ಅನುವಾದ
ಕರುಣಾಳು, ಬಾ ಬೆಳಕೆ !
ಲೇಖಕ: ಡಾ|| ಅನಸೂಯಾದೇವಿ
₹190₹22014% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಮಗುವನ್ನು ಉಳಿಸಿಕೊಳ್ಳುವ ಹಂಬಲದ ಹೋರಾಟ
ವೈದ್ಯಕೀಯ ಜಗತ್ತಿನೊಳಗಿನ ಅಮಾನುಷ ಪ್ರವೃತ್ತಿಗಳ ವಿರುದ್ಧ, ಜೀವ ವಿರೋಧಿ
ಔದ್ಯೋಗೀಕರಣದ ವಿರುದ್ಧ, ಪ್ರತಿ ಕ್ಷಣದಲ್ಲೂ ಹೊಂಚು ಹಾಕಿ ಕೂತಿರುವ ಸಾವಿನ ವಿರುದ್ಧ
ಹೋರಾಟಕ್ಕೆ ತೊಡಗಿರುವ ವೈದ್ಯಕೀಯ ಸಂಶೋಧಕನೊಬ್ಬನ ಸಂಘರ್ಷ. ಸಂಕಟ,
ಸಂವೇದನೆಗಳ ಕಥನ ಇದು.
ತಂದೆಯ ವಾತ್ಸಲ್ಯ, ವೈದ್ಯನ ಕುಶಲತೆ, ವಿವೇಕಿ ನಾಗರಿಕನ ನೈತಿಕತೆಗಳ ವಿಭಿನ್ನ
ಎರಕವಾಗಿರುವ ಈ ವೈದ್ಯ ವಿಜ್ಞಾನಿ ಹೋರಾಟಗಾರನ ತಲ್ಲಣಗಳೆಲ್ಲ ನಮ್ಮ ಇಂದಿನ
ಕಾಲದಲ್ಲಿನ ಪರಿಸ್ಥಿತಿಗಳ ತಲ್ಲಣವೇ ಆಗಿವೆ. ಔದ್ಯೋಗೀಕರಣದ ವಿಷದಿಂದಾಗಿ, ವೈದ್ಯಕೀಯ
ಲೋಕದ ಹೊಣೆಗೇಡಿತನದಿಂದಾಗಿ ಸಾವಿನ ಸುರಂಗದೊಳಗೆ ಸರಿದು ಹೋಗುತ್ತಿರುವ
ಹೊಟ್ಟೆಯ ಮಗಳನ್ನು ಎಳೆದು ಮರಳಿ ಬಾಳಿನ ಬೆಳಕಿಗೆ ತರಲು ಇಲ್ಲಿ ಡಾ. ಆದಿತ್ಯ
ನಡೆಸುವ ಹೋರಾಟ, ಮುಗ್ದ ಶುದ್ಧ ಮಾನವೀಯತೆಯನ್ನು ಉಳಿಸಿಕೊಳ್ಳುವುದಕ್ಕಗಿ ಈ
ಧರೆಯ ಪ ತಿಪ ಜೆಯೂ ಇಂದು ಕೈಗೊಳ್ಳಬೇಕಾದ ಕೈಂಕರ್ಯವಾಗಿದೆ.
ಕನ್ನಡದಲ್ಲಿ ಮೆಡಿಕಲ್ ಥ್ರಿಲ್ಲರ್ ಗಳು ಇಲ್ಲವೇ ಇಲ್ಲವೇನೋ ಎಂಬಷ್ಟು ಅಪರೂಪ.
ಕೇವಲ ವೈಜ್ಞಾನಿಕ ವಿವರ ಇಟ್ಟುಕೊಂಡು ಊಹೆಗಳಲ್ಲಿ ಕಥೆ ಹೆಣೆಯುವ ಯತ್ನಗಳೇ ಜಾಸ್ತಿ.
ಆದರೆ ವೈದ್ಯಕೀಯ ಜಗತ್ತಿನ ವಾಸ್ತವಿಕ ವಿದ್ಯಮಾನಗಳನ್ನು ಒಳಗಿನವನಾಗಿ ಅರಿತು
ಅವುಗಳ ನಿತ್ಯವಿವರಗಳ ಮೂಲಕ ಸಮಕಾಲೀನ ಸಮಸ್ಯೆಗಳ ಶೋಧಕ್ಕೆ ತೊಡಗುವ
ಕೃತಿಗಳಿಲ್ಲ. ಇಂಥದ್ದರಲ್ಲಿ, ಕೋಮಾ ಕೃತಿಯ ಖ್ಯಾತಿವೆತ್ತ ‘ರಾಬಿನ್‌ಕುಕ್ ಅವರ ಫೀವರ್
ಕೃತಿಯನ್ನು, ಅದರ ಉಸಿರು ಬಿಗಿಹಿಡಿದು ಓದಿಸಿಕೊಳ್ಳುವ ಗುಣದ ಸಮೇತವಾಗಿ ಕನ್ನಡಕ್ಕೆ
ತಂದಿರುವ ಡಾ.ಅನಸೂಯಾದೇವಿ ಅವರ ಸದಭಿರುಚಿಯ ಸಾಹಸಕ್ಕೆ ಅಭಿನಂದನೆಗಳು.
ವೈದ್ಯಕೀಯ
ಪಾರಿಭಾಷಿಕ
ಪದಗಳನ್ನು
ಅಲ್ಲಲ್ಲಿ
ಪರಿಣಾಮಕಾರಿಯಾಗಿ
ಹಾಗೇ
ಉಳಿಸಿಕೊಂಡು, ಅತ್ಯಂತ ಸರಳವಾಗಿ ಮನಮುಟ್ಟುವಂತೆ ಅವರು ಕಾದಂಬರಿಯ ತವಕ,
ತಲ್ಲಣಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಗುವನ್ನು ಉಳಿಸಿಕೊಳ್ಳುವ ಹಂಬಲದ ಹೋರಾಟದ
vii
ಈ ಕಥನದುದ್ದಕ್ಕೂ ಡಾ.ಅನಸೂಯಾದೇವಿ ಅವರ ತಾಯಿ ಹೃದಯದ ತೀವ್ರ
ಕಂಪನಗಳನ್ನೇ ಆಲಿಸಬಹುದಾಗಿದೆ ! ಬಹುಶಃ ಅದರಿಂದಾಗಿಯೇ ಈ ಕೃತಿಗೆ ಒಂದು
ಸಹಜವಾದ ಹೊಸಹುಟ್ಟು ಕನ್ನಡದಲ್ಲಿ ಲಭಿಸಿದೆ.
ಜಯಂತಕಾಯ್ಕಿಣ
ವಿಶೇಷತೆಗಳು
| ISBN | 978-93-81244-52-48- |
| ಭಾಷೆ | ಕನ್ನಡ |
| ಪುಟಗಳು | 194 |
| ಪ್ರಕಟಣೆ ವರ್ಷ | 2006 |
| ಆವೃತ್ತಿ | 5th EDITION |
| ತೂಕ | 380 ಗ್ರಾಂ |
| ಆಯಾಮಗಳು | - |





