ಅನುವಾದ
ಒಂಟಿದನಿ - ಬೋರಿಸ್ ಪಾಸ್ತರ್‌ನಾಕ್ ವಾಚಿಕೆ
ಲೇಖಕ: ಕೇಶವ ಮಳಗಿ
₹220₹26015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಬೋರಿಸ್ ಲಿಯೋನಿದೊವಿಚ್ ಪಾಸ ರ್‌ನಾಕ್ (೧೮೯೦-೧೯೬೦) ತನ್ನ ಬದುಕಿನ
ಕೊನೆಯ ಮೂರು ವರ್ಷಗಳಲ್ಲಿ ದಿಢೀರನೆ ಅಂತಾರಾಷ್ಟ್ರೀಯ ಸಾಹಿತ್ಯ-ರಾಜಕೀಯ
ವೇದಿಕೆಯಲ್ಲಿ ಖ್ಯಾತಿ ಗಳಿಸಿದ. ಆತನ ಪ್ರಸಿದ್ದಿಗೆ ಒಡೆದು ಕಾಣುವ ಕಾರಣ-ಡಾಕ್ಟರ್
ಜಿವಾಗೋ ಕಾದಂಬರಿ; ನೊಬೆಲ್ ಪಾರಿತೋಷಕ. ಸೋವಿಯೆತ್‌ನಲ್ಲಿ ದಶಕಗಳ ಕಾಲ
ಹಿಡಿದಿಟ್ಟಿದ್ದ ಕಲಾವಿದರ ಅಭಿವ್ಯಕ್ತಿ, ಪುಟಿದೆದ್ದು, ಎಲ್ಲರ ಸಾಮೂಹಿಕ ದನಿಯೆಂಬಂತೆ
ಡಾಕ ರ್ ಜಿವಾಗೋದ ಮೂಲಕ ಕಾಣಿಸಿಕೊಂಡಿತ್ತು. ಇಪ ತ ರ ದಶಕದಿಂದ
ಸೋವಿಯೆತ್ ಹೊರಗೆ ಅನುಮತಿಯಿಲ್ಲದೆ ಬರಹಗಾರರು ಯಾವ ಕೃತಿಯನ್ನೂ
ಪ ಕಟಿಸುವಂತಿರಲಿಲ್ಲ. ಈ ರೂಢಿಗತ ಅಂzs ಸಂಪ ದಾಯ ಮುರಿದು ಬೋರಿಸ್
ತೋರಿಸಿದ zs ರ್ಯ ಎಲ್ಲ ಕಾಲಕ್ಕೂ ಮೆಚ್ಚುವಂತದ್ದೇ. ಆದರೆ ಸ್ಟಾಕ್ ಹೋಂ ತಾನು
ನೀಡಿದ ಪಾರಿತೋಷಕ ಅತ್ಯಂತ ಶ್ರೇಷ್ಠ; ಸಮಂಜಸವೆಂದು ರುಜುವಾತು ಪಡಿಸಲು
ಎಲ್ಲ ಬೌದ್ಧಿಕ ಚೌಕಟ್ಟಿನೊಳಗೆ ನೋಡಿದರೂ ಪ ಶಸ್ತಿಯ ಹಿಂದೆ ರಾಜಕೀಯ
ಉದ್ದೇಶಗಳಿದ್ದಿರಬಹುದೇ ಎಂಬ ಅನುಮಾನವನ್ನು ತಳ್ಳಿ ಹಾಕಲಾಗುವುದಿಲ್ಲ.
ಪಾಸ್ತರ್‌ನಾಕ್ ವಿಷಯದಲ್ಲಷ್ಟೇ ಅಲ್ಲ, ಅದು ನೀಡುವ ನೊಬೆಲ್ ಕಾಲ ಕಾಲಕ್ಕೆ ಕಟು
ಟೀಕೆಗೆ, ವಿಮರ್ಶೆಗೆ ಒಳಗಾಗಿರುವುದನ್ನು ಗಮನಿಸಿದರೆ ಈ ಮಾತಿನ ಅರ್ಥ
ಸ್ಪಷ್ಟವಾದೀತು.
ನೊಬೆಲ್ ನೀಡುವ ಮುಂಚೆಯೇ ಬೋರಿಸ್ ತನ್ನ ದೇಶದಲ್ಲಿ ಮೆಚ್ಚಿನ ಕವಿಯಾಗಿದ್ದ;
ಅತ್ಯುತ ಮ ಅನುವಾದಕನಾಗಿದ್ದ. ಒಂದು ಸಂಕ ಮಣ ಸ್ಥಿತಿಯಲ್ಲಿ ಕಾವ್ಯ-ಸಾಹಿತ್ಯ
ನಿರ್ಮಾಣ ಮಾಡಿದ ಬೋರಿಸ್ ಒಂದರ್ಥದಲ್ಲಿ ಎಲ್ಲ ಚಳವಳಿಯಿಂದಲೂ ಒಳ್ಳೆಯ
ಅಂಶವನ್ನು ಪಡೆದು ಬೆಳೆದು ಬಂದವನೆಂದು ವಿಮರ್ಶಕರು ಗುರ್ತಿಸುತ್ತಾರೆ, ರಷಿಯನ್
ಸಿಂಬಲಿಸಂ ಪ ಭಾವದಿಂದ ಬರೆಯಲಾರಂಭಿಸಿ‘s ವಿಷ್ಯವಾದಿ ಕಾವ್ಯದಿಂದಲೂ ಪಡೆದು,
ಆಮೇಲೆ ಕ್ರಾಂತಿ ನಂತರದ ಸೋವಿಯೆತ್‌ನಲ್ಲಿ ತನ್ನದೇ ಸ್ವಂತ zs ನಿ ರೂಢಿಸಿಕೊಂಡು,
ಆzs ನಿಕ ಭಾವಗೀತೆಯನ್ನು ಹೊಸ ಅರ್ಥದಲ್ಲಿ ಬೆಳೆಸಿದವನು ಈತ. ಈತನದು ಅತಿಗೆ
ಹೋಗದ ಸಮನ ಯ zs ನಿ. ಗುಂಪಿನಲ್ಲಿದ್ದಾಗ ಒಂಟಿಯಂತೆ ಕಾಣುವ;
ಒಂಟಿಯಾಗಿದ್ದಾಗ ಗುಂಪಿನ ಗುಂಗಿಗೊಳಗಾದಂತೆ ಈತನ ಸಾಹಿತ್ಯ ಸೃಷ್ಟಿ. ವೈಯಕ್ತಿಕ
ix
ನೋವಿಗೆ ಕಾವ್ಯದಲ್ಲಿ ಎಷ್ಟು ಪ್ರಾಮುಖ್ಯತೆ ನೀಡಿದನೊ, ಕ್ರಾಂತಿ, ಸಮಾಜವಾದಕ್ಕೂ
ಅಷೆ ಮಹತ ನೀಡಿದ. ಆದರೆ ವ್ಯಕ್ತಿ, ವ್ಯಕ್ತಿತ ದ ಅಧಿಕೃತತೆಗೆ ಹೆಚ್ಚಿನ ಪ್ರಾಶಸ
ಎಲ್ಲರಿಗಿಂತಲೂ ತಾನು ಭಿನ್ನ ಎಂದು ತೋರಿಸಿಕೊಳ್ಳುತ್ತಿದ್ದ ಎಂದು ನದೇಜಾ
ಮಾಂದಲ್‌ಷ ಮ್ ಹೇಳುತ್ತಾಳೆ. ಹೀಗಾಗಿಯೇ, ಹಲವೊಮ್ಮೆ ಈತನ ದ ಂದ ,
ಗೊಂದಲದಿಂದಾಗಿ ಬಿಡಿಸದ ಒಗಟಂತೆ ಕಾಣುವ ಇಪ ತ ನೆಯ ಶತಮಾನದ ಮಹತ್ವದ
ಲೇಖಕ- ಎನ್ನುವ ತೀರ್ಮಾನಕ್ಕೆ ವಿಮರ್ಶಕರು ಬರಬೇಕಾಯಿತು.
ಒಂದು ರೀತಿಯಿಂದ ಬೋರಿಸ್ ತನ್ನ ಸಮಕಾಲೀನರಲ್ಲಿಯೇ ಅದೃಷ್ಟಶಾಲಿ. ಆನಾ
ಆಖ್ಮತೋವಾ, ಮಾಂದಲ್‌ಷ್ತಮ್, ಟೈಟಿಯನ್ ತಬಿಜೆ ಪಾವೆಲ್ ಯಾಷಿವಿಲಿಯರಂತೆ
ತೀವ ನೋವು-ಸಾವಿಗೆ ಒಳಗಾಗಲಿಲ್ಲ. ನಿರ್ದಿಷ ವಾದ ಒಂದೆರಡು ಉದಾಹರಣೆ ಬಿಟ್ಟರೆ,
ಎಂದೂ ಪ್ರಯಾಸವಾಗಲಿಲ್ಲ. ಅವನ ಸಂಕಷ್ಟಗಳೇನಿದ್ದರೂ ತಾತ್ಕಾಲಿಕ.
ನಮ್ಮ ಮನಸ್ಸಿನೊಳಗೆ ಹೆಡೆಯಾಡುವ ವಿನಾಶದ ದನಿಯನ್ನು ನಾವು ಸದಾ
ಹತ್ತಿಕ್ಕುತ್ತಿರಬೇಕು ಎಂದ ಬೋರಿಸ್ ಅನುs ವ ಮಾಗದೆ ಕಾಗದದ ಮೇಲೆ ಕಾರಿಕೊಳ್ಳುವ
ಚಾಳಿಯನ್ನು ಕಟುವಾಗಿ ವಿರೋಧಿಸುತ್ತಿದ್ದ. ಅನಗತ್ಯವಾಗಿ ವೈಯಕ್ತಿಕ ಬದುಕು
ಉಂಡದ್ದು, ಉಟ್ಟಿದ್ದರ ಕುರಿತು ಬರೆಯುವುದು, ಮಾತನಾಡುವುದನ್ನು ಕಂಡರೆ
ಅಸಹ್ಯಪಟ್ಟುಕೊಳ್ಳುತ್ತಿದ್ದ. ನನ್ನಲ್ಲಿ ಯಾವ ವ್ಯವಸ್ಥಿತ ದಾಖಲೆಗಳಿಲ್ಲ, ಹಸ ಪ ತಿ, ಪತ ಗಳು
ಪೇರಿಸಿಡುವುದು ನನಗೆ ಒಗ್ಗದ್ದು. ಗುಪ್ತವಾಗಿ ಮುಚ್ಚಿಡುವ ಅಮೂಲ್ಯವಾದುದೇನೂ
ನನ್ನಲ್ಲಿಲ್ಲ. ನನ್ನ ಕೋಣೆ ಹೋಟೆಲಿನ ಕೋಣೆಯಂತೆ ಸರಳ, ಸ ಚ್ಛ, ಸಾಧಾರಣ
ವಿದ್ಯಾರ್ಥಿಯಂತೆ ಬದುಕುವುದು ನನಗಿಷ್ಟ ಎಂದು ಒಂದೆಡೆ ಆತ ಬರೆದುಕೊಂಡ.
ಹೀಗಾಗಿಯೇ ಅವನ ಎರಡೂ ಆತ್ಮ ವಿವರಣೆಯಲ್ಲಿ ತನ್ನ ವೈಯಕ್ತಿಕ ಬದುಕಿಗಿಂತ
ಹೆಚ್ಚಾಗಿ, ತನ್ನ ಮೇಲೆ ಪ್ರಭಾವ ಬೀರಿದವರ ಕುರಿತು ಬರೆದ. ಅವನ ಆತ್ಮ ವಿವರಣೆ
ಬಿಟ್ಟರೆ ತನ್ನ ಗೆಳೆಯರಿಗೆ ಬೋರಿಸ್ ಬರೆದ ಪತ್ರಗಳಲ್ಲಿ ಅವನ ತುಂಡು ತುಂಡಾದ
ವೈಯಕ್ತಿಕ ಜೀವನವನ್ನು ಕಾಣುತ್ತೇವೆ. ಅಲ್ಲಿ ಕೂಡ ಸಾಹಿತ್ಯ-ಕಲೆ-ವಿಮರ್ಶೆಯ ಬಗೆಗೆ
ಅವನ ಆಸಕ್ತಿ ಅಧಿಕ. ಆದ್ದರಿಂದಲೇ ಅವನ ಕಥೆ, ಕಾವ್ಯ, ಕಾದಂಬರಿಯಷ್ಟೇ ಈ
ಪತ್ರಗಳು ಸಾಹಿತ್ಯ ಪ್ರಾಧಾನ್ಯತೆ ಪಡೆದಿವೆ
ವಿಶೇಷತೆಗಳು
| ISBN | 978-93-81577-79-0 |
| ಭಾಷೆ | ಕನ್ನಡ |
| ಪುಟಗಳು | 224 |
| ಪ್ರಕಟಣೆ ವರ್ಷ | 2024 |
| ಆವೃತ್ತಿ | 2nd |
| ತೂಕ | 600 ಗ್ರಾಂ |
| ಆಯಾಮಗಳು | - |





