ಆತ್ಮಕಥನ
ಬದುಕಿರುವುದೇ ಕಥೆ ಹೇಳಲಿಕ್ಕೆ
ಲೇಖಕ: ರಘುನಾಥ್ ಟಿ.ಎಸ್
₹620₹72514% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
‘ಲಿವಿಂಗ್ ಟು ಟೆಲ್ ದ ಟೇಲ್’ ಎನ್ನುವ ಕೃತಿಯು ಮಾರ್ಕೆಸ್‌ನ ಆತ್ಮಚರಿತ್ರೆ. ಇದರ ಇಂಗ್ಲಿಷ್ ಆವೃತ್ತಿ ಪ್ರಕಟವಾಗಿದ್ದು ನವಂಬರ್ ೨೦೦೩ರಲ್ಲಿ. ಮಾರ್ಕೆಸ್ ೨೦೦೪ ಅಕ್ಟೋಬರ್‌ನಲ್ಲಿ ಮಾರ್ಕೆಸ್ ಮೆಮೋರೀಸ್ ಆಫ್ ಮೈ ಮೆಲಾನ್‌ಕಲಿ ಹೋರ್ಸ್ ಎಂಬ ಪ್ರಣಯ ಕಥೆಯುಳ್ಳ ಕಾದಂಬರಿಯನ್ನು ಹೊರತಂದನು. ಇದು ತೊಂಭತ್ತು ವರ್ಷದ ವೃದ್ದ ಮತ್ತು ವೇಶ್ಯೆಯೊಬ್ಬಳ ಸಂಬಂಧವನ್ನು ಹೇಳುವುದಾಗಿದೆ. ಇರಾನ್‌ನಲ್ಲಿ ಇದು ೫೦೦೦ ಪ್ರತಿಗಳು ಮಾರಾಟವಾದ ಮೇಲೆ ವಿವಾದವನ್ನು ಎಬ್ಬಿಸಿ ಆಮೇಲೆ ಬಹಿಷ್ಕೃತಗೊಂಡಿತು.
ಮಾರ್ಕೆಸ್‌ನ ಚಿತ್ರಕ ಶಕ್ತಿ ಅಸಾಧಾರಣವಾದುದ್ದಾಗಿದ್ದು, ಇದು ಚಲನಚಿತ್ರ ಮಾಧ್ಯಮಕ್ಕೆ ಬಹಳ ಹೊಂದಿಕೆಯಾಗುವಂಥದ್ದಾಗಿದೆ. ಆದ್ದರಿಂದಲೇ ಆತನ ಹಲವಾರು ಕೃತಿಗಳು ಚಲನಚಿತ್ರಗಳಾಗಿ ನಿರ್ಮಾಣಗೊಂಡಿವೆ.
೧೯೯೯ರಲ್ಲಿ ಆತನ ೭೨ನೇ ವಯಸ್ಸಿನಲ್ಲಿ ದುಗ್ಧನಾಳದ (ಲಿಂಫಾಟಿಕ್) ಕ್ಯಾನ್ಸರ್ ಇದೆಯೆಂದು ವೈದ್ಯಕೀಯ ವರದಿಗಳಿಂದ ದೃಢ ಪಟ್ಟಿತು. ಈ ಖಾಯಿಲೆಯು ಆತನ ಬರವಣಿಗೆಯನ್ನು ಕುಗ್ಗಿಸಿತು. ಆತ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಹಾಗೆ, ‘ನಾನು ನನ್ನ ಸ್ನೇಹಿತರ ಜೊತೆಗಿನ ಸಂಬಂಧವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದೆ. ಫೋನ್ ಸಂಪರ್ಕ ಕಡಿತ ಮಾಡಿದೆ. ಹೊರಗಣ ಓಡಾಟ ನಿಲ್ಲಿಸಿದೆ, ಪ್ರಸ್ತುತ ಹಾಗೂ ಭವಿಷ್ಯದ ಎಲ್ಲಾ ಯೋಜನೆಗಳನ್ನೂ ರದ್ದು ಮಾಡಿದೆ. ಎನ್ನುವ ಮಾತುಗಳನ್ನು ಎಲ್ ಟಿಯೆಂಪೋ
ಎಂಬ ಕೊಲಂಬಿಯಾದ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದ ಪ್ರಸ್ತಾಪವಾಗಿತ್ತು. ‘ಬರೆಯುವುದಕ್ಕೋಸ್ಕರ ನಾನು ಲಾಕ್ ಮಾಡಿಕೊಂಡು, ಬಿಡುವಿಲ್ಲದೆ ಬರೆಯತೊಡಗಿದೆ’ ಎಂಬ ಮಾತೂ ಹೊರಬಿತ್ತು. ೨೦೦೨ರಲಿ ‘ಲೀವಿಂಗ್ ಟು ಟೆಲ್ ದ ಟೇಲ್’ ಮೂರು ಸಂಪುಟಗಳಾಗಿ ಪ್ರಕಟವಾಯಿತು. ಅದಾದ ಮೇಲೆ ಆತನ ಬರವಣಿಗೆ ಸಂಪೂರ್ಣವಾಗಿ ಕುಗ್ಗಿತು. ಆತ್ಮ ಚರಿತ್ರೆಯ ಎರಡನೇ ಭಾಗ ೧೯೫೦ರ ನಂತರದ ಮಾರ್ಕೆಸ್‌ನ ಬದುಕನ್ನು ತಿಳಿಸಿಕೊಡುವ ಉದ್ದೇಶ ಹೊಂದಿದ್ದು, ಅದು ಮತ್ತೆ ಪ್ರಕಟವಾಗಲೇ ಇಲ್ಲ.
೨೦೧೨ರಲ್ಲಿ ಆತ ಡೆಮೆನ್ಶಿಯಿದಿಂದಲೂ ನರಳತೊಡಗಿದನು. ೨೦೧೪ರ ಏಪ್ರಿಲ್‌ನಲ್ಲಿ ಆಸ್ಪತ್ರೆಗೆ ಸೇರಬೇಕಾಯಿತು. ತನ್ನ ೮೭ನೇ ವಯಸ್ಸಿನಲ್ಲಿ ಮಾರ್ಕೆಸ್ ಮೆಕ್ಸಿಕೋದಲ್ಲಿ ತೀರಿಕೊಂಡಿದ್ದು ನ್ಯೂಮೋನಿಯಾದಿಂದ. ಸೆರ್ವೆಂಟಿಸ್ ನಂತರ ಸ್ಪ್ಯಾನಿಶ್ ಭಾಷೆಯಲ್ಲಿ ಬರೆದ ಅತ್ಯಂತ ಶ್ರೇಷ್ಟ ಲೇಖಕರಲ್ಲಿ ಒಬ್ಬ ಎಂದು ಮಾರ್ಕೆಸ್ ಪ್ರಸಿದ್ಧನಾಗಿದ್ದಾನೆ.
ವಿಶೇಷತೆಗಳು
| ISBN | 978-93-81244-92-0 |
| ಭಾಷೆ | ಕನ್ನಡ |
| ಪುಟಗಳು | 656 |
| ಪ್ರಕಟಣೆ ವರ್ಷ | 2020 |
| ಆವೃತ್ತಿ | 2nd |
| ತೂಕ | 980 ಗ್ರಾಂ |
| ಆಯಾಮಗಳು | - |





