ಮುಖ್ಯ ವಿಷಯಕ್ಕೆ ಹೋಗಿ (Skip to main content)
ಫ್ರಾಂಕ್‌ಫರ್ಟ್ ಸ್ಕೂಲ್
ಹೊಸ ಬಿಡುಗಡೆ15% ರಿಯಾಯಿತಿ
ವಿಮರ್ಶೆ

ಫ್ರಾಂಕ್‌ಫರ್ಟ್ ಸ್ಕೂಲ್

ಲೇಖಕ: ಕೇಶವ ಶರ್ಮ. ಕೆ

₹230₹27015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಫ್ರಾಂಕ್‌ಫರ್ಟ್ ಪಂಥದ ಹೆಸರನ್ನು ಕೇಳಿರುತ್ತಾರೆ. ಅದರ ಕೊಡುಗೆಯು ಅತ್ಯಂತ ಮಹತ್ವದ್ದು. ಹೊರ‍್ಕೆಮಾರ್ ಇದನ್ನು ಶುರುಮಾಡಿದ. ಅನಂತರ ಇದರಲ್ಲಿ ಅನೇಕ ವಿದ್ವಾಂಸರು ಸೇರಿಕೊಂಡರು. ಅಪೂರ್ವವಾದ ಒಳನೋಟ ಮತ್ತು ವಿದ್ವತ್ತು ಎರಡೂ ಮೇಳೈಸಿದ ಈ ಫಂಥವು ನಮ್ಮ ಅಧ್ಯಯನಗಳಿಗೆ ಹೊಸದಾದ ಮುನ್ನುಡಿಯನ್ನು ಬರೆದಿದೆ. ವಾಸ್ತವವಾಗಿ ಜ್ಞಾನಪರ್ವವು ಅನೇಕವನ್ನು ನಿರೂಪಿಸಿದೆ. ಅದರಲ್ಲಿ ಹೊಸತು ಇದೆ. ಹಳೆಯದು ಮತ್ತೆ ರೂಪಾಂತರಗೊಂಡು ಹೊಸದಾದ ರೂಪವನ್ನು ಪಡೆದುಕೊಂಡಿದೆ. ಅದರಲ್ಲಿ ಅನೇಕವು ಮರು ಚರ್ಚೆಗೆ ಗುರಿಯಾಗಿದೆ. ಅದರ ಸ್ವರೂಪವನ್ನು ನಾವು ಇತ್ಯಾತ್ಮಕವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಅದು ಬೇರೆ ಬೇರೆ ರಾಜಕಾರಣಗಳನ್ನು ಹುಟ್ಟು ಹಾಕಿದೆ. ಆದರ ತಾತ್ವಿಕತೆಯು ಕೂಡಾ ಭಿನ್ನವಾಗಿದೆ. ಅದರ ರೂಪವನ್ನು ನಾವು ಈವತ್ತು ಹೇಗೆ ಗ್ರಹಿಸುತ್ತೇವೆ ಎನ್ನುವುದು ನಮ್ಮ ವಿವರಣೆಗಳನ್ನು ಅವಲಂಬಿಸಿದೆ. ರಾಜಕಾರಣವು ಕೂಡಾ ಭಿನ್ನವಾದ ಚಹರೆಯನ್ನು ಪಡೆಯಿತು. ಕೈಗಾರಿಕೆಯು ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿತು. ಅದಕ್ಕೆ ಕಾರಣವೂ ಇದೆ. ಪುನರುಜ್ಜೀವನವು ಯಾವುದನ್ನು ಬಹಳ ದೊಡ್ಡದಾದ ಆಶಯ ಎಂದು ಭಾವಿಸುತ್ತೋ ಅದರ ರೂಪಗಳನ್ನು ನಾವು ಅದರ ವಿಸ್ತರಣೆಯಲ್ಲಿಯೂ ನೋಡಬೇಕಾಗುತ್ತದೆ. ಅದರ ಜ್ಞಾನ ಮಾದರಿಗಳು ಕೂಡಾ ಅನೇಕ ಸಂಘರ್ಷವನ್ನು ಎದುರಿಸಿತ್ತು. ಅದನ್ನು ಅತ್ಯಂತ ಸಂಕೀರ್ಣವಾದದ್ದು ಎಂದು ಭಾವಿಸಬೇಕಾಗುತ್ತದೆ. ಹೊಸ ಮಾಧ್ಯಮಗಳಿಗೆ ಕೂಡಾ ಅನೇಕ ರೀತಿಯ ಮಿತಿಗಳು ಇದ್ದವು ಎನ್ನುವುದೂ ಸ್ಪಷ್ಟ. ಅದರಲ್ಲಿ ಅನ್ವಯವೂ ಇತ್ತು. ಜ್ಞಾನವನ್ನು ಹೇಗೆ ಬೇರೆ ಬೇರೆ ಮಾದರಿಗಳಿಗೆ ಅನ್ವಯ ಮಾಡಲು ಸಾಧ್ಯವೆನ್ನುವುದು ಅತ್ಯಂತ ಮುಖ್ಯವಾದ ಪ್ರಶ್ನೆಯೂ ಹೌದು. ಆಗ ಕೆಲವನ್ನು ವಿಶ್ವಾತ್ಮಕ ಮಾಡಲಾಯಿತು. ಆಧುನಿಕ ಏಕಾಂತವಾದಿಗಳು ತಮ್ಮ ಸಮಸ್ಯೆಯನ್ನು ಒಂದು ವಿಶ್ವಾತ್ಮಕವಾದ ಸಮಸ್ಯೆ ಎಂದು ಭಾವಿಸಿದರು. ಸ್ವಂತ ಎನ್ನುವುದೇ ಅನುಮಾನದ ಪ್ರಶ್ನೆಯಾದದ್ದು ನಿಜ. ಪ್ರೆಸ್, ರೈಲ್ವೇ, ಸಮಾಜದ ಅಭಿವೃದ್ಧಿ, ಪೆನ್ಸಿಲಿನ್ ಮುಂತಾದವುಗಳು ಬಂದವು. ತಾಂತ್ರಿಕ ಅಭಿವೃದ್ಧಿಯನ್ನು ನೋಡುವುದು ಹೇಗೆ ಎನ್ನುವುದೂ ಪ್ರಜ್ಞೆಯ ಪ್ರಶ್ನೆಯು ಆಯಿತು. ಚರಿತ್ರೆ ಮತ್ತು ಪ್ರಜ್ಞೆ ಎನ್ನುವುದು ದ್ವಂದ್ವಾತ್ಮಕ. ಯಾವುದು ಅಧಿಕಾರ ಮತ್ತು ಅದರ ಸ್ವರೂಪವು ಏನು ಕೂಡಾ ಈ ಸಂದರ್ಭದಲ್ಲಿ ಬಂದ ಅತ್ಯಂತ ಮಹತ್ವದ ಪ್ರಶ್ನೆ. ಆದರೆ ಪುನರುಜ್ಜೀವನವನ್ನು ನಾವು ಅತ್ಯಂತ ತೃಪ್ತಿದಾಯಕವಾದ ಬೆಳವಣಿಗೆ ಎಂದು ಕರೆಯಲು ಬರುವುದೂ ಇಲ್ಲ. ಆದರೆ ಅದೇ ಹೊತ್ತಿಗೆ ಸರಿಯಾಗಿ ಕಾರಣಗಳನ್ನು ಹೆಚ್ಚು ಅಧಿಕೃತವೆಂದು ಹೇಳಲು ಅನೇಕರು ಪ್ರಯತ್ನವನ್ನು ಮಾಡಿದರು. ಕಾರಣ ಎನ್ನುವುದು ಒಂದು ಅಭಿಪ್ರಾಯ ಮಾತ್ರವೇ. ಅದರಲ್ಲಿ ಬೇರೆ ಬೇರೆ ಅಂಶಗಳು ಸೇರಿಕೊಂಡಿವೆ. ಅದಕ್ಕೆ ಒಂದು ನಿಲುವು ಇದೆ. ಅದು ಕೆಲವನ್ನು ಹೆಚ್ಚು ಅಧಿಕೃತ ಮಾಡಿತು. ಕಾರಣಗಳು ಹೇಗೆ ಆನ್ವಯಿಕವೂ ಆಯಿತು ಎನ್ನುವುದು ಇಲ್ಲಿ ಅತ್ಯಂತ ಮುಖ್ಯವಾದ ಪ್ರಶ್ನೆ. ಅದನ್ನು ವಿಸ್ತರಿಸಲು ಉದ್ದೇಶಗಳು ಇದ್ದವು. ಜ್ಞಾನದ ರೂಪ ಎನ್ನುವುದು ಆಯ್ಕೆಗೆ ಸಂಬಂಧಪಟ್ಟದ್ದೂ ಹೌದು. ನಾವು ಯಾವುದನ್ನು ಆಯ್ಕೆ ಮಾಡುತ್ತೇವೆಯೋ ಅದರ ಕಾರಣವನ್ನು ಕೂಡಾ ಹೇಳಬೇಕಾಗುತ್ತದೆ. ಈ ಪ್ರಸಂಗಗಳು ನಡೆದವು. ಪುನರುಜ್ಜೀವನವು ತಾತ್ವಿಕತೆಯನ್ನು ಮುಂದೆ ಮಾಡಿತು. ಜ್ಞಾನವೂ ಕೂಡಾ ವಿಶ್ವಾತ್ಮಕವೆಂದು ಹೇಳಿದ್ದರಿಂದ ಸ್ಥಳ ಮತ್ತು ಜ್ಞಾನ ಎನ್ನುವುದು ಒಂದು ದ್ವಂದ್ವಕ್ಕೆ ಸಿಕ್ಕಿದ್ದು ಸತ್ಯ. ಅದಕ್ಕೂ ಒಂದು ರಾಜಕಾರಣವು ಇತ್ತು. ಆದರೆ ಹದಿನೇಳು ಮತ್ತು ಹದಿನೆಂಟನೆಯ ಶತಮಾನವು ಅನೇಕ ವೈರುದ್ಧ್ಯಗಳನ್ನು ಹೊಂದಿದ್ದು ಸತ್ಯವಾಗಿದೆ. ಪ್ರಜ್ಞೆ ಮತ್ತು ಅಧಿಕಾರಗಳ ಸಂಬಂಧವನ್ನು ನಾವು ಈ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಹಳೆಯ ಕಾರಣಗಳ ಬದಲಿಗೆ ಹೊಸದಾದ ಕಾರಣಗಳು ಹುಟ್ಟಿದವು. ಪುನರುಜ್ಜೀವನ ಎನ್ನುವುದು ನಮಗೆ ಹೊಸದಾದ ವೈಚಾರಿಕತೆಯನ್ನು ರೂಪಿಸಿದ್ದು ಸತ್ಯ. ಅದು ಒಂದು ಥರ ನಮ್ಮನ್ನು ಆ ವೈಚಾರಿಕತೆಗೆ ದೂಡಿತು ಎಂದರೂ ಸರಿಯಾಗುತ್ತದೆ. ಯಾವುದನ್ನು ನಾವು ಆಗಿನ ಯಜಮಾನಿಕೆಯ ಶಕ್ತಿಯೆಂದು ಹೇಳುತ್ತೇವೆಯೋ ಅದರ ರೂಪಗಳನ್ನು ಸುಲಭವಾಗಿ ಹೇಳಲು ಬರುವುದೂ ಇಲ್ಲ. ಅದು ಯಾವ ಭೂಗೋಳವನ್ನು ಹೊಂದಿದೆ ಮತ್ತು ಅದರ ಪರಿಣಾಮವು ಏನು ಎನ್ನುವುದು ಅತ್ಯಂತ ಮುಖ್ಯ. ಪುನರುಜ್ಜೀವನ ಕಾಲದ ಚಿಂತಕರು ತಮ್ಮ ವಿರೋಧಿಗಳನ್ನು ಉದ್ದೇಶಿಸಿಕೊಂಡು ಹೇಗೆ ಮಾತಾಡಿದರೂ ಎನ್ನುವುದೂ ಇಲ್ಲಿ ಉಲ್ಲೇಖನೀಯ. ಇದನ್ನು ನಾವು ಸಂಪ್ರದಾಯ ಎನ್ನುವ ವಿಷಯದಲ್ಲಿಯೂ ನೋಡಬೇಕಾಗುತ್ತದೆ. ಸಂಪ್ರದಾಯ ಮತ್ತು ಅದರ ರೂಪಗೊಂಡ ಭಾವನಾತ್ಮಕವಾದ ರೂಪವೂ ಇದೆ. ಅದನ್ನು ನಾವು ಯಾವ ಯುಗದ್ದು ಎಂದು ಹೇಳುವುದು ಅತ್ಯಂತ ಕಷ್ಟ. ಹಾಗೆ ನೋಡಿದರೆ ಮಧ್ಯಯುಗದ ಅನೇಕ ವಿಚಾರಗಳು ಮತ್ತೆ ಮತ್ತೆ ಮುಂದೆ ಬಂದವು. ಯಾವುದು ಹೊಸತು ಎಂದು ಹೇಳಲಾಯಿತೋ ಅದರ ರೂಪವನ್ನು ನೋಡಿದರೆ ಆಧುನಿಕತೆಗೆ ಸತ್ಯ ಎನ್ನುವ ಹೊದಿಕೆಯು ಇತ್ತು. ಇಲ್ಲಿ ಇನ್ನೊಂದು ವಿಚಾರವನ್ನು ನೋಡಬೇಕಾಗುತ್ತದೆ: ವೈಚಾರಿಕತೆಯು ಕೂಡಾ ಒಂದು ನೆಯ್ಗೆಯನ್ನು ಹೊಂದಿರುತ್ತದೆ. ವಿಚಾರವಾದಿಗಳು ಎಲ್ಲರಿಗೂ ಮಾತಾಡುವ ಹಕ್ಕುಗಳು ಇವೆ ಎಂದು ಹೇಳಿದರು. ಆದರೆ ಎಲ್ಲರಿಗೂ ಇದು ಸಾಧ್ಯವಾಯಿತೇ ಎನ್ನುವುದು ಮುಖ್ಯ. ಆದರೆ ಸಮಸ್ಯೆಗಳು ಇದ್ದವು. ವಿಚಾರವಾದವೇ? ಸಂಪ್ರದಾಯವೇ? ಜನರ ಮನೋಸ್ಥಿತಿಯೆ ಎನ್ನುವುದು ಪ್ರಶ್ನೆಯಾದ್ದರಿಂದ ಅಲ್ಲಿ ಒಂದು ತಿಕ್ಕಾಟವು ಪ್ರಾರಂಭವಾಯಿತು ಇದನ್ನು ಹೆಚ್ಚು ಚರ್ಚೆ ಮಾಡಿದವರು ಪ್ರಾಂಕ್ ಫರ್ಟ್ ಸ್ಕೂಲಿನವರು.

ವಿಶೇಷತೆಗಳು

ISBN978-81-992174-3-08
ಭಾಷೆಕನ್ನಡ
ಪುಟಗಳು220
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ450 ಗ್ರಾಂ
ಆಯಾಮಗಳುBook Size : 1/4 Crown(23x15.5) (International Standard Book Size)
ಫ್ರಾಂಕ್‌ಫರ್ಟ್ ಸ್ಕೂಲ್ by ಕೇಶವ ಶರ್ಮ. ಕೆ | Buy Online