳು ಯೋನಿ ಪಾವಿತ್ರ್ಯವನ್ನು ಕಳೆದುಕೊಂಡಿದ್ದಾಳೆ. ಅವಳು ನನ್ನ ಹೆಂಡತಿಯಾಗುವ ಹಕ್ಕನ್ನು ಕಳೆದುಕೊಂಡಿದ್ದಾಳೆ ಎಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವರಮಹಾಶಯರಿದ್ದಾರೆ. ಇದಕ್ಕಿಂತ ದೊಡ್ಡ ಲೈಂಗಿಕ ಅಜ್ಞಾನ ಮತ್ತೊಂದಿಲ್ಲ. ಕನ್ಯಾಪೊರೆ ಹರಿಯಲು ಹಲವಾರು ಕಾರಣಗಳಿವೆ ಎಂದು ವಿವರಿಸಿದರೂ, ಅವರಲ್ಲಿ ಮೂಢನಂಬಿಕೆ ಎಷ್ಟು ಬಲವಾಗಿದೆಯೆಂದರೆ ನ್ಯಾಯಾಧೀಶರು ವಿವರಿಸಿದರೂ ಸಾಕಾಗುವುದಿಲ್ಲ. ಅವರ ಪರಿಚಯವಿರುವ ಮತ್ತು ನಂಬಿಕೆಯಿರುವ ವೈ ದ್ಯರನ್ನೇ ಕರೆಸಿ ವಿವರ ನೀಡಬೇಕಾಯಿತು! ನ್ಯಾಯಾಲಯಗಳಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಅಧಿವಿಚಾರಣೆ ಆರಂಭಿಸುವುದಕ್ಕೆ ಮೊದಲು ಪತಿ ಪತ್ನಿಯರನ್ನು ರಾಜಿ ಸಂಧಾನಕ್ಕೆ ಗುಪ್ತವಾಗಿ ಪ್ರಯತ್ನಿಸಬೇಕಾಗುತ್ತದೆ (ಖeಛಿoಟಿಛಿiಟiಚಿಣioಟಿ Pಡಿoಛಿeeಜiಟಿgs). ಆಗ ಲೈಂಗಿಕ ಸಮಸ್ಯೆಗಳು ಉದ್ಭವಿಸಿದರೆ ಪಕ್ಷಗಾರರಿಗೆ ಪರಿಹಾರ ಸೂಚಿಸಲು ನ್ಯಾಯಾಧೀಶರಿಗೂ ಲೈಂಗಿಕ ವಿಜ್ಞಾನದ ಅರಿವು ಅತ್ಯಗತ್ಯ ಎಂದು ಆಗ ನನಗೆ ಗೊತ್ತಾಯಿತು. ಮತ್ತೊಂದು ಅಜ್ಞಾನ ಪುರುಷರನ್ನು ಕಾಡುತ್ತಿರುವುದು ಹೆಣ್ಣು ಮಗುವಾಗುವುದಕ್ಕೆ ಕಾರಣ ತಾಯಿ ಎಂಬ ಮೂಢನಂಬಿಕೆ. ತನ್ನ ಹೆಂಡತಿ ಹೆಣ್ಣು ಮಕ್ಕಳನ್ನೇ ಹೆರುತ್ತಾಳೆ. ಆದುದರಿಂದ ಅವಳಿಗೆ ವಿಚ್ಛೇದನ ನೀಡಿ ಬೇರೊಬ್ಬಳನ್ನು ಮದುವೆಯಾಗಬೇಕಾಗಿದೆ ಎಂದು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿದ ಗಂಡಂದಿರ ಸಂಖ್ಯೆಯೂ ಕಡಿಮೆಯಿಲ್ಲ. ವಿಪರ್ಯಾಸವೆಂದರೆ ಅವರ ತಾಯಿ, ಅಕ್ಕ ಮುಂತಾದವರು ಕೂಡಾ ಮತ್ತೊಂದು ಮದುವೆಯಾಗಲು ಒತ್ತಾಯಿಸುತ್ತಿರುವುದು. ಮಗು ಹೆಣ್ಣು ಅಥವಾ ಗಂಡು ಆಗುವುದಕ್ಕೆ ತಾಯಿ ಎಷ್ಟು ಕಾರಣಳೋ ಅಷ್ಟೇ ಕಾರಣ ತಂದೆ ಕೂಡಾ ಎಂಬ ಸರಳ ಸತ್ಯದ ಅರಿವು ಅವರಿಗಿರುವುದಿಲ್ಲ. ಅದೇ ರೀತಿ ಮಗುವಾಗದಿದ್ದರೆ ಅದಕ್ಕೆ ತಾಯಿಯೇ ಕಾರಣ ಎಂದು ಪುರುಷರು ಮಾತ್ರ ಭಾವಿಸುವುದಿಲ್ಲ. ಸ್ತ್ರೀಯರೂ ಹಾಗೆಯೇ ಭಾವಿಸುತ್ತಾರೆ. ಮಗು ಹೆರದ ಸ್ತ್ರೀ ಬಂಜೆ. ನಿರ್ವೀರ್ಯನಾದ ಪುರುಷನನ್ನು ಏನೆಂದು ಕರೆಯುತ್ತಾರೆ? ಬಂಜೆ ಎಂಬ ಪದಕ್ಕೆ ಪರ್ಯಾಯವಾದ ಪುರುಷ ಲಿಂಗ ಪದ ಯಾವುದೇ ಭಾಷೆಯಲ್ಲಿ ಇಲ್ಲ! ಅಂದರೆ ಸ್ತ್ರೀಯರು ಬಂಜೆಯಾದಂತೆ ಪುರುಷರು ನಿರ್ವೀರ್ಯರಾಗಬಹುದು ಎಂಬ ಕಲ್ಪನೆ ನಮ್ಮ ಸಮಾಜದಲ್ಲಿಲ್ಲ. ಗಂಡನ ಕಾರಣದಿಂದ ಹೆಂಡತಿ ಬಂಜೆಯಾಗಿರಬಹುದು ಎಂದು ಯಾರೊಬ್ಬರೂ ಸಂಶಯ ಪಡುವುದೇ ಇಲ್ಲ. ಈ ವಿಷಯದಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನ ಅಜ್ಞಾನಿಗಳು. ಪತ್ನಿ ತನಗಿಂತ ವಯಸ್ಸಿನಲ್ಲಿ ದೊಡ್ಡವಳು. ಸುಳ್ಳು ಜಾತಕ ಬರೆಯಿಸಿ ಮೋಸ ಮಾಡಿ ಮದುವೆ ಮಾಡಿದ್ದಾರೆ. ಅವಳಿಂದ ನನಗೆ ಹಾಸಿಗೆ ಸುಖ ಸಿಗುತ್ತಿಲ್ಲ. ನನಗೆ ನನಗಿಂತ ಕಿರು ವಯಸ್ಸಿನವಳನ್ನು ಮದುವೆಯಾಗಬೇಕಾಗಿದೆ. ವಿಚ್ಛೇದನದ ಡಿಕ್ರಿ ಕೊಡಿ ಎಂದು ಅಂಗಲಾಚಿದ ವರಮಹಾಶಯರೂ ಬೇಕಾದಷ್ಟಿದ್ದಾರೆ. ಹಾಸಿಗೆ ಸುಖ ಹದಿಹರೆಯದವರು ಮಾತ್ರ ನೀಡಬಲ್ಲರು; ಪ್ರಾಯದವರಲ್ಲ. ಅದು ಕೂಡಾ ಪುರುಷರಿಗಿಂತ ಹೆಚ್ಚು ಪ್ರಾಯದವರಿಂದ ಸಾಧ್ಯವೇ ಇಲ್ಲ ಎಂದು ನಂಬುವ ಜನರೆಷ್ಟೋ ಇದ್ದಾರೆ. ದಾಂಪತ್ಯ ಜಿವನವನ್ನು ಕುರುಕ್ಷೇತ್ರ ಮಾಡಿಕೊಂಡವರಿದ್ದಾರೆ. ಲೈಂಗಿಕ ವಿಜ್ಞಾನದ ಸರಳ ಜ್ಞಾನ ನೀಡುವುದೊಂದೇ ಅವರನ್ನು ಸರಿದಾರಿಗೆ ತರಬಹುದಾದ ಏಕೈಕ ಉಪಾಯ.

ವಿಶೇಷತೆಗಳು

ISBN978-93-81244-55-578
ಭಾಷೆಕನ್ನಡ
ಪುಟಗಳು200
ಪ್ರಕಟಣೆ ವರ್ಷ2016
ಆವೃತ್ತಿ1st
ತೂಕ480 ಗ್ರಾಂ
ಆಯಾಮಗಳು-