ಮುಖ್ಯ ವಿಷಯಕ್ಕೆ ಹೋಗಿ (Skip to main content)
ನವೋದಯ ಕಾಲದ ಕಾದಂಬರಿಗಳು  ಚರಿತ್ರೆ, ಜೀವನ ದೃಷ್ಟಿ, ವಾಸ್ತವತೆ, ನಿರೂಪಣೆ, ಕಾಲ ಹಾಗೂ ಪ್ರಶ್ನೆಗಳು
ಹೊಸ ಬಿಡುಗಡೆ11% ರಿಯಾಯಿತಿ
ವಿಮರ್ಶೆ

ನವೋದಯ ಕಾಲದ ಕಾದಂಬರಿಗಳು ಚರಿತ್ರೆ, ಜೀವನ ದೃಷ್ಟಿ, ವಾಸ್ತವತೆ, ನಿರೂಪಣೆ, ಕಾಲ ಹಾಗೂ ಪ್ರಶ್ನೆಗಳು

ಲೇಖಕ: ಕೇಶವ ಶರ್ಮ. ಕೆ

₹425₹47511% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

“ಕಾದಂಬರಿಯನ್ನು ಒಂದು ಪ್ರಕಾರವೆಂದು ಪರಿಗಣಿಸುವ ನಮ್ಮ ಪರಿಕಲ್ಪನೆ ಮೂಲಭೂತವಾಗಿ ವಸಾಹತುಶಾಹಿಯದು. ಬ್ರಿಟಿಷ್ ವಿದ್ವಾಂಸರು ಭಾರತೀಯ ಕಾದಂಬರಿಯನ್ಮ್ನ ಪಾಶ್ಚಿಮಾತ್ಯರಿಂದ ಎರವಲು ಪಡೆದ ಪ್ರಕಾರವೆಂಬಂತೆ ನೋಡುತ್ತಿದ್ದರು; ಬಹುಶಃ ನಾವೂ ಸಹ ನಮ್ಮ ಕೆಲವು ಮೊದಲ ಕಾದಂಬರಿಗಳನ್ನು ಅದೇ ದೃಷ್ಟಿಯಿಂದ ನೋಡಿದ್ದೇವೆ. ಅದರ ರಚನಾರೂಪ ಆಮದು ಮಾಡಿಕೊಳ್ಳಲಾಗಿದೆ. ಆದರೆ ಅದರ ಒಳಾಂಶ ನಮ್ಮದೇ ಎಂದು ಸೂಚಿಸುವ ಮೂಲಕ ರಾಮಚಂದ್ರ ಶುಕ್ಲಾ ಒಂದು ರೀತಿಯ ಸಂಧಾನ ಮಾಡಿದರು. ನಂತರದ ಸಾಹಿತ್ಯ ಚರಿತ್ರಕಾರ ಸಿಸಿರ್ ಕುಮಾರ್ ದಾಸ್, ಈ ವಾದವನ್ನು ಇನ್ನಷ್ಟು ಮುಂದೆ ಕೊಂಡೊಯ್ದು ಭಾರತದ ಕಾದಂಬರಿಗಳು ಪಾಶ್ಚಿಮಾತ್ಯ ಮಾದರಿ ಮತ್ತು ದೇಶೀಕಥನ ನಿರೂಪಣಾ ಸಂಪ್ರದಾಯಗಳ ನಡುವಿನ ಕರ್ಷಣದಿಂದ ಉದ್ಭವಗೊಂಡಿದೆಯೆಂದು ಹೇಳಿದ್ದಾರೆ. ಕಾದಂಬರಿಯು ಮೂಲಭೂತವಾಗಿ ಒಂದು ನಿಷ್ಪನ್ನ ರೂಪವೆನ್ನುವ ಭಾವನೆಯನ್ನು ಪುನರ್ ಪರಿಶೀಲಿಸುವ ಅವಶ್ಯಕತೆಯಿದೆ. ಈ ಕಾರ್ಯವನ್ನು ಬಹುಶಃ ನಾವು ಬಂಕಿಮಚಂದ್ರ ಚಟರ್ಜಿಯವರ ಕಾದಂಬರಿಯಿಂದ ಪ್ರಾರಂಭಿಸಬಹುದು. ಅವರ ಲೇಖಕರ ಬದುಕು ಪ್ರಾರಂಭವಾದದ್ದು ಇಂಗ್ಲಿಷ್ ರೀತಿಯ ಕಾದಂಬರಿಯಿಂದ ಹಾಗೂ ಅವರು ಅದನ್ನು ಇಂಗ್ಲಿಷಿನಲ್ಲಿಯೇ ಬರೆದರು. ಆದರೆ ಅವರ ಮೊದಲ ಮೂಲಕೃತಿ ಕಪಾಲಕುಂಡಲವಾಗಿತ್ತು ಹಾಗೂ ಅದರ ಹಂದರ ಕಾದಂಬರಿಗೆ ಹತ್ತಿರವಾಗಿತ್ತು ಮತ್ತು ಅದರ ಅಂತರಾಳದಲ್ಲಿ ಅನುಕರಣೆಯಿದೆ ಎನ್ಮ್ನವುದು ಏನೂ ಇರಲಿಲ್ಲ. ಇಂದಿಗೂ ನಮ್ಮ ಅದ್ವಿತೀಯ ಕಾದಂಬರಿಗಳನ್ನು ಏಕ ರೇಖಾತ್ಮಕವಲ್ಲದ ಹಂದರದಲ್ಲಿ ರಚಿಸಲಾಗಿದೆ. (ಉದಾ: ಗೋಪಿನಾಥ ಮೊಹಾಂತಿಯವರ ಒರಿಯಾ ಕಾದಂಬರಿಗಳು, ತಾರಾಶಂಕರ್ ಬಂದೋಪಾಧ್ಯಾಯರ ಬಂಗಾಳಿ ಕಾದಂಬರಿಗಳು, ಫಣೀಶ್ವರನಾಥ ರೇಣುರವರ ಹಿಂದಿ ಕಾದಂಬರಿಗಳು). ಮಲಯಾಳಂನಲ್ಲಿನ ಮೊದಲ ಕಾದಂಬರಿಗಳ ಬಗ್ಗೆ ಚರ್ಚಿಸಬೇಕಾದಲ್ಲಿ ಬಹುಶಃ ನಾವು ಮಾರ್ತಾಂಡ ವರ್ಮ ಕಾದಂಬರಿಗೆ ಇಂದುಲೇಖಾಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಆದರೆ ಇಂದುಲೇಖಾದ ರಚನೆ ಪಾಶ್ಚಿಮಾತ್ಯ ಕಾದಂಬರಿಯ ರೂಪಕ್ಕೆ ಹೆಚ್ಚು ಹತ್ತಿರವಾಗಿರುವುದರಿಂದ ಅದು ಒಂದು ರೀತಿಯಲ್ಲಿ ಧರ್ಮಶಾಸ್ತ್ರ ಪಠ್ಯವಾಗಿ ಮಾರ್ಪಟ್ಟಿದೆ.೧೯

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು392
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ850 ಗ್ರಾಂ
ಆಯಾಮಗಳು-