ಮುಖ್ಯ ವಿಷಯಕ್ಕೆ ಹೋಗಿ (Skip to main content)
ಕುರುಡು (ಕಾದಂಬರಿ)
ಹೊಸ ಬಿಡುಗಡೆ14% ರಿಯಾಯಿತಿ
ಅನುವಾದ

ಕುರುಡು (ಕಾದಂಬರಿ)

ಲೇಖಕ: ಡಾ. ವಿಜಯಾ ಸುಬ್ಬರಾಜ್

₹280₹32514% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಕುರುಡು ಸೋಂಕಿನ ರೋಗಿಗಳಿಗೆ ಮಹಾವಿನಾಶಕಾರಿ ಪ್ರಳಯವಾಗಿಯೂ, ಚಂಡಮಾರುತವಾಗಿಯೂ ಪರಿಣಮಿಸಿ, ನಗರಗಳಲ್ಲಿ, ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ಬದುಕುವುದೂ ಸಾಧ್ಯವಾಗುವುದಿಲ್ಲ. ಮನೆ, ಮಠ ಆಸ್ತಿಪಾಸ್ತಿ, ಆಹಾರ, ತನ್ನದು, ಅವರದು ಎನ್ನುವುದಿಲ್ಲ. ತಡವರಿಸುತ್ತಲೇ ಕುರುಡರು ಗುಂಪು ಗುಂಪುಗಳಾಗಿ ಓಡಾಡುತ್ತಾರೆ. ಖಾಲಿ ಬಿದ್ದ ಮಾಲ್‌ಗಳಲ್ಲಿ. ಅಂಗಡಿಗಳಲ್ಲಿ, ಕೇಳುವವರಿಲ್ಲದೆ ಇದ್ದುದರಿಂದ, ಅಲ್ಲಿ ಧಾಳಿ ಮಾಡಿ, ಅಲ್ಲಿನ ಆಹಾರ ಪದಾರ್ಥಗಳನ್ನು ಲೂಟಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ, ಕಂಡ ಕಂಡ ಕಡೆ ಮಲಗುತ್ತಾರೆ. ಈ ಸ್ಥಿತಿಯಲ್ಲಿ ಜಾತಿ, ಮತ, ಧರ್ಮ ಅಧಿಕಾರ, ಅಂತಸ್ತು ಇತ್ಯಾದಿ ಯಾವುದೇ ರೀತಿಯ ತಾರತಮ್ಯಗಳಿಲ್ಲ. ಬದುಕುವುದು. ಅಸ್ತಿತ್ವವನ್ನು ಉಳಿಸಿಕೊಳ್ಳುವುದು, ಅಷ್ಟೇ ಮುಖ್ಯ. ಮನುಷ್ಯ ಸಂಬಂಧಗಳ ಚಹರೆಗಳೇ ಬದಲಾಗಿ ಬಿಡುತ್ತವೆ. ಕೇವಲ ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು ಮಾತ್ರವೇ ಊನವಾದಾಗ, ಮನುಷ್ಯಜಾತಿಗಳ ಅಸ್ತಿತ್ವವೇ ಒಂದು ಸವಾಲಾಗಿ ಬಿಡುತ್ತದೆ. ಪರಸ್ಪರರ ನಡುವೆ ದಯೆ, ದಾಕ್ಷಿಣ್ಯ, ಸೌಹಾರ್ದತೆಗಳೇ ಸತ್ತು ಹೋಗುತ್ತವೆ. ಕ್ವಾರಂಟೈನ್ ನಲ್ಲಿನ ಕುರುಡು ರೋಗಿಗಳ ಮೇಲ್ವಿಚಾರಣೆಗೆಂದು ನೇಮಕಗೊಂಡ ಮಿಲ್ಟ್ರಿ ಸಿಬ್ಬಂದಿಯವರೂ ಕುರುಡಾಗಿದ್ದರೂ, ಒಂದಿಷ್ಟೂ ಪಾಪ ಪ್ರಜ್ಞೆಯಿಲ್ಲದ ಆ ಗಂಡಸರು ಮಹಿಳೆಯರ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ ಅತ್ಯಂತ ಭಯಾನಕವೂ ಭೀಭತ್ಸವೂ ಆಗಿರುವುದು ಒಂದು ನೆಲೆಯಾದರೆ, ಊಟದ ವ್ಯವಸ್ಥೆ ಮುಫತ್ತಾಗಿ ಮಾಡಬೇಕಾಗಿದ್ದರೂ, ವಾರ್ಡುಗಳಲ್ಲಿ, ಒಳರೋಗಿಗಳಾಗಿ ಇರುವವರಿಂದ, ಅವರು ಉಳಿಸಿಕೊಂಡಿರುವ ಹಣವನ್ನು, ವಸ್ತುಗಳನ್ನೂ, ದೋಚಿಕೊಂಡು, ಊಟದ ಲೆಕ್ಕಕ್ಕೆ ಹೊಂದಿಸಿಕೊಳ್ಳುವ ಅವರು ರಾಕ್ಷಸರಿ ಗಿಂತಲೂ ಕೀಳಾಗಿ ವರ್ತಿಸುವುದನ್ನು ನೋಡಿದಾಗ, ಮಾನವ ವಿಕಾಸದ ಅವಧಿಯಲ್ಲಿನ ಆದಿಮಾನವರ ಬದುಕನ್ನು ನೆನಪಿಸುತ್ತದೆ. ನಾಗರಿಕತೆ, ಸಭ್ಯತೆ, ಸೌಜನ್ಯಗಳೆಲ್ಲವೂ ಈ ಕುರುಡುತನದ ವಿಪತ್ತಿನ ಸಂದರ್ಭದಲ್ಲಿ ಕಾಣಿಸಿಕೊಂಡು, ಮಾನವೀಯತೆ, ಮನುಷ್ಯತ್ವಗಳನ್ನು ಮರುವಿವೇಚನೆಗೆ ಒಳಪಡಿಸಬೇಕಾಗುತ್ತದೆ. ಇಂಥ ಭಯಾನಕ ಪರಿಸರದಲ್ಲಿ, ಅವರನ್ನು ಮನುಷ್ಯವರ್ಗದಿಂದ ದೂರವಿರಿಸಲೇಬೇಕೆನಿಸುತ್ತದೆ. ಕರುಳ ಸಂಬಂಧಗಳೂ ಕತ್ತರಿಸಿ ಹೋಗುತ್ತವೆ. ಕ್ವಾರಂಟೈನ್‌ಗಾಗಿ ಬಂದ ಮೊದಲ ವಾರ್ಡಿನ ಕುರುಡರ ಜೊತೆಗಿನ ಹುಡುಗ, ತನ್ನ ಅಮ್ಮನಿಂದಲೇ ದೂರವಾಗಿ ಬಿಡುತ್ತಾನೆ. ಮೊದ ಮೊದಲು, ಅಮ್ಮನಿಗಾಗಿ ಅತ್ತವನು, ಕಡೆ ಕಡೆಗೆ ಅಮ್ಮನ ನೆನಪೂ ಇಲ್ಲದಂತಿರುತ್ತಾನೆ. ಮಾನವೀಯತೆಯೆನ್ನುವುದೇ ಅಳಿಸಿ ಹೋಗುತ್ತದೆ. ಕುರುಡರನ್ನು ಕ್ವಾರಂಟೈನ್ ಮಾಡಿ ನೋಡಿಕೊಳ್ಳಬೇಕಾದ ಸರಕಾರವೂ ಅಸಹಾಯಕ ವಾಗುತ್ತದೆ. ಕೇವಲ ತನ್ನ ಘೋಷಣೆಗಳನ್ನು ಕೇಳಿಸುವುದಕ್ಕಷ್ಟೇ ಸೀಮಿತ ವಾಗುತ್ತದೆ. ಹುಚ್ಚರ ಆಸ್ಪತ್ರೆಯನ್ನೇ ಕುರುಡರ ಆಶ್ರಯಧಾಮವನ್ನಾಗಿ ರೂಪಾಂತರಿಸಲಾಗುತ್ತದೆಯೇ ಹೊರತಾಗಿ, ನೀರಿನ, ಆಹಾರದ ವ್ಯವಸ್ಥೆ ಯಾಗಲೀ, ನೈರ್ಮಲ್ಯದ ವ್ಯವಸ್ಥೆಯಾಗಲೀ ಇಲ್ಲದೆ ಕೇವಲ ಕೊಳಕು, ಹೇಸಿಗೆಗಳಿಂದ ತುಂಬಿದ ನರಕ ಸದೃಶ ಪ್ರದೇಶದಲ್ಲಿ, ಪ್ರಾಣಿಗಳಂತೆ ಇರುವ ಪರಿಸರ ನಿರ್ಮಿಸುತ್ತದೆ. ಸರಕಾರ ತನ್ನ ನಿಲುವುಗಳನ್ನು ಪ್ರತಿಬಾರಿಯೂ ಬದಲಾಯಿಸುತ್ತಾ, ಸುಳ್ಳು ಭರವಸೆಗಳನ್ನು ನೀಡುತ್ತಾ, ಮೋಸ ಮಾಡುತ್ತದೆ. ಬ್ಯಾಂಕುಗಳೆಲ್ಲ ಲೂಟಿಯಾಗಿ, ದಿವಾಳಿತನವೇ ಎದ್ದೆದ್ದು ಕಾಣಿಸುತ್ತದೆ. ಕೇವಲ ಕುರುಡತನ ಮಾತ್ರದಿಂದಲೇ, ಜಗತ್ತೇ ನರಕವಾಗಿ ರೂಪಾಂತರವಾಗಿ, ಕುರುಡರು, ಸಮಾಜದಲ್ಲಿ, ಪ್ರಾಣಿಗಳಿಗಿಂತ ಹೀನ ಬದುಕನ್ನು ಬದುಕಬೇಕಾಗುತ್ತದೆ. ಕಾಲ್ಪನಿಕ ಕುರುಡತನ ಸೃಷ್ಟಿಸಿದ ಈ ಅವಾಂತರಗಳು, ಮನುಷ್ಯ ಸಮಾಜದ ವಿಕೃತತೆ, ಮನುಷ್ಯನ ಕ್ರೌರ್ಯ, ಬದುಕಿನಲ್ಲಿನ ಹೇಸಿಗೆತನಗಳನ್ನು ನೋಡಿದವರಿಗೆ, ಒಂದು ವೇಳೆ ಈ ಸೋಂಕು ನಿಜವೇ ಆದರೆ, ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಧೈರ್ಯ ಸಾಲುವುದಿಲ್ಲ.

ವಿಶೇಷತೆಗಳು

ISBN978-93--81333-07-5-2
ಭಾಷೆಕನ್ನಡ
ಪುಟಗಳು276
ಪ್ರಕಟಣೆ ವರ್ಷ2022
ಆವೃತ್ತಿ1st
ತೂಕ500 ಗ್ರಾಂ
ಆಯಾಮಗಳು-