ಅನುವಾದ
ಬಿಜಾಪುರ ಡೈರಿ (ಸ್ರ್ತೀ ರೋಗ ತಜ್ಞೆಯ ದೃಷ್ಟಿಯಲ್ಲಿ ಛತ್ತೀಸ್‌ಗಡದ ಅನುಭವ ಕಥನ)
ಲೇಖಕ: ಚಂದ್ರಕಾಂತ ಪೋಕಳೆ
₹200₹22511% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಛತ್ತೀಸಗಡದ ಬಿಜಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸವನ್ನು ಶುರು ಮಾಡಿದಾಗ ಇಲ್ಲಿಯ ವಾಸವು ನನ್ನ ಅಂತರ್ಬಾಹ್ಯವನ್ನು ಬದಲಾಯಿಸುವ ಅನುಭವ ನೀಡಲಿದೆ ಎಂಬ ಅರಿವು ಮೂಡಿತು. ಶುರುವಾತಿಗೆ ಕಷ್ಟವಾಯಿತು. ಮುಂದೆ ಬರ ಬರುತ್ತ ಕೆಲಸದಲ್ಲಿ ತೃಪ್ತಿ ಸಿಗಲಾರಂಬಿಸಿದಾಗ ಸಮಾಧಾನಗೊಂಡೆ. ಅಲ್ಲಿಯ ಕೆಲಸ ಕಾರ್ಯವು ಮಹಾರಾಷ್ಟ್ರದ ಕೆಲಸಕ್ಕಿಂತ ತೀರ ಭಿನ್ನವಾಗಿದೆ. ಅಪೌಷ್ಟಿಕತೆ, ಗಂಭೀರ ರಕ್ತಕ್ಷಯ, ಮನೆಯಲ್ಲೇ ಜರುಗುವ ಪ್ರಸೂತಿ, ನಕ್ಷಲ ಪ್ರಭಾವ, ಅತಿ ದುರ್ಗಮ ಪ್ರದೇಶ, ಸೌಲಭ್ಯಗಳ ಕೊರತೆ ಮತ್ತು ಆರೋಗ್ಯದ ಬಗೆಗಿನ ಅಜ್ಞಾನ - ಇದೆಲ್ಲದರಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಬರುತ್ತದೆ. ಗ್ರಂಥದಲ್ಲಿ ಓದಿದ ಅತ್ಯಂತ ಗಂಭೀರ ರೋಗ, ವಿರಳವಾದ ಸಂಗತಿಗಳು ಇಲ್ಲಿ ಪ್ರತ್ಯಕ್ಷವಾಗಿ ನೋಡಲು ಸಿಗುತ್ತವೆ. ರೋಗ ತೀರ ಉಲ್ಬಣಾವಸ್ಥೆ ತಲುಪಿದಾಗಲೇ ರೋಗಿ ಆಸ್ಪತ್ರೆಗೆ ಬರುತ್ತಾನೆ. ಆಗ ಸಂಪೂರ್ಣ ಜವಾಬ್ದಾರಿಯು ವೈದ್ಯರಾದ ನಿಮ್ಮ ಮೇಲಿರುತ್ತದೆ. ಇಂಥ ಕಾಲಕ್ಕೆ ಕಡಿಮೆ ಸಾಧನ ಸಾಮಗ್ರಿಗಳಲ್ಲಿ ಹಿಂಜರಿಯದೆ, ಶಾಂತವಾದ ಮನಸ್ಸಿನಿಂದ ಸ್ವಂತ ಕೌಶಲ್ಯವನ್ನು ಯೋಗ್ಯವಾಗಿ ಬಳಸಿಕೊಂಡು ಉಪಚಾರ ಮಾಡಬೇಕಾಗುತ್ತದೆ. ಇದು ವೈದ್ಯಕೀಯವನ್ನು ಒರೆಗಲ್ಲಿಗೆ ಹಚ್ಚುವಂತಹ ಕೆಲಸ. ಸ್ತ್ರೀರೋಗ ತಜ್ಞೆ ಸರ್ಜನ್‌ರಂತೂ ಇಪ್ಪತ್ತಾಲ್ಕು ಗಂಟೆ ಅಲರ್ಟ್‌ದಿಂದಿರಬೇಕಾಗುತ್ತದೆ. ಈ ಬಗೆಯ ಕಾರಣದಿಂದಾಗಿ ಅದೆಷ್ಟೋ ಸಲ ವೈದ್ಯರಾದವರು ದೈಹಿಕ ಹಾಗೂ ಮಾನಸಿಕವಾಗಿ ದಣಿಯುತ್ತಾರೆ. ಅಂಥದರಲ್ಲಿ ಬಿಜಾಪುರದಂತಹ ಕಡೆಗಳಲ್ಲಿ ಮನರಂಜನೆಯ ಯಾವುದೇ ಸಾಧನ ವಿರದಿರುವುದರಿಂದ ಹಲವು ಸಲ ಒಂಟಿತನ ಕಾಡುತ್ತದೆ. ಇಂಥ ಕಾಲಕ್ಕೆ ಗೆಳೆತನವನ್ನು ಉಳಿಸಿಕೊಳ್ಳುವುದು ಪರಸ್ಪರರಿಗೆ ಆಧಾರವನ್ನು ನೀಡುವುದು ತೀರ ಮಹತ್ವದ್ದಾಗಿರುತ್ತದೆ. ಕೆಲಸದಿಂದ ಲಭಿಸುವ ಸಮಾಧಾನವು ಇಂಥಲ್ಲಿ ಕೆಲಸ ಮಾಡಲು ಎಲ್ಲಕ್ಕಿಂತ ಹೆಚ್ಚು ಪ್ರೇರಣೆದಾಯಕವಾಗಿರುತ್ತದೆ. ಯಾವಾಗಲೂ ಬಹಳ ತೊಂದರೆಯಾಯಿತೆಂದರೆ, ನಾನು ಯೋಚಿಸುತ್ತಿದ್ದದು ಏನೆಂದರೆ, ನಾನು ಯಾರಿಗಾಗಿ ಬಂದಿದ್ದೇನೆ. ಆಗ ಸಹಜವಾಗಿಯೇ ಮನ ಶಾಂತಗೊಳ್ಳುತ್ತಿತ್ತು. ಆದಿವಾಸಿ ಮಹಿಳೆಯರು ಸ್ವತಂತ್ರ, ನಿರ್ಮಲ ಮತ್ತು ಮನಸ್ವಿನಿಯಾಗಿರುತ್ತಾಳೆ. ಅವಳು ನೈಸರ್ಗಿಕವಾಗಿರುವುದು ವಿರಳವೂ, ಸುಂದರವೂ ಆಗಿರುತ್ತದೆ. ಈ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗೆ ಬಂದವರು ನನ್ನ ಮಗಳೇ ಆಗಿಬಿಡುತ್ತಾರೆ. ಅವರ ಮಗುವನ್ನು ನಾನೆತ್ತಿಕೊಂಡಾಗ, ಅವರು ಹರ್ಷಭರಿತರಾಗುತ್ತಾರೆ ಅವರ ವೇದನೆಯನ್ನು ಕಡಿಮೆ ಮಾಡುವುದು ಎಂಬ ಒಂದೇ ಸೂತ್ರದಿಂದಾಗಿ ಅವರು ನನ್ನೊಂದಿಗೆ ಕಟ್ಟಲ್ಪಟ್ಟಿರುತ್ತಾರೆ. ಆಸ್ಪತ್ರೆಗೆ ಬಂದ ಮಹಿಳೆಯರು ನನಗೆ ತವರಿಗೆ ಬಂದವರೆನಿಸುತ್ತಾರೆ. ಅವರು ಮನೆಗೆ ಹೊರಟು ನಿಂತಾಗ ಅವರನ್ನು ಗಂಡನ ಮನೆಗೆ ಕಲಿಸುತ್ತಿರುವ ಭಾವನೆಯು ಮೂಡುತ್ತದೆ. ನನ್ನ ಸಂಸಾರ ನನ್ನ ಮಟ್ಟಿಗಷ್ಡೇ ಉಳಿಯದೇ ಅದು ಇಂಥ ಅದೆಷ್ಟೊ ಮಗಳಿಂದರದ್ದು ಆಗಿ ಬಿಡುತ್ತದೆ. ಬಿಜಾಪುರ ಜಿಲ್ಲಾ ಆಸ್ಪತ್ರೆಯ ‘ಉಮಂಗ’ ಎಂಬ ಹೆಸರಿನ ಮಾತೆ -ಶಿಶುಗಳ ಆರೋಗ್ಯ ಸೇವಾ ಕೇಂದ್ರವು ಎಲ್ಲ ಮಹಿಳಾ ರೋಗಿಗಳಿಗೆ ಅದೆಷ್ಟು ಆಶಾದಾಯಕವೋ, ಅಷ್ಟೇ ನನ್ನ ಪಾಲಿನ ಅದು ಪ್ರೇರಕ ಶಕ್ತಿಯಾಗಿದೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 212 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 400 ಗ್ರಾಂ |
| ಆಯಾಮಗಳು | - |





