ಮುಖ್ಯ ವಿಷಯಕ್ಕೆ ಹೋಗಿ (Skip to main content)
ರೈತನೊಬ್ಬನ ನೆನಪುಗಳು
ಹೊಸ ಬಿಡುಗಡೆ10% ರಿಯಾಯಿತಿ
ಆತ್ಮಕಥನ

ರೈತನೊಬ್ಬನ ನೆನಪುಗಳು

ಲೇಖಕ: ಎಸ್.ಎಂ.ಪೆಜತ್ತಾಯ

₹450₹50010% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಪ್ರಸ್ತುತ ಕೃತಿಯಲ್ಲಿನ ಅವರ ನಲವತ್ತೆಂಟು ಲೇಖನಗಳನ್ನು ಒಗ್ಗೂಡಿಸಲಾಗಿದೆ. ಅವುಗಳನ್ನು ಸ್ಥೂಲವಾಗಿ ನೆನಪು ಒನಪು, ಕಾಡು ಪ್ರಾಣಿ, ಕೃಷಿ ಖುಷಿ, ನಾಡು ಬೀಡು ಮತ್ತು ತವಕ ತಲ್ಲಣ ಎಂದು ಐದು ಭಾಗಗಳಲ್ಲಿ ವಿಂಗಡಿಸಿದ್ದೇನೆ. ಇದೇನು ಅಧ್ಯಯನ ಸಲುವಾಗಿ ಮಾಡಿದ ವಿಭಾಗಗಳೇನಲ್ಲ. ಬದಲಿಗೆ ಅವುಗಳು ಪ್ರತಿಪಾದಿಸುವ ವಿಚಾರ, ನಡೆದ ಕಾಲಮಾನ ಮೊದಲಾದುವುಗಳನ್ನು ಗಮನಿಸಿದ್ದೇನೆ ಅಷ್ಟೆ. ಯಾವ ಲೇಖನ ಯಾವ ವಿಭಾಗಕ್ಕೆ ಹೋದರೂ ಪೂರ್ಣ ಓದಿಗೆ ಚ್ಯುತಿಯಿಲ್ಲ. ಏಕೆಂದರೆ, ಸಾಹಿತ್ಯಲೋಕದ ಪರಿಭಾಷೆಯ ಚೌಕಟ್ಟಿನೊಳಗೆ ಪೆಜತ್ತಾಯರ ಬರಹಗಳನ್ನು ಇಟ್ಟು ನೋಡಲು ಆಗುವುದೇ ಇಲ್ಲ. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ಮಾಜಿ ರೈತ, ಮಡ್ಡ, ದಡ್ಡ ಎಂದು ಹೇಳಿ, ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು! ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು. ಜೀವನದ ಅನುಭವಗಳನ್ನು ಯಾವುದೇ ಸಾಹಿತ್ಯಕ ಮಾನದಂಡಗಳಿಲ್ಲದೇ ನೇರವಾಗಿ, ಸರಳವಾಗಿ, ಆದರೆ ಕುತೂಹಲಕಾರಿಯಾಗಿ ಪ್ರಸ್ತುಪಡಿಸುವುದರಲ್ಲೇ ಅವರ ಬರಹದ ಸೊಗಸಿದೆ. ರೈತನೊಬ್ಬನ ನೆನಪುಗಳು / ೧೧ ಪ್ರತೀ ಬರಹದ ಹಿಂದೆ ಅವರ ಹುಡುಕಾಟದ ಗುಣವನ್ನು ನಾವು ಕಾಣಬಹುದಾಗಿದೆ. ಅವರ ಯಾವುದೇ ಕೃತಿಯ ಓದನ್ನು ಮೊದಲ ಲೇಖನದಿಂದಲೇ ಆರಂಭಿಸಬೇಕಂತಲೂ ಇಲ್ಲ. ಯಾವುದೇ ಲೇಖನದಿಂದ ಆರಂಭಿಸಬಹುದು; ಮುಗಿಸಬಹುದು. ಆದರೂ, ಶ್ರೀಯುತರ ಬದುಕಿನ ಇದುವರೆಗಿನ ಓಟ ಮತ್ತು ಅನುಭವಗಳ ಮೊತ್ತ ಓದುಗನದಾಗುತ್ತದೆ. ತೇಜಸ್ವಿಯವರು ಮಾಯಾಲೋಕದ ಆರಂಭದಲ್ಲಿ ಹೇಳಿದಂತೆ, ಇದೊಂದು ಕೊಲಾಜ್ ಮಾದರಿಯ ಕಲಾಕೃತಿ. ವ್ಯಕ್ತಿಚಿತ್ರಗಳು, ಸಂದರ್ಭಗಳು, ದೃಶ್ಯಗಳು ಕಥೆಯಾಗಿ ಒಂದರ ಮೇಲೊಂದು ಸಂಯೋಜನೆಗೊಳ್ಳುತ್ತಾ ಒಂದು ವಿಶಿಷ್ಟ ಪರಿವೇಶವನ್ನು ಕಲ್ಪಿಸುತ್ತವೆ. ಈ ಪುಸ್ತಕಗಳಿಗೆ ಬಳಸಿರುವ ಸ್ಕೆಚ್ ಮತ್ತು ರೇಖಾಚಿತ್ರಗಳನ್ನು (ಕೆಲವು ಕಡೆ ಲೇಖನಗಳ ಸಾಂದರ್ಭಿಕ ವಿವರಣೆಯಂತೆ ಕಂಡರೂ) ಆಯಾಯ ಲೇಖನದ ಹಿನ್ನೆಲೆಯಲ್ಲಿ ಮಾತ್ರ ಗಮನಿಸಬಾರದು. ಒಟ್ಟು, ಈ ಲೇಖಕನ ಅನುಭವ, ಮತ್ತು ಅದು ನಮಗೆ ಒದಗಿಸುವ ಅನಂತ ಅನುಭವದ ಒಂದು ಭಾಗವಾಗಿ ಪರಿಭಾವಿಸಬಹುದು. ಪೆಜತ್ತಾಯರ ಬರಹಗಳನ್ನು ಓದುವುದೆಂದರೆ ಒಂದು ರೀತಿಯಲ್ಲಿ ಬಿಡಿ ಬಿಡಿಯಾಗಿ ಇಡಿಯನ್ನು ಗ್ರಹಿಸುವ ಪ್ರಕ್ರಿಯೆ. ಒಟ್ಟಾಗಿಯೇ ಎಲ್ಲವನ್ನೂ ಅಪ್ಪಿಕೊಳ್ಳುತ್ತೇನೆ ಎಂದು ಹೊರಟರೆ ಗಾಳಿಯನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಆದರೆ ಒಂದೊಂದನ್ನು ಎತ್ತಿಕೊಳ್ಳುತ್ತಲೇ ಎಲ್ಲವನ್ನೂ ಬಾಚಿಕೊಳ್ಳಬಹುದು! ಇಲ್ಲಿ ವಿಶ್ಲೇಷಣೆಗಿಂತ ಸಂಶ್ಲೇಷಣೆಯೇ ಪ್ರಧಾನ. ಹೋಲಿಕೆಗಳಿಗಿಂತ ಅನುಭವವೇ ಪ್ರಧಾನ. ಕೆಡುಕುಗಳಿಗಿಂತ ಒಳಿತುಗಳೇ ಪ್ರಧಾನ. ಶ್ರೀಯುತರ, ಬಹುತೇಕ ಬರಹಗಳು ಮನುಷ್ಯನ ವ್ಯಕ್ತಿತ್ವದ, ಬದುಕಿನ ಒಳಿತುಗಳಿಗೆ ಹಿಡಿದ ಕನ್ನಡಿ. ಒಟ್ಟಿನಲ್ಲಿ ಒಳಿತು ಎಂಬುದೇ ಈ ಲೇಖಕರ ಬರಹಗಳಲ್ಲಿನ ಸ್ಥಾಯಿಭಾವ ಎನ್ನಬಹುದು.

ವಿಶೇಷತೆಗಳು

ISBN 978-93-81244-36-4
ಭಾಷೆಕನ್ನಡ
ಪುಟಗಳು408
ಪ್ರಕಟಣೆ ವರ್ಷ2014
ಆವೃತ್ತಿ6 th EDTION
ತೂಕ780 ಗ್ರಾಂ
ಆಯಾಮಗಳು-