ಅನುವಾದ
ಗಾನ್ ವಿತ್ ದ ವಿಂಡ್
ಲೇಖಕ: ಕನ್ನಡಕ್ಕೆ ಶ್ಯಾಮಲಾ ಮಾಧವ
₹650₹72010% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
೧೯೩೬ರಲ್ಲಿ ಮೊದಲು ಪ್ರಕಟವಾಗಿ ಈತನಕ ಸುಮಾರು ಮೂರು ಕೋಟಿ ಪ್ರತಿಗಳು ವಿತರಣೆಗೊಂಡಿರುವ, ೧೯೩೯ರಲ್ಲಿ ಚಲನಚಿತ್ರವಾಗಿ ಒಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿದ, ಮಾರ್ಗರೇಟ್ ಮಿಶೆಲ್‌ಳ “ಗಾನ್ ವಿತ್ ದ ವಿಂಡ್” ಕಾದಂಬರಿಯನ್ನು ಯಾವ ಮುಲಾಜೂ ಇಲ್ಲದೆ ಒಂದು ಜನಪ್ರಿಯ ಶ್ರೇಷ್ಠ ಕಾದಂಬರಿಯೆನ್ನಬಹುದು, ಈ ಒಂದೇ ಒಂದು ಕಾದಂಬರಿಯ ಮೂಲಕ ಮಿಶೆಲ್ ವಿಶ್ವವಿಖ್ಯಾತಳಾದಳು. ಪ್ರಕಟವಾದ ಕೇವಲ ಹದಿಮೂರು ವರ್ಷಗಳಲ್ಲಿ “ಗಾನ್ ವಿತ್ ದ ವಿಂಡ್” ನ ೮೦ ಲಕ್ಷ ಪ್ರತಿಗಳು ಮಾರಾಟವಾದುವು. ಇಪ್ಪತ್ತೊಂಬತ್ತು ದೇಶಗಳಲ್ಲಿ ಮತ್ತು ಇಪ್ಪತ್ತಾರು ಭಾಷೆಗಳಲ್ಲಿ ಪ್ರಕಟವಾದ, ಪುಲಿಟ್ಸರ್ ಪ್ರಶಸ್ತಿ ವಿಜೇತ “ಗಾನ್ ವಿತ್ ದ ವಿಂಡ್”ನ ಕೃತಿಯ ಗಾತ್ರ ಮತ್ತು ವಸ್ತುವನ್ನು ಗಮನಕ್ಕೆ ತೆಗೆದುಕೊಂಡಾಗಲೂ ಇದು ಇಪ್ಪತ್ತನೆಯ ಶತಮಾನದ ಒಂದು ಮಹತ್ವದ ಕಾದಂಬರಿಯೆಂದು ಹೇಳಬಹುದು.
ಇಂಥ ಕೃತಿಗಳು ಅನುವಾದಗೊಂಡು ಇತರ ಭಾಷೆಗಳಲ್ಲಿ ಲಭ್ಯವಾಗಬೇಕಾದ್ದು ಒಂದು ಸಾಹಿತ್ಯಕ ಅಗತ್ಯ, ಕನ್ನಡಿಗರಿಗೆ, ಅದರಲ್ಲಿಯೂ ಸಾಹಿತ್ಯಾಸಕ್ತರಿಗೆ ಇಂಥ ಕೃತಿಯನ್ನು ಓದುವ ಆಸಕ್ತಿ ಇದೆ; ಓದುವ ತಾಳ್ಮೆಯೂ ಇದೆ ಎಂಬ ನಂಬಿಕೆಯಿಂದ, ಮೊದಲು ಕೃತಿಯ ಪ್ರೇಮಪಾಶಕ್ಕೆ ಸಿಲುಕಿದ ಶ್ಯಾಮಲಾ ಮಾಧವ ಇದು ಕನ್ನಡಿಗರು ಓದಲೇಬೇಕಾದ ಒಂದು ಮುಖ್ಯ ಕೃತಿ ಎಂದು ಅಷ್ಟೇ ಆಸಕ್ತಿಯಿಂದ ಮತ್ತು ತಾಳ್ಮೆಯಿಂದ ಸುಂದರವಾಗಿ ಕನ್ನಡಕ್ಕಿಳಿಸಿದ್ದಾರೆ. ಇಂಥ ವಿಶ್ವಸಾಹಿತ್ಯದ ಕಂಪು ಕನ್ನಡದ ಕಂಪನ್ನು ಅಧಿಕಗೊಳಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 728 |
| ಪ್ರಕಟಣೆ ವರ್ಷ | 2018 |
| ಆವೃತ್ತಿ | 3rd Edition |
| ತೂಕ | 950 ಗ್ರಾಂ |
| ಆಯಾಮಗಳು | - |





