ಮುಖ್ಯ ವಿಷಯಕ್ಕೆ ಹೋಗಿ (Skip to main content)
ಚುಕ್ಕಿ ಮದುವೆ ಪ್ರಸಂಗ
ಹೊಸ ಬಿಡುಗಡೆ14% ರಿಯಾಯಿತಿ
ಕಥೆಗಳು

ಚುಕ್ಕಿ ಮದುವೆ ಪ್ರಸಂಗ

ಲೇಖಕ: ಅಮರೇಶ ನುಗಡೋಣಿ

₹155₹18014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

‘ಚುಕ್ಕಿಯ ಮದುವೆ ಪ್ರಸಂಗ’ ಮತ್ತು ‘ತುಳಸಿ’. ಚುಕ್ಕಿ ಇನ್ನೂ ಚಿಕ್ಕ ಹುಡುಗಿ. ಯಾರೋ ಮಾಡಿಸುವ ಸಾಮೂಹಿಕ ವಿವಾಹದ ಲಾಭ ಪಡೆಯುವುದಕ್ಕೆ ಚುಕ್ಕಿಯನ್ನು ಸಿಕ್ಕಿಸಲಾಗುತ್ತದೆ. ಇನ್ನೂ ಓದಿಸಬೇಕು ಎಂಬುದು ಅವಳ ಅಜ್ಜಿಯ ಆಸೆಯಾಗಿರುತ್ತದೆ. ಚುಕ್ಕಿಯದೂ ಕೂಡ. ಆದರೆ ಮದುವೆ ಎಂಬುದೇ ದೌಲತ್ತಾಗಿರುವಾಗ ಇದೊಂದು ಅದೃಷ್ಟ ಎಂಬ ಬೇರೆಯವರ ಮಾತಿಗೆ ಚುಕ್ಕಿಯ ಅಜ್ಜಿಗೂ ಅವಳಿಗೊಂದು ಮದುವೆ ಮಾಡಿಸುವುದೇ ‘ಜಾಣತನ’ ಅನ್ನಿಸಿಬಿಡುತ್ತದೆ. ಇಡೀ ಸಾಮೂಹಿಕ ವಿವಾಹದ ಗದ್ದಲದಲ್ಲಿ ನಮ್ಮ ನಮ್ಮ ಬದುಕಿನ ಅಸಂಗತೆಗಳನ್ನೆಲ್ಲಾ ರೂಪಕದಂತೆ ಕತೆ ತೆರೆದಿಡುವ ಜೊತೆಯಲ್ಲೇ ಕೊನೆಗೂ ಮದುವೆಯಿಂದ ಚುಕ್ಕಿ ತಪ್ಪಿಸಿಕೊಂಡರೂ, ತಾನು ಮೆಚ್ಚಿದ ಹುಡುಗನನ್ನೆ ಅವಳು ಮದುವೆಯಾಗಬಹುದಾದ ಸೂಚನೆಯಲ್ಲಿ ಕತೆ ಮುಗಿಯುತ್ತದೆ. ಕತೆ ಅವಳ ಮುಂದಿನ ವಿದ್ಯಾಭ್ಯಾಸದ ಬಗೆಗೆ ಮೌನ ವಹಿಸಿದೆ. ತುಳಸಿ ಕತೆಯ ನಾಯಕಿ ಪಿಎಚ್.ಡಿ ಪದವಿ ಪಡೆಯಲಿರುವವಳು. ಅವಳ ಮದುವೆಯೆಂಬುದೊಂದು ಯಕ್ಷಪ್ರಶ್ನೆ. ವಿಶ್ವವಿದ್ಯಾನಿಲಯಗಳ ಪಿಎಚ್.ಡಿ ಎಂಬುದು ಹಲವು ಬಾರಿ ಅಸಂಗತತೆಗಳ ಗೂಡಾಗಿರುವುದನ್ನೂ, ಇದು ಹಲವು ಬಡ ಮಕ್ಕಳಿಗೆ ನಿರುದ್ಯೋಗದಿಂದ ಪಾರಾಗುವಿಕೆಯ ತಾತ್ಕಾಲಿಕ ದಾರಿಯಾಗಿರುವುದನ್ನೂ, ಗೈಡುಗಳ ಬೇರೆ ಬೇರೆ ತೆವಲುಗಳಿಗೆ ಸಾಧನಗಳಾಗಿರುವುದನ್ನು ಸೂಕ್ಷ್ಮವಾಗಿ ಬಿಡಿಸಿಡುತ್ತಾ ಅದು ತುಳಸಿಯ ಮದುವೆಯ ಪ್ರಸಂಗಕ್ಕೇ ಮರಳುತ್ತದೆ. ವಿದ್ಯೆ ಮೊಟಕಾಗುವ ಚುಕ್ಕಿಗೂ, ವಿದ್ಯೆಯ ದೊಡ್ಡ ಪದವಿ ಇರುವ ತುಳಸಿಗೂ ತಮ್ಮ ಭವಿಷ್ಯ ನಿರ್ಣಯಿಸಿಕೊಳ್ಳುವ ಯಾವ ದಾರಿ ಇದೆ? ಬದಲಾವಣೆಯೆಂಬುದು ಘಟಿಸಿದೆಯೇ? ರೂಪ ಮಾತ್ರ ಬದಲಿಸಿದೆಯೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತವೆ.

ವಿಶೇಷತೆಗಳು

ISBN978-93-81577-61-5
ಭಾಷೆಕನ್ನಡ
ಪುಟಗಳು164
ಪ್ರಕಟಣೆ ವರ್ಷ2017
ಆವೃತ್ತಿ2nd
ತೂಕ400 ಗ್ರಾಂ
ಆಯಾಮಗಳು-