ಮುಖ್ಯ ವಿಷಯಕ್ಕೆ ಹೋಗಿ (Skip to main content)
ಹೊಕ್ಕುಳು (ಕಾದಂಬರಿ)
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಕಾದಂಬರಿ

ಹೊಕ್ಕುಳು (ಕಾದಂಬರಿ)

ಲೇಖಕ: ಡಾ. ಮೊಗಳ್ಳಿ ಗಣೇಶ್

₹340₹40015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

‘ಬುಗುರಿ’ಯ ಕತೆಗಾರರಾಗಿ ಬರವಣಿಗೆ ಪ್ರಾರಂಭಿಸಿದ ಮೊಗಳ್ಳಿ ಕಳೆದ ಮೂರು ದಶಕಗಳಿಂದಲೂ ನಿರಂತರವಾಗಿ ಕಾದಂಬರಿ, ವಿಮರ್ಶೆ, ಜಾನಪದ, ದಲಿತ ಮೀಮಾಂಸೆಯ ತಾತ್ವಿಕ ಚಿಂತನೆಗಳನ್ನು ಕುರಿತು ಹಲವಾರು ಗ್ರಂಥಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಇದೀಗ ಅವರ ಹೊಸ ಕಾದಂಬರಿ ‘ಹೊಕ್ಕುಳು’ ಪ್ರಕಟವಾಗುತ್ತಿದೆ. ಇದರ ಜೊತೆಜೊತೆಯಲ್ಲೇ ತಮ್ಮ ಆತ್ಮಕಥೆಯನ್ನೂ ಬರೆದು ಮುಗಿಸಿದ್ದಾರೆ. ಈ ಅವಳಿ ಸೃಷ್ಟಿಯಲ್ಲಿ ಆತ್ಮಕಥೆಯನ್ನು ಗಂಡು ರೂಪವೆಂದೂ, ಕಾದಂಬರಿ ಒಂದು ಚೆಲುವಾದ ಹೆಣ್ಣು ರೂಪವೆಂದು ಹೇಳುತ್ತಾರೆ! ಅವರ ಈ ನವೀನ ಪರಿಭಾವನೆ ಕಲಾ ಪ್ರಕಾರಗಳ ಲಿಂಗಭೇದದ ಸೂಚನೆಯನ್ನು ನೀಡುತ್ತದೆ (ನಮ್ಮಲ್ಲಿ ಯಕ್ಷಗಾನವನ್ನು ಗಂಡುಕಲೆ ಎಂದು ಕರೆಯುವ ರೂಢಿ ನೆನಪಾಗುತ್ತದೆ). ಇವರ ಹೊಸ ಕಾದಂಬರಿಯ ಮೊದಲ ಓದುಗರಲ್ಲಿ ನಾನೂ ಒಬ್ಬನಾಗಿರುವುದು ನನಗೆ ಸಂತೋಷವನ್ನು ತಂದಿದೆ. ಕಾದಂಬರಿಗೆ ಮುನ್ನ ‘ನನ್ನ ಮಾತು’ ಮೂಲಕ ಅವರು ಈಗಾಗಲೇ ‘ಧಾರವಾಹಿ ರೂಪದಲ್ಲಿ ಅಪರಿಪೂರ್ಣವಾಗಿ ಪ್ರಕಟಗೊಂಡ’ ಮೂರು ಕಾದಂಬರಿಗಳನ್ನು ಮತ್ತೆ ಪರಿಷ್ಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರೇರಣೆಯನ್ನು ಈ ಹೊಸ ಕಾದಂಬರಿ ನೀಡಿದೆಯೆಂದು ತಿಳಿಸುತ್ತಾರೆ. ಈ ಮಾತು ‘ಅಳಿಸಲಾಗದ ಲಿಪಿಯನ್ನು ಬರೆಯಬಾರದು’ ಎಂಬ ಪ್ರಸಿದ್ಧ ನುಡಿಯನ್ನು ಮತ್ತು ಒಬ್ಬ ಲೇಖಕ ತನ್ನ ಜೀವಮಾನದಲ್ಲಿ ಬರೆಯಬಹುದಾದದ್ದು ಒಂದೇಒಂದು ಕೃತಿ ಎಂಬ ಒಂದು ಪ್ರಚಲಿತ ಮಾತನ್ನೂ ನೆನಪು ಮಾಡಿತು. ಈ ಕಾದಂಬರಿಯ ರಚನೆಯ ಸಂದರ್ಭದಲ್ಲಿ ಎದುರಾದ ತೊಡಕನ್ನು ಕುರಿತು ಕೆಲವು ಮಾತುಗಳನ್ನು ಬರೆದುಕೊಂಡಿದ್ದಾರೆ. ತಮ್ಮ ಬಾಲ್ಯದ ಎಷ್ಟೋ ಸಂಗತಿಗಳು ಆತ್ಮಕಥೆ ಮತ್ತು ಕಾದಂಬರಿ ಎರಡರಲ್ಲೂ ಕಾಣಿಸಿಕೊಂಡಿರುವುದರ ಕುರಿತು ತಿಳಿಸಿದ್ದಾರೆ. ಅದು ಸಹಜವೇ ಸರಿ. ಸಾವಿರ ಪುಟಗಳ ಈ ಕಾದಂಬರಿಯನ್ನು ಐನೂರು ಪುಟಗಳಿಗೆ ಇಳಿಸುವಾಗ ಸೃಜನಶೀಲತೆಯ ಸಂಯಮವನ್ನು ಕಲಿತೆ ಎಂದು ತಿಳಿಸಿದ್ದಾರೆ. ಓದುಗರು ಈ ಕಾದಂಬರಿಯನ್ನು ಪ್ರವೇಶಿಸುವ ಮುನ್ನ ಮೊಗಳ್ಳಿ ಆಡಿರುವ ಒಂದು ಘನವಾದ ಮಾತನ್ನು ಗಮನಿಸಬೇಕು: "ಹಳೆ ದುಃಖ ಹೊಸ ದುಃಖ ಎಂಬುದಿಲ್ಲ. ದುಃಖ ದುಃಖವೇ;....ಕಾಲವನ್ನು ದುಃಖ ಮುನ್ನಡೆಸಿದಷ್ಟು ಸುಖ ಮುನ್ನಡೆಸಿಲ್ಲ. ಈ ಕಾದಂಬರಿಯ ಪಾತ್ರಜಗತ್ತು ಇದೇ ನಂಬಿಕೆಯಲ್ಲಿ ಬದುಕಿ ಬಾಳು ಮುಗಿಸಿ ಹೊರಟು ಹೋಗಿದೆ...."

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು366
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ750 ಗ್ರಾಂ
ಆಯಾಮಗಳು-