ಮುಖ್ಯ ವಿಷಯಕ್ಕೆ ಹೋಗಿ (Skip to main content)
ಆಂಟೋನಿಯೊ ಗ್ರಾಮ್ಷಿ
ಹೊಸ ಬಿಡುಗಡೆ15% ರಿಯಾಯಿತಿ
ಅನುವಾದ

ಆಂಟೋನಿಯೊ ಗ್ರಾಮ್ಷಿ

ಲೇಖಕ: ಕೇಶವ ಶರ್ಮ. ಕೆ

₹297₹35015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಈ ಜಗತ್ತು ಕಂಡ ಅತ್ಯಂತ ಅಪೂರ್ವ ಚಿಂತಕರಲ್ಲಿ ಗ್ರಾಮ್ಷಿಯೂ ಒಬ್ಬ. ಇಟೆಲಿಯವನು. ಪೂರ್ಣ ಹೆಸರು ಆಂಟನಿಯೋ ಗ್ರಾಮ್ಷಿ. ೨೨.೦೧.೧೮೯೧ರಲ್ಲಿ ಇಟೆಲೆಯ ಅಲೆಸ್ ಎಂಬಲ್ಲಿ ಹುಟ್ಟಿದ. ಮಾರ್ಕ್ಸವಾದಿ ತತ್ವಜ್ಞಾನಿ. ರಾಜಕೀಯ ಚಿಂತಕ, ಹೋರಾಟಗಾರ. ಲೇಖಕ. ಇಟೆಲೆಯಲ್ಲಿ ಕಮ್ಯುನಿಸ್ಟ್ ಪಾರ್ಟಿಯನ್ನು ಕಟ್ಟಿದವರಲ್ಲಿ ಅವನೂ ಒಬ್ಬ. ೨೭.೦೪.೧೯೩೭ರಲ್ಲಿ ಮೃತಪಟ್ಟ. ಸಾಂಸ್ಕೃತಿಕ ಯಜಮಾನಿಕೆ ಎನ್ನುವುದು ಹೇಗೆ ಇರುತ್ತದೆ ಎಂದು ಜಗತ್ತಿಗೆ ಪರಿಚಯ ಮಾಡಿಕೊಟ್ಟವನು ಅವನು. ಪ್ರಿಸನ್ ನೋಟ್ ಬುಕ್ಸ್ ಅವನ ಸುಪ್ರಸಿದ್ಧವಾದ ಕೃತಿ. ಕನ್ನಡದಲ್ಲಿ ಈ ಮೊದಲು ಖ್ಯಾತ ಲೇಖಕರಾದ ಫಣಿರಾಜ್ ಅವರು ಗ್ರಾಮ್ಷಿಯ ಕುರಿತು ಒಂದು ಕೃತಿಯನ್ನು ಬರೆದಿದ್ದಾರೆ. ಅದರಲ್ಲಿ ಅವನ ವಿಚಾರಧಾರೆಗಳ ಪರಿಚಯವು ಇದೆ. ಈಗ ನಾನು ಮತ್ತೆ ಅವನ ಬಗ್ಗೆ ಈ ಕೃತಿಯನ್ನು ಬರೆದಿದ್ದೇನೆ. ಅವನ ಚಿಂತನೆಗಳು ಯಾಕೆ ಬೇಕು ಎನ್ನುವುದಕ್ಕೆ ಅನೇಕ ಉತ್ತರಗಳು ಇವೆ. ಎಲ್ಲಿಯ ವರೆಗೆ ನಾವು ಬರೆಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ತಾತ್ವಿಕತೆ ಎನ್ನುವುದು ಒಂದು ನಾಟಕವಾಗುತ್ತದೆ ಎನ್ನುವ ಅರ್ಥದಲ್ಲಿ ಗ್ರಾಂಶಿಯು ೧೯೧೭ರಲ್ಲಿ ಬರೆದ. ತಾತ್ವಿಕತೆಗೆ ಅತ್ಯಂತ ಮಹತ್ವವು ಇದೆ, ಮೊದಲು ಗ್ರಾಂಶಿಯನ್ನು ರಾಜಕೀಯ ಅಧ್ಯಯನಕ್ಕೆ ಮಾತ್ರವೇ ಬಳಸುತ್ತಿದ್ದರು. ಆದರೆ ಅನಂತರ ಅವನ ಕುರಿತಾದ ಅಧ್ಯಯನವು ಬೇರೆ ಬೇರೆ ಜ್ಞಾನ ಶಾಖೆಗಳಿಗೆ ಕೂಡಾ ಪ್ರಸರಿಸಿತು. ಒಂದು ಉದಾಹರಣೆಯನ್ನು ನಾವು ಕೊಡಬಹುದಾದರೆ ಸ್ವಾತಂತ್ರ್ಯ ಎನ್ನುವುದು ಅತ್ವಾತ್ವಿಕವಾದ ಒಂದು ಪದವು ಅಲ್ಲ. ಅದು ರಾಜಕಾರಣವೂ ಹೌದು ಎಂದು ಮಾರ್ಕ್ಸ ಮತ್ತು ಏಂಗಲ್ಸ್ ಹೇಳಿದ್ದರು. ನಾವು ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ತಾತ್ವಿಕತೆಯು ಬೇಕಾಗುತ್ತದೆ. ಅದನ್ನು ಗ್ರಾಂಶಿಯು ಹೇಳುತ್ತಾನೆ. ತಾತ್ವಿಕತೆ ಎನ್ನುವುದು ಕೂಡಾ ಚರಿತ್ರೆ ಮತ್ತು ಅರಿವುಗಳ ಮೂಲಕ ಹುಟ್ಟುತ್ತವೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು308
ಪ್ರಕಟಣೆ ವರ್ಷ2024
ಆವೃತ್ತಿ2nd
ತೂಕ540 ಗ್ರಾಂ
ಆಯಾಮಗಳು-