ಅನುವಾದ
ಎಲ್ಲೆ ಮೀರಿ - ಗೂಗಿ ವಾಥಿಯಾಂಗೋರವರ ವೈಚಾರಿಕ ಲೇಖನಗಳು
ಲೇಖಕ: ಡಾ|| ಎಚ್.ಎಸ್. ನಾಗಭೂಷಣ
₹260₹30013% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಗೂಗಿಯವರ ಬರಹಗಳನ್ನು ನಾನು ಓದಲು ಆರಂಭಿಸಿದ್ದು ಸುಮಾರು ಹತ್ತುವರ್ಷಗಳ ಹಿಂದೆ. ಎರಡು ಕಾರಣಗಳಿಗಾಗಿ ಗೂಗಿಯನ್ನು ಇಷ್ಟಪಟ್ಟಿದ್ದೇನೆ. ಮೊದಲನೆಯದಾಗಿ ಗೂಗಿಯ ಭಾಷಾ ಶೈಲಿ. ನಮ್ಮಲ್ಲನೇಕರ ಹಾಗೆ ಗೂಗಿಗೂ ಇಂಗ್ಲಿಷ್ ಒಂದು ‘ಹೊರಗಿನ ಭಾಷೆ’. ಆದರೆ ಗೂಗಿ ಅದನ್ನು ಪಳಗಿಸಿ ಬಳಸಿಕೊಳ್ಳುವ ರೀತಿ ಅನನ್ಯವಾದುದು. ತಮ್ಮದಲ್ಲದ ಭಾಷೆಯನ್ನು ತಮ್ಮದಾಗಿಸಿಕೊಂಡು ಅದರೊಟ್ಟಿಗೆ ಅನುಸಂಧಾನ ಮಾಡುವ ಗೂಗಿಯ ಪರಿ ಆಕರ್ಷಣೀಯ. ಗಹನವಾದ ವಿಚಾರಗಳನ್ನು, ಅಷ್ಟೇ ಗಂಭೀರವಾಗಿ, ಕೆಲವೊಮ್ಮೆ ವ್ಯಂಗ್ಯವಾಗಿ ಚುಚ್ಚುವ ಗೂಗಿಯ ಭಾಷಾ ಪ್ರೌಢಿಮೆಗೆ ತಲೆದೂಗಲೇಬೇಕು. ಗೂಗಿಯವರದ್ದು ಅತ್ಯಂತ ಸುಲಲಿತವಾಗಿ ಹರಿಯುವ ಕಾವ್ಯದ ಭಾಷೆ. ಅವರ ಈ ಭಾಷಾ ಸೊಬಗನ್ನು ಅನುಭವಿಸಿ ಓದಿದ್ದೇನೆ. ಗೂಗಿ ನನಗೆ ಇಷ್ಟವಾಗಲು ಇನ್ನೊಂದು ಕಾರಣ-ಅವರ ವೈಚಾರಿಕ ದೃಷ್ಟಿಕೋನ. ಆಫ್ರಿಕನ್ನರಿಗೂ ನಮಗೂ ಇರುವ ಸಾಮ್ಯತೆಯೆಂದರೆ ನಮ್ಮಿಬ್ಬರನ್ನೂ ಬಿಳಿಯರು ಆಳಿರುವುದು. ನಾವಿಬ್ಬರೂ ಬೇರೆ ಬೇರೆ ಭೂ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದರೂ, ನಮ್ಮಿಬ್ಬರನ್ನು ಘಾಸಿಗೊಳಿಸಿದವರು ಒಬ್ಬರೇ. ಸ್ವತಂತ್ರ ಹೋರಾಟದ ಜೊತೆ ಜೊತೆಗೆ ನಮ್ಮ ಅಸ್ಮಿತೆಯ ಹೋರಾಟವನ್ನು ನಡೆಸಿದ್ದೇವೆ. ಆದರೆ ಆಫ್ರಿಕನ್ನರ ಸಂಸ್ಕೃತಿಯ ಮೇಲೆ ಬಿಳಿಯರು ನಡೆಸಿದ ಅತ್ಯಾಚಾರಗಳು ಅತ್ಯಂತ ಭೀಕರವಾದುದು. ನಮ್ಮ ಸಂಸ್ಕೃತಿ ಹಾಗು ಭಾಷೆಗಳಿಗೆ ದೊಡ್ಡ ಇತಿಹಾಸವಿರುವುದರಿಂದ ಈ ಆಘಾತಗಳನ್ನು ಎದುರಿಸಿ ಬದುಕಿವೆ. ಆದರೆ ಆಫ್ರಿಕನ್ನರ ಧರ್ಮ, ಭಾಷೆ ಹಾಗು ಸಂಸ್ಕೃತಿಗಳನ್ನು ಬಿಳಿಯರು ಸಂಪೂರ್ಣವಾಗಿ ನಾಶಮಾಡಿ ಆಫ್ರಿಕನ್ನರು ತಮ್ಮ ಅಸ್ಮಿತೆಯನ್ನು ತಡಕಾಡುವ ವಿಚಿತ್ರ ಸನ್ನಿವೇಶವನ್ನು ಉಂಟುಮಾಡಿದ್ದಾರೆ. ಆಫ್ರಿಕನ್ನರು ಅನೇಕ ಪ್ರತಿಭಟನೆ, ನೋವು, ಯಾತನೆ, ಸಂಕಟಗಳನ್ನು ಅನುಭವಿಸಿದ್ದಾರೆ. ಗೂಗಿ ಈ ಎಲ್ಲಾ ಕಷ್ಟ-ಕೋಟಲೆಗಳ ಪ್ರತ್ಯಕ್ಷದರ್ಶಿ ಮಾತ್ರವಲ್ಲ, ನೇರ ಭಾಗಿ ಕೂಡ. ಗೂಗಿ ಎಲ್ಲೂ ಧೃತಿಗೆಡದೆ, ಬಿಳಿಯರು ಕೊಟ್ಟ ಎಲ್ಲಾ ಯಾತನೆಗಳನ್ನು ದಿಟ್ಟವಾಗಿ ಎದುರಿಸಿದ್ದಾರೆ. ಅವರ ಈ ಅಗಾಧವಾದ ಅನುಭವ ಅವರ ಅನೇಕ ಲೇಖನಗಳಲ್ಲಿ ಬಹಳ ಸಹಜವಾಗಿ ಮೂಡಿ ಬಂದಿದೆ. ಸ್ವತಂತ್ರ ಬಂದಮೇಲೆ ಈ ಎಲ್ಲಾ ಸಂಕಷ್ಟಗಳೂ ಪರಿಹಾರವಾಗಬಹುದೆಂದು ಎಲ್ಲರೂ ಬಗೆದಿದ್ದರು. ಆದರೆ ಸ್ವತಂತ್ರ ಬಂದ ನಂತರದ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಸ್ಥಳೀಯ ರಾಜಕಾರಣಿಗಳು ಬಿಳಿಯರ ಏಜೆಂಟರಂತೆ ಅವರ ತಾಳಕ್ಕೆ ಕುಣಿಯುತ್ತಾ ಆಫ್ರಿಕಾವನ್ನು - ಬಹಳ ಮುಖ್ಯವಾಗಿ ಕೀನ್ಯಾವನ್ನು - ನರಕ ಸದೃಶ್ಯ ಮಾಡಿಬಿಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ.
ಗೂಗಿಯವರು ತಮ್ಮೆಲ್ಲಾ ಲೇಖನಗಳಲ್ಲಿ ಬಿಳಿಯರಿಂದ ತಾವು ಅನುಭವಿಸಿದ ನೋವುಗಳನ್ನು ಹಾಗು ತಮ್ಮ ಹೋರಾಟವನ್ನು ಎಳೆಎಳೆಯಾಗಿ ವಿವರಿಸುತ್ತಾರೆ. ಓದುತ್ತಾ, ಓದುತ್ತಾ ‘ಇದೆಲ್ಲೋ ನಮ್ಮ ವಿಚಾರಗಳನ್ನೇ ಗೂಗಿ ಬೇರೊಂದು ಹಿನ್ನೆಲೆಯಲ್ಲಿ ಹೇಳುತ್ತಿದ್ದಾರೆ’ ಎನಿಸಿದರೆ ಆಶ್ಚರ್ಯವಿಲ್ಲ. ಅವರ ವಿಚಾರಗಳು ಬೆಂಕಿ ಉಂಡೆಯಂತೆ. ಅದರೊಟ್ಟಿಗೆ ಗೂಗಿಯವರ ಭಾಷೆ ಈ ಬೆಂಕಿಯಂತಹ ವಿಚಾರಗಳನ್ನು ಇನ್ನೂ ತೀಕ್ಷ್ಣಗೊಳಿಸುತ್ತದೆ. ಗೂಗಿಯವರ ಜೀವನವೇ ಒಂದು ರೋಚಕ ಯಶೋಗಾಥೆ. ನಮ್ಮಿಬ್ಬರದೂ ಒಂದೇ ಹಿನ್ನಲೆಯಿರುವುದರಿಂದ ಗೂಗಿ ನಮ್ಮನ್ನು ನೇರವಾಗಿ ತಲುಪಬಲ್ಲರು. ಅವರ ವಿಚಾರಗಳ ಆಳಕ್ಕಿಳಿದರೆ ಓದುಗನಲ್ಲಿ ಹೊಸ ಹೊಳಹುಗಳನ್ನು ಮೂಡಿಸಬಲ್ಲವು.
ವಿಶೇಷತೆಗಳು
| ISBN | 978-93-81244-57-98 |
| ಭಾಷೆ | ಕನ್ನಡ |
| ಪುಟಗಳು | 260 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 2nd |
| ತೂಕ | 425 ಗ್ರಾಂ |
| ಆಯಾಮಗಳು | Book Size : 1/4 Crown (23x15.5) (International Standard Book Size) |





