ಮುಖ್ಯ ವಿಷಯಕ್ಕೆ ಹೋಗಿ (Skip to main content)
ಒಲವು ತುಂಬಿದ ದಾರಿ - ಪ್ರೇಮ ಕಾದಂಬರಿಗಳ  ಮರುಕಥನ
ಹೊಸ ಬಿಡುಗಡೆ14% ರಿಯಾಯಿತಿ
ಅನುವಾದ

ಒಲವು ತುಂಬಿದ ದಾರಿ - ಪ್ರೇಮ ಕಾದಂಬರಿಗಳ ಮರುಕಥನ

ಲೇಖಕ: ಕೇಶವ ಮಳಗಿ

₹240₹28014% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಇಲ್ಲಿ ಆಯ್ದುಕೊಂಡಿರುವ ನಾಲ್ಕು ಯುರೋಪಿಯನ್ ಅಭಿಜಾತ ಕೃತಿಗಳ ಕಾಲದೇಶಗಳು ಬೇರೆಬೇರೆ. ಈ ಕೃತಿಗಳನ್ನು ಅಮರಪ್ರೇಮ ಸೂಸುವ ಕಾದಂಬರಿಗಳೆಂದು ಗುರುತಿಸುವುದು ವಾಡಿಕೆ. ಇವನ್ನು ಆಯಲು ಈ ನಾಲ್ಕು ಕೃತಿಗಳು ನನಗೆ ಪ್ರಿಯವಾದುವು ಎಂಬುದೇ ಕಾರಣ. ಒಂದೊಂದು ಕೃತಿಯೂ ತನ್ನದೇ ವಿಶಿಷ್ಟತೆಯನ್ನು ಹೊಂದಿದೆ. ಈ ಕಾದಂಬರಿಗಳ ಕಾವ್ಯಶಕ್ತಿ, ಪ್ರತಿಮಾಲೋಕ ಬೇರೊಂದು ಜಗದ ಅನುಭವವನ್ನು ನೀಡುವಂಥವು. ಇಲ್ಲಿನ ಸನ್ನಿವೇಶಗಳು, ಪಾತ್ರಗಳ ನಡವಳಿಕೆ ಒಮ್ಮೆ ಮನಸ್ಸನ್ನು ಆರ್ದ್ರಗೊಳಿಸುವಂತೆಯೇ ಇನ್ನೊಮ್ಮೆ ಎದೆಯಾಳವನು ಬಗೆದು ಜೀವವನು ಹಿಂಡಬಲ್ಲವು. ಇವುಗಳನ್ನೋದಿ ಮುಗಿಸಿದಾಗ ಉಳಿಯುವ ಗುಂಗು, ದಿನರಾತ್ರಿ, ತಿಂಗಳು, ವರ್ಷಗಳಲ್ಲ, ದಶಕಗಳು ಕಾಡಬಲ್ಲವು. ೩ ಆಯಾ ಕಾದಂಬರಿಯ ಮೊದಲು ಪ್ರತ್ಯೇಕ ಟಿಪ್ಪಣಿ ಆ ವಿಷಯವನ್ನು ಸಂಕ್ಷಿಪ್ತವಾಗಿ ಅರುಹಿದೆ. ಇಲ್ಲಿ ಹೇಳಬೇಕಿರುವುದು ಇದೊಂದು ಯಥಾವತ್ ಅನುವಾದವಲ್ಲವೆಂಬುದನ್ನು ಮಾತ್ರ. ಪ್ರತಿ ಮೂಲ ಕೃತಿಯೂ ನೂರಾರು ಪುಟಗಳಿದ್ದು, ಅತ್ಯಂತ ಸಂಕೀರ್ಣವಾದುದಾಗಿದೆ. ನಾನಿಲ್ಲಿ ಮಾಡಿರುವುದು ಮೂಲಕೃತಿಗೆ ಧಕ್ಕೆಯೊದಿಗಿಸದೆ, ಕಥೆಯ ಎಲ್ಲ ಮುಖ್ಯ ಅಂಶಗಳನ್ನು ಉಳಿಸಿಕೊಂಡು ಕನ್ನಡದಲ್ಲಿ ಮತ್ತೊಮ್ಮೆ ಕಥನಕ್ಕಿಳಿಸಿರುವುದು. ಇದು ಮೂಲ ಕಾದಂಬರಿಯನ್ನು ಓದಿದಾಗ ಕೊಡುವ ಕಾಣ್ಕೆ ಮತ್ತು ತೃಪ್ತಿಗಳನ್ನು ನೀಡಲಾರದೆಂದು ಬಲ್ಲೆ. ಇದರ ಉದ್ದೇಶವೂ ಅದಲ್ಲ. ಆದರೆ, ಈ ಕಾದಂಬರಿಗಳು ಮೂಲದಲ್ಲಿ ಅತ್ಯಂತ ಕ್ಲಿಷ್ಟಕರ ನಿರೂಪಣೆ, ಭಾಷೆ, ನೂರೆಂಟು ಪಾತ್ರಗಳು ಇತ್ಯಾದಿಗಳನ್ನು ಹೊಂದಿರುತ್ತ, ಇಂಗ್ಲಿಶಿನಲ್ಲಿ ಪರಿಣತಿಯಿಲ್ಲದವರಿಗೆ ನಿಲುಕಲಾರದಂತಿವೆ. ಮೂಲ ಓದದಿದ್ದರೂ ಚಿಂತೆಯಿಲ್ಲ, ಅದರ ಸೊಗಡನ್ನಾದರೂ ತಿಳಿದುಕೊಂಡೆವಲ್ಲ ಎನ್ನುವ ತರುಣರಿಗೆ, ಸಾಹಿತ್ಯ ಆಸಕ್ತರಿಗೆ ಈ ಕೃತಿಯನ್ನು ಸಿದ್ಧಪಡಿಸಿದ್ದೇನೆ. ಈ ಕೃತಿ ಹೇಗಿರಬೇಕಾಗಿತ್ತೆಂದು ಹೇಳಬಲ್ಲ ಪಂಡಿತರು ಈ ಪುಸ್ತಕವನ್ನು ಮುಟ್ಟದಿರುವುದೇ ಒಳ್ಳೆಯದು. ಒಂದು ರೂಪಕದ ಮೂಲಕ ಈ ಪುಸ್ತಕದ ಓದನ್ನು ಹೇಳಬಹುದಾದರೆ, ಊರಿನ ಬೃಹತ್ ತೇರಿನ ಹಗ್ಗವನ್ನು ಪ್ರತಿಯೊಬ್ಬರೂ ಎಳೆಯಬಯಸುವವರೆ. ವಾಸ್ತವದಲ್ಲಿ ಅದು ಅಸಾಧ್ಯವೆಂದು ಬಯಸುವವರಿಗೆ ಗೊತ್ತು. ಹಾಗಾಗಿ, ನಾವು ಬಹುದೂರದಲ್ಲಿದ್ದರೂ ತೇರಿನ ಕಳಸ ಗೋಚರಿಸಿದ್ದೇ ಹೂವುಹಣ್ಣು ಎಸೆದು ತೃಪ್ತಿಪಡುತ್ತೇವೆ. ಆಗಿನ ಭಾವಕ್ಕೆ ಧನ್ಯತೆಯ ಲೇಪವಿರುತ್ತದೆ. ಈ ಪುಸ್ತಕ ಓದಿದಾಗಲೂ ಅಂಥ ಅನುಭವ ದಕ್ಕಿದರೆ, ಶ್ರಮ ವಹಿಸಿದವನು ಸಾರ್ಥಕ್ಯ ಪಡೆದಂತೆಯೇ ಎಂದು ಊಹಿಸಿ ರಚಿಸಿರುವಂಥದ್ದು. ನಾವೇ ತೇರಿನ ಹಗ್ಗ ಎಳೆಯದಿದ್ದರೇನಾಯಿತು? ಜನರ ಗೌಜುಗದ್ದಲ, ನೂರೆಂಟು ಬಗೆಯ ದನಿಗಳು, ಗಲಗಲ, ಬೆವರಿನ ವಾಸನೆಯನ್ನಂತೂ ಪಡೆಯುತ್ತ ಮುಡಿಪನ್ನು ಎಸೆದೆವಲ್ಲ ಅಷ್ಟು ಸಾಕು, ಎನ್ನುವವರು ಇಲ್ಲಿ ಅರ್ಥವನ್ನು ಕಂಡುಕೊಳ್ಳಬಲ್ಲರು.

ವಿಶೇಷತೆಗಳು

ISBN 978-93-81244-77-7
ಭಾಷೆಕನ್ನಡ
ಪುಟಗಳು240
ಪ್ರಕಟಣೆ ವರ್ಷ2019
ಆವೃತ್ತಿ3rd Edition
ತೂಕ400 ಗ್ರಾಂ
ಆಯಾಮಗಳು-