ವಿಮರ್ಶೆ
ದಾಂಪತ್ಯ ಯೋಗ ಸಂಗಾತಿ - ಸಾಂಗತ್ಯ - ಸಹಬಾಳೆ
ಲೇಖಕ: ಡಾ. ನಾ. ಮೊಗಸಾಲೆ
₹170₹20015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಒಬ್ಬ ಕುಟುಂಬ ನ್ಯಾಯಾಲಯದ ನ್ಯಾಯಾಧೀಶನಾಗಿ ಸುಮಾರು ಏಳುನೂರಕ್ಕಿಂತ
ಅಧಿಕ ದಂಪತಿಗಳ ದಾಂಪತ್ಯ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡಿರುವುದು ಹೌದು.
ಅವರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ವಿಶ್ಲೇಷಿಸಿದ್ದೇನೆ. ಅವುಗಳನ್ನು ಪರಿಹರಿಸಲು
ಪ್ರಾಮಾಣಿಕ ಪ ಯತ್ನ ಮಾಡಿದ್ದೇನೆ.ಲೈಂಗಿಕ ವಿಜ್ಞಾನದ ಸರಳ ಪರಿಚಯವಿಲ್ಲದೆ ಎಷ್ಟೋ ಪತಿ- ಪತ್ನಿಯರು ತಮ್ಮ ದಾಂಪತ್ಯ ಜೀವನವನ್ನೇ ಹಾಳು ಮಾಡಿಕೊಂಡವರನ್ನು ಕಂಡು
ಪರಿತಪಿಸಿದ್ದೇನೆ.ದಂಪತಿಗಳಿಗೆ ಮಾತ ವಲ್ಲ, ಅವರ ಸಮಸ್ಯೆಗಳನ್ನು ಪರಿಹರಿಸಬೇಕಾದ
ನ್ಯಾಯಾಧೀಶರಿಗೂ ಲೈಂಗಿಕ ವಿಜ್ಞಾನದ ಸರಳ ಜ್ಞಾನದ ಅರಿವು ಅತೀ ಅಗತ್ಯ ಎಂಬುದನ್ನು
ಮನಗಂಡಿದ್ದೇನೆ.
ದಾಂಪತ್ಯ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ನ್ಯಾಯಾಲಯದ ಕಟಕಟೆ ಹತ್ತಿದವರಲ್ಲಿ ವಿದ್ಯಾವಂತರು,
ಬುದ್ಧಿವಂತರು, ಪ್ರಬುದ್ಧರು ಹಾಗೂ ಸಮಾಜದಲ್ಲಿ ಪ್ರತಿಷ್ಠಿತರು ಎನ್ನಿಸಿಕೊಂಡವರೇ ಅಧಿಕ.
ಬಡವರು, ಅಶಿಕ್ಷಿತರು ನ್ಯಾಯಾಲಯಗಳ ಹತ್ತಿರ ಸುಳಿದವರು ಅಪರೂಪದಲ್ಲಿ ಅಪರೂಪ.
ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಅಂತಹ ಪ್ರತಿಷ್ಠಿತರಲ್ಲಿ ಸುಮಾರು ಶೇಕಡಾ
ಇಪ್ಪತ ರಷ್ಟು ದಂಪತಿಗಳಿಗೆ ಲೈಂಗಿಕ ವಿಜ್ಞಾನದ ಸರಳ ಪರಿಚಯವೂ ಇರಲಿಲ್ಲ. ತಪ್ಪರಿಮೆಯಿಂದ
ನ್ಯಾಯಾಲಯದ ಕಟಕಟೆ ಹತ್ತಿದ್ದಾರೆ ಎಂದರೆ ಆಶ್ಚರ್ಯವಾಗದಿರದು. ನಮ್ಮ ಸಮಾಜದಲ್ಲಿ
ಲೈಂಗಿಕತೆಯ ಬಗ್ಗೆ ಅನಾವಶ್ಯಕ ಮಡಿವಂತಿಕೆ ಭಾವನೆ ತುಂಬಿತುಳುಕುತ್ತಿದೆ. ಅದರ ಬಗ್ಗೆ
ix
ಹುಸಿ ಕಲ್ಪನೆಗಳು ಮತ್ತು ತಪ್ಪು ಗ್ರಹಿಕೆಗಳು ದಾಂಪತ್ಯ ಜೀವನದಲಲಿ ಹಾಸು ಹೊಕ್ಕು,
ದಾಂಪತ್ಯ ಜೀವನವೇ ನರಕಸದೃಶವಾಗಿರುವುದು ಸುಳ ಲ್ಲ. ಅವುಗಳಲ್ಲಿ ಕೆಲವೊಂದು ಪ ಕರಣಗಳನ್ನು
ಇಲ್ಲಿ ಪ್ರಸ್ತಾಪಿಸಿದರೆ ತಪ್ಪಾಗಲಾರದು
ವಿಶೇಷತೆಗಳು
| ISBN | 978-93-81577-55-778 |
| ಭಾಷೆ | ಕನ್ನಡ |
| ಪುಟಗಳು | 200 |
| ಪ್ರಕಟಣೆ ವರ್ಷ | 2016 |
| ಆವೃತ್ತಿ | 2nd |
| ತೂಕ | 700 ಗ್ರಾಂ |
| ಆಯಾಮಗಳು | - |





