ಮುಖ್ಯ ವಿಷಯಕ್ಕೆ ಹೋಗಿ (Skip to main content)
ಡೋರಿಯನ್ ಗ್ರೇನ ಭಾವ ಚಿತ್ರ
ಬೆಸ್ಟ್ ಸೆಲ್ಲರ್15% ರಿಯಾಯಿತಿ
ಅನುವಾದ

ಡೋರಿಯನ್ ಗ್ರೇನ ಭಾವ ಚಿತ್ರ

ಲೇಖಕ: ವಿಜಯಾ ಸುಬ್ಬರಾಜ್

₹170₹20015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಆಸ್ಕರ್ ವೈಲ್ಡ್‌ನ ಕಲಾ ಮೀಮಾಂಸೆಯ ಅನೇಕ ಮಗ್ಗುಲುಗಳು ಕಾದಂಬರಿಯ ಪ್ರಮುಖ ಪಾತ್ರಗಳ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಅನಾವರಣಗೊಳ್ಳುತ್ತವೆ. ಕಲೆ, ಸೌಂದರ್ಯ, ಕಲಾವಿದ, ಕಲೆಯ ವಸ್ತು ಮುಂತಾದವುಗಳ ಬಗ್ಗೆ ಸ್ವಚಿಂತನೆಯ ಪರಿಕಲ್ಪನೆಗಳು, ಈ ಕೃತಿಯ ಪ್ರಸ್ತಾವನೆಯ ಭಾಗದಲ್ಲಿ, ಹೇಳಿಕೆಗಳ ರೂಪದಲ್ಲಿ ದಾಖಲಾಗಿರುವುದರಿಂದ, ಕೃತಿಯ ಒಳಗಿನ ಹೂರಣದ ದೃಷ್ಟಿ, ಧೋರಣೆಗಳೂ ಓದುಗರಿಗೆ ಅನಾಯಾಸವಾಗಿ ಗ್ರಹಿಸಲು ಸಾಧ್ಯವಿದೆ. ಕೃತಿಯ ಕೇಂದ್ರ ಪಾತ್ರವಾದ ಡೋರಿಯನ್ ಮತ್ತು ಕಲಾವಿದ ಬೇಸಿಲ್ ಮತ್ತು ಈ ಎರಡೂ ಪಾತ್ರಗಳ ನಡುವಿನ ಸೇತುವೆಯಂತಿರುವ ಲಾರ್ಡ್ ಹೆನ್ರಿ ಈ ಮೂವರ ನಡುವಿನ ಸಂಭಾಷಣೆ ಚರ್ಚೆ, ತರ್ಕ ಇತ್ಯಾದಿಗಳಿಂದ ಕಲೆಯನ್ನು ಸ್ವೀಕರಿಸುವ, ನಿರಾಕರಿಸುವ, ಮತ್ತು ಅದಕ್ಕೆ ಅವರವರದೇ ಆಗ ಸಮರ್ಥನೆಯ ಭಿನ್ನ ನೆಲೆಗಳನ್ನು ಗುರುತಿಸುವುದಕ್ಕೆ ಸಹಕಾರಿಯಾಗಿವೆ. ವೈಲ್ಡ್‌ನ ದೃಷ್ಟಿಯಲ್ಲಿ, ಕಲಾವಿದ ಸುಂದರ ವಸ್ತುಗಳ ಸೃಷ್ಟಿಕರ್ತ ಮತ್ತು ಕಲೆಯ ಉದ್ದೇಶ ಕಲೆಯ ಅನಾವರಣವೇ ಹೊರತು ಕಲಾವಿದನನ್ನಲ್ಲ. ಸುಂದರವಾದ ವಸ್ತುಗಳಲ್ಲಿ ಸುಂದರವಾದ ಅರ್ಥಗಳನ್ನು ಗ್ರಹಿಸಬಲ್ಲವನೇ ನಿಜವಾದ ಸಂಸ್ಕಾರಿ. ಯಾವ ಕಲಾವಿದನೂ ಅಸ್ವಸ್ಥ, ವಿಕೃತ ಮನಃಸ್ಥಿತಿಯವನಾಗಿರುವುದಿಲ್ಲ. ಕಡೆಯದಾಗಿ ಹೇಳುವುದಾದರೆ, ವ್ಯಕ್ತಿಯ ನೈತಿಕ ಬದುಕು ಅವನ ಕಲಾವಸ್ತು ಅಥವಾ ವಿಷಯದ ಭಾಗವಾಗಿರುತ್ತದೆಯೇ ಹೊರತು, ಕಲೆಯ ನೈತಿಕತೆ ಅಲ್ಲ. ಕಲೆಯ ನೈತಿಕತೆ ನಿಹಿತವಾಗಿರುವುದು ಅಪರಿಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ ಪರಿಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿದೆ. ಎಂಬೆಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಈ ಕಾದಂಬರಿ ಸೃಷ್ಟಿಯಾಗಿದೆ. ಈ ಕಾದಂಬರಿಯಲ್ಲಿ ರೋಚಕತೆಯೂ ಇದೆ, ದುರಂತವೂ ಇದೆ. ಮುಗ್ಧತೆಯ ಮುಖವಾಡದ ಆಳದಲ್ಲಿ ಹುದುಗಿರಬಹುದಾದ ವಿಕೃತ ಆತ್ಮದ ದರ್ಶನವನ್ನು ಪಡೆದವನಿಗೆ, ತನ್ನ ಭಾವಚಿತ್ರವೇ ತನ್ನ ಆತ್ಮದ ಅಭಿವ್ಯಕ್ತ ರೂಪವೆಂದು ಭಾವಿಸಿದವನಿಗೆ ಅಂಥದ್ದನ್ನು ಸೃಷ್ಟಿಸಿದ ಕಲಾವಿದನನ್ನೇ ಕೊಲ್ಲುವ ಸಾಹಸಕ್ಕೆ ದೂಡುತ್ತದೆ. ಆದರೆ ಅವನಲ್ಲಿನ ಪಾಪಪ್ರಜ್ಞೆ ವಿವೇಕಗಳು ಕಡೆಕಡೆಗೆ ಜಾಗೃತವಾದಾಗ ತಾನು ಬದುಕಿರುವುದೇ ಸಾಧ್ಯವಿಲ್ಲವೆಂದು ಆತ್ಯಹತ್ಯೆಗೆ ಮುಂದಾಗುತ್ತಾನೆ. ಇಡೀ ಕತೆ ಓದುಗರನ್ನು ಗಂಭೀರ ಚಿಂತನೆಗೆ ಒಳಗಾಗಿಸುತ್ತದೆ. ಕಾದಂಬರಿ ವಸ್ತುವಿನ ಸಂಕೀರ್ಣತೆ, ಅದರ ಹೊಸತನಗಳು ಜಗತ್ಪ್ರಸಿದ್ಧ ಕೃತಿಯಾಗಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ವಿಶೇಷತೆಗಳು

ISBN978-93-81577-59-2
ಭಾಷೆಕನ್ನಡ
ಪುಟಗಳು184
ಪ್ರಕಟಣೆ ವರ್ಷ217
ಆವೃತ್ತಿ5th EDITION
ತೂಕ400 ಗ್ರಾಂ
ಆಯಾಮಗಳು-