ವಿಮರ್ಶೆ
ಪಾಲ್ ಮಿಶೆಲ್ ಫುಕೋ (ತಾತ್ವಿಕ ನಿಲುವುಗಳು)
ಲೇಖಕ: ಕೇಶವ ಶರ್ಮ. ಕೆ
₹580₹68015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಫುಕೋ ತಾನು ಸಿದ್ಧಾಂತಿಯಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾನೆ. ತನ್ನನ್ನು ತಾನು ಪ್ರಯೋಗವಾದಿ ಎಂದು ಹೇಳಿಕೊಳ್ಳುತ್ತಾನೆ. ಅವನು ಜ್ಞಾನ ಮತ್ತು ನೈತಿಕತೆಗೆ ಇರುವ ಸಂಬಂಧವನ್ನೂ ಹೇಳಿದ್ದಾನೆ. ಜ್ಞಾನ ಮತ್ತು ನೈತಿಕತೆಗೆ ಹೇಗೆ ಬೇರೆ ಬೇರೆ ಆಯಾಮಗಳು ಇರುತ್ತವೆ ಅಧಿಕಾರ ಮತ್ತು ಅದರ ಸ್ವರೂಪವನ್ನು ಒಂದು ವ್ಯವಸ್ಥೆ ಎಂದು ಗ್ರಹಿಸುತ್ತಾನೆ. ಅಧಿಕಾರವನ್ನು ಅವನು ಒಂದು ಪರಿಕಲ್ಪನೆ ಎಂದು ಹೇಳುತ್ತಾನೆ. ಅಧಿಕಾರ, ಸ್ವಾತಂತ್ರ್ಯ ಮತ್ತು ವಿಷಯನಿಷ್ಟತೆಯು ಅವನಲ್ಲಿ ಅತ್ಯಂತ ಮುಖ್ಯವಾಗುತ್ತದೆ ಅಧಿಕಾರ ಎನ್ನುವುದು ಪುಕೋಗೆ ಒಂದು ಪರಿಕಲ್ಪನೆಯು ಆಗಿರುವುದರಿಂದ ಅದರ ಅರ್ಥವೂ ಭಿನ್ನವಾಗುತ್ತದೆ. ಹಾಗೆ ನೋಡಿದರೆ ಯಾವುದನ್ನೂ ನಾವು ಸಂಪೂರ್ಣವಾದ ಒಂದು ಜ್ಞಾನ ಎಂದು ಹೇಳಲು ಆಗುವುದೂ ಇಲ್ಲವೆಂದು ಫುಕೋ ಹೇಳುತ್ತಾನೆ. ಯಾವುದನ್ನು ನಾವು ಪೂರ್ಣ ಎಂದು ಕರೆಯುವುದು ಮತ್ತು ಯಾವುದನ್ನು ನಾವು ಅಪೂರ್ಣ ಎಂದು ಕರೆಯುವುದು ಎನ್ನುವುದು ಅವನ ಅತ್ಯಂತ ಮುಖ್ಯವಾದ ಒಂದು ಪ್ರಶ್ನೆ. ಯಾವುದನ್ನು ಜ್ಞಾನ ಮತ್ತು ಅದರ ಪರಿಣಾಮವು ಇರುವುದು ನಮಗೆ ಅರ್ಥವಾಗುತ್ತದೆ. ಆದರೆ ಅದನ್ನು ನಾವು ಅತ್ಯಂತ ನಿರ್ದಿಷ್ಟವಾಗಿ ಹೇಳುವುದು ಅತ್ಯಂತ ಕಷ್ಟ. ಫುಕೋನ ಒಟ್ಟಾರೆಯಾದ ಬರಹಗಳನ್ನು ಓದಿದರೂ ನಮಗೆ ಅವನ ಬರಹಗಳು ನಮಗೆ ಅವನ ಒಳನೋಟವನ್ನು ಹೇಳುತ್ತವೆ. ಚರಿತ್ರೆಯು ಕೂಡಾ ನಮಗೆ ನಿರ್ದಿಷ್ಟವಾದ ಒಂದು ಜ್ಞಾನವನ್ನು ಕೊಟ್ಟಿದೆ ಎನ್ನುವುದು ಸತ್ಯ. ಸ್ವಾತಂತ್ರ್ಯ ಮತ್ತು ನ್ಯಾಯ ಎನ್ನುವುದು ಹೇಗೆ ಇರುತ್ತದೆ ಎನ್ನುವುದು ನಮಗೆ ಅತ್ಯಂತ ಮುಖ್ಯ. ಫುಕೋ ಧನಾತ್ಮಕವಾದ ದೃಷ್ಟಿಕೋನವನ್ನು ಹೊಂದಿದ್ದಾನೆ. ಅವನದು ನಿರಾಕರಣೆಯ ಧ್ವನಿಯು ಅಲ್ಲ. ಇಲ್ಲಿ ಇನ್ನೊಂದು ವಿಷಯವನ್ನು ನಾವು ಹೇಳಬೇಕು: ಜ್ಞಾನವನ್ನು ನಾವು ಅಡ್ಡದಾರಿಯಲ್ಲಿ ಪಡೆಯಲು ಆಗುವುದೂ ಇಲ್ಲ. ಜ್ಞಾನವು ಸಮಾಜ ಮತ್ತು ಚಾರಿತ್ರಿಕವಾದ ಅಗತ್ಯಕ್ಕೆ ಅನುಸಾರವಾಗಿ ಉತ್ಪಾದನೆಯು ಆಗುತ್ತದೆ. ಅದಕ್ಕೆ ಒಂದು ಉದ್ದೇಶವೂ ಇರುತ್ತದೆ. ಆದರೆ ಅಧಿಕಾರ ಎನ್ನುವುದು ನಮಗೆ ಅನೇಕ ಸನ್ನಿವೇಶದಲ್ಲಿ ಬೇರೆ ಬೇರೆ ಥರ ಇರುತ್ತದೆ. ಅದರಲ್ಲಿ ಅಧಿಕಾರ ಎನ್ನುವುದು ನಮಗೆ ಸಂವಾದಿ. ಆಧುನಿಕ ಅಧಿಕಾರ ತನ್ನ ಅನನ್ಯತೆಯನ್ನು ತನಗೆ ಬೇಕಾದ ನಿಯಮವನ್ನು ರೂಪಿಸಿಕೊಂಡು ಸಮಾಜವನ್ನು ನಿಯಂತ್ರಣವನ್ನು ಮಾಡುತ್ತದೆ. ಯಾವುದನ್ನು ನಾವು ಸಂಸ್ಕೃತಿಯೆಂದು ಹೇಳುತ್ತೇವೆಯೋ ಅದರ ರೂಪ ಮತ್ತು ಅದರ ಜ್ಞಾನವು ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಅದು ಬದಲಾಗುತ್ತದೆ. ಅದರ ವ್ಯಾಪ್ತಿಯಲ್ಲಿ ಭಿನ್ನತೆಗಳು ಇರುತ್ತವೆ
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 558 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1st |
| ತೂಕ | 980 ಗ್ರಾಂ |
| ಆಯಾಮಗಳು | - |





