ಮುಖ್ಯ ವಿಷಯಕ್ಕೆ ಹೋಗಿ (Skip to main content)
ಭೂಮಿಗೆ ಬಂದ ಗಂಧರ್ವ (ಕಾದಂಬರಿ)
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಆತ್ಮಕಥನ

ಭೂಮಿಗೆ ಬಂದ ಗಂಧರ್ವ (ಕಾದಂಬರಿ)

ಲೇಖಕ: ನಾಡೋಜ ಎಚ್.ಎಲ್. ನಾಗೇಗೌಡ

₹298₹35015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಭೈರವೀ ಗೌಡರು ಹುಟ್ಟಿದ್ದು ೧೮೫೭ರಲ್ಲಿ - ಭಾರತವು ನಡೆಸಿದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವರ್ಷದಲ್ಲಿ. ಅವರು ಕಾಲವಾದದ್ದು ೧೯೩೭ರಲ್ಲಿ ಶ್ರೀ ಡಿ.ಸುಬ್ಬರಾಮಯ್ಯ ಎಂಬ ಸಂಗೀತ ವಿದ್ವಾಂಸರು ಗೌಡರು ತಮ್ಮ ಮನೆಗೆ ೧೯೩೬ರಲ್ಲಿ ಬಂದಿದ್ದರೆಂದೂ, ಮರು ವರ್ಷ ಅವರು ಆಸ್ಪತ್ರೆಯಲ್ಲಿ ತೀರಿಕೊಂಡರೆಂದೂ ತಿಳಿಸಿದ್ದಾರೆ. ಮಲ್ಲೇಶ್ವರದ ಸೋಮೇಶ್ವರ ಭಾಗವತರ ತಮ್ಮ ಶ್ರೀ ಅರುಣಾಚಲ ಭಾಗವತರು ತಮ್ಮ ಅಣ್ಣನವರ ಮನೆಗೆ ಗೌಡರು ೧೯೩೬ರಲ್ಲಿ ಬರುತ್ತಿದ್ದುದನ್ನು ನಾನು ಕಂಡಿದ್ದೆ ಎಂದಿದ್ದಾರೆ. ಗೌಡರು ಧರ್ಮಪುರಿಯಲ್ಲಿ ಕಾಲವಾದರೆಂದು ಕೊಯಮತ್ತೂರಿನವರಿಂದ ಕೇಳಿ ಇದು ಹೌದೇ ಎಂದು ತಿಳಿಯಲು ಅಲ್ಲಿಗೂ ಹೋದೆ. ಆದರೆ ಅಲ್ಲಿಯ ಡಾ|| ಚೆಲ್ಲಂ ಎಂಬುವರಿಂದ ತಿಳಿಯಿತು, ‘ಗೌಡರು ಇಲ್ಲಿ ದೇಹ ಬಿಡಲಿಲ್ಲ; ಹಾಗಿದ್ದಿದ್ದರೆ ಅವರಿಗೆ ಯೋಗ್ಯ ಸ್ಮಾರಕವನ್ನೇ ಮಾಡಿಬಿಡುತ್ತಿದ್ದೆವು’ ಎಂದು. ಈ ಕಾರಣಗಳಿಂದ ಗೌಡರು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ೧೯೩೭ರಲ್ಲಿ ದೇಹತ್ಯಾಗ ಮಾಡಿದರೆಂದು ಹೇಳಬಹುದಾಗಿದೆ. ಅವರ ಬಯಕೆಯಂತೆ ಅವರು ಅಜ್ಞಾತವಾಗಿಯೇ ನಿಧನರಾದರು. ನವಲತ್ತು ವರ್ಷಗಳ ನಂತರವೂ ಗೌಡರ ಸಂಗೀತದ ಪರಿಮಳ ಕಂಪನ್ನು ಬೀರುತ್ತಲೇ ಬಂದಿದೆ. ಪರಿಶಿಷ್ಟದಲ್ಲಿ ಕಾಣಿಸಿರುವ ಮಹನೀಯರ ಬಾಯಿಂದ ಗೌಡರ ಸಂಗೀತವನ್ನು ಕುರಿತ ಮುಕ್ತ ಪ್ರಶಂಸೆಯ ಮಾತುಗಳು ಬಂದುವು. ‘ಅಂತಹ ಸಂಗೀತವನ್ನು ನಾವು ಇನ್ನು ಕೇಳುವುದಿಲ್ಲ’ ಎಂಬುದು ಸಂಗೀತಗಾರರ ಏಕಾಭಿಪ್ರಾಯವಷ್ಟೇ ಅಲ್ಲದೆ, ಹಳ್ಳಿಯ ಅನೇಕ ಹಿರಿಯರು ಸಹ ಈಗಲೂ ಹಾಗೆಂದು ಹೇಳುತ್ತಾರೆ. ಅಷ್ಟೇ ಅಲ್ಲ, ಇವರೆಲ್ಲರೂ ಗೌಡರಿಗೆ ಪ್ರಿಯವಾದ ರಾಗಗಳು ಕೀರ್ತನೆಗಳು ಯಾವುವು, ಅವುಗಳನ್ನು ಹಾಡುತ್ತಿದ್ದ ಸೊಗಸು ಎಂಥದು ಎಂಬ ವಿಷಯಗಳನ್ನು ವಿವರವಾಗಿ ತಿಳಿಸುತ್ತಾರೆ. ಗೌಡರು ನುಡಿದಂತೆ ನಡೆದವರು. ಅವರ ವರ್ತನೆ ನೂರಕ್ಕೆ ನೂರೂ ಪ್ರಮಾಣಿಕ ಎಂಬುದೂ ತಿಳಿಯಿತು. ಎರಡು ವರ್ಷಕ್ಕೂ ಹೆಚ್ಚು ಕಾಲ ಗೌಡರೊಡನೆ ಇದ್ದ ಮೈಸೂರಿನ ಡಾ|| ಬಿ.ಜಿ.ದಾಸ್ ಅವರ ಬಾಯಿಂದಲೇ ಗೌಡರ ವರ್ಣನೆ ಕೇಳಬೇಕು! ಗೌಡರು ಉಪಯೋಗಿಸುತ್ತಿದ್ದ ತಂಬೂರಿ ಈಗಲೂ ಅವರ ಬಳಿ ಇದೆ. ನಾನು ಭೇಟಿ ಮಾಡಿದವರಲ್ಲಿ ಬಹು ಮಂದಿ ಎಪ್ಪತ್ತು ದಾಟಿದ ವಯೋವೃದ್ಧರು ಮತ್ತು ಜ್ಞಾನವೃದ್ಧರು. ಅವರೆಲ್ಲರೂ ಗೌಡರ ವ್ಯಕ್ತಿತ್ವವನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. ಹೀಗೆ ನಾನು ಸಂಗ್ರಹಿಸಿದ ಮಾಹಿತಿಯೇ ಈ ಪುಸ್ತಕದ ಎರಡಷ್ಟಾಗುತ್ತದೆ. ಇದನ್ನೇ ಹೇಳುವ ಬೇರೊಂದು ಪುಸ್ತಕ ಇಷ್ಟರಲ್ಲೇ ಪ್ರಕಟವಾಗಲಿದೆ. ಇಂತಹ ಮಹನೀಯರನ್ನು ಕುರಿತ ಕಾದಂಬರಿ ಬರೆಯುವುದು ನನಗೆ ಬಹು ಹಿತವೆನಿಸಿತು; ಅಗತ್ಯವೂ ಎನಿಸಿತು. ಬರೆಯಲಾರಂಭಿಸಿದೆ. ಆದರೆ ಸಂಗೀತ ಬಾರದ ನಾನು ಗೌಡರ ಸಂಗೀತದ ಸೊಗಸನ್ನಾಗಲೀ ಸವಿಯನ್ನಾಗಲೀ ಹೇಗೆ ಚಿತ್ರಿಸಲು ಸಾಧ್ಯ! ಆಗ ದೇವರೇ ಕಳುಹಿಸಿದಂತೆ ಶ್ರೀ ಬಿ.ಎನ್.ಚಿನ್ನಪ್ಪನವರು ದೊರೆತರು. ಇವರು ಶಾಲೆಗೆ ಹೋಗಿ ಸ್ಲೇಟು ಬಳಪ ಹಿಡಿದವರಲ್ಲ. ಬಾಳಿನ ಶಾಲೆಯಲ್ಲಿ ಕಲಿತದ್ದೇ ಹೆಚ್ಚು. ಒಂಬತ್ತನೆಯ ವಯಸ್ಸಿನಿಂದಲೇ ನಾಟಕ ರಂಗವನ್ನು ಪ್ರವೇಶಿಸಿ ಬಣ್ಣ ಹಚ್ಚಿದ ಇವರು ಅರುವತ್ತೈದು ವಯಸ್ಸಾದರೂ ಇನ್ನೂ ಆ ಕ್ಷೇತ್ರದಲ್ಲಿ ಯುವಕನ ಹುಮ್ಮಸ್ಸಿನಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನುಭವ ಹಾಗೂ ಜ್ಞಾನ ಅಪಾರವಾದುದು. ಬಾಳಿನಲ್ಲಿ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ಉಂಡ ಇವರು ಸಂಗೀತದ ಬಗ್ಗೆ ಸಾಕಷ್ಟು ತಿಳಿದವರು. ತಿಳಿದಿರುವುದಕ್ಕಿಂತ ಹೆಚ್ಚಾಗಿ ಅನುಭವಿಸಿದವರು. ಅನುಭವಿಸಿದ್ದನ್ನು ಅಭಿವ್ಯಕ್ತಿಸುವ ಅರ್ಹತೆ ಪಡೆದವರು. ಇವರು ನನ್ನೊಡನೆ ಒಡನಾಡಿ, ನಾನು ಎರಕಹೊಯ್ದ ಮೂರ್ತಿಯನ್ನು ಅಲ್ಲಿ ಇಲ್ಲಿ ತಿದ್ದಿ ತೀಡಿ ಉಜ್ಜಿ ಒಪ್ಪಕೊಟ್ಟು ಪ್ರಜ್ವಲಿಸುವಂತೆ ಮಾಡಿದರು. ಈ ಕಾದಂಬರಿಯ ಶರೀರ ನನ್ನದು, ಶಾರೀರ ಅವರದು.

ವಿಶೇಷತೆಗಳು

ISBN978-93-81577-56-1
ಭಾಷೆಕನ್ನಡ
ಪುಟಗಳು288
ಪ್ರಕಟಣೆ ವರ್ಷ2019
ಆವೃತ್ತಿ3rd Edition
ತೂಕ680 ಗ್ರಾಂ
ಆಯಾಮಗಳು-