ಮುಖ್ಯ ವಿಷಯಕ್ಕೆ ಹೋಗಿ (Skip to main content)
 ಡೆವಿಲ್ ಆನ್ ದ ಕ್ರಾಸ್  (ಕಾದಂಬರಿ)
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್19% ರಿಯಾಯಿತಿ
ಅನುವಾದ

ಡೆವಿಲ್ ಆನ್ ದ ಕ್ರಾಸ್ (ಕಾದಂಬರಿ)

ಲೇಖಕ: ಕನ್ನಡಕ್ಕೆ ಬಂಜಗೆರೆ ಜಯಪ್ರಕಾಶ

₹290₹36019% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಇಂಡಿಯಾದ ದ್ರಾವಿಡ ಲೇಖಕರಂತೆಯೇ ಕಾಣುವ, ಬರೆಯುವ ಗೂಗಿ, ಅಚೀಬೆ, ಶೋಯಿಂಕಾ, ಗೂಗಿಥರದ ಲೇಖಕರನ್ನು ಎಷ್ಟೋ ವಷಗಳಿಂದ ಓದುತ್ತಿರುವ ನನಗೆ ಅವರು ಕನ್ನಡ ಲೇಖಕಿ, ಲೇಖಕರಂತೆಯೇ ಆತ್ಮೀಯರು. ಶೋಯಿಂಕಾಗೆ ಬಂದ ನೊಬೆಲ್ ಪ್ರಶಸ್ತಿ ಚಿನುವ ಅಚೀಬೆಗೆ ಬರದಿದ್ದುದನ್ನು ನೋಡಿ ನೊಬೆಲ್ ಮಾನದಂಡಗಳ ಬಗೆಗೇ ಅನುಮಾನ ಹುಟ್ಟುತ್ತದೆ. ಗೂಗಿಗೂ ನೊಬೆಲ್ ಬರಬೇಕಿತ್ತು ಎನ್ನುವವವರಿದ್ದಾರೆ. ಆದರೆ ಗೂಗಿಯ ಕಾದಂಬರಿಗಳಲ್ಲಿ ಕೊಂಚ ಅತಿಯಾಗಿ ಎದ್ದು ಕಾಣುವ ತಾತ್ವಿಕತೆ ಅವನ ಕಾದಂಬರಿ ಕಲೆಗೆ ಅಲ್ಲಲ್ಲಿ ತೊಡಕಾಯಿತು ಎನ್ನಿಸುತ್ತದೆ. ಅದೇನೇ ಇರಲಿ, ಈಚಿನ ದಶಕಗಳಲ್ಲಿ ಇಂಗ್ಲಿಷ್ ಲಿಪಿ ಬಳಸಿ ಗಿಕುಯು ಭಾಷೆಯಲ್ಲಿ ಬರೆದರೂ, ತನ್ನ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿ ಲೋಕದ ತುಂಬ ಹಬ್ಬಿದ ಗೂಗಿ ವಾ ಥಿಯಾಂಗೋರ ಬದುಕು-ಬರಹಗಳು ಚಿಂತನೆಗಳು ಇವತ್ತಿಗೂ ಬರವಣಿಗೆಗಳಲ್ಲಿ ತೊಡಗುವವರಿಗೆ ಹಲವು ಪಾಠಗಳನ್ನು ಕಲಿಸಬಲ್ಲವು. ಗೆಳೆಯ ಬಂಜಗೆರೆ ಜಯಪ್ರಕಾಶ್ ಮಾಡಿರುವ ಗೂಗಿಯ ಕನ್ನಡೀಕರಣ ಆಫ್ರಿಕನ್ ಸಾಹಿತ್ಯದ ಜೊತೆಗಿನ ಕನ್ನಡದ ನಂಟನ್ನು ಇನ್ನಷ್ಟು ಗಾಢವಾಗಿಸುವ ಹಾದಿಗಳನ್ನು ತೆರೆಯಬಲ್ಲದು.

ವಿಶೇಷತೆಗಳು

ISBN978-81-972194-5-0
ಭಾಷೆಕನ್ನಡ
ಪುಟಗಳು308
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ475 ಗ್ರಾಂ
ಆಯಾಮಗಳುBook Size : 1/4 Crown(23x15.5) (International Standard Book Size)