ಮುಖ್ಯ ವಿಷಯಕ್ಕೆ ಹೋಗಿ (Skip to main content)
ಕೆ.ವಿ.ಎನ್. ಅವರ ತೊಂಡು ಮೇವಿನ ಸಾಹಿತ್ಯ ಸಿದ್ಧಾಂತಗಳೊಂದಿಗೆ ಮುಖಾಮುಖಿ
15% ರಿಯಾಯಿತಿ
ವಿಮರ್ಶೆ

ಕೆ.ವಿ.ಎನ್. ಅವರ ತೊಂಡು ಮೇವಿನ ಸಾಹಿತ್ಯ ಸಿದ್ಧಾಂತಗಳೊಂದಿಗೆ ಮುಖಾಮುಖಿ

ಲೇಖಕ: ಕೇಶವ ಶರ್ಮ. ಕೆ

₹235₹27515% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

೨೦೧೧ರಲ್ಲಿ ತೊಂಡು ಮೇವು ಕೃತಿಯ ವಿಚಾರಗಳನ್ನು ನಾವು ಬೇರೆ ಥರ ಮುಂದುವರಿಸಬೇಕು ಎಂದು ಬರೆದಿದ್ದೆ. ಅದು ಈಗ ಸಾಕಾರವಾಗಿದೆ. ನಾನು ಕೆ. ವಿ. ಎನ್ ಅವರನ್ನು ನೋಡಿದ್ದು ಮತ್ತು ಮಾತಾಡಿದ್ದು ಮಂಗಳೂರು ವಿಶ್ವವಿದ್ಯಾನಿಯದ ಕಮ್ಮಟದಲ್ಲಿ.,ಅದು ನಡೆದು ಹೆಚ್ಚು ಕಡಿಮೆ ಮೂವತ್ತು ಮೂರು? ಮೂವತ್ತ ನಾಲ್ಕು ವರ್ಷಗಳಾದವು. ಅಲ್ಲಿಂದ ಇಲ್ಲಿಯ ವರೆಗೆ ಅವರ ಅಭಿಪ್ರಾಯದಲ್ಲಿ ಕೆಲವನ್ನು ಸ್ವೀಕಾರ ಮಾಡಿದ್ದೇನೆ. ಕೆಲವೊಮ್ಮೆ ನನ್ನ ಸಂದೇಹಗಳನ್ನು ಅವರ ಜೊತೆಗೆ ಹಂಚಿಕೊಂಡಿದ್ದೇನೆ. ಮೊದ ಮೊದಲು ಅವರ ಜೊತೆಗೆ ಮಾತಾಡಲು ತುಂಬಾ ಸಂಕೋಚವಾಗುತ್ತಿತ್ತು. ಅದಕ್ಕೆ ಕಾರಣ ಅವರು ಕನ್ನಡದ ಮಹತ್ವದ ವಿಮರ್ಶಕರಲ್ಲಿ ಒಬ್ಬರು ಎಂದು ಹೆಸರರು ಪಡೆದಿದ್ದರು. ಆದ್ದರಿಂದ ನನ್ನ ಜೊತೆಗೆ ಹೇಗೆ ಮಾತಾಡುತ್ತಾರೋ ಎನ್ನುವ ಆತಂಕ ಮತ್ತು ಸಂಕೋಚವು ಇರುತ್ತಿತ್ತು. ಯಾವಾಗ ಅವರ ಹತ್ತಿರ ಮಾತಾಡಿದನೋ ಆವತ್ತಿನಿಂದ ಕೆಲಸವನ್ನು ಶುರುಮಾಡಿದೆ. ಎರಡು ದಿನಕ್ಕೊಮ್ಮೆ. ಅವರ ಜೊತೆಗೆ ಮಾತಾಡುತ್ತಿದ್ದೆ.ಅವರು ಮಾತಾಡುವಾಗ ನಾನು ಅನುಮಾನವನ್ನು ಹೇಳುತ್ತಿದ್ದೆ. ಅವರು ಉತ್ತರವನ್ನು ಕೊಡುತ್ತಿದ್ದರು. ಬರೀ ಮಾತುಕತೆ. ಅದು ಸಾಂಪ್ರದಾಯಿಕವಾಗಿರಲಿಲ್ಲ. ಅವರತ್ರ ಮಾತಾಡುವಾಗ ನಾನು ಟಿಪ್ಪಣಿಯನ್ನು ಮಾಡಿಕೊಳ್ಳುತ್ತಿದ್ದೆ. ನನಗೆ ಅದು ಬೇಕಿತ್ತು. ಟಿಪ್ಪಣಿಗಳು ಇಲ್ಲದೆ ಮುಂದುವರಿಯುವುದು ಸಾಧ್ಯವಿರಲಿಲ್ಲ. ಹೀಗೆ ಈ ಕೃತಿ ತಯಾರಾಗಿದೆ. ಇದರಲ್ಲಿ ಲೋಪದೋಷಗಳು ಇರಬಹುದು. ಇದ್ದರೆ ಅದು ನನ್ನ ಗ್ರಹಿಕೆಯ ದೋಷ ಎಂದು ತಿಳಿಯಬೇಕೆಂದು ವಿನಂತಿಸುತ್ತೇನೆ. ನನಗೆ ಸಮಯವನ್ನು ಕೊಟ್ಟ ಕೆ. ವಿ. ಎನ್. ಅವರಿಗೆ ಮತ್ತು ಶ್ರೀಮತಿ ಮೇಡಂ ಅವರಿಗೆ ವಂದನೆಗಳು. ಎಷ್ಟೋ ವರ್ಷಗಳಿಂದ ಅವರಿಬ್ಬರು ನನಗೆ ಕೊಟ್ಟ ಪ್ರೋತ್ಸಾಹ ದೊಡ್ಡದು. .ನನಗೆ ಸಮಯವು ಬೇಕಾದಷ್ಟು ಇದೆ. ನಿವೃತ್ತಿಯಾದ ಮೇಲೆ ನನಗೆ ಕಾಲವಿದೆ. ಹೊರ ಜಗತ್ತಿನ ಜೊತೆಗೆ ಮಾತಾಡಲು ಬರಹವೂ ಒಂದು ಸಾಧನವಾಗುತ್ತದೆ ಎಂದು ಕಾರಂತರು ಹೇಳಿದ ನೆನಪು. ಬರಹವೂ ಸಾಮಾಜಿಕ ಸಂಬಂಧವನ್ನು ಹೇಳುತ್ತದೆ. ಅಷ್ಟು ಮಾಡಬಲ್ಲೆ. ಕೆಲಸವು ಇಲ್ಲದೆ ಇರುವುದಕ್ಕೆ ಇದನ್ನು ಆಯ್ಕೆ ಮಾಡಿಕೊಂಡಿದ್ದೇನೆ. . ಸದ್ಯ ಬರೆಯುವ ಶಕ್ತಿಯು ಇದೆ., ಬರೆಯುತ್ತೇನೆ. ಮತ್ತೆ ಕೆಲವರು ವರ್ಷಕ್ಕೆ ಒಂದೇ ಪುಸ್ತಕ ಪ್ರಕಟಿಸಿ ಎಂದರು. ನನ್ನ ಯಾವ ಕೆಲಸವೂ ಪರಿಪೂರ್ಣವಲ್ಲ. ಬರಹದಲ್ಲಿ ಕುಸುರಿ ಕೆಲಸವನ್ನು ಮಾಡುವುದು ಕಷ್ಟ. ಚಲ್ಲಾಪಿಲ್ಲಿಯಾಗಿ ಬರೆಯುವುದೇ ಹೆಚ್ಚು. ಅದರಲ್ಲಿಯೂ ಭಾಷೆ ಹಿರಿದು. ಆಯುಷ್ಯ ಕಿರಿದು ಎಂದು ಗೊತ್ತಿದೆ. ಇದರಲ್ಲಿ ಕೆ. ವಿ. ಎನ್ ಭಾಷಾ ವಿಜ್ಞಾನ ಮತ್ತು ಧ್ವನ್ಯಾಲೋಕದ ಬಗ್ಗೆ ಬರೆದುದನ್ನು ಚರ್ಚೆ ಮಾಡಲಿಲ್ಲ. ನನಗೆ ಅದು ತಿಳಿದಿಲ್ಲ. ಆದ್ದರಿಂದ ಅದನ್ನು ಬರೆಯಲು ಹೋಗಲಿಲ್ಲ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು236
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ450 ಗ್ರಾಂ
ಆಯಾಮಗಳು-