ಅನುವಾದ
ಕ್ಯಾಂಡೀಡ್ : ಸದ್ಗುಣ ಸಂಪನ್ನ
ಲೇಖಕ: ಟಿ.ಡಿ. ರಾಜಣ್ಣ ತಗ್ಗಿ
₹195₹23015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಜಗತ್ತಿನ ಅತ್ಯಂತ ಶ್ರೇಷ್ಠ ಕಾದಂಬರಿಗಳ ಸಾಲಿನಲ್ಲಿ ಸ್ಥಾನ ಪಡೆದಿರುವ ‘ಕ್ಯಾಂಡೀಡ್’ ಕೃತಿಯು ಕಾದಂಬರಿ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಇದನ್ನು ಫ್ರೆಂಚ್ ಲೇಖಕ, ತತ್ವಜ್ಞಾನಿ, ಇತಿಹಾಸಕಾರ, ಮಾನವತಾವಾದಿ ಮತ್ತು ಸಮಾಜ ಸುಧಾರಕ ಎನಿಸಿದ ‘ವೋಲ್ಟೇರ್’ ೧೭೫೯ರಲ್ಲಿ ರಚಿಸಿದ್ದಾನೆ. ಇದೊಂದು ವ್ಯಂಗ್ಯ ಮತ್ತು ವಿಡಂಬನಾತ್ಮಕ ಕೃತಿ. ಇದು ಅತಿ ಆಶಾವಾದವನ್ನು ಅತ್ಯಂತ ದಾರುಣವಾಗಿ ಖಂಡಿಸುತ್ತದೆ, ಅಂತೆಯೆ ನಿರಾಕರಿಸುತ್ತದೆ ಕೂಡ. ಹಾಗೆಯೆ ಭಯಾನಕವಾದ ಮತ್ತು ಮೂರ್ಖತ್ವದಿಂದ ಕೂಡಿದ ಪ್ರಪಂಚವನ್ನು ನಮ್ಮ ಕಣ್ಣ ಮುಂದೆ ತೆರೆದು ತೋರಿಸುವ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬರಹವೂ ಹೌದು.
ವೋಲ್ಟೇರ್ ಈ ಕಾದಂಬರಿಯಲ್ಲಿ ಮನುಷ್ಯನ ಬುದ್ಧಿ ಶಕ್ತಿಯನ್ನು ಮತ್ತು ಆಲೋಚನಾ ಸಾಮರ್ಥ್ಯಗಳನ್ನು ನಿರ್ವೀರ್ಯಗೊಳಿಸುವ ಕರ್ಮಸಿದ್ಧಾಂತಗಳಂತಹ ನಿರರ್ಥಕ ಆಶಾವಾದಕ್ಕೆ ಕೊಡಲಿಪೆಟ್ಟು ಕೊಟ್ಟಿದ್ದಾನೆ. ಸ್ವೇಚ್ಛೆಗಾಗಿ ಆತ ಪಟ್ಟ ಪಾಡಿನ ಜೊತೆಗೇ, ಧರ್ಮಗಳ ಅಸಹನೆ, ಅವುಗಳ ಆಧಿಪತ್ಯ, ಹಿಂಸೆ, ಆತ್ಮಲೋಕದ ದಿವಾಳಿತನ, ವೈಚಾರಿಕತೆಯ ಅಪ್ರಜ್ಞಾ ಸ್ಥಿತಿ, ಕಪಟ, ಲೂಟಿ, ಪೀಡನೆಗಳ ಬಗ್ಗೆ ಆತ ಎತ್ತಿದ ಧ್ವನಿ ಎಲ್ಲವೂ ಇದರಲ್ಲಿ ಅಪಹಾಸ್ಯ ಮತ್ತು ಬೀಭತ್ಸದಿಂದ ದರ್ಶನ ಕೊಡುತ್ತವೆ.
ಕತ್ತಿಗಿಂತಲೂ ಹರಿತವಾದ ವ್ಯಂಗ್ಯವೊಂದು ಕಾದಂಬರಿಯುದ್ದಕ್ಕೂ ಅಂತರ್‌ವಾಹಿನಿಯಂತೆ ಸಾಗುತ್ತಲೇ ಧರ್ಮ ಮತ್ತು ಮನುಷ್ಯನ ನಾನಾ ಅವಲಕ್ಷಣಗಳ ಕಡೆಗೆ ಹೆಜ್ಜೆ ಹೆಜ್ಜೆಗೂ ಬೆರಳು ಮಾಡಿ ತೋರಿಸುತ್ತಲೇ ಹೋಗುತ್ತದೆ. ಅದಕ್ಕಾಗಿಯೇ ಈ ಕೃತಿಯು ಫ್ರೆಂಚ್ ಭಾಷೆಯಲ್ಲಿ ಪ್ರಕಟಗೊಂಡ ಮೊದಲ ವರ್ಷಕ್ಕೆ ನಿಷೇಧಕ್ಕೊಳಗಾಗುತ್ತದೆ. ೨೦ನೇ ಶತಮಾನದ ಮೊದಲ ಹಂತದಲ್ಲಿಯೂ ಅಮೆರಿಕಾದಂತಹ ಮಹತ್ತರ ಪ್ರಜಾಪ್ರಭುತ್ವ ದೇಶದಲ್ಲೂ ಕೂಡ ಇದರ ಮೇಲೆ ನಿಷೇಧ ಹೇರಲ್ಪಟ್ಟಿತೆಂದರೆ ಇದು ವ್ಯಂಗ್ಯದಲ್ಲಿ ಅದೆಷ್ಟು ‘ಅಪಾಯಕಾರಿ’ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇದು ನಿಷೇಧಕ್ಕೊಳಗಾಗಿದ್ದರೂ ಸಾಹಿತ್ಯದಲ್ಲಿ ಅತಿ ಶ್ರೇಷ್ಠ ಬರವಣಿಗೆಗಳಲ್ಲಿ ಇದೂ ಒಂದೆಂಬುದು ಅಪ್ಪಟ ಸತ್ಯ.
ವಿಶೇಷತೆಗಳು
| ISBN | 978-81-972194-1-2 |
| ಭಾಷೆ | ಕನ್ನಡ |
| ಪುಟಗಳು | 196 |
| ಪ್ರಕಟಣೆ ವರ್ಷ | 2024 |
| ಆವೃತ್ತಿ | 1st |
| ತೂಕ | 500 ಗ್ರಾಂ |
| ಆಯಾಮಗಳು | - |





