ಮುಖ್ಯ ವಿಷಯಕ್ಕೆ ಹೋಗಿ (Skip to main content)
ಕಸ್ತೂರಬಾ
ಹೊಸ ಬಿಡುಗಡೆ8% ರಿಯಾಯಿತಿ
ಅನುವಾದ

ಕಸ್ತೂರಬಾ

ಲೇಖಕ: ಡಾ. ಪ್ರಭಾಕರ ಮ. ನಿಂಬರಗಿ

₹350₹3808% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಕಸ್ತೂರಬಾಳನ್ನು ಈಗ ಯಾರೂ ಕೇಳುವವರಿಲ್ಲ. ಎಂ.ಕೆ. ಗಾಂಧಿಯನ್ನೇ ಎಲ್ಲರೂ ಕೇಳುತ್ತಾರೆ. ಎಂದೋ ಒಮ್ಮೆ ಹಾದಿ ತಪ್ಪಿ ಒಬ್ಬ ಬರುತ್ತಾನೆ.’ ಅವರ ಕಣ್ಣುಗಳಲ್ಲಿ ರೋಷವಿತ್ತು, ಆರೋಪವಿತ್ತು, ವ್ಯಂಗ್ಯ ಮತ್ತು ವೇದನೆಗಳಿದ್ದವು. ಅವರ ಮಾತಿಗೆ ಉತ್ತರಿಸುವ ಧೈರ್ಯ ನನ್ನಲ್ಲಿರಲಿಲ್ಲ. ಕೊನೆಯ ಪಕ್ಷ ‘ನೀವ್ಯಾರು?’ ಎಂದು ಕೇಳುವ ಸಾಹಸವೂ ಉಳಿಯಲಿಲ್ಲ. ಅವರ ಮಾತು ನನ್ನ ಸುಪ್ತಮನದಲ್ಲಿ ಗಟ್ಟಿಯಾಗಿ ಕುಳಿತಿತ್ತು. ಬಹುಶಃ, ಇದೇ ಕಾರಣಕ್ಕಾಗಿ ಇಷ್ಟು ಸಮಯದ ನಂತರ ಕಸ್ತೂರಬಾ ಬಗ್ಗೆ ಮತ್ತಷ್ಟು ತಿಳಿಯುವ ಜಿಜ್ಞಾಸೆ ಮೂಡಿತು. ನನ್ನ ಹುಡುಕಾಟ ಪ್ರಾರಂಭವಾಯಿತು. ಸ್ಥೂಲವಾಗಿ ಗಮನಿಸಿದರೂ ಕಸ್ತೂರಬಾ ಗಾಂಧಿಯವರ ಕಾರ್ಯಕ್ಷಮತೆ ಮತ್ತು ಜೀವನದ ಅಭಿನ್ನ ಭಾಗ. ಮೊತ್ತಮೊದಲು ಗಾಂಧಿಯವರ ಆತ್ಮಕಥೆಯಲ್ಲಿ ಹುಡುಕಿದೆ. ದೇಶ-ವಿದೇಶದ ಲೇಖಕರು ಗಾಂಧಿಯ ಬಗ್ಗೆ ಬರೆದ ಪುಸ್ತಕಗಳನ್ನೂ ಕಿತ್ತಾಡಿದೆ. ಹೆಚ್ಚಾಗಿ ಸಂದರ್ಭಾನುಸಾರ ಮಾಡಿದ್ದ ಉಲ್ಲೇಖಗಳೆಲ್ಲವೂ ಕಸ್ತೂರಬಾರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವಷ್ಟು ಇರಲಿಲ್ಲ. ಅವುಗಳಿಂದ ಗಾಂಧಿಯವರ ಮಹಾಕಾವ್ಯಾತ್ಮಕ ವ್ಯಕ್ತಿತ್ವ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಾ ಅವರ ಅಧಿಕೃತ ಸ್ಥಾನಮಾನವನ್ನು ಸಂಪೂರ್ಣವಾಗಿ ಅರಿಯುವುದು ಸಾಧ್ಯವಿರಲಿಲ್ಲ. ಈ ಸಮಸ್ಯೆಯು ಮತ್ತೆ ಮತ್ತೆ ನನ್ನನ್ನು ಕಸ್ತೂರಬಾ ಅವರ ಮನೆಯ ಹೊಸ್ತಿಲಲ್ಲಿ ಭೆಟ್ಟಿಯಾದ ಆ ವೃದ್ಧ ಸಜ್ಜನರತ್ತ ಎಳೆಯುತ್ತಿತ್ತು. ಇದು ಗಾಂಧಿಯವರ ದೋಷವೂ ಅಲ್ಲ, ಅನ್ಯರದೂ ಅಲ್ಲ. ಎಲ್ಲರ ದೃಷ್ಟಿಯು ಹೊಮ್ಮುವ ಬೆಳಕಿನ ಸ್ರೋತದತ್ತ ನೆಟ್ಟಿರುತ್ತದೆಯೇ ಹೊರತು ನೇಪಥ್ಯದಲ್ಲಿದ್ದರೂ ಅದನ್ನು ಮತ್ತಷ್ಟು ಪ್ರಖರಗೊಳಿಸಿದ ಕಸ್ತೂರಬಾ ಎಂಬ ದೃಢ ಬೆಂಬಲದತ್ತ ಅಲ್ಲ. ನನ್ನ ಜಿಜ್ಞಾಸೆ ಮತ್ತಷ್ಟು ಹೆಚ್ಚುತ್ತ ನಡೆಯಿತು. ಈ ಸಂಬಂಧದಲ್ಲಿ ಮೊದಲಿಗೆ ಜಸ್ಟಿಸ್ ಚಂದ್ರಶೇಖರ ಧರ್ಮಾಧಿಕಾರಿ ಪರಿಚಯವಾದರು. ಅವರ ತಂದೆ ದಾದಾ ಧರ್ಮಾಧಿಕಾರಿಯವರು ಸ್ವಯಂ ಆಚಾರ್ಯರು, ಬಾಪೂರ ಹಾದಿಯಲ್ಲಿ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರಿದ್ದಾಗ, ಬಾಲಕ ಜಜ್ ಸಾಹೇಬರು ಬಾ ಅವರ ಪಾಲನೆಯಲ್ಲಿದ್ದರು. ಅವರು ವನಮಾಲಾ ಪಾರೀಖ ಮತ್ತು ಸುಶೀಲಾ ನಯ್ಯರ್ ಗುಜರಾತಿಯಲ್ಲಿ ಬರೆದ ಪುಸ್ತಕದ ಹಿಂದಿ ಅನುವಾದ ‘ಹಮಾರಿ ಬಾ (ನಮ್ಮ ತಾಯಿ)’ ಇದನ್ನು ನನಗೆ ಕಳಿಸಿದರು. ಈ ಪುಸ್ತಕವು ಕಸ್ತೂರಬಾ ಅವರ ಉತ್ತರಾರ್ಧದ ಜೀವನವನ್ನು ಅರಿಯುವ ಅವಕಾಶ ಕಲ್ಪಿಸಿತು. ಜೀವನ ಮತ್ತು ರಾಜಕಾರಣದಲ್ಲಿ ಬಾ ಎಷ್ಟು ತಿಳಿವಳಿಕೆ ಹೊಂದಿದ್ದರು ಎನ್ನುವುದನ್ನು ಗಮನಿಸಿ ನನಗೆ ಆಚ್ಚರಿಯೆನಿಸಿತು. ‘ಅವಶ್ಯಕತೆಯಿದ್ದಾಗ ಬಾಪೂನಂತಹ ಗರ್ವಿಷ್ಠ ಪತಿಗೆ ಎಚ್ಚರಿಕೆ ನೀಡಲೂ ಬಾ ಹಿಂಜರಿಯುತ್ತಿರಲಿಲ್ಲ’ ಎಂದು ವನಮಾಲಾ ಪಾರೀಖ ಬರೆದಿದ್ದಾರೆ. ಮೇಲ್ನೋಟಕ್ಕೆ ಇದು ಅತಿ ಸಾಮಾನ್ಯ ವಾಕ್ಯ, ಆದರಿದು ಮೊತ್ತ ಮೊದಲ ಬಾರಿಗೆ ಕಸ್ತೂರಬಾರ ಮನೋಶಕ್ತಿಯ ಪರಿಚಯ ನೀಡಿತು. ಬಾಳಂತಹ ಸೀದಾ ಮತ್ತು ಸರಳ ಪತ್ನಿಯು ತನ್ನ ಗರ್ವಿಷ್ಠ ಪತಿಗೆ ಅಧಿಕಾರ ಮತ್ತು ಜವಾಬ್ದಾರಿಯ ಬಗ್ಗೆ ಎಚ್ಚರಿಸಬಹುದಾದರೆ, ಅವಳಿಗೆ ತನ್ನ ಜವಾಬ್ದಾರಿಯ ಸಂಪೂರ್ಣ ಅರಿವು ಇರುತ್ತದೆ. ಇಂತಹ ವಾಕ್ಯಗಳು ಮನುಷ್ಯನ ಅಂತರಂಗದ ಮೇಲಣ ಪರದೆಯನ್ನು ಸರಿಸುವುದರಲ್ಲಿ ಸಹಕರಿಸುತ್ತವೆ. ತಮ್ಮ ಅಧಿಕಾರವನ್ನು ಹಿಂಜರಿಯದೇ ಪ್ರಯೋಗಿಸಿದ ಅನೇಕ ಘಟನೆಗಳನ್ನು ಅವರ ಜೀವನದಲ್ಲಿ ಕಾಣಬಹುದು. ಜೊತೆಗೆ ತನ್ನ ಪತ್ನಿ-ಧರ್ಮವನ್ನು ಪೂರ್ತಿ ನಿಷ್ಠೆ ಮತ್ತು ಸಹಜವಾಗಿ ನಿಭಾಯಿಸಿದ್ದಾರೆ. ಸದ್ಯ ಪ್ರಚಲಿತವಿರುವ ವೈಯಕ್ತಿಕ ಮಹಿಳಾ ಸ್ವಾತಂತ್ರ್ಯ ಮತ್ತು ಕೌಟುಂಬಿಕ ಜವಾಬ್ದಾರಿಯ ಬಗೆಗಿನ ದ್ವಂದ್ವ ಭಾವನೆಯು ಕಸ್ತೂರಬಾರ ಮನದಲ್ಲಿರಲಿಲ್ಲ. ಮಣಿಲಾಲ ಗಾಂಧಿಯ ಪುತ್ರ ಅರುಣ ಗಾಂಧಿ ಮತ್ತವರ ಪತ್ನಿ ಸುನಂದಾ ಇವರು ಕೆರೊಲ್ ಲಿನ್ ಎಲಿನ್ ಜೊತೆ ಬರೆದಿರುವ ಪುಸ್ತಕ, ‘ದ ಫಾರ್‌ಗಾಟನ್ ವುಮನ್: ದ ಅನ್‌ಟೋಲ್ಡ್ ಸ್ಟೋರಿ ಆಫ್ ಕಸ್ತೂರ್, ವೈಫ್ ಆಫ್ ಮಹಾತ್ಮಾ ಗಾಂಧಿ,’ ಇದರ ಶೀರ್ಷಿಕೆ ಕೂಡ ನನಗೆ ಪೋರಬಂದರಿನಲ್ಲಿ ಭೆಟ್ಟಿಯಾದ ವೃದ್ಧ ಸಜ್ಜನರ ವೇದನೆಯನ್ನು ಮತ್ತಷ್ಟು ತೆರೆದಿಡುತ್ತದೆ. (ಅರುಣ ಮಣಿಲಾಲ ಗಾಂಧಿ ತನ್ನ ಅಜ್ಜನ ಮಾರ್ಗದಲ್ಲಿ ನಡೆಯುತ್ತ ಆದರೆ ಅವರ ಸಾತ್ವಿಕ ಜೀವನದ ಸಿದ್ಧಾಂತವನ್ನು ದೂರವಿಟ್ಟು ಸದ್ಯ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿ ಅಮೇರಿಕೆಯ ರೊಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ.) ಈ ಪುಸ್ತಕವನ್ನು ಅಮೇರಿಕೆಯ ಹಂಟ್‌ವಿಲೆಯ ಓಝಾರ್ಕ್ ಮೌಂಟನ್ ಪಬ್ಲಿಷಿಂಗ್ ೧೯೯೭ರಲ್ಲಿ ಪ್ರಕಟಿಸಿತು. ಈ ಪುಸ್ತಕದ ಪ್ರಕಟಣೆಗೆ ಪ್ರಯತ್ನಿಸುವಾಗ ಅನೇಕ ಪ್ರಕಾಶಕರು ‘ನಿಮ್ಮ ಅಜ್ಜನ ಮೇಲೆ ಬರೆದಿದ್ದರೆ ಅದನ್ನು ಪ್ರಕಟಿಸುವೆವು’ ಎಂದು ಹೇಳುತ್ತಿದ್ದರೆಂದು ಇದರಲ್ಲಿ ಅರುಣ ಗಾಂಧಿ ಬರೆದಿದ್ದಾರೆ. ಇದು ಕೂಡ ಆ ವೃದ್ಧರ ವೇದನೆಯನ್ನು ಅನುಮೋದಿಸುವ ವಿಷಯ. ಮುಂಬಯಿಯಲ್ಲಿ ಲಭ್ಯವಿರದ ಈ ಪುಸ್ತಕವನ್ನು ನನ್ನ ಅಳಿಯ ಕ್ಯಾಪ್ಟನ್ ಸಲಿಲ ಗುಪ್ತಾರ ಮಿತ್ರ ಅಮೇರಿಕೆಯಲ್ಲಿರುವ ಸ್ಟೀಫನ್ ಅದನ್ನು ಒದಗಿಸುವ ಕೃಪೆ ಮಾಡಿದರು. ಅರುಣ ಮತ್ತು ಸುನಂದಾ ಇಬ್ಬರೂ ತಮ್ಮ ಅಜ್ಜಿಯ ಬಗ್ಗೆ ಬಹಳ ಆಳಕ್ಕಿಳಿದು ಬರೆದಿರುವುದನ್ನು ಗಮನಿಸಿರುವೆ. ಅವರಿಗೆ ತಮ್ಮ ಅಜ್ಜಿಯ ಉಪೇಕ್ಷಣೆ ಭಾಸವಾಗಿರಲೇ ಬೇಕು. ಈ ಪುಸ್ತಕ ಹಾಗೂ ವನಮಾಲಾ ಪಾರೀಖ ಮತ್ತು ಸುಶೀಲಾ ನಯ್ಯರ್‌ರ ಪುಸ್ತಕ, ಇವೆರಡೂ ನನಗೆ ಬಾ ಬಗ್ಗೆ ಹೊಸ ದೃಷ್ಟಿ ನೀಡಿ ಅವರ ಜೀವನವನ್ನು ನನ್ನೆದುರು ತೆರೆದಿಟ್ಟಿವೆ. ನನ್ನ ಕಾದಂಬರಿಯ ಶ್ರೇಯಸ್ಸು ಇವೆರಡೂ ಪುಸ್ತಕಗಳ ಲೇಖಕರಿಗೆ ಸಲ್ಲುತ್ತದೆ.

ವಿಶೇಷತೆಗಳು

ISBN978-93-81244-52-48-93
ಭಾಷೆಕನ್ನಡ
ಪುಟಗಳು336
ಪ್ರಕಟಣೆ ವರ್ಷ2017
ಆವೃತ್ತಿ2nd
ತೂಕ625 ಗ್ರಾಂ
ಆಯಾಮಗಳು-