ಕಥೆಗಳು
ಮಲೆಯಾಳದ ‘ಪೆಣ್’ ಕಥನ (ಮಲೆಯಾಳದ ಖ್ಯಾತ ಲೇಖಕಿಯರ ಕಥೆಗಳು)
ಲೇಖಕ: ಡಾ. ಕಮಲಾ ಹೆಮ್ಮಿಗೆ
₹270₹32016% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಇಲ್ಲಿನ ಎಲ್ಲ ಕಥೆಗಳೂ ಹೀಗೆ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯವನ್ನೇ ವೈಭವಿಸುತ್ತವೆ ಅಂತಲ್ಲ್ಲ. ಉದಾಹರಣೆಗೆ: ಕೆ. ಸರಸ್ವತಿಯಮ್ಮ ಅವರ ‘ನೆರಳು ನೀಡುವ ಮರಗಳು’ ಕಥೆಯಲ್ಲಿ, ಹಿಂದೂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿ ಪರಸ್ಪರ ಪ್ರೇಮಿಸಿ ಮದುವೆಯಾಗಲು ಸಾಧವಾಗದೆ, ವಿಫಲರಾಗಿರುತ್ತಾರೆ. ಹಿಂದೂ ಹುಡುಗ ಒಂದು ಸೇವಾಶ್ರಮವನ್ನು ಸೇರಿ, ಮುಂಡನ ಮಾಡಿಕೊಂಡು, ಸನ್ಯಾಸವನ್ನು ಸ್ವೀಕರಿಸುತ್ತಾನೆ. ಕ್ರಿಶ್ಚಿಯನ್ ಹುಡುಗಿ ಕೂಡ, ‘ಕನ್ಯಾಸ್ತ್ರೀ ಆಶ್ರಮ’ ಸೇರಿ, ಮುಂಡನ ಮಾಡಿಸಿಕೊಂಡು, ಸನ್ಯಾಸಿನಿಯಾಗುತ್ತಾಳೆ. ಇವರಿಬ್ಬರಿಗೂ ಪರಸ್ಪರವಾಗಿ ಇದು ಗೊತ್ತಿರುವುದಿಲ್ಲ ಮತ್ತು ಅವರು ಎಲ್ಲೆಲ್ಲಿ ಇರುವರೆನ್ನುವುದೂ ಪರಸ್ಪರ ಗೊತ್ತಿರುವುದಿಲ್ಲ. ಹೀಗೆ ಅವರು ತಮ್ಮ ಕಾಮವನ್ನು ನಿಗ್ರಹಿಸಿಕೊಂಡು ಸನ್ಯಾಸಿಗಳಾಗಿ, ಸಮಾಜ ಸೇವೆಯ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಆ ನಂತರದಲ್ಲಿ ಅವರಿಬ್ಬರೂ ಪರಸ್ಪರ ಭೆಟ್ಟಿಯಾದಾಗಲೂ ಜೀವನದಲ್ಲಿ ತಾವು ಸ್ವೀಕರಿಸಿದ ತಮ್ಮ ಹೊಸ ನಿಯೋಗವನ್ನೇ ಮುಂದುವರೆಸಿಕೊಂಡು ಹೋಗುವುದಕ್ಕೆ ಬದ್ಧರಾಗುಳಿಯುತ್ತಾರೆ. ಈ ಕಥೆ ಗಂಡು-ಹೆಣ್ಣುಗಳಿಗೆ ಕಾಮ-ಲೈಂಗಿಕತೆಯ ಹೊರತಾಗಿ ಜೀವನ ಸಾರ್ಥಕ್ಯದ ಇನ್ನಷ್ಟು ಮಾರ್ಗಗಳು ಇವೆ ಎನ್ನುವುದನ್ನು ಹೇಳುತ್ತದೆ. ಪಿ. ವತ್ಸಲಾ ಅವರ ‘ಸೂರ್ಯನೊಟ್ಟಿಗೆ ನಡೆದ ಹುಡುಗಿ’ ಹೆಣ್ಣಿನ ಲಜ್ಜೆಯ ಸ್ವರೂಪದ ಬಗೆಗೆ ಬಹಳ ಚೆನ್ನಾಗಿ ಹೇಳುತ್ತದೆ. ಎಂಟು ವರ್ಷದ ಹುಡುಗಿಯೊಬ್ಬಳು ಅಜ್ಜಿಯ ಕೈಹಿಡಿದು ಮೀಯಲೆಂದು ಹೊಳೆಗೆ ಹೋಗುತ್ತಾಳೆ. ಅಲ್ಲಿ ಮೇಲೆ ಆಕಾಶದಲ್ಲಿರುವ ಸೂರ್ಯನನ್ನು ನೋಡಿ, ಅಯ್ಯೋ, ಈ ಗಂಡು ಸೂರ್ಯ ಮೇಲಿನಿಂದ ನೋಡುತ್ತಿದ್ದಾನಲ್ಲ! ಹೀಗಿರುವಾಗ ಹೇಗೆ ಮೀಯಲಿ ಎಂದು ಲಜ್ಜಾನ್ವಿತಳಾಗಿ ಮೀಯಲು ಹೊಳೆಗೆ ಇಳಿಯಿವುದೇ ಇಲ್ಲ! ಅವಳಿಗೆ ಬಚ್ಚಲಿನ ನಾಲ್ಕು ಗೋಡೆಗಳ ‘ಜೈಲೇ’ ಗತಿಯಾಗುತ್ತದೆ. ಹೆಣ್ಣಿಗೆ ಸಂಬಂಧ ಪಟ್ಟ ಇಂತಹ ಅನೇಕ ಸಂಕೋಚಗಳು ಅವಳ ವ್ಯಕ್ತಿತ್ವದ ಹೊರಗಿನವುಗಳ ಕಾರಣವಾಗಿ ಸಂಭವಿಸಿರದೇ, ಅವಳ ಒಳಗಿನ ಪ್ರವೃತ್ತಿಯ ಕಾರಣವಾಗಿ ಸಂಭವಿಸಿದಂತಹವು ಎನ್ನುವುದನ್ನು ವತ್ಸಲಾ ಅವರು ಸೂಕ್ಷ್ಮವಾಗಿ ನಿರೂಪಿಸುತ್ತಾರೆ. ‘ಮಾಧವಿ ಕುಟ್ಟಿ’ಯವರ ಕತೆಗಳು - ‘ಪತಿವೃತೆ’, ‘ಪಾರತಂತ್ರ್ಯ’ ? ಗಂಡು, ಹೆಣ್ಣಿನ ಬಗೆಗೆ ತೋರಬೇಕಾದ ಲೈಂಗಿಕನಿಷ್ಠೆಯ ಬಗೆಗೆ ಹೇಳುತ್ತವೆ. ಮತ್ತು ಗಂಡಿನ ಸ್ವಾರ್ಥವು ಸತಿ-ಪತಿಗಳ ನಡುವಿನ ಲೈಂಗಿಕ ನಿಷ್ಠೆ -ಪಾತಿವೃತ್ಯ ಕುರಿತಂತೆ ಆತ್ಮವಂಚಕ ನಿಲುವು ತಾಳುತ್ತದೆ ಎಂದು, ತೋರಿಸಿಕೊಡುತ್ತವೆ.
ಹೀಗೆ ಮಲೆಯಾಳೀ ಮಹಿಳಾ ಕಥೆಗಳಲ್ಲಿ ಕೆಲವು, ಪ್ರಧಾನವಾಗಿ ನೈಸರ್ಗಿಕ ಕಾಮ, ಲೈಂಗಿಕತೆ ಚರ್ಚೆಗೊಂಡಿರುವುದನ್ನು ಇಲ್ಲಿನ ಕಥೆಗಳು ಹೇಳುತ್ತವೆ. ಗಂಡಿನ, ಹೆಣ್ಣನ್ನು ಕುರಿತ ನಿಷ್ಠಾರಾಹಿತ್ಯದ ಸಮಸ್ಯೆ, ಗಂಡಿನ ಲೈಂಗಿಕ ಸಾಮರ್ಥ್ಯದ ಕೊರತೆಯ ಸಮಸ್ಯೆ; ಹೆಣ್ಣಿನ ಲೈಂಗಿಕ ವಿಪುಲತೆಯ ಸಮಸ್ಯೆ; ಹೆಣ್ಣಿನ ವ್ಯಭಿಚಾರದ ಅನಿವಾರ್ಯತೆಯ ಸಮಸ್ಯೆ, ಗಂಡು, ತಮ್ಮ ಜೊತೆಗಾರ್ತಿಯಾದ ಹೆಣ್ಣನ್ನು ವ್ಯಭೀಚಾರಕ್ಕೆ ದೂಡುವ ಸಮಸ್ಯೆ... ಮುಂತಾದ ನೈಸರ್ಗಿಕ ಕಾಮ, ಮತ್ತು ಲೈಂಗಿಕತೆಯ ಕುರಿತ ಹಲವು ಸಮಸ್ಯೆಗಳನ್ನು ಇಲ್ಲಿನ ಕಥೆಗಳು ಚರ್ಚಿಸುತ್ತವೆ. ಹೀಗೆ, ಪ್ರಧಾನವಾಗಿ ಲೈಂಗಿಕತೆಯನ್ನು ಫೋಕಸ್ಸಿಗೆ ತಂದುಕೊಂಡ ಹಲವಾರು ಕಥೆಗಳನ್ನು ಈ ಸಂಕಲನದಲ್ಲಿ ಕಾಣುತ್ತೇವೆ. ಬಹುಶಃ ಸ್ತ್ರೀಸಂಕಥನಕ್ಕೆ ಸಂಬಂಧಪಟ್ಟಂತೆ, ನೈಸರ್ಗಿಕ ಕಾಮ-ಲೈಂಗಿಕತೆಗಳನ್ನು ಕೇಂದ್ರ ಗ್ರಹಿಕೆಯಾಗಿಟ್ಟುಕೊಂಡಿರುವುದು ಮಲೆಯಾಳೀ ಮಹಿಳಾ ಕಥನಗಾರಿಕೆಯ ಒಂದು ವೈಶಿಷ್ಟ್ಯವಾಗಿರಬಹುದು ಎಂದು ನನಗೆ ತೋರುತ್ತದೆ. (ಲಲಿತಾಂಬಿಕಾ ಅಂತರ್ಜನಂ, ಸಾರಾ ಜೋಸೆಫ್, ವತ್ಸಲಾ, ಇ.ಪಿ. ಸುಷ್ಮಾರ ಕಾಳಜಿ ಬೇರೆ).
ಕನ್ನಡದ ಮಹಿಳಾ ಸಾಹಿತಿಗಳು ಇಷ್ಟು ವ್ಯಾಪ್ತವಾಗಿ ನೈಸರ್ಗಿಕ ಕಾಮ, ಲೈಂಗಿಕತೆಯನ್ನು ಕೇಂದ್ರ ಸಮಸ್ಯೆಯಾಗಿಟ್ಟುಕೊಂಡು ತಮ್ಮ ಕಥೆಗಳಲ್ಲಿ ಚರ್ಚಿಸಿದಂತೆ ತೋರುವುದಿಲ್ಲ. ಕನ್ನಡ ಮಹಿಳಾ ಕಥೆಗಾರರು ವಿಶೇಷವಾಗಿ ಚರ್ಚಿಸುವ ಸಂಗತಿಯು, ಹೆಚ್ಚು ಪ್ರಮಾಣದಲ್ಲಿ, ಗಂಡು-ಹೆಣ್ಣಿನ ಸಂಬಂಧದಲ್ಲಿನ ಲೈಂಗಿಕೇತರ ಶೋಷಣೆಯಾಗಿರುವುದನ್ನು ಮತ್ತು ಗಂಡು-ಹೆಣ್ಣುಗಳು ಪರಸ್ಪರರನ್ನು ಆಯ್ದುಕೊಳ್ಳಲು ಇರುವ ಸಾಮಾಜಿಕ ಅಡೆತಡೆಗಳ ಜಾತಿ ವೈಷಮ್ಯದಂತಹ ಸಂಗತಿಗಳ ಕುರಿತಾ ಗಿರುವುದನ್ನು ಕಾಣುತ್ತೇವೆ. ಅಂದರೆ, ಕನ್ನಡದ ಮಹಿಳಾ ಕಥೆಗಳು ಮುಖ್ಯವಾಗಿ ಸಾಮಾಜಿಕ ಪರಿಪ್ರೇಕ್ಷ್ಯದಲ್ಲಿ ಹೆಣ್ಣಿನ ಸಮಸ್ಯೆಯನ್ನು ನೋಡುತ್ತವೆ. ಬಹುಶಃ ಇದಕ್ಕೆ ಕಾರಣವೆಂದರೆ, ಕನ್ನಡ ಪರಿಸರದಲ್ಲಿನ ಜಾತಿ ಸಂರಚನೆಯ ತೀವ್ರತೆ. ಕೇರಳದಲ್ಲಿ ಜನಸಮುದಾಯಗಳು ಬಹಳ ಬೇಗನೇ ಹೊರಗಿನವರ ಸಂಪರ್ಕಕ್ಕೆ ಬಂದು, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಪಲ್ಲಟಗಳು ಸಂಭವಿಸಿದ್ದರಿಂದ ಜಾತಿಗಳ ನಡುವಿನ ಕಟುತ್ವವು ಕಡಿಮೆಯಾಗಿರಬಹುದೇನೋ! ಆರ್ಥಿಕ ಸುಭದ್ರತೆಯುಳ್ಳ ಕೇರಳ ಕಾಂತೆ, ಮಾತೃಪ್ರಧಾನ ಕುಟುಂಬದಿಂದ ಬಂದವಳು. ಜಾಗೃತ ಹೆಣ್ಣು. ಆದ್ದರಿಂದಲೇ, ಪುರುಷ ಸ್ಥಾಪಿತ ವ್ಯವಸ್ಥೆಯನ್ನು ಇಷ್ಟು ಧೈರ‍್ಯದಿಂದ ಪ್ರಶ್ನಿಸಿರುವುದು, ಸಾಧ್ಯವಾಗಿದೆ. ಈ ಅಸ್ಮಿತೆ ಕಥಾರೂಪದಲ್ಲಿ ನಮ್ಮ ಮುಂದಿವೆ! ಆಧುನಿಕತೆಯ ನಿಕಟ ಸಂಪರ್ಕಕ್ಕೆ ಬಂದ ಅಲ್ಲಿ, ವ್ಯಷ್ಟಿ ಮೌಲ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಕ್ಕು, ಗಟ್ಟಿತನ, ಪ್ರಾಪ್ತವಾಯಿತು. ನಮ್ಮ ಲೇಖಕಿಯರು ಖಂಡಿತ ಇತ್ತ ನೋಡಬೇಕು. ಹೀಗೆ ಕನ್ನಡ ಮತ್ತು ಮಲೆಯಾಳೀ ಭಾಷೆಗಳ ಮಹಿಳಾ ಕಥನಗಾರಿಕೆಯ ಈ ಅಂಶಗಳು ಎರಡೂ ಸಂಸ್ಕೃತಿಗಳ ವೈಶಿಷ್ಟ್ಯವನ್ನು ಹೊಳೆಯಿಸುತ್ತದೆ ಎನಿಸುತ್ತದೆ.
ವಿಶೇಷತೆಗಳು
| ISBN | 978-93-81244-96-89 |
| ಭಾಷೆ | ಕನ್ನಡ |
| ಪುಟಗಳು | 324 |
| ಪ್ರಕಟಣೆ ವರ್ಷ | 2021 |
| ಆವೃತ್ತಿ | 2nd |
| ತೂಕ | 500 ಗ್ರಾಂ |
| ಆಯಾಮಗಳು | - |





