ಮುಖ್ಯ ವಿಷಯಕ್ಕೆ ಹೋಗಿ (Skip to main content)
ಗಂಟರ್ಸ್ ವಿಂಟರ್
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಅನುವಾದ

ಗಂಟರ್ಸ್ ವಿಂಟರ್

ಲೇಖಕ: ಕೆ. ಶ್ರೀನಾಥ್

₹280₹33015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಈ ಕಾದಂಬರಿಯು ಒಂದು ಕಿಕ್ಕಿರಿದ ಚಾರಿತ್ರಿಕ, ಸಾಸ್ಕೃತಿಕ ಭಾಷಾ ಪ್ರಪಂಚವನ್ನು ತೆರೆದಿಡುತ್ತದೆ. ಸಾಮಾನ್ಯ ಓದುಗನಿಗೆ ಇದೊಂದು ಅಪರಿಚಿತವಾದಂತಹ ಸಂಗತಿ. ಈ ಕಾದಂಬರಿಯ ಲ್ಯಾಟಿನ್ ಅಮೇರಿಕದ, ಯೂರೋಪ್‌ನ ಮತ್ತು ಸ್ಥಳೀಯ ಅಮೇರಿಕನ್ನರ ಸನ್ನಿವೇಶಗಳ ವಿಸೃತವಾದ ಆಗು ಹೋಗುಗಳನ್ನು ಒಳಗೊಂಡಿದೆ. ಸ್ಥಳಗಳ ಹೆಸರುಗಳು, ಚಾರಿತ್ರಿಕವಾದ ಘಟನೆಗಳು, ಇದರ ಪಠ್ಯಗಳಲ್ಲಿ ನಮೂದಿಸಲಾಗಿರುವ ಬರಹಗಾರರುಗಳ ಮತ್ತು ಕಲಾವಿದರುಗಳ ಹೆಸರುಗಳು, ಸಂಭಾಷಣೆಗಳಲ್ಲಿ ಉಪಯೋಗಿಸಿರುವ ದೇಶೀಯ ಪದಗಳಲ್ಲಿ ಇವೆಲ್ಲವೂ ಕಾಣುತ್ತದೆ. ಆದರೂ ಕೂಡ ಹೆಚ್ಚಿನ ಭಾಗದಲ್ಲಿ ಈ ಭಾಷಾಂತರದ ಪುಸ್ತಕದ ಆಕಾರ ಮತ್ತು ಅಂಶಗಳನ್ನು ಸಾಧ್ಯವಾದಷ್ಟು ಮೂಲ ಕೃತಿಗೆ ಅಪಚಾರವೆಸಗದೇ ಇರಲೋಸುಗ ಅದರಲ್ಲಿನ ಭಾವಾರ್ಥಗಳು ಓದುಗನ ಮನಸ್ಸಿಗೆ ನಾಟುವ ರೀತಿಯಲ್ಲಿ ಮೂಡಿ ಬರುವಂತೆ ಪ್ರಯತ್ನ ಪಡಲಾಗಿದೆ. ಕೆಲವು ಸಂದರ್ಭಗಳಲ್ಲಿ, ಅದರಲ್ಲೂ ಮೊದಲನೆಯ ಭಾಗದ ಮೊದಲನೇ ಅಧ್ಯಾಯದಲ್ಲಿ, ಮೂಲ ಸ್ಪ್ಯಾನಿಷ್ ಕೃತಿಯಲ್ಲಿ ಕೆಲವು ಹೇಳಿಕೆಗಳು ಪ್ರಕ್ಷೇಪಣ ಮತ್ತು ಉದ್ಗಾರಗಳನ್ನು ಇಂಗ್ಲೀಷಿನಲ್ಲಿ ಪ್ರಸ್ತುತಪಡಿಸಲಾಗಿದೆಯಂತೆ. ಆದರೆ ಕನ್ನಡದ ಭಾಷಾಂತರದಲ್ಲಿ ಅದನ್ನು ಅನಿವಾರ್ಯ ಕಾರಣಗಳಿಂದ ವಿಧಿಯಿಲ್ಲದೇ ಕನ್ನಡದಲ್ಲೇ ಪ್ರಸ್ತುತಪಡಿಸಲಾಗಿದೆ. ಈ ಕಾದಂಬರಿಯು ಅಂತಿಮವಾಗಿ ಪೆರುಗ್ವೆ ದೇಶದ ಬಗ್ಗೆ ಆಸಕ್ತಿಯನ್ನು ಹುಟ್ಟಿಸುತ್ತದೆ. ಈ ದೇಶದ ಬೆರಗುಗೊಳಿಸುವ ಮತ್ತು ಬೋಧನಾತ್ಮಕವಾದಂತಹ ಚರಿತ್ರೆಯು ಪ್ರಪಂಚದ ಗಮನವನ್ನು ನಿರೀಕ್ಷಿಸಿದಷ್ಟು ಇನ್ನೂ ಸೆಳೆದಿಲ್ಲ. ಮತ್ತು ಅಲ್ಲಿನ ಅನೇಕ ಪ್ರತಿಭಾವಂತ ಬರಹಗಾರರನ್ನು ಆಂತರಿಕ ನಿರ್ಬಂಧಗಳ ಮತ್ತು ಅಂತರರಾಷ್ಟ್ರೀಯ ಉದಾಸೀನತೆಯ ಕಾರಣದಿಂದ ನಿರ್ಲಕ್ಷಿಸಲಾಗಿದೆ. ಈ ಕಾದಂಬರಿಯು ಬಹಳ ಕಾಲದಿಂದ ತಡವಾಗಿದ್ದ ಪ್ರಯಾಣವೊಂದಕ್ಕೆ ನಾಂದಿ ಹಾಡುತ್ತದೆ ಎನ್ನಬಹುದು. ಪೆರುಗ್ವೆ ಎಂಬ ಲ್ಯಾಟಿನ್ ಅಮೇರಿಕನ್ ದೇಶವು ಅನೇಕ ಆಂತರಿಕ ಮತ್ತು ಬಾಹ್ಯ ಹೋರಾಟಗಳಿಗೆ ಸಾಕ್ಷಿಯಾಗಿದ್ದುದರಿಂದ ಈ ಗಂಟರ್ಸ್ ವಿಂಟರ್ ಎಂಬ ಸ್ಪ್ಯಾನಿಶ್ ಕಾದಂಬರಿಯು ಒಂದು ಬಗೆಯ ಶೊಷಿತ ಪೆರುಗ್ವೆಯಂತಹ ಸಣ್ಣ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ವ್ಯಕ್ತಿಗತವಾದ ಮತ್ತು ಸಾಮಾಜಿಕವಾದಂತಹ ಸಮರವನ್ನು ಬಿಂಬಿಸುತ್ತಿದೆ ಎನ್ನಬಹುದು. ಒಬ್ಬ ಪ್ರಖ್ಯಾತ ಲೇಖಕನಾದ ಆಗಸ್ಟೊ ರೊ ಬಾಸ್ಟೊಸ್ ಎಂಬುವನು ಪೆರುಗ್ವೆಯನ್ನು ಭೂಮಿಯಿಂದ ಸುತ್ತುವರಿದಂತಹ ದ್ವೀಪ ಎಂದು ಕರೆದಿದ್ದರಿಂದ ಎಲ್ಲರಿಗೂ ಆ ರೀತಿ ಕರೆಯುವುದು ಅಭ್ಯಾಸವಾಗಿಬಿಟ್ಟಿದೆ. ಆ ಪೆರುಗ್ವೆಯ ಲೇಖಕನು ಬರೆದಿದ್ದ ಈ ಒಂದು ವಾಕ್ಯವು ಪೆರುಗ್ವೆಯ ಬಗ್ಗೆ ಬಹಳಷ್ಟು ಸತ್ಯವನ್ನು ನುಡಿಯುತ್ತದೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು280
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ540 ಗ್ರಾಂ
ಆಯಾಮಗಳು-