ಅನುವಾದ
ಗಾಂಧಿಮನೆಯ ಅವಲಕ್ಕಿ ಸರ (ಕಾದಂಬರಿ)
ಲೇಖಕ: ಎಂ ಜಿ ಹೆಗಡೆ
₹300₹38021% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಸ್ವಾತಂತ್ರ್ಯ ಚಳುವಳಿ ಎಂದರೆ ಅದೊಂದು ಅಲೆ, ಸಮರೋಪಾದಿಯ ಪ್ರಕ್ರಿಯೆಗಳ ಒಟ್ಟು ಸ್ವರೂಪ. ಇಂಥಹ ಹಲವು ಪ್ರಕ್ರಿಯೆ ಮತ್ತು ಅದು ಜನರನ್ನು ಪ್ರಭಾವಿಸಿ ಜನರ ಬದುಕು ಬದಲಾದ ಕx, ನಮ್ಮ ದೇಶದ ಎಲ್ಲಾ ಹಳ್ಳಿ ಹಳ್ಳಿಗಳಲ್ಲಿಯೂ ಇದೆ. ಇಂಥ ಹಳ್ಳಿಯ ಜನರ ಬದುಕಿನ ಕಥೆ ಇರುವುದು ಎಂ. ಜಿ. ಹೆಗಡೆ ಅವರ “ಗಾಂಧಿಮನೆಯ ಅವಲಕ್ಕಿ ಸರ” ಎಂಬ ಕಾದಂಬರಿಯಲ್ಲಿ. ಈ ಕಾದಂಬರಿಯ ವಿವಿಧ ಕತೆಗಳನ್ನು ಓದುವಾಗ ದೃಶ್ಯಾನುಭವಗಳನ್ನು ಯಶಸ್ವಿಯಾಗಿ ಮೂಡಿಸಿರುವುದು ಕಂಡು ಬರುತ್ತದೆ. ಮರಣದ ಸಂದರ್ಭ, ಬರಗಾಲದಲ್ಲಿನ ಕತೆಗಳು, ವಿಧವೆಯ ಚಿತ್ರಣ, ಓದುಗರಲ್ಲಿ ತೀವ್ರ ತಲ್ಲಣ ಉಂಟುಮಾಡುತ್ತದೆ. ಅದೇ ರೀತಿ ಕಾದಂಬರಿಯುದ್ದಕ್ಕೂ ಹಾಸ್ಯ, ಸಂಭ್ರಮ, ಸಂಸ್ಕೃತಿ, ವಿಕೃತಿ ಹೀಗೆ ಕಾದಂಬರಿಯು ಬಹುರಸಾನುಭವವನ್ನು ಓದುಗನಿಗೆ ನೀಡುವಲ್ಲಿ ಯಶಸ್ವಿಯಾಗಿದೆ.
ಮೂಲತಃ ಶಿರಸಿ ಸಮೀಪದ ಶಾನವಳ್ಳಿಯವರಾದ ಹೆಗಡೆ ಅವರು ತಮ್ಮ ಉನ್ನತ ಶಿಕ್ಷಣ ಮತ್ತು ವೃತ್ತಿ ಜೀವನವನ್ನು ಕಂಡುಕೊಂಡಿದ್ದು ದಕ್ಷಿಣ ಕನ್ನಡದಲ್ಲಿ. ಮಂಗಳೂರಿನಲ್ಲಿ ಫ್ಯಾಷನ್ ಡಿಸೈನಿಂಗ್ ಕಾಲೇಜಿನ ಸಂಸ್ಥಾಪಕರಾದ ಇವರು, ಸಾಮಾಜಿಕ ಚಿಂತಕರು ಮತ್ತು ಉತ್ತಮ ವಾಗ್ಮಿಗಳು. ಶಾಲಾ ಮಕ್ಕಳಿಗೆ ಉತ್ತರ ಕನ್ನಡದ ಸಾಮರಸ್ಯ ಕುರಿತು ಪುಸ್ತಕ ಬರೆಯಲು ಜಿಲ್ಲೆಯಾದ್ಯಂತ ಪ್ರವಾಸ ಮಾಡಿದಾಗ ಸಿಕ್ಕಿದ ಮಾಹಿತಿ ಎಳೆ ಹಿಡಿದು.
ಕುತೂಹಲಕ್ಕೆಂದು ತಾವು ಕೇಳಿದ ಊರುಗಳಿಗೆ ತೆರಳಿ ವಿಷಯ ಸಂಗ್ರಹಿಸಿ, ಕಾಲ್ಪನಿಕವಾಗಿ ಕಥೆಯನ್ನು ಹೆಣೆದಿರುವುದಾಗಿ ತಿಳಿಸಿರುತ್ತಾರೆ. ಕಥೆ ಕಾಲ್ಪನಿಕವಾದರೂ, ಉತ್ತರಕನ್ನಡದ ಸಿದ್ದಾಪುರ ತಾಲ್ಲೂಕು ಎಂದರೆ ಸ್ವಾತಂತ್ರ ಸಂಗ್ರಾಮದ ಚಳುವಳಿಗಳಲ್ಲಿ ಭಾಗವಹಿಸಿದ ಹಿರಿಯರನ್ನು, ಈಗಲೂ ಅಲ್ಲಿನ ಜನರು ನೆನಪಿಸುತ್ತಾರೆ. ಹಾಗಾಗಿಯೇ ಇಲ್ಲಿನ ಕಥೆಯು ಸತ್ಯದ ಜೊತೆಗಿನ ಹದವಾದ ಮಿಶ್ರಣದಿಂದಾಗಿ ಅದರ ಮೌಲ್ಯವನ್ನು ಹೆಚ್ಚಿಸಿದೆ ಎಂಬ ಭಾವವು ಓದುಗರಿಗೆ ಉಂಟಾಗುತ್ತದೆ. ಆ ಮೂಲಕ ಕಾದಂಬರಿಯು ಗೆಲ್ಲಲು ಕಾರಣವಾಗುತ್ತದೆ. ಹಾಗೂ ಕಾದಂಬರಿಯ ಪ್ರತಿಯೊಂದು ಕತೆಗಳು ಸ್ವತಂತ್ರವಾಗಿ ಕಂಡು ಬಂದರೂ ಒಟ್ಟು ಕಾದಂಬರಿಯನ್ನು ಕಟ್ಟುವುದರಲ್ಲಿ ಪರಸ್ಪರ ಗಟ್ಟಿಯಾಗಿ ನಿಲ್ಲುತ್ತವೆ. ಮತ್ತು ಕುತೂಹಲದ ಎಳೆಯನ್ನು ಪ್ರತಿ ಹಂತದಲ್ಲೂ ಹಾಗೆ ಉಳಿಸಿಕೊಳ್ಳುತ್ತದೆ.
ಅನೇಕ ಕಾದಂಬರಿಗಳು ಸಾಮಾಜಿಕ ನೆಲಗಟ್ಟಿನಲ್ಲಿ ಪಾತ್ರಗಳನ್ನು ಸೃಷ್ಠಿ ಮಾಡುತ್ತವೆ. ಆದರೆ ಹೆಗಡೆಯವರ ಈ ಕಾದಂಬರಿಯಲ್ಲಿ ಪಾತ್ರಗಳು ವೈಯುಕ್ತಿಕ ನೆಲೆಗಟ್ಟಿನಲ್ಲಿ ಪ್ರಸ್ತುತಿಗೊಂಡಿರುವುದರಿಂದ ಕಾದಂಬರಿಯುದ್ದಕ್ಕೂ ವಿವಿಧ ಸಂಗತಿಗಳು ಈ ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತದೆ.
ವಿಶೇಷತೆಗಳು
| ISBN | 978-81-972194-9-8 124 |
| ಭಾಷೆ | ಕನ್ನಡ |
| ಪುಟಗಳು | 338 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1st |
| ತೂಕ | 680 ಗ್ರಾಂ |
| ಆಯಾಮಗಳು | - |





