ಕಥೆಗಳು
ಮೊಪಾಸನ ಕಥೆಗಳು ಭಾಗ-೧
ಲೇಖಕ: ಕನ್ನಡಕ್ಕೆ ಡಾ. ಪಿ.ವಿ. ರಾಮಚಂದ್ರ
₹500₹5509% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಗೇದ ಮೊಪಾಸಾ, ಜಗತ್ತಿನ ಸಣ್ಣ ಕಥೆಗಾರರಲ್ಲಿ ಅಗ್ರಗಣ್ಯA women's life (1883) Ball of Fat (1885), Pierre and Jean (1888)) ಕಾದಂಬರಿಗಳನ್ನು ಜಾಗತಿಕ ಸಾಹಿತ್ಯಕ್ಕೆ ಕೊಡುಗೆ ನೀಡಿದಾತ. ಆತನ ಅನೇಕ ಸಣ್ಣ ಕಥೆಗಳು, ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಿತಗೊಂಡವುಗಳು. ೧೮೫೦ರ ಆಗಷ್ಟ್ ೫ರಂದು ಜನಿಸಿದ ಮೊಪಾಸಾ ೧೧ ವರ್ಷದ ಎಳೆಯವನಿದ್ದಾಗಲೇ ತನ್ನ ಹೆತ್ತವರ ದಾಂಪತ್ಯ ಮುರಿಯುವುದನ್ನು ಕಂಡ. ಆದ್ದರಿಂದಲೇ ಬಹುಶಃ ಮದುವೆಯ ಬಗ್ಗೆ ಭೀತನಾಗಿದ್ದ. ಜೀವನನುದ್ದಕ್ಕೂ ಒಂಟಿತನವನ್ನೇ ಬಯಸಿದ್ದ. ಶಾಲೆಯಿಂದ ಹೊರದೂಡಲ್ಪಟ್ಟ ಮೊಪಾಸಾ ೧೮೭೦ರ ಫ್ರಾಂಕೋ ಜರ್ಮನ್ ಯುದ್ಧದಲ್ಲಿ ಸೈನಿಕನಾಗಿ ಹೋರಾಡಿದ. ತನ್ನ ತಾಯಿಯ ಸ್ನೇಹಿತ ಶಸ್ಕವ ಪ್ಲೂಮಿಕತನದ ಒತ್ತಾಸೆಯಿಂದ ಸಣ್ಣ ಕಥೆಗಳನ್ನು ಬರೆಯಲಾರಂಭಿಸಿದ. ಮೊಪಾಸಾನ ಕಥೆಗಳಲ್ಲಿ ಕೆಲವು ಕೇವಲ ಒಂದೆರಡು ಪುಟಗಳ ಅತಿ ಸಣ್ಣ ಕಥೆಗಳು, ಕೆಲವು ನೀಳ್ಗಥೆಗಳು, ಆದರ್ಶಗಳು ಮತ್ತು ಭಾವೋತ್ಕಟತೆಗಳ ಸೋಂಕಿಲ್ಲದೆ ಮಧ್ಯಮ ವರ್ಗದ ರೈತಾಪಿ ಜನರ ಸಣ್ಣತನಗಳನ್ನು ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಸಾಮರ್ಥ್ಯ ಶಕ್ತಿಗಳನ್ನು ತನ್ನ ಕಥೆಗಳಲ್ಲಿ ಬಿಚ್ಚಿಟ್ಟ. ಸರಳ, ನೇರ ಭಾಷೆಯಲ್ಲಿ ವ್ಯಂಗ್ಯ ಮಿಶ್ರಿತ, ಹಾಸ್ಯ ಶೈಲಿಯ ಅವನ ಕಥೆಗಳು ಬಹುಬೇಗ ಆಕರ್ಷಕವಾದುವು. ಮೊದಲ ಬಾರಿಗೆ ಮನುಷ್ಯ ಮನಸ್ಸಿನಲ್ಲಿ, ಅದರಲ್ಲೂ ಹೆಂಗಳೆಯರ ಸಂಕೀರ್ಣ ಮನಸ್ಸಿನಲ್ಲಿನ ಭಾವಪ್ರಪಂಚವನ್ನು, ಚಿಂತನಾಕ್ರಮಗಳನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಬಿಚ್ಚಿಟ್ಟವರಲ್ಲಿ ಮೊಪಾಸಾ ಅಗ್ರಗಣ್ಯ.
೩೦ನೇ ವಯಸ್ಸಿನಲ್ಲಿ ಬರೆದ`Boulede suif' (Ball of Fat) ಕಥೆಯ ಮೂಲಕ ಗುರುತಿಸಲ್ಪಟ್ಟ ಮೊಪಾಸಾ, ಸುಮಾರು ೩೦೦ ಕಥೆಗಳನ್ನು ಕಾದಂಬರಿಗಳನ್ನು, ಪ್ರವಾಸ ಕಥನಗಳನ್ನು, ಕವನಗಳನ್ನು ಬರೆದ. ಸ್ವಚ್ಛಂದ ಬದುಕನ್ನು ಬದುಕಿದ ಮೊಪಾಸ ಲೈಂಗಿಕ ರೋಗಗಳಿಗೆ ತುತ್ತಾಗಿ, ಬುದ್ಧಿ ಸ್ವಾಸ್ಥ್ಯವನ್ನು ಕಳೆದುಕೊಂಡ. ೪೨ರ ವಯಸ್ಸಿನಲ್ಲೇ ಮನೋರೋಗಿಗಳ ಆಸ್ಪತ್ರೆಯಲ್ಲಿ ಅಸುನೀಗಿದ.
ವಿಶೇಷತೆಗಳು
| ISBN | 978-93-81244-48-797 |
| ಭಾಷೆ | ಕನ್ನಡ |
| ಪುಟಗಳು | 484 |
| ಪ್ರಕಟಣೆ ವರ್ಷ | 2016 |
| ಆವೃತ್ತಿ | 4 |
| ತೂಕ | 800 ಗ್ರಾಂ |
| ಆಯಾಮಗಳು | - |





