ಮುಖ್ಯ ವಿಷಯಕ್ಕೆ ಹೋಗಿ (Skip to main content)
ಪೀಠಾಧಿಪತಿಯ ಪತ್ನಿ (ಕಾದಂಬರಿ)
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್11% ರಿಯಾಯಿತಿ
ಅನುವಾದ

ಪೀಠಾಧಿಪತಿಯ ಪತ್ನಿ (ಕಾದಂಬರಿ)

ಲೇಖಕ: ರಾಹು

₹400₹45011% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಪಾಕಿಸ್ತಾನದ ಸೂಫಿ ಪರಂಪರೆಯ ಒಂದು ಪೀಠದ ಅಧಿಪತಿಯ ಬದುಕಿನ ಅಂತರಂಗ ಬಹಿರಂಗಗಳನ್ನು ಬಿಚ್ಚಿಡುವ ಈ ಕಾದಂಬರಿ, ಆ ಪ್ರಕ್ರಿಯೆಯಲ್ಲಿ ಧಾರ್ಮಿಕ ಸೋಗಲಾಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದ ಒಬ್ಬ ಮಹಿಳೆಯ ದುರಂತ ಕಥೆಯನ್ನು ಹೇಳುತ್ತದೆ. ಅವಳ ಕಥೆಯೊಂದಿಗೆ ಹೆಣೆದುಕೊಂಡಿರುವ ಇನ್ನೂ ಅನೇಕ ಅಸಹಾಯಕ ಮುಗ್ಧ ಮಹಿಳೆಯರ ಕಥೆಯನ್ನೂ ಹೇಳುತ್ತದೆ. ಆ ನೆಪದಲ್ಲಿ ಇಡೀ ಪಾಕಿಸ್ತಾನದ, ಆ ಮೂಲಕ ಇಡೀ ಜಗತ್ತಿನ ಧರ್ಮಾಧಿಕಾರಿಗಳು ಹಾಗೂ ರಾಜಕಾರಿಣಿಗಳ ಗೌಪ್ಯ ಒಪ್ಪಂದದ ದುಷ್ಟಕೂಟ ಅಂದರೆ ಪಾಶವೀ ಗುಣಲಕ್ಷಣಗಳ ‘ಚಾಂಡಾಲ ಚೌಕಡಿ’ಯ ಚಿತ್ರಣವನ್ನು ನಿರ್ಲಿಪ್ತತೆಯಿಂದ ಪ್ರಸ್ತುತ ಪಡಿಸುತ್ತದೆ; ಪುರುಷ ದುರಾಕ್ರಮಣಶಾಹೀ ಸಮಾಜೋ-ಸಾಂಸ್ಕೃತಿಕ ಮೌಲ್ಯಗಳ ಹುದುಲಲ್ಲಿ ಸಿಕ್ಕ ಮಹಿಳೆಯರು ಹೇಗೆ ಕೊನೆಗೂ ಪುರುಷ ಪ್ರಧಾನ ಸಮಾಜದ ಕ್ರೌರ್ಯಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಪೀಠಾಧಿಪತಿಯ ಪತ್ನಿ ಈ ಮಾತಿಗೆ ಒಂದು ಸಾಂಕೇತಿಕ ನಿದರ್ಶನ ಅಷ್ಟೇ. ಹೀಗೆ ಮನುಷ್ಯ ಸಹಜವಾದ ಪ್ರೀತಿ-ಪ್ರೇಮ, ಸಮತೆ-ಸೈರಣೆ, ರೀತಿ-ನೀತಿ ಎಲ್ಲವನ್ನೂ ಬಲಿಗೊಟ್ಟು ಅಮಾನವೀಯ ಕಸಾಯಿ ಖಾನೆಯಾಗಿರುವ ಒಂದು ‘ಧಾರ್ಮಿಕ ಉದ್ಯಮ ಪೀಠ’ ಹಾಗೂ ಅದರ ಅಧಿಪತಿ ಮಾಡುವ ಹಲವಾರು ಭಾನಗಡಿಗಳ ಕುರಿತು ಅತ್ಯಂತ ರೋಚಕವಾಗಿ ಕಥನಿಸುವ ಪೀಠಾಧಿಪತಿಯ ಪತ್ನಿ ಒಂದು ವಿಶಿಷ್ಟ ಕಾದಂಬರಿಯಾಗಿದೆ.

ವಿಶೇಷತೆಗಳು

ISBN978-93-81244-30-297
ಭಾಷೆಕನ್ನಡ
ಪುಟಗಳು384
ಪ್ರಕಟಣೆ ವರ್ಷ2025
ಆವೃತ್ತಿ8
ತೂಕ800 ಗ್ರಾಂ
ಆಯಾಮಗಳು-