ಮುಖ್ಯ ವಿಷಯಕ್ಕೆ ಹೋಗಿ (Skip to main content)
1984 (ಕಾದಂಬರಿ)
ಹೊಸ ಬಿಡುಗಡೆ14% ರಿಯಾಯಿತಿ
ಅನುವಾದ

1984 (ಕಾದಂಬರಿ)

ಲೇಖಕ: ಡಾ. ವಿಜಯಾ ಸುಬ್ಬರಾಜ್

₹280₹32514% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ರ್ಜ್ ಆರ್ವೆಲ್ ಅವರ ಬರವಣಿಗೆ ಓದುಗರ ಕಲ್ಪನೆಯ ಮೇಲೆ ಊಹಿಸಲಾಗದ ಹಿಡಿತವನ್ನು ಒಳಗೊಂಡಿದ್ದು ಭಯ ಮತ್ತು ಕುತೂಹಲಗಳೆರಡರ ನೇಯ್ಗೆಯುಳ್ಳ ಹೊದಿಕೆಯಾಗಿದೆ. ಆತನ ಗದ್ಯವು ಕಾವ್ಯದಂತೆ ಆಕರ್ಷಕ ಮತ್ತು ಕಠೋರತೆಯನ್ನೂ ಹೊಂದಿದ್ದು ಮಾನವತೆಯನ್ನು ಕಳೆದುಕೊಂಡಿರುವ ಸಮಾಜದ ನೈತಿಕತೆ ಎಂಬ ಹೊದಿಕೆ ಕೊಳೆಯುತ್ತಿರುವುದನ್ನು ತೋರಿಸುವುದರ ಜೊತೆಗೆ ಹತಾಶೆಯ ಭೂದೃಶ್ಯವನ್ನು ತಂದು ನಿಲ್ಲಿಸುತ್ತದೆ. ತನ್ನ ಚಾಣಾಕ್ಷ ದೃಷ್ಟಿಯಿಂದ ಹಾಗೂ ಯಾವುದೇ ಹಿಂಜರಿಕೆ ಇಲ್ಲದೆ ಕಾದಂಬರಿಯಲ್ಲಿ ‘ಪಾರ್ಟಿ’ ಯ ಆಡಳಿತದ ಚಿತ್ರಣವನ್ನು ನೀಡುತ್ತಾ, ಆರ್ವೆಲ್ ಅನಿಯಂತ್ರಿತ ಕಣ್ಗಾವಲು, ನಿರಂಕುಶ ಪ್ರಭುತ್ವ ಮತ್ತು ವಿಭಿನ್ನವಾದ ಅಭಿಪ್ರಾಯಗಳನ್ನು ತುಳಿಯುವುದರಿಂದಾಗ ಬಹುದಾದ ಅಪಾಯಗಳನ್ನು ಈ ಕೃತಿಯಲ್ಲಿ ಬೆತ್ತಲೆಗೊಳಿಸಿದ್ದಾನೆ. ೧೯೮೪ ಎಂಬ ಈ ಕಾದಂಬರಿ ಉಳಿದ ಕಾದಂಬರಿಗಳಿಂದ ಹೇಗೆ ವಿಭಿನ್ನವಾದ ಸ್ಥಾನವನ್ನು ಪಡೆದಿದೆ ಎಂದು ಗಮನಿಸುವುದಾದರೆ, ಮಾನವನ ಪ್ರಜ್ಞೆಯ ಆಳವನ್ನು ಶೋಧಿಸುವ ಸಾಮರ್ಥ್ಯವನ್ನು ಇದು ಹೊಂದಿರುವುದು ಕಂಡು ಬರುತ್ತದೆ ಜೊತೆಗೆ ಅದರಲ್ಲಿ ಇರುವ ವಿರೋಧಾಬಾಸಗಳನ್ನು ಸಹ ನಮ್ಮ ಮುಂದಿಡುತ್ತದೆ. ಜಾರ್ಜ್ ಆರ್ವೆಲ್ ವೈಯಕ್ತಿಕತೆ ಎಂಬುದನ್ನೇ ಇಲ್ಲವಾಗಿಸಿದ್ದ ಲೋಕದಲ್ಲಿ ನೆನಪು, ಸತ್ಯ ಮತ್ತು ಅಸ್ಮಿತೆಗಾಗಿ ನಡೆಯುವ ಸಂಘರ್ಷವನ್ನು ಚಿತ್ರಿಸಿ ಕೊಡುತ್ತಾನೆ. ಕಾದಂಬರಿಯಲ್ಲಿ ಕಂಡುಬರುವ ಜೂಲಿಯ ಎಂಬಾಕೆಯೊಡನೆ ವಿಸ್ಸ್ಟನ್ ಪ್ರೇಮದಲ್ಲಿ ಸಿಲುಕಿದಾಗ, ಆಕಾಂಕ್ಷೆಯ ಸಂಕೀರ್ಣತೆ ಮತ್ತು ದೌರ್ಜನ್ಯದಲ್ಲೂ ಕೂಡ ಮಾನವರಲ್ಲಿ ಕಾಣಬಹುದಾದ ಅದಮ್ಯವಾದ ಚೇತನದ ಹೋರಾಟದ ಪರಿಚಯವನ್ನು ಕಾದಂಬರಿಯು ನಮಗೆ ಮಾಡಿಕೊಳ್ಳುತ್ತದೆ. ತಥಾಕಥಿತ ಸಿದ್ಧಾಂತಗಳನ್ನು ಪ್ರಚಾರ ಮಾಡುವುದು, ತಿರುಚುವುದು ಹಾಗೂ ವ್ಯಕ್ತಿಗತ ಆಲೋಚನೆಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವ ಭಯಾನಕ ಪರಿಸ್ಥಿತಿಯನ್ನು ಪ್ರತಿಧ್ವನಿಸುತ್ತಿರುವ ಆಡಳಿತವನ್ನು ಹೊಂದಿರುವ ಸಮಾಜದ ಕಲ್ಪನೆಯನ್ನು ಕಾಡುವಂತೆ ಈ ಕಾದಂಬರಿಯ ಪ್ರತಿಪುಟಗಳಲ್ಲಿ ಜಾರ್ಜ್ ಆರ್ವೆಲ್ ಕಟ್ಟಿಕೊಟ್ಟಿದ್ದಾರೆ. ಸತ್ಯವನ್ನು ಬೇಕಾದ ಹಾಗೆ ತಿರುಚಿಹಾಕುವ, ಮನಸ್ಸನ್ನು ನಿಯಂತ್ರಿಸಲು ಭಾಷೆಯನ್ನು ಬಳಸುವುದನ್ನು ಚಿತ್ರಿಸಿ ಕೊಡುತ್ತಾ ಪ್ರಜಾಪ್ರಭುತ್ವ ಮೌಲ್ಯಗಳ ನಾಶ ಮತ್ತು ಅಪಾಯದ ಅರಿವಿಲ್ಲದೆ ತನ್ನ ಸುಖದಲ್ಲೇ ಇರುವುದರಿಂದ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ಕೃತಿ ನೀಡುತ್ತದೆ. ಪ್ರವಾದೀಯ (ಆಥಿsಣoಠಿiಚಿಟಿ) ಕಥಾಹಂದರವನ್ನು ಹೊಂದಿರುವ ಈ ಕಾದಂಬರಿಯನ್ನು ಜಾರ್ಜ್ ಆರ್ವೆಲ್ ಬರೆದು ಎಪ್ಪತ್ತು ದಶಕಗಳಿಂದ ಹೆಚ್ಚು ಕಾಲ ಸರಿದಿದ್ದರೂ ಕೂಡ ಇದರಲ್ಲಿ ಕಂಡು ಬರುವ ವಿಷಯಗಳು ಮತ್ತು ಎಚ್ಚರಿಕೆಯು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ನಾಗಾಲೋಟದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ, ಕಣ್ಗಾವಲು ಮತ್ತು ರಾಜಕೀಯ ಸಿದ್ಧಾಂತಗಳ ಹೇರುವಿಕೆಯ ಯುಗದಲ್ಲಿ ನಾವು ಸಾಗುತ್ತಿರುವಾಗ, ೧೯೮೪ ನಮ್ಮ ಸ್ವಾತಂತ್ರ್ಯದ ಸೂಕ್ಷ್ಮತೆ ಮತ್ತು ಸಂಘರ್ಷದ ದೃಢಚೈತನ್ಯದ ನೆನಪನ್ನು ಮಾಡಿಕೊಡುತ್ತದೆ. ಈ ಕಾದಂಬರಿಯನ್ನು ಓದುತ್ತಾ ಹೋದಂತೆ, ಸಾಹಿತ್ಯದ ಅತ್ಯುತ್ತಮ ಕೃತಿಯೊಂದನ್ನು ಮಾತ್ರ ಕಾಣದೆ ನಮ್ಮ ಸಮಾಜದ ಮಸುಕಿನಲ್ಲಿ ಉಳಿದಿರುವ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಕನ್ನಡಿಯನ್ನು ಕಾಣುತ್ತೇವೆ. ಅವಶ್ಯಕತೆ ಬಿದ್ದಾಗ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವಂತ ಸಾಮೂಹಿಕ ಪ್ರಜ್ಞೆಯನ್ನು ಎಚ್ಚರಗೊಳಿಸುವ, ಸದಾ ಎಚ್ಚರವಾಗಿರುವಂತೆ ನಮ್ಮನ್ನು ಪ್ರೇರೇಪಿಸುತ್ತಾ, ವ್ಯಕ್ತಿಗತವಾಗಿ ನಮ್ಮನ್ನು ರೂಪಿಸುವ ಮೌಲ್ಯಗಳ ರಕ್ಷಣೆಯನ್ನು ಮಾಡುವ ಸಾಮರ್ಥ್ಯವನ್ನು ಜಾರ್ಜ್ ಆರ್ವೆಲ್ ನಮಗೆ ಈ ಮೂಲಕ ತೋರಿಸಿದ್ದಾನೆ. ಈ ಕಾದಂಬರಿಯ ಹಾದಿಯಲ್ಲಿ ಕ್ರಮಿಸುವಾಗ ಕಾದಂಬರೀಕಾರನು ಸೂಕ್ಷ್ಮವಾಗಿ ರಚಿಸಿರುವ ಭಯಾನಕವಾದ ಜಗತ್ತಿನಲ್ಲಿ ಪೂರ್ತಿಯಾಗಿ ನೀವು ಮುಳುಗಿ, ದಬ್ಬಾಳಿಕೆಯಲ್ಲಿ ದೃಢವಾಗಿ ನಿಲ್ಲುವ ಮತ್ತು ಪ್ರತಿಭಟಿಸುವ ವಿನ್ಸ್ಟನ್ ಸ್ಮಿತ್‌ನ ಸಂಘರ್ಷ ಮತ್ತು ಗೆಲುವು ನಿಮ್ಮನ್ನು ಆಕರ್ಷಿಸುವಂತಾಗಲಿ. ಪ್ರತಿ ಪುಟವನ್ನು ತಿರುಗಿಸುವಾಗ, ಸರ್ವತ್ರ ಇರುವ “ಬಿಗ್ ಬ್ರದರ್” (ದೊಡ್ಡಣ್ಣ)ನ ನೋಟವನ್ನು ನೀವು ಎದುರಾಗುತ್ತೀರಿ, ನಿರಂತರವಾದ ಕಣ್ಗಾವಲು ಮತ್ತು ಸತ್ಯವನ್ನು ತಿರುಚುವುದನ್ನು ಕಾಣುತ್ತೀರಿ. ಸ್ನೇಹಿತರೆ, ಅಂಧಕಾರ ಮತ್ತು ನಿರಾಶೆಯ ಹೊರತಾಗಿ, ಜಾರ್ಜ್ ಆರ್ವೆಲ್ ನಮಗೆ ಭರವಸೆ ಮತ್ತು ಸಂಘರ್ಷದ ಒಳಗೆ ಇರುವ ಚೈತನ್ಯದ ತುಣುಕನ್ನು ನೀಡುತ್ತಾನೆ. ತುಳಿತದ ಹಿಂದೆ ಗಮನಿಸಿದ್ದಲ್ಲಿ ಬೆಳಗುತ್ತಿರುವ ಪ್ರೇಮ ಮತ್ತು ಪ್ರತಿಭಟನೆಯ ಜ್ವಾಲೆಗಳ ವಿನ್ಸ್ಟನ್ ಮತ್ತು ಜೂಲಿಯ ನಡುವಿನ ಪ್ರೀತಿಗೆ ಸಾಕ್ಷಿಯಾಗುತ್ತೇವೆ. ಮಾನವರ ಭಾವನೆಗಳನ್ನೇ ನಾಶ ಮಾಡುವ ಉದ್ದೇಶ ಹೊಂದಿದ್ದ ‘ಪಾರ್ಟಿ’ಯ ಪ್ರಯತ್ನವನ್ನು ಎದುರಿಸುವ ಅವರು ರಹಸ್ಯವಾಗಿ ಸಂಧಿಸುವ ಮೂಲಕ ಶಾಂತಿಯನ್ನು ಕಾಣುತ್ತಾರೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು244
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ500 ಗ್ರಾಂ
ಆಯಾಮಗಳು-