ಮುಖ್ಯ ವಿಷಯಕ್ಕೆ ಹೋಗಿ (Skip to main content)
ಆದಿಪುರಾಣದ ಪ್ರವೇಶಕ್ಕೆ ವಿವಿಧ ದಾರಿಗಳು
ಹೊಸ ಬಿಡುಗಡೆ15% ರಿಯಾಯಿತಿ
ವಿಮರ್ಶೆ

ಆದಿಪುರಾಣದ ಪ್ರವೇಶಕ್ಕೆ ವಿವಿಧ ದಾರಿಗಳು

ಲೇಖಕ: ಕೇಶವ ಶರ್ಮ. ಕೆ

₹510₹60015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಆದಿಪುರಾಣವನ್ನು ಇಲ್ಲಿ ವಿವಿಧ ಅಧ್ಯಯನ ಶಿಸ್ತುಗಳ ಮೂಲ;ಕ ನೋಡಿದ್ದೇನೆ. ಅದಕ್ಕೆ ಬೇಕಾದ ಅವಕಾಶವನ್ನು ಈ ಕೃತಿಯನ್ನು ಕೊಡುತ್ತದೆ. ನಾವು ಓದುವಾಗ ಮೊದಲು ಆಗಮಿಕ ಕಾವ್ಯವಾಗಿ ನೋಡುತ್ತೇವೆ. ಆದರೆ ಕಾವ್ಯದಲ್ಲಿ ಬರೀ ಆಗಮಿಕವು ಮಾತ್ರವೇ ಇಲ್ಲ. ಇದರಲ್ಲಿ ಜೀವನದ ದುರಂತದ ಕಥನಗಳೂ ಇವೆ. ದುರಂತದಲ್ಲಿ ಬರುವ ಅತ್ಯಂತ ಮುಖ್ಯವಾದ ಅಂಶವೆಂದರೆ ಸಾವು ಮತ್ತು ನೋವು. ಈ ಕಾವ್ಯ ಸುರತದಲ್ಲಿ ಸಾವು ಬರುತ್ತದೆ ಎಂಬುದನ್ನು ಹೇಳುತ್ತದೆ. ನೀಲಾಂಜನೆಯು ನಾಟ್ಯವನ್ನು ಮಾಡುವಾಗ ಮರಣವು ಬರುತ್ತದೆ. ಸುಖದ ಅತ್ಯಂತ ತುತ್ತತುದಿಯು ಸಾವನ್ನು ತರುವುದು ಬಹು ದೊಡ್ಡ ದುರಂತ ಎನ್ನುವುದು ತಿಳಿದಿರುವ ಸಂಗತಿ. ಈ ಸಂಗತಿಗಳನ್ನು ಹೇಳುವಾಗ ನಾವು ಒಂದು ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕು. ದುರಂತ ಸಾಹಿತ್ಯದ ಪ್ರಕಾರವನ್ನು ಜಗತ್ತಿಗೆ ಮೊದಲು ಪರಿಚಯವನ್ನು ಮಾಡಿಕೊಟ್ಟದ್ದು ಗ್ರೀಕ್ ನಾಟಕಗಳು. ಅದಕ್ಕೆ ಸಂಬಂಧ ಪಟ್ಟಂತೆ ಅನೇಕ ಸಿದ್ಧಾಂತಗಳೂ ಬಂದಿವೆ. ಅದನ್ನು ಇಲ್ಲಿ ಗಮನಕ್ಕೆ ತಂದುಕೊಳ್ಳಲಾಗಿದೆ. ಹಾಗೆಯೇ ಇಲ್ಲಿ ಚರಿತ್ರೆಯ ಪ್ರಶ್ನೆಯು ಬರುತ್ತದೆ. ಆದಿಪುರಾಣ ಮತ್ತು ಚರಿತ್ರೆಯ ಸಂಬಂಧವನ್ನು ಅತ್ಯಂತ ಸಾಮಾನ್ಯವಾದ ಅರ್ಥದಲ್ಲಿ ಇಲ್ಲಿ ಬಳಸಿಲ್ಲ. ಧರ‍್ಮದಿಂದ ಪ್ರಾರಂಭ ಮಾಡಿ ಸಮಾಜದ ನಂಬಿಕೆಗಳು, ಆಚರಣೆಗಳು, ಸತ್ಯ, ಅಹಿಂಸೆ ಮೊದಲಾದ ಅನೇಕ ವಿಚಾರಗಳಿಗೆ ಒಂದು ಚರಿತ್ರೆಯು ಇದೆ. ಅದನ್ನು ಇಲ್ಲಿ ಹೇಳಲಾಗಿದೆ. ಆದಿಪುರಾಣದ ಹಿಂದೆ ಈ ಸಂಗತಿಗಳು ಇವೆ. ಪಂಪ ಇದನ್ನು ಹೇಳುತ್ತಿದ್ದಾನೆ. ಇದರ ಅಧ್ಯಯನವು ಅತ್ಯಂತ ಕುತೂಹಲಕಾರಿಯೂ ಹೌದು. ಜೈನ ಧರ‍್ಮದ ಚರಿತ್ರಗೆ ಬಹಳ ದೊಡ್ಡದಾದ ಒಂದು ಶಕ್ತಿಯು ಇದೆ. ಅದು ಈವತ್ತಿನ ನಮ್ಮ ರಾಜಕಾರಣದ ವರೆಗೆ ಬಂದಿದೆ. ಗಾಂಧಿಯವರು ಹೇಳಿದ ಸತ್ಯ, ಅಹಿಂಸೆ, ಇಂದ್ರಿಯ ನಿಗ್ರಹ, ಅಪರಿಗ್ರಹ ಮುಂತಾದವುಗಳ ಹಿಂದೆ ಜೈನ ಧರ‍್ಮದ ಪ್ರಭಾವವು ಇದೆ ಎಂಬುದನ್ನು ನೆನಪಿಸಿಕೊಳ್ಳಬೇಕು. ನಾವು ಆದಿಪುರಾಣದ ರೂಪ ಮತ್ತು ಸನ್ನಿವೇಶವನ್ನು ಇಲ್ಲಿ ಗಮನಿಸಬೇಕು. ನಾನು ಇಲ್ಲಿ ರೂಪ ಎನ್ನುವುದನ್ನು ಇಲ್ಲಿ ಫಾರಂ ಎನ್ನುವ ಅರ್ಥದಲ್ಲಿ ಬಳಸಿದ್ದೇನೆ. ರೂಪ ಮತ್ತು ಸನ್ನಿವೇಶಕ್ಕೆ ಅತ್ಯಂತ ನಿಕಟವಾದ ಸಂಬಂಧವು ಇದೆ. ಪಂಪ ಆದಿಪುರಾಣದಲ್ಲಿ ಹೇಳುವ ಸಂಗತಿಗಳಿಗೂ ಅದರ ರೂಪಕ್ಕೂ ಒಂದು ಆಂತರಿಕವಾದ ನೆಯ್ಗೆಯು ಇದೆ. ಇಡೀ ಕಾವ್ಯವನ್ನು ನೋಡಿದರೆ ಪಠ್ಯವು ವಿಕೇಂದ್ರಿತವಾಗಿದೆ. ಆದ್ದರಿಂದಲೇ ಈ ಕಾವ್ಯವು ನಮಗೆ ಒಂದು ವಿಶಿಷ್ಟವಾದ ಅನುಭವವನ್ನು ಕೊಡುತ್ತದೆ. ಮನುಷ್ಯನ ಹುಟ್ಟು, ವಿವಿಧ ಅನುಭವಗಳು ಮತ್ತು ಸಾವು ಹೀಗೆ ಈ ಕೃತಿಯು ನಿರೂಪಣೆಯನ್ನು ಮಾಡುತ್ತಾ ಹೋಗುತ್ತದೆ. ಇದೇ ಈ ಕಾವ್ಯದ ಅತ್ಯಂತ ವಿಶಿಷ್ಟವಾದ ಸಂಗತಿ. ಸರಪಳಿಯ ರೀತಿಯಲ್ಲಿ ಇಲ್ಲಿ ಘಟನೆಗಳು ಬೆಸೆಯುತ್ತವೆ. ಕನ್ನಡದ ಬಹುತೇಕ ಕಾವ್ಯಗಳು ಹೇಳಿದ ಸಂಗತಿಗಳಿಂದ ಭಿನ್ನವಾದ ಒಂದು ಮಾದರಿಯನ್ನು ನಾವು ಇಲ್ಲಿ ಕಾಣುತ್ತೇವೆ. ಸಾಮಾನ್ಯವಾಗಿ ಹುಟ್ಟು ಪ್ರಾರಂಭ. ಸಾವು ಇಲ್ಲಿ ಮುಕ್ತಾಯ. ಮಧ್ಯೆ ಇಲ್ಲಿ ಜೀವನವು ಇದೆ. ಸಾಮಾನ್ಯವಾಗಿ ಎಲ್ಲಾ ಕಾವ್ಯಗಳು ಸಾವಲ್ಲಿ ಮುಕ್ತಾಯವಾಗುತ್ತವೆ. ಆದರೆ ಆದಿಪುರಾಣವು ಮಾತ್ರ ಭಿನ್ನವಾದ ಆಶಯವನ್ನು ಹೊಂದಿದೆ. ಸಾವು ಮತ್ತೊಂದು ಜನ್ಮಕ್ಕೆ ಕಾರಣವಾಗುತ್ತದೆ. ಇದೇ ಈ ಕಾವ್ಯದ ರೂಪವನ್ನು ನಿರ್ಧರಿಸಿದೆ ಎನ್ನುವುದು ಇಲ್ಲಿ ಗಮನಾರ್ಹ.

ವಿಶೇಷತೆಗಳು

ISBN978-93-81577-84-4-8
ಭಾಷೆಕನ್ನಡ
ಪುಟಗಳು516
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ800 ಗ್ರಾಂ
ಆಯಾಮಗಳು-