ಅನುವಾದ
ದಲಿತ-ತತ್ವಶಾಸ್ತ್ರ : ಭಾರತೀಯ ಭೌತಿಕವಾದ ಚಾರ್ವಾಕ ದರ್ಶನ : ಕೆಲವು ತಾತ್ವಿಕ ಚಿಂತನೆಗಳು
ಲೇಖಕ: ಲಕ್ಕೂರು ಆನಂದ
₹180₹21014% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಒಂದು ಮಾತಿದೆ ; ಪ್ರಪಂಚವನ್ನು ತಿಳಿಯುವಂತಹ ವ್ಯಕ್ತಿ ಬರುವ ಎಷ್ಟೋ ಮೊದಲೇ ಪ್ರಪಂಚ ಇದ್ದಿತು ಎಂದು. ಹಿಮಾಲಯ ಪರ್ವತವನ್ನು ಕಂಡು ದಂಗಾಗಿ ಬಿಡುವ ವ್ಯಕ್ತಿ ಕಾಣಿಸಿಕೊಳ್ಳುವ ಮೊದಲೇ ಆ ಅಗಾಧ ಪರ್ವತ ಶ್ರೇಣಿ ಉಂಟಾಗಿತ್ತು. ನನ್ನನ್ನೂ ನೋಡುವ (ಮೊದಲೇ) ವ್ಯಕ್ತಿ ಬರಲೆಂದು ಹಿಮಾಲಯ ಕಾದು ಕುಳಿತಿರಲಿಲ್ಲ. ಪ್ರಕೃತಿ ಮತ್ತು ಅದರಲ್ಲಿನ ನಿಯಮಿತ ವಿಕಾಸ ಅಥವಾ ಬೆಳವಣಿಗೆ ಸ್ವತಂತ್ರವಾದ ಒಂದು ಪ್ರಕ್ರಿಯೆ. ಇದನ್ನು ಸೂತ್ರೀಕರಿಸಿ ಹೇಳುವುದರಲ್ಲಿ ತತ್ವಶಾಸ್ತ್ರಕಾರರು ವಿಭಿನ್ನ ದನಿಗಳನ್ನೆತ್ತುತ್ತಾರೆ. ಆಗ ತತ್ವಶಾಸ್ತ್ರ, ಭೌತವಾದ, ಭಾವನಾವಾದ, ಪ್ರತ್ಯೇಕ್ಷ ಮುಂತಾದ ಪ್ರಮಾಣಗಳು, ಅಸ್ತಿತ್ವ ಅಥವಾ ಅದರ ಅಭಾವ, ಆತ್ಮನ್, ಬ್ರಹ್ಮಾನ್, ಪಂಚಭೂತಗಳು, ಸತ್ತ್ವ, ಮಾಯೆ ಹೀಗೆ ಏನೇನೋ ಪರಿಭಾಷೆಗಳು ಉತ್ಪನ್ನವಾಗಿವೆ. ಪ್ರಸ್ತುತ ಗ್ರಂಥದಲ್ಲಿ ಡಾ|| ಕತ್ತಿ ಪದ್ಮಾರಾವ್ ಅದನ್ನೆಲ್ಲಾ ವಿವೇಚಿಸುತ್ತಾ ಮೂಲಭೂತವಾದ ದಾರ್ಶನಿಕ ತತ್ವಗಳನ್ನು ಪರಿಚಯಿಸುತ್ತಾರೆ. ಭಾರತೀಯ ದರ್ಶನದ ಹಲವು ಶಾಖೆಗಳ ನಿಯಮಗಳನ್ನು ಚರ್ಚಿಸುತ್ತಾರೆ.ಡಾ|| ಕತ್ತಿ ಪದ್ಮಾರಾವ್ ಅವರು ಲೋಕಾಯತ ದರ್ಶನದ ಪ್ರಮಾಣ ಸಿದ್ಧಾಂತವನ್ನು ಚರ್ಚಿಸಿದ್ದಾರೆ. ಪ್ರತ್ಯೇಕ್ಷ ಅನುಮಾನ, ಶಬ್ದ, ಉಪಮಾನ, ಅರ್ಥಾಪತ್ತಿ, ಮುಂತಾದುವನ್ನು ಪ್ರಮಾಣಗಳೆಂದು ಹೆಸರಿಲಾಗುತ್ತದೆ. ಲೋಕಾಯತ ದರ್ಶನವು ಪ್ರತ್ಯೇಕ್ಷವನ್ನುಳಿದು ಬೇರಾವ ಪ್ರಮಾಣವನ್ನು ಒಪ್ಪುವುದಿಲ್ಲವೆಂಬ ಪ್ರತೀತಿಯೊಂದಿದೆ. ಅದನ್ನು ಪ್ರಾಚೀನ ಗ್ರಂಥಗಳಲ್ಲಿ ಸದಾ ನಮೂದಿಸಲಾಗುತ್ತದೆ. ಸಮಕಾಲೀನ ತತ್ವಶಾಸ್ತ್ರ ಇತಿಹಾಸಕಾರರನೇಕರು ಅದನ್ನೇ ಪುನರುಚ್ಛಸಿರುತ್ತಾರೆ. ಪ್ರತ್ಯೇಕ್ಷವೂ ಎಲ್ಲರಿಗೂ ಗೊತ್ತು ; ಕಣ್ಣು, ಕಿವಿ, ಮೂಗು, ಮೆದುಳು, ಚರ್ಮ ಇವುಗಳಿಂದ ನಾವು ಜ್ಞಾನ ಪಡೆಯುತ್ತೇವೆ. ತಪ್ಪಾಗಿ ತಿಳಿಯದಿದ್ದರೆ ಪ್ರತ್ಯೇಕ್ಷ ಪ್ರಮಾಣವು ಸರಿಯಾದ ತಿಳಿವನ್ನು ನೀಡುತ್ತದೆ. ಸರಿಯಾದ ತಿಳಿವನ್ನು “ಪ್ರಮಾ” ಎನ್ನುತ್ತೇವೆ. ಅದನ್ನು ಪಡೆಯುವ ಸಾಧನವೇ ‘ಪ್ರಮಾಣ’ ಹಾಗಿದ್ದರೆ ನಾವೇ ಸ್ವತಃ ತಿಳಿಯದಿದ್ದುದು ಯಾವುದೂ ಸರಿಯಾದ ತಿಳಿವು ನೀಡುವುದಿಲ್ಲವೆ? ತರ್ಕದಿಂದ ತಿಳಿಯುವುದನ್ನು “ಅನುಮಾನ” ಪ್ರಮಾಣ ಎನ್ನುತ್ತೇವೆ. ದೂರದಲ್ಲೆಲ್ಲೋ ಹೊಗೆಯಾಡುತ್ತಿರುವುದನ್ನು ಕಂಡರೆ “ಅಲ್ಲಿ ಬೆಂಕಿ ಇದೆ” ಎಂಬ ಜ್ಞಾನವನ್ನು ಅಂಗೀಕರಿಸುತ್ತೇವೆ. ಅದೇ ‘ಅನುಮಾನ ಪ್ರಮಾಣ’. ಲೋಕಾಯುತ ಅಥವಾ ಚಾರ್ವಾಕ ದರ್ಶನವು ಪ್ರತ್ಯೇಕ್ಷ ಪ್ರಮಾಣವನ್ನುಳಿದು ಬೇರಾವ ಪ್ರಮಾಣವನ್ನೂ ಅಂಗೀಕರಿಸುವುದಿಲ್ಲವೆಂದು ತಿಳಿದುಕೊಡುವ ನಮ್ಮೇಲ್ಲಾ ಪ್ರಾಚೀನ ಗ್ರಂಥಗಳಲ್ಲೂ ಹೇಳಲಾಗಿದೆ. ಅದನ್ನೇ ನಮ್ಮ ತತ್ವಶಾಸ್ತ್ರ ಇತಿಹಾಸದ ಗ್ರಂಥಗಳು ಹೇಳುತ್ತಿರುತ್ತವೆ.
ವಿಶೇಷತೆಗಳು
| ISBN | 978-93-81244-94-4 |
| ಭಾಷೆ | ಕನ್ನಡ |
| ಪುಟಗಳು | 224 |
| ಪ್ರಕಟಣೆ ವರ್ಷ | 2021 |
| ಆವೃತ್ತಿ | 2nd |
| ತೂಕ | 450 ಗ್ರಾಂ |
| ಆಯಾಮಗಳು | - |





