ಮುಖ್ಯ ವಿಷಯಕ್ಕೆ ಹೋಗಿ (Skip to main content)
ಅಲೆಮಾರಿಯೊಬ್ಬನ ಆತ್ಮಕತೆ...!
ಹೊಸ ಬಿಡುಗಡೆ15% ರಿಯಾಯಿತಿ
ಅನುವಾದ

ಅಲೆಮಾರಿಯೊಬ್ಬನ ಆತ್ಮಕತೆ...!

ಲೇಖಕ: ಟಿ.ಡಿ. ರಾಜಣ್ಣ ತಗ್ಗಿ

₹212₹25015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಅಲೆಮಾರಿಯೊಬ್ಬನ ಆತ್ಮಕತೆ...! ಕಾದಂಬರಿಯು ಒಟ್ಟು ನಾಲ್ಕು ಯಾತ್ರೆಗಳ ಅನುಭವ ಕಥಾನಕ... ಆ ನಾಲ್ಕೂ ಯಾತ್ರೆಗಳು ವಿಭಿನ್ನ ಮತ್ತು ವಿಶಿಷ್ಟ ಬಗೆಯವು... ಇದು ಯಾತ್ರೆಯನ್ನು ತಿಳಿಸುವ ಕಥನದಂತಿದ್ದರೂ ಪ್ರವಾಸಕಥನವಲ್ಲ... ಇದು ಉತ್ತಮ ಪುರುಷದಲ್ಲಿ ಸಾಗುವ ಕತೆಯಾದರೂ ಲೇಖಕರ ಆತ್ಮಕತೆಯೂ ಅಲ್ಲ. ಕೇವಲ ಫ್ಯಾಂಟಸಿ ನೆಲೆಯಲ್ಲಿ ಸಾಗುವ ಅದ್ಭುತ ಮತ್ತು ರೋಮಾಂಚನ ಕಥಾನಕ ಮಾತ್ರ... ಜೊತೆಗೆ ಇದು ಮನುಷ್ಯ ಬದುಕಿನ ಶೋಧನೆಯೂ ಹೌದು... ಮಾನವನ ಆತ್ಮಾವಲೋಕನಕ್ಕೆ ತಕ್ಕ ವಸ್ತುವೂ ಹೌದು... ಈ ಕಾದಂಬರಿಯ ನಾಯಕ ಒಬ್ಬ ಅಲೆಮಾರಿ...! ಅವನೊಬ್ಬ ಯಾತ್ರಿಕ...! ಸದಾ ಊರು ತಿರುಗುವುದು ಅವನ ಅಭ್ಯಾಸ... ವೃತ್ತಿಯಿಂದ ಅವನೊಬ್ಬ ವೈದ್ಯ... ಅವನದು ನೌಕೆಯಲ್ಲಿ ಶಸ್ತ್ರವೈದ್ಯನಾಗಿ ಕೆಲಸ... ತನ್ನ ಉದ್ಯೋಗ ರೀತ್ಯಾ ಆತ ನೌಕೆಯಲ್ಲಿ ಸುಮಾರು ಹದಿನಾರು ವರ್ಷಗಳ ಕಾಲ ಅನೇಕ ಯಾತ್ರೆಗಳನ್ನು ಮಾಡಿದ ಅನುಭವವೇ ಈ ಕಾದಂಬರಿಯ ವಸ್ತು... ಆದರೆ ಕಾದಂಬರಿಯಲ್ಲಿ ನಾಯಕನ ಉದ್ದೇಶಿತ ಯಾತ್ರೆಯ ವಿವರಗಳಿಗಿಂತಲೂ ಅನುದ್ದೇಶಿತ ಪ್ರಯಾಣದ ಅನುಭವಗಳೇ ಪ್ರಾಮುಖ್ಯತೆಯನ್ನು ಪಡೆಯುತ್ತವೆ... ಹಾಗಾಗಿ ಯಾತ್ರಿಕನ ನಿರ್ದಿಷ್ಟ ಪ್ರಯಾಣವಾಗಲೀ ಅಥವಾ ನಿಖರ ಗಮ್ಯವಾಗಲೀ ಪ್ರಮುಖವಾಗುವುದಿಲ್ಲ... ಯಾತ್ರಿಕನು ಪ್ರತಿಸಲವೂ ಸಾಗರದಲ್ಲಿ ಅನಿರೀಕ್ಷಿತ ಅವಘಡಗಳಿಗೆ ಸಿಕ್ಕುವುದು, ಪ್ರತಿ ಯಾನದಲ್ಲಿ ಅಪರಿಚಿತವಾದ ಒಂದೊಂದು ದ್ವೀಪಗಳಿಗೆ ಕೊಚ್ಚಿಹೋಗುವುದು, ಅಲ್ಲಿ ಅನೇಕ ಸಮಸ್ಯೆಗಳಿಗೆ ಸಿಕ್ಕಿ ತೊಳಲಾಡುವುದು, ಆ ಸಮಸ್ಯೆಗಳಿಂದ ಪಾರಾಗಲು ಪ್ರಯತ್ನ ಮಾಡುವುದು... ಮುಂತಾದುವು ಪ್ರಮುಖವಾಗುತ್ತವೆ... ಅವೇ ಓದುಗನ ಕುತೂಹಲವನ್ನು ಕೆರಳಿಸುವುವು ಕೂಡ...! ಆ ದ್ವೀಪಗಳ ಪಯಣ ಅಲೆಮಾರಿಯ ಉದ್ದೇಶವಲ್ಲ, ನಿರ್ದಿಷ್ಟ ಗುರಿಯೂ ಅಲ್ಲ... ಅದು ಆಕಸ್ಮಿಕ ಮಾತ್ರ...! ಆದರೆ ನಾಲ್ಕೂ ದ್ವೀಪಗಳು ವಿಶೇಷವಾದ ಅದ್ಭುತ ಜಗತ್ತನ್ನು ತೆರೆದು ತೋರಿಸುವಂಥವು... ಹಾಗಾಗಿ ಆ ದ್ವೀಪಗಳು ಆತನಿಗೆ ವಿಭಿನ್ನ ಅನುಭವ ಮತ್ತು ವಿಚಿತ್ರ ಅನುಭೂತಿಯನ್ನು ತಂದುಕೊಡುತ್ತವೆ.. ಆ ಅನುಭವ ಮತ್ತು ಅನುಭೂತಿಗಳು ಸಾಮಾನ್ಯ ಜನರ ಅನುಭವಗಳಿಗಿಂತ ಹೇಗೆ ಭಿನ್ನ ಎಂಬುದೇ ಈ ಕಾದಂಬರಿಯ ವಿಶೇಷ. ಇವುಗಳಲ್ಲಿ ಮೊದಲನೆಯ ದ್ವೀಪ ಲಿಲ್ಲಿಪುಟ್ ಸಾಮ್ರಾಜ್ಯ...! ಅಲ್ಲಿನ ಮನುಷ್ಯರಿಗೆ ತಕ್ಕಂತೆ ಮನೆ-ಮಠ, ಮರ-ಗಿಡ, ಪ್ರಾಣಿ-ಪಕ್ಷಿ ಎಲ್ಲವೂ ಪುಟ್ಟವೇ...! ಆ ಲಿಲ್ಲಿಪುಟ್‌ಗಳು ಆಕಾರದಲ್ಲಿ ಆರು ಅಂಗುಲಗಳ ವಾಮನರು...! ಅವರಲ್ಲಿ ಪ್ರೀತಿ, ಸತ್ಕಾರ, ಮಮತೆ, ವಾತ್ಸಲ್ಯಗಳಂತಹ ಒಳ್ಳೆಯತನಗಳೂ ಇವೆ...! ಅಂತೆಯೇ ದ್ವೇಷ, ಸ್ವಾರ್ಥ, ಅಸೂಯೆ, ಅಧಿಕಾರ ದಾಹ, ಕುಯುಕ್ತಿ, ಕುತಂತ್ರ ಮತ್ತು ಪ್ರತೀಕಾರದಂತಹ ದುಷ್ಟತನಗಳೂ ಇವೆ...! ಅವು ಕೆಲವೊಮ್ಮೆ ಮನುಷ್ಯರ ದುಷ್ಟತನವನ್ನೂ ಮೀರಿಸುವಂಥವು...! ಅಲ್ಲಿನ ದ್ವೀಪವಾಸಿಗಳು ಮತ್ತು ಅವರ ಸಂಸ್ಕೃತಿಯು ಒಂದು ವಿಚಿತ್ರ ಜಗತ್ತನ್ನು ಪರಿಚಯಿಸಿಕೊಂಡು ಹೋಗುತ್ತದೆ. ಅದೇ ಈ ಕಾದಂಬರಿಯ ಸೊಗಸು...! ಯಾತ್ರಿಕನು ಮೊದಮೊದಲು ಆ ದ್ವೀಪಕ್ಕೆ ಕಾಲಿಟ್ಟಾಗ ಆತನಿಗೆ ಲಿಲ್ಲಿಪುಟ್‌ಗಳು ತೋರಿಸಿದ ಅತಿಥಿ ಸತ್ಕಾರ ಮತ್ತು ಮಾಡಿದ ಘನ ಸನ್ಮಾನಗಳು ಮನಸೋಲುವಂತೆ ಮಾಡುತ್ತವೆ. ಆದರೆ ಕ್ರಮೇಣ ಲಿಲ್ಲಿಪುಟ್‌ಗಳ ಅಸೂಯೆ, ದ್ವೇಷ, ಕುತಂತ್ರ, ಮೋಸ, ಕೃತಘ್ನತೆ ಮುಂತಾದವು ಆತನಲ್ಲಿ ದ್ವೀಪದ ಬಗ್ಗೆ ವಿಮುಖತೆಯನ್ನು ಬೆಳೆಸಿ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ಪರದಾಡುವಂತೆ ಮಾಡುತ್ತವೆ. ಅದೊಂದು ಕರುಣಾಜನಕ ಚಿತ್ರಣ...!

ವಿಶೇಷತೆಗಳು

ISBN948-93-81244-46-378
ಭಾಷೆಕನ್ನಡ
ಪುಟಗಳು212
ಪ್ರಕಟಣೆ ವರ್ಷ2026
ಆವೃತ್ತಿ5th EDITION
ತೂಕ525 ಗ್ರಾಂ
ಆಯಾಮಗಳು-