ಮುಖ್ಯ ವಿಷಯಕ್ಕೆ ಹೋಗಿ (Skip to main content)
ಕಾಮರಸಾಯನ
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್18% ರಿಯಾಯಿತಿ
ಅನುವಾದ

ಕಾಮರಸಾಯನ

ಲೇಖಕ: ರಾಹು

₹700₹85018% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ತೇಜ್‌ಪಾಲ್ ತಾವು ಕೇವಲ ಪತ್ರಕರ್ತರಷ್ಟೇ ಆಗಿರದೆ ತಾವೂ ನಮ್ಮೆಲ್ಲರ ಹಾಗೆ ಒಳ್ಳೆಯ ಸೃಜನಶೀಲ ಲೇಖಕರೆಂಬುದನ್ನು ತಮ್ಮ ಬಹುಚರ್ಚಿತ ಕಾದಂಬರಿ ‘ದಿ ಆಲ್‌ಕೆಮಿ ಆಫ್ ಡಿಜೈರ್’ನಲ್ಲಿ ಅನಾವರಣಗೊಳಿಸಿದ್ದಾರೆ. ಸುಮಾರು ಐದುನೂರಕ್ಕೂ ಮಿಕ್ಕು ಪುಟಗಳ ವ್ಯಾಪ್ತಿಯಲ್ಲಿರುವ ಈ ಕಾದಂಬರಿ ಅವರ ಪ್ರಪ್ರಥಮ ಕೃತಿ. ಇದನ್ನು ಓದಿದರೆ ಹಾಗೆ ಅನ್ನಿಸುವುದೇ ಇಲ್ಲವೆನ್ನುವಷ್ಟು ಪ್ರಭಾವಶಾಲಿಯಾಗಿದೆ. ಪ್ರಕಟಗೊಂಡ ಒಂದೆರಡು ವರ್ಷಗಳಲ್ಲಿಯೇ ಇದು ಪ್ರಪಂಚದ ಉತ್ಕೃಷ್ಟ ಲೇಖಕರ ಮೆಚ್ಚುಗೆಯನ್ನು ಗಳಿಸಿದೆ. ‘ಕೊನೆಗೂ ಒಂದು ಒಳ್ಳೆಯ ಹಾಗೂ ಬೌದ್ದಿಕವಾಗಿಯೂ ಸುಂದರ ಚಿತ್ರಣವಿರುವ ಕಾದಂಬರಿ ಭಾರತೀಯನೊಬ್ಬ ಬರೆದಿರುವುದೇ ಹೆಮ್ಮೆಯ ಸಂಗತಿ’ ಎಂದು ಪ್ರಸಿದ್ಧ ಕಾದಂಬರಿಕಾರ ವಿ.ಎಸ್. ನೈಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ವಾಷಿಂಗ್‌ಟನ್ ಪೋಸ್ಟ್, ಲಾಸ್‌ಏಂಜೆಲ್ಸ್ ಟೈಂಸ್, ಪಬ್ಲಿಷರ‍್ಸ್ ವೀಕ್ಲಿ, ಲಂಡನ್‌ನಿಂದ ಪ್ರಕಟವಾಗುವ ಸಂಡೇ ಟೈಂಸ್ ಮತ್ತು ಇಂಡಿಪೆಂಡೆಂಟ್, ಬೋಸ್ಟನ್ ಗ್ಲೋಬ್ ಇವೇ ಮೊದಲಾದ ಶ್ರೇಷ್ಠ ಪತ್ರಿಕೆಗಳು ತಮ್ಮ ಸಾಹಿತ್ಯಿಕ ಅಂಕಣಗಳಲ್ಲಿ ಈ ಕೃತಿಯನ್ನು ಶ್ಲಾಘಿಸಿರುವವು. ತೇಜ್‌ಪಾಲ್ ಒಬ್ಬ ಪ್ರಚಂಡ, ಪ್ರತ್ಯುತ್ಪನ್ನಮತಿಯುಳ್ಳ ಲೇಖಕ. ಬರವಣಿಗೆಯ ಓಘ ಭಾಷಿಕ ಲಯ, ಗ್ರಹಿಕೆಯ ಸೂಕ್ಷ್ಮತೆ, ವೆಗ್ಗಳ ಜೀವನಾನುಭವ ವಿಚಕ್ಷಣ ಒಳನೋಟ ಇವೆಲ್ಲ ಅನ್ಯಾದೃಶ್ಯ. ಕಾದಂಬರಿಯ ಮೂಲಧಾತು ಕಾಮ. ಕಾಮವೆಂದರೆ, ಅದು ಬರಿ ಕಾಮವಲ್ಲ. ಅದು ಮುಕ್ಕಾಗದ ವಾಂಛೆ. ದಣಿವರಿಯದ ಪ್ರಯೋಗಶೀಲತೆ, ಜೀವರಸವನ್ನು ಉಕ್ಕಿಸುವ ಸ್ಪೂರ್ತಿ. ಜಗತ್ತೆಂಬ ಜಗತ್ತನ್ನು ಮುರಿದು ಮುಟ್ಟಿಗೆಗೊಳಿಸುವ ಅದಮ್ಯ ಬಯಕೆ. ಹೆಣ್ಣು ಗಂಡುಗಳು ತಮ್ಮ ದೇಹದ ಅಂತರಂಗ, ಬಹಿರಂಗಗಳ ಗುಹ್ಯಾತಿಗುಹ್ಯ ಅನೂಹ್ಯ ಅಸೀಮ ಶಕ್ತಿ ಸಂಚಯದ ಹುಡುಕಾಟವಾಗಿ ಇದಿರುಗೊಳ್ಳುವ ಕಾಮವು ಕೊನೆಗೂ ಒಂದು ಅನ್ವೇಷಣೆಯಾಗಿಯೇ ಉಳಿದುಬಿಡುತ್ತದೆ. ಪ್ರಾಯಶ: ಕಾಮ ಮತ್ತು ಸಾವು ಈ ಎರಡರ ಅಸೀಮ ಧಾರಣಶಕ್ತಿಯು ಇವತ್ತಿಗೂ ಮನುಷ್ಯ ಪ್ರಜ್ಞೆಯನ್ನು ನಿರಂತರ ಕಾಡುವ ಸಂಗತಿಗಳಾಗಿಯೇ ಉಳಿದು ಬಿಟ್ಟಿರುವುದನ್ನು ಕಾದಂಬರಿಕಾರರು ಭಯಾಶ್ಚರ್ಯ ಮತ್ತು ವಿಸ್ಮಯಗಳಿಂದಲೇ ಇದಿರುಗೊಳ್ಳುತ್ತಾರೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು740
ಪ್ರಕಟಣೆ ವರ್ಷ2026
ಆವೃತ್ತಿ2nd
ತೂಕ1500 ಗ್ರಾಂ
ಆಯಾಮಗಳು-