ಅನುವಾದ
ಮನುಷ್ಯನಾಗಿ ಉಳಿದಿಲ್ಲ
ಲೇಖಕ: ಡಾ. ವಿಜಯ ನಾಗ್ ಜಿ.
₹125₹14011% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಒಂಟಿತನವನ್ನು ಅನುಭವಿಸುವ, ಅನಾಥ ಪ್ರಜ್ಞೆಯಲ್ಲಿ ನರಳುವ, ಮನುಷ್ಯ ಸ್ವಭಾವದಲ್ಲಿ ಕೆಡುಕನ್ನೇ ಹೆಚ್ಚಾಗಿ ಕಾಣುವ, ಆಪ್ತರಿರದ, ಆಪ್ತರು ಸಿಕ್ಕರೂ ಅವರೊಡನೆ ಬೆರೆಯಲಾರದ ತೊಳನಾಟುವ ದುರ್ಬಲ ನಾಯಕ ಕನ್ನಡದ ನವ್ಯಸಾಹಿತ್ಯದಲ್ಲೂ ಓದುಗರಿಗೆ ಪರಿಚಿತವಾಗಿದೆ. ಈ ಜಪಾನ್ ಸಾಹಿತ್ಯ ಕೃತಿಯು ಸುಮಾರಾಗಿ ಅಂಥದೇ ಭಾವ ಮೂಡಿಸಬಹುದು. ವ್ಯತ್ಯಾಸವೆಂದರೆ ಒಸಾಮು ದೋಜಾಯ್ ಈ ಕಾದಂಬರಿಯಲ್ಲಿ ತನ್ನ ಬದುಕಿನ ಕಥೆಯನ್ನೇ ಹೇಳಿದ್ದಾನೆ, ಕಾದಂಬರಿಯ ರೂಪ ತಾಳಿರುವ ಆತ್ಮಕಥೆ ಇದು ಎಂದು ಜಪಾನ್ ಸಾಹಿತ್ಯವನ್ನು ಬಲ್ಲವರು ಹೇಳುತ್ತಾರೆ. ಈ ಕಾದಂಬರಿಯ ವಿನ್ಯಾಸವನ್ನು ನೋಡುತಿದ್ದಂತೆ ದಾಸ್ತೋವ್ಸ್ಕಿಯ ಬರವಣಿಗೆಯ ನೆನಪು ಬಲವಾಗಿ ಕಾಡುತ್ತದೆ.
ಬೌದ್ಧಿಕವಾಗಿ ನೋಡಿದಾಗ ಅಕರ್ಷಕ ಸಿದ್ಧಾಂತವಾಗಿ, ವಾದವಾಗಿ, ಚಿಂತನೆಯಾಗಿ ಕಾಣುವ ಸಂಗತಿಗಳಲ್ಲಿ ವ್ಯಕ್ತಿ ಮತ್ತು ಸಮಜಾದ ಸಂಘರ್ಷವೂ ಒಂದು. ತನ್ನ ಒಳಲೋಕ ಮತ್ತು ತಾನು ಬದುಕಿರುವ ಹೊರಲೋಕಗಳ ನಡುವೆ ಹದುಳವಾದ ಸಂಬಂಧ ಇಟ್ಟುಕೊಳ್ಳಲಾರದ ಒಂಟಿ ಜೀವದ ಅನುಭವ ಆ ಮನಸಿಗೆ ಜ್ವಾಲಾಮುಖಿಯಷ್ಟೇ ಸ್ಫೋಟಕವಾಗಬಹುದು. ತನ್ನನ್ನು ತಾನು ಅರಿಯುವ (ಆಧ್ಯಾತ್ಮಿಕವೆಂದು ತಪ್ಪಾಗಿ ಲೇಬಲ್ ಹಚ್ಚಿಸಿಕೊಳ್ಳುವ), ಒತ್ತಡವಾಗಿ ಮನಸನ್ನು ದಣಿಸಬಹುದು. ಅಗಾಧವಾದ ಒಂಟಿತನವನ್ನು ಅನುಭವಿಸುತ್ತ, ತನ್ನನ್ನು ಅರಿಯುವವರು, ಆದರಿಸುವವರು, ಒಲಿಯುವವರು ಇಲ್ಲವೆಂದು ಕೊರಗಬಹುದು.
ವ್ಯಕ್ತಿ ಹೀಗಾಗುವುದಕ್ಕೆ ಸಮಾಜದ ವ್ಯವಸ್ಥೆ, ಬಂಡವಾಳಶಾಹಿಯ ಬೆಳವಣಿಗೆ, ಮನುಷ್ಯರು ಉತ್ಪಾದಿಸುವ ವಸ್ತುಗಳ ಲೋಕಕ್ಕೂ ಮನುಷ್ಯರಿಗೂ ಸಂಬಂಧ ತಪ್ಪಿದ ಸ್ಥಿತಿ ಎಂದು ಬಗೆಬಗೆಯಾಗಿ ಸಿದ್ಧಾಂತಗಳನ್ನು ರೂಪಿಸಲಾಗಿದೆ. ಆದರೂ ‘ನಾನು’ ಎಂಬುದೇ ಕೇಂದ್ರವಾಗಿ, ಸುತ್ತಲ ಜನ, ಸಮಾಜ, ನಂಬಿಕೆ, ವರ್ತನೆಗಳನ್ನು ವಿಮರ್ಶೆಮಾಡುತ್ತ ನಾನು ಸರಿ ಎಂದು ಸಮರ್ಥನೆ ಮಾಡಿಕೊಳ್ಳುವುದು ಮನಸಿಗೆ ಪ್ರಿಯವಾದ ಕೆಲಸವೂ ಆಗುತ್ತದೆ. ಮಾಗಿದ, ಮಾಗುತ್ತಿರುವ ಮನಸ್ಸಾದರೆ ಇಂತ ಸಮರ್ಥನೆಯೊಳಗೇ ಸ್ವವಿಮರ್ಶೆಯೂ ಮೂಡುತ್ತದೆ. ಆಗ ವ್ಯಕ್ತಿಗಳಾಗಿ ತೊಳಲುವ ಎಲ್ಲ ಮನಸುಗಳಿಗೆ ಪ್ರಿಯವೂ ಆಗುತ್ತದೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 124 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 300 ಗ್ರಾಂ |
| ಆಯಾಮಗಳು | - |





