ಮುಖ್ಯ ವಿಷಯಕ್ಕೆ ಹೋಗಿ (Skip to main content)
ದೇವರುಗಳ ರಾಜ್ಯದಲ್ಲಿ
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್14% ರಿಯಾಯಿತಿ
ಕಥೆಗಳು

ದೇವರುಗಳ ರಾಜ್ಯದಲ್ಲಿ

ಲೇಖಕ: ಬೊಳುವಾರು ಮಹಮದ್ ಕುಂಞಿ

₹155₹18014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಬೊಳುವಾರರ ಕಥೆಗಳಲ್ಲಿ ವ್ಯವಸ್ಥೆಯಿಂದ ಅಂಗೀಕೃತವಾದ ನಿಲುವುಗಳನ್ನೂ ಸಾಮಾನ್ಯ ಜನತೆ ಯೋಚಿಸದೆ ಒಪ್ಪಿಕೊಂಡ ಧೋರಣೆಗಳನ್ನೂ ಪ್ರಶ್ನಿಸುವ ಬಂಡಾಯದ ಎದೆಗಾರಿಕೆ ಇದೆ. ಇದರಷ್ಟಕ್ಕೆ ಇದು ಅಂತಹ ಮಹತ್ವದ ವಿಷಯವೇನೂ ಇಲ್ಲ. ಯಾಕೆಂದರೆ ಮಾಧ್ಯಮ ವರ್ಗದವರ ಅನೇಕ ತೆವಲುಗಳಲ್ಲಿ ಬಂಡಾಯವೂ ಒಂದು ಷರಟು ಬದಲಾಯಿಸಿದಂತೆ ಸಿದ್ಧಾಂತಗಳನ್ನು ಇವರು ಬದಲಾಯಿಸುತ್ತಲೇ ಇರುತ್ತಾರೆ. ದಿನಕ್ಕೊಂದು ಹೊಸ ರೋಮಾಂಚಕ ಅನುಭವ ಕರಕೆ ಹಸಿದುಕೊಂಡಿರುವ ಮಂದಿಗೆ ತೀವ್ರ ನಿಷ್ಠೆಯಾಗಲಿ ಈ ನಾಡಿನ ಬದುಕಿನ ನಿಕಟ ಪರಿಚಯವಾಗಲೀ ಇರುವುದೇ ಇಲ್ಲ. ಜೊತೆಗೆ ಸಾಹಿತ್ಯದಲ್ಲಿ ನಾವು ಸಂಪ್ರದಾಯ ಶರಣರು ಎಂದು ಜರಿಯುವವರ ಸಾಧನೆಗಳು ಸಣ್ಣದೇನೂ ಅಲ್ಲ. ಆದರೆ ಬೊಳುವಾರು ಮಹಮದ್ ಕುಂಞಿ ಒಬ್ಬ ಮುಸ್ಲಿಮನಾಗಿರುವುದು ಮತ್ತು ಅವರ ಕಥೆಗಳೆಲ್ಲವೂ ಮುಸ್ಲಿಂ ಬದುಕಿನ ವಿವರಗಳ ಚೌಕಟ್ಟನ್ನು ಪಡೆದಿರುವುದರಿಂದ, ಅವರ ಬಂಡಾಯ ನಿಲುವು ಮಹತ್ವದ್ದಾಗುತ್ತದೆ. ಹೆಚ್ಚಿನ ಮುಸ್ಲಿಮರಂತೆ ಬೊಳುವಾರು ಮಹಮದ್ ಕುಂಞಿ ಕೂಡಾ ಕಡು ಬಡತನದ, ದುಡಿಯುವ ವರ್ಗದ ಕುಟುಂಬದಿಂದ ಬಂದವರು. ಈ ದೇಶದ ಮುಸ್ಲಿಮರು ಕಡು ಬಡವರು ಮಾತ್ರ ಅಲ್ಲ; ಅವರು ಅತ್ಯಂತ ಅವಮಾನಿತರು ಕೂಡಾ. ಬೊಳುವಾರರ ಕತೆಗಳೆಲ್ಲವೂ ಈ ನೋವಿನ ಅನುಭವವನ್ನೇ ಶೋಧಿಸುತ್ತವೆ. ನಮ್ಮ ನೋವು ಮತ್ತು ಅವಮಾನದ ಖಚಿತ ಅರಿವು ನಮ್ಮ ಬಿಡುಗಡೆಯ ಮೊದಲ ಹೆಜ್ಜೆಯೂ ಆಗಿರುವುದರಿಂದ ಈ ಶೋಧನೆ ಮಹತ್ವದ್ದಾಗುತ್ತದೆ. ಈ ಕಾರಣಕ್ಕಾಗಿ ನಾನು ಬೊಳುವಾರು ಮಹಮದ್ ಕುಂಞಿ ಅವರ ಜನಪ್ರಿಯತೆಗೆ ಖುಷಿ ಪಡುತ್ತೇವೆ.

ವಿಶೇಷತೆಗಳು

ISBN 978-93-81577-85-17
ಭಾಷೆಕನ್ನಡ
ಪುಟಗಳು150
ಪ್ರಕಟಣೆ ವರ್ಷ2022
ಆವೃತ್ತಿ3rd Edition
ತೂಕ350 ಗ್ರಾಂ
ಆಯಾಮಗಳು-