ವಿಮರ್ಶೆ
ಹಲವು ಸಾಂಸ್ಕೃತಿಕ ಯಜಮಾನಿಕೆಗಳ ನಡುವೆ ಕನ್ನಡ ಕಾವ್ಯ ಮೀಮಾಂಸೆ (ತೌಲನಿಕ ಕಾವ್ಯ ಮೀಮಾಂಸೆಯ ಮತ್ತೊಂದು ರೂಪ)
ಲೇಖಕ: ಕೇಶವ ಶರ್ಮ. ಕೆ
₹640₹75015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಅಧಿಕಾರ ಮತ್ತು ಅದರ ಭಾಷೆಗಳು ಬದಲಾಗುತ್ತವೆ ಮತ್ತು ಅದಕ್ಕೆ ಅನುಸಾರವಾದ ಸಂಗತಿಗಳು ರೂಪುಗೊಳ್ಳುತ್ತವೆ. ಯಜಮಾನಿಕೆ ಮತ್ತು ಅದರ ಸಂಕಥನಗಳು ಹಾಗೂ ಅದರ ಸ್ವರೂಪಗಳು ಈವತ್ತು ಬದಲಾಗಿವೆ. ಅದರ ಅರ್ಥಗಳು ವ್ಯತ್ಯಾಸವಾಗಿವೆ. ಇಲ್ಲಿ ಮತ್ತೆ ಯೋಚಿಸಬೇಕಾದ ಕೆಲವು ಪ್ರಶ್ನೆಗಳನ್ನು ಲಕ್ಲು ಮುಂದೆ ಇಟ್ಟಿದ್ದಾನೆ. ಯಜಮಾನಿಕೆಯು ಯಾವುದು ಮತ್ತು ಅದು ಹೇಗೆ ಇದೆ ಎನ್ನುವುದು ಅವನ ಪ್ರಧಾನವಾದ ಪ್ರಶ್ನೆ. ರಾಚನಿಕ ಮತ್ತು ಸಾಂಸ್ಕೃತಿಕವಾದ ಯಜಮಾನಿಕೆಯು ಹೇಗೆ ಇರುತ್ತದೆ ಎನ್ನುವುದು ಅವನ ಪ್ರಶ್ನೆ. ಸಾಂಸ್ಕೃತಿಕವಾದ ಅವಲಂಬಿತನ ಎನ್ನುವುದು ಬೇರೆ ಬೇರೆ ಪರಿಣಾಮವನ್ನು ಬೀರುತ್ತದೆ. ಅವುಗಳು ಸಂವಾದಿಯಾದ ಪ್ರಶ್ನೆಯನ್ನು ಮಾತ್ರವೇ ಹೇಳುತ್ತಿಲ್ಲ. ಸಾಂದರ್ಭಿಕವಾದ ಅವಲಂಬಿತನವು ಬೇರೆ ಮಾದರಿಗಳಲ್ಲಿಯೂ ಇರುತ್ತದೆ. ಅವಲಂಬನೆಯು ಸುಮ್ಮನೆ ಉಂಟಾಗುವುದೂ ಇಲ್ಲ. ಆದ್ದರಿಂದ ಆಳುವುದು ಮತ್ತು ಆಳಿಸಿಕೊಳ್ಳುವ ಪದಗಳು ಸನ್ನಿವೇಶವನ್ನು ರೂಪಿಸುತ್ತದೆ. ಚರಿತ್ರೆಯು ಇದನ್ನು ನಿರೂಪಿಸುತ್ತದೆ. ಆದರೆ ಅವುಗಳು ನಿಜವಾಗಿಯೂ ನಮ್ಮ ಮನಸ್ಸನ್ನು ಹೇಳುತ್ತವೆ. ಸಮಾಜವು ಕೆಲವನ್ನು ಹೇಳುತ್ತದೆ ಹಾಗೂ ನಮಗೆ ಕೆಲವು ನಿರ್ದೇಶನವನ್ನು ಕೊಡುತ್ತವೆ. ಯಾವುದು ಚರಿತ್ರೆಯು ಆಗಿದೆಯೋ ಅದರ ಅರ್ಥಗಳಲ್ಲಿ ಬೇರೆಯಾಗುವುದೂ ಅದರ ಹಿನ್ನೆಲೆಯಿಂದ ಮತ್ತು ಸನ್ನಿವೇಶದಿಂದ ಎನ್ನುವುದು ಸ್ಪಷ್ಟವಾಗಿದೆ. ಕೆಲವು ನಿಯಮವು ನಮ್ಮ ಸನ್ನಿವೇಶವನ್ನು ಹೇಗೆ ನಿರ್ಧರಿಸುತ್ತದೆ ಮತ್ತು ಅದರ ಅರ್ಥವು ಹೇಗೆ ಇರುತ್ತದೆ ಎಂದು ಹೇಳುವಾಗ ಫುಕೋ ಅರಸೊತ್ತಿಗೆ ಮತ್ತು ಅದರ ರೂಪಗಳನ್ನು ಸಂಪೂರ್ಣವಾಗಿ ಛೇಧಿಸಿಕೊಂಡು ಹೊಸ ಹೊಸ ಸಮಾಜ ಮತ್ತು ಸಂಬಂಧಗಳು ಹುಟ್ಟಿವೆ ಎಂದು ಭಾವಿಸುವುದಿಲ್ಲ ಎಂದು ಹೇಳುತ್ತಾನೆ. ಈ ತಾತ್ವಿಕವಾದ ಭಿತ್ತಿಯಿಂದ ಈ ಕೃತಿಯನ್ನು ನಾನು ಬರೆದಿದ್ದೇನೆ. ಕನ್ನಡವು ಅನೇಕ ರೀತಿಯ ಸಾಂಸ್ಕೃತಿಕವಾದ ಯಜಮಾನಿಕೆಯನ್ನು ಕಂಡಿದೆ. ಅದರಿಂದ ಪಡೆದುಕೊಂಡಿದೆ. ಹಾಗಿದ್ದೂ ತನ್ನ ಅನನ್ಯತೆಯನ್ನು ಉಳಿಸಿಕೊಂಡಿದೆ. ಇದನ್ನು ಈ ಕೃತಿಯಲ್ಲಿ ಹೇಳಲು ಯತ್ನವನ್ನು ಮಾಡಿದ್ದೇನೆ. ಸಹೃದಯರು ಇದನ್ನು ಸ್ವೀಕರಿಸುತ್ತಾರೆ ಎಂದು ನಂಬುತ್ತೇನೆ. ಹಾಗೆ ನೋಡಿದರೆ ಅಧಿಕಾರ ಎನ್ನುವುದು ಎಲ್ಲಾ ಕಡೆಗೆ ಇರುತ್ತದೆ ಎನ್ನುವ ಪುಕೋನ ಮಾತುಗಳು ಸತ್ಯ. ನನಗೆ ಇದನ್ನು ಬರೆಯಲು ತುಂಬಾ ಕಾಲಾವಕಾಶವು ಬೇಕಾಯಿತು. ಬರೆಯುವುದು ಯಾರಿಗೆ ಎಂದು ಈಗ ಕೇಳಿದರೆ ಅದಕ್ಕೆ ಉತ್ತರವೇ ಕೊಡಲಾಗದ ಸ್ಥಿತಿಯಲ್ಲಿ ಲೇಖಕರು ಇದ್ದಾರೆ. ನಾನೂ ಹಾಗೆಯೇ. ಫುಕೋನಿಗೆ ಯಾರೋ ಈ ಪ್ರಶ್ನೆಯನ್ನು ಕೇಳಿದ್ದರು. ಅವನು ನಗುತ್ತಾ ಹೇಳಿದ್ದ ‘ಬರೆಯುವುದರಿಂದ ನಾನು ಬಿಡುಗಡೆ ಹೊಂದುತ್ತೇನೆ, ಏನೋ ಹೇಳಬೇಕೆಂದು ಇರುತ್ತದೆ. ಅದನ್ನು ಹೇಳಿದರೆ ಆಯಿತು. ಖುಷಿಯಾಗುತ್ತದೆ.’ಯಾರು ಈ ಪುಸ್ತಕವನ್ನು ಓದುತ್ತಾರೆ ? ಯಾರೋ ನನ್ನ ಪುಸ್ತಕವನ್ನು ಕಸದ ಬುಟ್ಟಿಗೆ ಬಿಸಾಡ ಬೇಕಂತೆ. ನಗೆ ಬರುತ್ತದೆ ಇಂಥಾ ಮಾತುಗಳನ್ನು ಕೇಳುವಾಗ. ನಗುವುದು ಬಿಟ್ಟು ಮತ್ತೇನು ಮಾಡಲು ಸಾಧ್ಯ ? ಬರೆಯುವಾಗ ನಮಗೆ ಒಂದು ಶ್ರಮವು ಇರುತ್ತದೆ. ಅದಕ್ಕೆ ಬೆಲೆಯೂ ಇದೆ. ನಾನು ಶ್ರಮ ಪಟ್ಟಿದ್ದೇನೆ. ಹುಟ್ಟುವಾಗಲೇ ನಾನು ಪ್ರತಿಭಾವಂತನಲ್ಲ. ಸಾಯುವಾಗಲೂ ಪ್ರತಿಭಾವಂತನಾಗಿ ಸಾಯುವುದೂ ಇಲ್ಲ. ಇಷ್ಟು ಅರ್ಥಗಳು ನನಗೆ ಗೊತ್ತು. ಇದನ್ನು ಗೊತ್ತು ಮಾಡಿಕೊಟ್ಟವರಿಗೆ ನಾನು ಕೃತಜ್ಞತೆಯನ್ನು ಮೊದಲು ಹೇಳುತ್ತೇನೆ. ಕುಚೇಷ್ಟೆ ಮಾಡುವವರು, ವ್ಯಂಗ್ಯದಿಂದ ಚುಚ್ಚುವವರು, ಹಿಂದಿನಿಂದಲೇ ಮಾತಾಡುವವರೇ ಬರೆಯುವ ಶಕ್ತಿಯನ್ನು ಕೊಡುತ್ತಾರೆ. ಯಾಕೆಂದರೆ ಅಂಥವರು ಯಾವತ್ತೂ ಯಾರ ಕೃತಿಗಳನ್ನೂ ಓದಿರುವುದಿಲ್ಲ. ಅವರಿಗೆ ಫೇಸ್ ಬುಕ್ ಗೊತ್ತೂ ಇರುವುದಿಲ್ಲ. ಮೊದಲಬಾರಿಗೆ ನಾನು ಇದನ್ನು ಬರೆಯುತ್ತಿದ್ದೇನೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 668 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 800 ಗ್ರಾಂ |
| ಆಯಾಮಗಳು | - |





