ಮುಖ್ಯ ವಿಷಯಕ್ಕೆ ಹೋಗಿ (Skip to main content)
ಎಲ್ಲೆಗಳ ಮೀರಿ (ಪಾಶ್ಚಾತ್ಯ ಲೇಖಕಿಯರ ಆಶಯ ಚಿಂತನೆ ಮತ್ತು ಗ್ರಹಿಕೆ)
ಹೊಸ ಬಿಡುಗಡೆ16% ರಿಯಾಯಿತಿ
ಅನುವಾದ

ಎಲ್ಲೆಗಳ ಮೀರಿ (ಪಾಶ್ಚಾತ್ಯ ಲೇಖಕಿಯರ ಆಶಯ ಚಿಂತನೆ ಮತ್ತು ಗ್ರಹಿಕೆ)

ಲೇಖಕ: ಶ್ರೀದೇವಿ ಕೆರೆಮನೆ

₹190₹22516% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಶ್ರೀದೇವಿಯವರ ಮೂಲಕ ಈ ಕೃತಿಯಲ್ಲಿ ಕನ್ನಡದ ಓದಿಗೆ ಪರಿಚಯವಾಗುತ್ತಿರುವ ಪಶ್ಚಿಮದ ಬರಹಗಾರ್ತಿಯರ ವ್ಯಕ್ತಿತ್ವ ಮತ್ತು ಹೋರಾಟದ ವಿವರಗಳು ನಿಜಕ್ಕೂ ಅನನ್ಯ. ಒಬ್ಬೊಬ್ಬ ಲೇಖಕಿಯ ಬದುಕಿನ ಕಥನವೂ ಅತ್ಯಂತ ಕುತೂಹಲಕಾರಿಯಾಗಿ ಓದಿಸಿಕೊಳ್ಳುತ್ತದೆ. ಇಲ್ಲಿನ ಅನೇಕ ಬರಹಗಾರ್ತಿಯರಿಗೆ ಬರೆಯುವುದೇ ಬಹುದೊಡ್ಡ ಹೋರಾಟ. ಈ ಬರೆಯುವ ಯುದ್ದದಲ್ಲಿ ಎದುರಾಳಿಯ ವಿರುದ್ದ ಸೆಡ್ಡು ಹೊಡೆಯುವ ಈ ಬರಹಗಾರ್ತಿಯರು ಬರಹಗಳಲ್ಲಿ ತೋರುವ ಛಲ, ದಿಟ್ಟತನ, ಅದಮ್ಯ ಉತ್ಸಾಹಗಳು ಕನ್ನಡದ ಉದಯೋನ್ಮುಖ ಬರಹಗಾರ್ತಿಯರಿಗೆ ಬಹಳ ದೊಡ್ಡ ಪ್ರೇರಣೆಯಾಗಬಲ್ಲದು ಎನ್ನುವುದು ನನ್ನ ಆಶಯ. ಪಶ್ಚಿಮದ ಬರಹಗಾರ್ತಿಯರ ಬದುಕನ್ನು ಕಟ್ಟಿಕೊಟ್ಟಿರುವ ಶ್ರೀದೇವಿಯವರ ವಿಶಿಷ್ಟತೆಯಿರುವುದು ಅವರ ಬೌದ್ಧಿಕ ಕುಸುರಿ ಕೆಲಸದಲ್ಲಿ. ಒಬ್ಬೊಬ್ಬ ಬರಹಗಾರ್ತಿಯನ್ನೂ ಕನ್ನಡದ ಓದಿಗೆ ನಿಲುಕಿಸಿ ಕೊಡುವುದಷ್ಟೇ ಅಲ್ಲ, ಆಕೆಯ ಬರಹಗಳಲ್ಲಿ ಅಡಗಿರುವ ಆಶಯ ಮತ್ತು ಆಲೋಚನೆಗಳ ನಾಡಿಮಿಡಿತ ಹಿಡಿಯುವುದರಲ್ಲಿಯೂ ಇದೆ. ಬರಹಗಾರ್ತಿಯರ ಬದುಕಿನ ವಿವರಗಳನ್ನು ಯಾಂತ್ರಿಕವಾದ ಮಾಹಿತಿ ಸಂಗ್ರಹದ ರೂಪದಲ್ಲಿ ಈ ಕೃತಿ ಮಂಡಿಸುವುದಿಲ್ಲ. ಅವರ ಹೋರಾಟದ ಬದುಕು, ಕನಸು, ಕಲ್ಪನೆ, ಆಶಯ, ಆಲೋಚನೆಗಳನ್ನೆಲ್ಲ ಬೆಸೆದು ಕಥನವಾಗಿಸಿದ್ದಾರೆ. ಇದರಲ್ಲಿ ಶ್ರೀದೇವಿ ಯಶಸ್ವಿಯಾಗಿಸಿದ್ದಾರೆ. ಈ ಕೃತಿಯ ಮೂಲಕ ಕನ್ನಡಕ್ಕೆ ಪರಿಚಿತವಾಗುತ್ತಿರುವ ಪಶ್ಚಿಮದ ಒಟ್ಟು ಮೂವತ್ತು ಬರಹಗಾರ್ತಿಯರನ್ನು ಅವರ ಬರಹಗಳ ಆಲೋಚನಾ ವಿನ್ಯಾಸಗಳ ಆಧಾರದಲ್ಲಿ ನಾನು ಗುರುತಿಸಬಯಸುವೆ. ಅವುಗಳಲ್ಲಿ ನನಗೆ ಪ್ರಮುಖವಾಗಿ ಕಾಣುವುದು ಈ ಬರಹಗಾರ್ತಿಯರ ಸ್ವಾತಂತ್ರ್ಯಕ್ಕಾಗಿನ ಅದಮ್ಯ ಹಂಬಲ, ಅವರು ಅರ್ಥಪೂರ್ಣವಾಗಿ ಬದುಕುವುದಕ್ಕಾಗಿ ತೋರುವ ತಹತಹ, ಬರೆಯುವುದರ ಮೂಲಕವೇ ಎಲ್ಲಾ ಬಂಧನಗಳಿಂದ ಬಿಡುಗಡೆಯಾಗ ಬೇಕೆಂದುಕೊಳ್ಳುವ ತೀರದ ಬಯಕೆ, ಗುರುತಿಗಾಗಿ ಮಾಡುವ ರಾಜಕಾರಣ, ಸ್ಥಾಪಿತ ಯಜಮಾನಿಕೆಯ ಶಕ್ತಿ ಕೇಂದ್ರಗಳಿಗೆ ಮುಖಾಮುಖಿಯಾಗಿ ಸ್ಪೋಟಿಸುವ ಛಲ, ಇತ್ಯಾದಿ. ಈ ಎಲ್ಲಾ ಆಲೋಚನೆಗಳು ಹೆಣ್ಣಿನ ಅಸ್ಥಿತ್ವ, ಗುರುತು, ಪ್ರಜ್ಞೆ, ಪ್ರಾತಿನಿಧ್ಯ ಮತ್ತು ಸಾಮಾಜಿಕ ಘನತೆಗಳನ್ನು ಕಟ್ಟಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸರಳವಾಗಿ ಹೇಳುವುದಾದರೆ ಹೆಣ್ಣು ಮಾತಾಡುವುದರ ಹಿಂದೆ ಅಸ್ಥಿತ್ವ, ಗುರುತು, ಪ್ರಜ್ಞೆ, ಪ್ರಾತಿನಿಧ್ಯ ಮತ್ತು ಸಾಮಾಜಿಕಘನತೆಗಳ ಪ್ರಶ್ನೆಗಳಿರುತ್ತವೆ. ಆದ್ದರಿಂದಲೇ ಆಕೆ ಮಾತಾಡಬೇಕಿದೆ. ಹೆಣ್ಣು ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವುದಕ್ಕಾಗಲಿ ಅಥವಾ ಗಂಡಸರು ಹೆಣ್ಣಿನ ವ್ಯಕ್ತಿತ್ವವನ್ನು ಕುರಿತು ಗ್ರಹಿಸುವುದಕ್ಕಾಗಲಿ ಮುಂದಾದರೆ, ಆಗ ಪರಿಗಣನೆಗೆ ತೆಗೆದುಕೊಳ್ಳಬೇಕಾದ ನೆಲೆಗಳೆಂದರೆ ಆಕೆಯ ಭೌತಿಕ ಅಸ್ಥಿತ್ವಕ್ಕೆ ಬೇಕಾದ ಅವಕಾಶಗಳು, ಆಕೆ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲುಬೇಕಾದ ನಡೆಸಬೇಕಿರುವ ಗುರುತಿನ ರಾಜಕಾರಣ, ಆಕೆಗಿರಬೇಕಾದ ರಾಜಕೀಯ ಪ್ರಜ್ಞೆ ಮತ್ತು ಆಕೆ ಸಾರ್ವಜನಿಕ ಬದುಕಿನಲ್ಲಿ ಪಡೆಯಬೇಕಾದ ಪ್ರಾತಿನಿಧ್ಯ ಮತ್ತು ಇಡೀ ಸಮಾಜ ಅವಳನ್ನು ಸಾಮಾಜಿಕ ಘನತೆಯಿಂದ ನಡೆಸಿಕೊಳ್ಳಬೇಕಾದ ರೀತಿ. ಇವೆಲ್ಲವೂ ಯಾವುದೇ ಒಂದು ಸಮುದಾಯದ ಆಲೋಚನೆ ಮತ್ತು ಕ್ರಿಯಾವರ್ತುಲದ ಪರಿಣಾಮಕಾರಿ ಭಾಗವಾದಾಗ ಮಾತ್ರ ಆಕೆಯ ನಿಜವಾದ ಬಿಡುಗಡೆ ಸಾಧ್ಯ. ಇದನ್ನೇ ಭಾರತದ ಸ್ತ್ರೀವಾದದ ಅಧಿಕೃತ ಉದ್ಘಾಟಕರಾದ ಬಾಬಾಸಾಹೇಬ್ ಅಂಬೇಡ್ಕರರು ಕನಸಾಗಿ ಕಂಡಿದ್ದು. ಬಾಬಾ ಸಾಹೇಬರು ಹೇಳುತ್ತಾರೆ: “ನಾನು ಯಾವುದೇ ಸಮುದಾಯದ ಅಭಿವೃದ್ಧಿಯನ್ನು ಅಳೆಯುವಲ್ಲಿ ನಾನು ಆ ಸಮುದಾಯದ ಮಹಿಳೆಯರು ಸಾಧಿಸಿದ ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಳ್ಳುತ್ತೇನೆ.” ಖಂಡಿತವಾಗಿ ಇದು ಇಂಡಿಯಾದ ಸ್ತ್ರೀವಾದದ ವಿಶಿಷ್ಟತೆಗೆ ಬಾಬಾ ಸಾಹೇಬರು ಹಾಕಿಕೊಟ್ಟ ಅಡಿಗಲ್ಲು.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು196
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ450 ಗ್ರಾಂ
ಆಯಾಮಗಳು-