ವಿಮರ್ಶೆ
ಶರಣರ ನಾಡಿನ ಸೂಫಿ ಮಾರ್ಗ
ಲೇಖಕ: ಪರ್ವಿನ್ ಸುಲ್ತಾನಾ
₹550₹65015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಪರ್ವಿನ್ ಅವರು ಮಾಡಿರುವ ಈ ಅಧ್ಯಯನವು ಮೂಲತಃ ಚಾರಿತ್ರಿಕ ಸಮೀಕ್ಷೆಯ ಮಾದರಿಯದು. ಇದು ಅಪಾರವಾದ ಉಪಯುಕ್ತವಾದ ಮಾಹಿತಿಗಳಿಂದ ಕೂಡಿದೆ. ಈ ಬಗೆಯ ಅಧ್ಯಯನಗಳು ಮತ್ತು ಅಲ್ಲಿರುವ ಅಪರೂಪದ ಮಾಹಿತಿಗಳು ಸಾರ್ವಜನಿಕ ತಿಳಿವಳಿಕೆಯ ದೃಷ್ಟಿಯಿಂದ ಅಗತ್ಯವಾಗಿವೆ. ಇಲ್ಲಿರುವ ಕೆಲವು ಸಂಗತಿಗಳು ಇತಿಹಾಸದ ಅಧ್ಯಾಪಕರಿಗೂ ಹೊಸತಾಗಿವೆ. ಆದರೂ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲ, ಮುಂದಿನ ದಿನಗಳಲ್ಲಿ ಕರ್ನಾಟಕದ ಸೂಫಿಗಳ ಲೋಕವನ್ನು ಧರ್ಮ, ಮೂಲಭೂತವಾದ, ಆಹಾರ, ಪ್ರಭುತ್ವ, ಸಂಗೀತ, ದರ್ಶನ, ಪಯಣ ಮುಂತಾದ ಆಶಯ/ಪರಿಕಲ್ಪನೆ ಮೂಲಕ ಫೋಕಸ್ಸಾಗಿ ಅಧ್ಯಯನ ಮಾಡುವ ಅಗತ್ಯವಿದೆ ಎಂದು ನನಗೆ ಅನಿಸುತ್ತದೆ. ಈ ಕೃತಿಯಲ್ಲಿರುವ ಸೂಫಿಗಳ ಪಯಣದ ವಿವರಗಳನ್ನು ಗಮನಿಸಬೇಕು. (ಈ ದೃಷ್ಟಿಯಿಂದ ಇಲ್ಲಿರುವ ಮೂರನೇ ಅಧ್ಯಾಯವು ಬಹಳ ಚೆನ್ನಾಗಿದೆ) ಬಾಗ್ದಾದ್ ಮಕ್ಕಾ ಮದೀನ ಕಂದಹಾರ್ ಜೀಲಾನ್ ಮೊದಲಾದ ಮಧ್ಯ ಏಶಿಯಾದ ಸ್ಥಳಗಳಿಂದ, ದೆಹಲಿ ಭರೂಚ್ ಖುಲ್ದಾಬಾದ್ ಅಹಮದಾಬಾದ್ ಅಜ್ಮೀರ್ ಲಾಹೋರ್ ಸಿಂಧ್ ಮೊದಲಾದ ಕಡೆಯಿಂದ ಬೀದರ್ ಕಲಬುರ್ಗಿ ಬಿಜಾಪುರಕ್ಕೆ ಸೂಫಿಗಳು ಪಯಣಿಸಿದರು. ವಿಭಿನ್ನ ಪ್ರಾಂತ್ಯಗಳಾಗಿ ರಾಜ್ಯಗಳಾಗಿ ಒಡೆದುಹೋಗಿದ್ದ ಭಾರತವನ್ನು ಏಳೆಂಟು ಶತಮಾನಗಳ ಹಿಂದೆಯೇ, ತಮ್ಮ ತಿರುಗಾಟದ ಮೂಲಕ ಏಕೀಕೃತ ಭಾರತದ ಪರಿಕಲ್ಪನೆಯನ್ನು ಸಂತರು ಕಟ್ಟಿಕೊಟ್ಟರು ಎಂಬುದು ಮಹತ್ವದ ಸಂಗತಿಯಾಗಿದೆ. ಹೀಗಾಗಿ ನಾವು ಕರ್ನಾಟಕ, ಕಲಬುರ್ಗಿ, ಬಿಜಾಪುರ ಎಂದು ಪ್ರದೇಶ ಅಥವಾ ಪ್ರಾಂತ್ಯ ಕೇಂದ್ರಿತವಾಗಿ ಅಧ್ಯಯನ ಮಾಡಿದರೂ, ಅದು ಅಖಿಲಭಾರತಕ್ಕೆ ಹಬ್ಬಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಮಪ್ರಭು ಮಂಟೆಸ್ವಾಮಿ ಬಂದೇನವಾಜ್ ಸಿದ್ಧಾರೂಢ ಮೊದಲಾಗಿ ಸಂತರ ಪರಿವ್ರಾಜಕ ಪಥಗಳನ್ನು ವಿಶ್ಲೇಷಣೆ ಮಾಡಬೇಕಿದೆ. ಇದಕ್ಕಾಗಿ ಮಾಹಿತಿ ಪ್ರಧಾನವಾದ ಸಂಶೋಧನೆಗೆ ಬದಲಾಗಿ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಪ್ರಧಾನವಾದ ಸಂಶೋಧನೆಯನ್ನು ಆರಂಭಿಸುವ ಅಗತ್ಯವಿದೆ.
ನಾನು ಕಾಲು ಶತಮಾನದ ಹಿಂದೆ ‘ಕರ್ನಾಟಕದ ಸೂಫಿಗಳು’ ಪುಸ್ತಕ ಪ್ರಕಟಿಸಿದೆ. ಇದಕ್ಕೆ ಹೋಲಿಸಿದರೆ, ಹೊಸ ತಲೆಮಾರಿನ ಸಂಶೋಧಕರು ಚಿಂತನ ಕ್ರಮದಲ್ಲೂ ಹೊಸ ಹೊಸ ಆಕರಗಳನ್ನು ಹುಡುಕುವಲ್ಲೂ ಸಾಕಷ್ಟು ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೃತಿ ನನ್ನಲ್ಲಿ ಮತ್ತೆ ಕಲಿಯುವ ತಿರುಗುವ ಹುಮ್ಮಸನ್ನು ಕೊಟ್ಟಿದೆ. ಇಲ್ಲಿರುವ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಮಹತ್ವದ ವಿವರಗಳು ಕನ್ನಡಿಗರ ಲೋಕದೃಷ್ಟಿಯನ್ನು ರೂಪಿಸುವಲ್ಲಿ ನೆರವಾಗುತ್ತವೆ ಎಂದು ಭಾವಿಸಿರುವೆ.
ರಹಮತ್ ತರೀಕೆರೆ
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 446 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 900 ಗ್ರಾಂ |
| ಆಯಾಮಗಳು | - |





