ಅನುವಾದ
ಸೆಕ್ಯುಲರ್‌ವಾದ: ಬುಡ-ಬೇರು
ಲೇಖಕ: ರಾಹು
₹360₹40010% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಈ ಗ್ರಂಥದ ಮೂಲ ಲೇಖಕ ಮಣಿಶಂಕರ್ ಅಯ್ಯರ್, ನಮ್ಮ ದೇಶದ ಬುದ್ಧಿಜೀವಿ ರಾಜಕಾರಣಿಗಳಲ್ಲಿ ಬಹು ಪ್ರಮುಖರು. ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ಅವರು, ಪ್ರತಿಯೊಬ್ಬ ಭಾರತೀಯನು ಓದಲೇಬೇಕಾದ ಈ ಕೃತಿಯನ್ನು ರಚಿಸಿ ಸೆಕ್ಯುಲರ್ ಮಹಾ ಕಾರಣಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ನಮ್ಮ ನಾಡಿನ ಕೆಲವು ರಾಜಕಾರಣಿಗಳ ಸ್ವಾರ್ಥ ಹಾಗೂ ಎಡಬಿಡಂಗಿತನದಿಂದಾಗಿ ನಮ್ಮಲ್ಲಿಯೂ ಫ್ಯಾಶಿಸ್ಟ್‌ರು ಅಧಿಕಾರದ ಗದ್ದುಗೆಯನ್ನು ಏರಿದ್ದಾರೆ. ಆ ಮೂಲಕ ನಾಡಿನ ತುಂಬ ಕೋಮುವಾದಿ ವಿಷ ಬೀಜ ಬಿತ್ತುವವರಿಗೆ ಅಪೂರ್ವ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಪರಿಣಾಮವಾಗಿ, ಶಾಂತಿ ಪ್ರಿಯತೆಗೆ ಹೆಸರು ಮಾಡಿದ್ದ ನಮ್ಮ ನಾಡು ಒಂದು ಭಾರಿ ದುರಂತದೆಡೆಗೆ ಜಾರುತ್ತಿದೆ. ಸೂಫಿ, ಸಂತರು, ಶರಣರು, ದಾಸರು ನಡೆದಾಡಿದ, ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ಈ ಕರುನಾಡಿನಲ್ಲಿ ಕೋಮುವಾದಿಗಳು ದ್ವೇಷದ ಕೊಳ್ಳಿ ಇಟ್ಟು ಗಹಗಹಿಸುತ್ತಿರುವುದು ಬಹು ದುಃಖದ ವಿಷಯ. ಈ ಪಾಶವೀ ಪ್ರವೃತ್ತಿಯ ವ್ಯಕ್ತಿಗಳನ್ನು, ಶಕ್ತಿ ಸಂಘಟನೆಗಳನ್ನು ಕೂಡಲೇ ಹಿಮ್ಮೆಟ್ಟಿಸಿ ನಾಡಿನಾದ್ಯಂತ ಪರಸ್ಪರ ಸ್ನೇಹ ಸೌಹಾರ್ದತೆ ಕುದುರಿಸುವುದು ಅತ್ಯಂತ ತುರ್ತಿನ ಅವಶ್ಯಕತೆಯಾಗಿದೆ.
ಈ ಮಹಾಕಾರ್ಯದಲ್ಲಿ ತೊಡಗಬಯಸುವ ಪ್ರತಿಯೊಬ್ಬರಿಗೂ ಈ ಗ್ರಂಥ ಒಂದು ಸಮರ್ಥಮಾರ್ಗದರ್ಶಿಯಾಗಬಲ್ಲದು; ಜನತೆಯ ಪ್ರಜಾಪ್ರಭುತ್ವಕ್ಕಾಗಿ ದುಡಿಯಬಯಸುವವರ ಕೈಪಿಡಿಯಾಗಬಲ್ಲದು. ಎಲ್ಲಕ್ಕೂ ಮಿಗಿಲಾಗಿ, ಗಾಂಧಿ, ಸುಭಾಸ್, ನೆಹರೂಜಿಯ ವಾರಸುದಾರರೆಂದು ಹೆಮ್ಮೆಹಿಂದ ಹೇಳಿಕೊಳ್ಳುವ ಎಲ್ಲ ಕಾಂಗ್ರೆಸ್ಸಿಗರ ಕಣ್ಣು ತೆರೆಸಿ ಸನ್ಮಾರ್ಗದರ್ಶನ ಮಾಡಿಸಬಲ್ಲ ಸತ್ವ ಈ ಗ್ರಂಥಕ್ಕಿದೆ. ಹಾಗಾಗಿ, ಪ್ರತಿಯೊಬ್ಬ ಕಾಂಗ್ರೆಸ್ಸಿಗನು ತಪ್ಪದೇ ಓದಬೇಕಾದ ಕೃತಿ ಇದು.
ವಿಶೇಷತೆಗಳು
| ISBN | 978-93-81244289 |
| ಭಾಷೆ | ಕನ್ನಡ |
| ಪುಟಗಳು | 388 |
| ಪ್ರಕಟಣೆ ವರ್ಷ | 2026 |
| ಆವೃತ್ತಿ | 6 th EDTION |
| ತೂಕ | 680 ಗ್ರಾಂ |
| ಆಯಾಮಗಳು | - |





