ಮುಖ್ಯ ವಿಷಯಕ್ಕೆ ಹೋಗಿ (Skip to main content)
ವಾಲ್ಮೀಕಿ (ಆತ್ಮ ಕಥನ)
15% ರಿಯಾಯಿತಿ
ಆತ್ಮಕಥನ

ವಾಲ್ಮೀಕಿ (ಆತ್ಮ ಕಥನ)

ಲೇಖಕ: ಡಾ| ಸರಜೂ ಕಾಟ್ಕರ್

₹170₹20015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಬೆಳಗಾವಿ ಹತ್ತಿರದ ಊರು ಯಮನಾಪುರ. ಇಲ್ಲಿ ಬೇಡರ ವಸ್ತಿ ಜಾಸ್ತಿ. ಇಂಥ ಒಂದು ಬೇಡರ ವಸ್ತಿಯಲ್ಲಿ ಹುಟ್ಟಿ ಬಂದವರು ಡಾ| ಭೀಮರಾವ್ ಗಸ್ತಿ. ಬೇಡರ ಹುಡುಗ ಶಾಲೆಗೆ ಹೋಗುವುದೇ ಅಸಾಧ್ಯವಾಗಿರುವ ಪರಿಸ್ಥಿತಿಯಲ್ಲಿ ಇವರು ಎಂ.ಎಸ್.ಸಿ. ಓದಿ, ಪಿ.ಎಚ್.ಡಿ ಪಡೆದು ಡಾ| ಭೀಮರಾವ್ ಗಸ್ತಿ ಎಂಬ ಗೌರವಕ್ಕೆ ಪಾತ್ರರಾದರು. ಆಮೇಲೆ ಹೈದರಾಬಾದ್‌ನಲ್ಲಿ ಅಧ್ಯಾಪಕ ವೃತ್ತಿಯನ್ನೂ ಹಿಡಿದರು. ಆದರೆ ಅವರು ಅಲ್ಲಿ ಮುಂದುವರಿಯಲಿಲ್ಲ. ಯಾಕೆಂದರೆ, ಅವರ ದಾರಿಯೇ ಬೇರೆ ಇತ್ತು; ‘ಕಲಿತವರು ತಮ್ಮ ಸ್ವಾರ್ಥವನ್ನು ಮಾತ್ರ ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಕಲಿತ ದಲಿತರ ಬಗ್ಗೆ ಅವರವರ ಸಮಾಜದಲ್ಲಿಯೇ ತಿರಸ್ಕಾರ ಭಾವನೆ ಇತ್ತು. ಇದನ್ನು ಬದಲಾಯಿಸಬೇಕೆಂದು ನಿರ್ಧರಿಸಿದೆ. ಇದಕ್ಕಾಗಿ ಒಂದಿಷ್ಟು ನಿಯಮಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತಂದೆ. ಈ ಅಶಿಕ್ಷಿತರ ಜೊತೆ ಕೂಡಿ ಕೆಲಸ ಮಾಡಬೇಕಾದರೆ ತನ್ನ ದೊಡ್ಡತನವನ್ನು ಬಿಟ್ಟು ಅವರಂತೆಯೇ ಸೀದಾ-ಸಾದಾ ಇರಬೇಕೆಂದು ನಿರ್ಧರಿಸಿದೆ. ಅವರಿಗಿಂತ ಕೆಳಹಂತಕ್ಕೆ ಹೋಗಿ ಅವರನ್ನು ನನ್ನವರನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿದೆ’. ಈ ನಿರ್ಧಾರದಿಂದ ಅಧ್ಯಾಪಕ ವೃತ್ತಿಗೆ ವಿದಾಯ ಹೇಳಿ ಊರೊಟ್ಟಿಗೆ ಉಳಿದರು ಡಾ| ಭೀಮರಾವ್‌ಗಸ್ತಿ. ಗಸ್ತಿಯವರು ತಮ್ಮ ವಸ್ತಿಯಲ್ಲಿ ನಿಂತದ್ದು ಅವರ ಜೀವನದ ಮಹಾ ತಿರುವು. ಇದರಿಂದಾಗಿ ಬೇಡರ ವಸ್ತಿಯಲ್ಲಿ ಜಾಗೃತಿಯ ಸೂರ‍್ಯ ನಿಧಾನ ಉದಯವಾಗುವಂತಾಯಿತು. ಆ ಸಂದರ್ಭದಲ್ಲಿ ಬೇಡರು ಹೊಟ್ಟೆಪಾಡಿಗಾಗಿ ಕಳವು, ದರೋಡೆ ಮುಂತಾದ ಅಪಾಮಾರ್ಗದಲ್ಲಿ ತೊಡಗಿದ್ದರು. ಡಾ| ಗಸ್ತಿಯವರು ಊರಲ್ಲಿ ನಿಂತ ಮೇಲೆ ಬೇಡರನ್ನು ಸುಧಾರಿಸಲು ಮೊದಲು ಅವರಿಗೆ ಸಕ್ರಮ ಉದ್ಯೋಗಗಳನ್ನು ದೊರಕಿಸಬೇಕಾಗಿತ್ತು. ಅದಕ್ಕಾಗಿ ಖಾಸಗಿ ಕಂಪನಿ ಹಾಗೂ ಸರ್ಕಾರದೊಂದಿಗೆ ಸಮಾಲೋಚನೆ, ಚರ್ಚೆ, ಧರಣಿ ಇತ್ಯಾದಿಗಳಿಂದ ಬೇಡರಿಗೆ ಫ್ಯಾಕ್ಟರಿಯಲ್ಲಿ ಖಾಯಂ ಉದ್ಯೋಗಕ್ಕೆ ವ್ಯವಸ್ಥೆ ಮಾಡಿಸಿದರು. ಬೇಡರ ವಸ್ತಿಯಲ್ಲಿ ಯಲ್ಲಮ್ಮನ ಗುಡ್ಡಕ್ಕೆ ಮನೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ದೇವದಾಸಿಯರನ್ನಾಗಿ ಬಿಡುತ್ತಿದ್ದರು. ಗಸ್ತಿಯವರ ಕಿರಿಯ ತಂಗಿಯನ್ನೂ ಒಳಗೊಂಡಂತೆ, ಹೀಗೆ ದೇವದಾಸಿ ಬಿಟ್ಟ ಹೆಣ್ಣುಮಕ್ಕಳ ದುರವಸ್ಥೆಯನ್ನು ಅವರು ಕಣ್ಣಾರೆ ಕಾಣಬೇಕಾಯಿತು. ಆದ್ದರಿಂದ ದೇವದಾಸಿ ಪದ್ಧತಿ ವಿರುದ್ಧ ಹೋರಾಟಕ್ಕಿಳಿದರು. ಒಟ್ಟಾರೆ ಬೇಡರ ಸುಧಾರಣೆಗಾಗಿ ಹೊರಟ ಇವರು ಮನೆಯವರಿಂದ, ಸರೀಕರಿಂದ, ಪೊಲೀಸರಿಂದ, ಅಧಿಕಾರಿಗಳಿಂದ ಕಷ್ಟ ನಿಷ್ಠುರಗಳನ್ನು ಅನುಭವಿಸಬೇಕಾಯಿತು. ಆದರೂ ಅವರು ಮುಂದಿಟ್ಟ ಹೆಜ್ಜೆಯನ್ನು ಹಿಂದೆಗೆಯಲಿಲ್ಲ. ಹೋರಾಟಗಾರನಿಗೆ ಪ್ರಾಮಾಣಿಕತೆ ಎಂಬುದು ಒರೆಗಲ್ಲು. ಯಾವುದೇ ರಾಜಿ-ಕಬೂಲಿಗೆ ಅವಕಾಶ ಕೊಡದೆ ಅದರಲ್ಲಿ ಪಾಸಾದರು. ಅವರ ಪ್ರಾಮಾಣಿಕತೆಗೆ ಮೊದಲು ನಿಂದಿಸಿದವರೂ ವಂದಿಸಿದರು, ಅವರಿಗೆ ಸಹಾಯ ಹಸ್ತಕೊಟ್ಟರು. ಪರಿಣಾಮವಾಗಿ ಅವರ ವಸ್ತಿ ಯಮನಾಪುರದಲ್ಲಿ ಸುರಕ್ಷತಾ ಕೇಂದ್ರ ಹಾಗೂ ದೇವದಾಸಿ ನಿರ್ಮೂಲನಾ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಇದರಿಂದ ಜನಜಾಗೃತಿಗೆ ಅನುವಾಯಿತು. ಡಾ| ಅಂಬೇಡ್ಕರ್, ಫುಲೆಯವರನ್ನು ಪರಿಚಯಿಸಿದರು. ಇಂಥ ಮುಳ್ಳಿನ ಹಾದಿಯನ್ನು ಅವರು ಮೆಟ್ಟಿ ಬರುವಾಗ ಅದ ಅನುಭವ, ಕಷ್ಟ-ನಷ್ಟಗಳನ್ನು ಡಾ| ಭೀಮರಾವ್ ಗಸ್ತಿಯವರು ಇಲ್ಲಿ ಚಿತ್ರಿಸುತ್ತಾರೆ. ವಾಲ್ಮೀಕಿಯಲ್ಲಿ ಚಿತ್ರಿತವಾಗಿರುವ ಬೇಡರ ಬದುಕು ವರ್ಣರಂಜಿತವಾಗಿದೆ. ಪುರೋಹಿತ ಪ್ರವೇಶವಿಲ್ಲದೆ ಅವರು ನಡೆಸುವ ಮದುವೆ-ಶೋಭನ ಪ್ರಸ್ತಗಳು, ಯಲ್ಲಮ್ಮನ ಗುಡ್ಡಕ್ಕೆ ಹೋಗಿ ದೇವದಾಸಿ ಹರಕೆ ತೀರಿಸುವುದು, ಸತ್ತಾಗ ಮಾಡುವ ವಿಧಿ-ಕರ್ಮಗಳು ಇತ್ಯಾದಿ ಇಲ್ಲಿ ವಿಶಿಷ್ಟವಾಗಿವೆ. ಉದಾಹರಣೆಗೆ ಮದುವೆಯಾಗದ ಹುಡುಗಿ ಕೊಲೆಯಾಗಿ ಸತ್ತಾಗ ಯಕ್ಕಿಗಿಡದ ಟೊಂಗೆ ಕಡಿದು ತಂದು ಮಂಗಳಸೂತ್ರ ಕಟ್ಟಿ ಹೆಣಕ್ಕೆ ಅದರೊಂದಿಗೆ ಮದುವೆ ಮಾಡಿಸಿ ಸದ್ಗತಿ ಸಿಕ್ಕಿತೆಂದು ನಂಬುವುದು- ಇತ್ಯಾದಿ. ಇಂಥ ಎದೆ ಕಲಕುವ ಅನೇಕ ಸಂಗತಿಗಳು ಇಲ್ಲಿವೆ. ಆಧುನಿಕ ಮರಾಠಿ ಸಾಹಿತ್ಯದಲ್ಲಿ ಆತ್ಮಕಥೆಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ಅಕ್ಷರ ಲೋಕಕ್ಕೆ ತೆರೆದುಕೊಂಡ ಪ್ರತಿಯೊಬ್ಬ ದಲಿತ ಲೇಖಕನ ಕೃತಿಗಳೂ ಆತ್ಮಕಥೆಗಳೇ ಆಗಿವೆ. ‘ಮರಾಠಿ’ಯ ‘ಬೇರಡ’ವನ್ನು ಕನ್ನಡಕ್ಕೆ ‘ವಾಲ್ಮೀಕಿ’ ಎಂದು ಕರೆದು ಅನುವಾದಿಸಿರುವ ಡಾ|| ಸರಜೂ ಕಾಟ್ಕರ್ ಹೇಳುವಂತೆ ‘ಈ ಎಲ್ಲ ಆತ್ಮಕಥೆಗಳ ಸ್ಥಾಯೀಭಾವ ಅಕ್ರೋಶವಿದ್ದರೂ, ಅವೆಲ್ಲವುಗಳೂ ಪ್ರಾಮಾಣಿಕವಾಗಿವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ’,

ವಿಶೇಷತೆಗಳು

ISBN978-93-81577-99-878-
ಭಾಷೆಕನ್ನಡ
ಪುಟಗಳು204
ಪ್ರಕಟಣೆ ವರ್ಷ2022
ಆವೃತ್ತಿ2nd
ತೂಕ-
ಆಯಾಮಗಳು-