ಅನುವಾದ
ಹಾಜಿ ಮುರಾದ್ ಮತ್ತು ಇತರ ಕಥೆಗಳು
ಲೇಖಕ: ರಘುನಾಥ್ ಟಿ.ಎಸ್
₹560₹70020% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಹಾಜಿಮುರಾದ್ ಟಾಲ್‌ಸ್ಟಾಯ್‌ರ ‘ಮಿಲಿಟರಿ ಜೀವನದ ತ್ರಿವಳಿ’ ಬರವಣಿಗೆಗಳಲ್ಲಿ ಕೊನೆಯದು ಮತ್ತು ಹೆಚ್ಚು ಕಲಾತ್ಮಕ ವಾದದ್ದು ಎಂಬುದು ಟಾಲ್ಟಾಯ್ ಚಿಂತಕರ ಅಭಿಪ್ರಾಯ. ಐದು ವರ್ಷಗಳ ಕಾಲ ಟಾಲ್ಸ್ಟಾಯ್ ಸೈನಿಕ ಜೀವನ, ಯುದ್ಧ ಕಾರ್ಯಾಚರಣೆಯ ಅನುಭವಕ್ಕೆ ಹತ್ತಿರವಾಗಿದ್ದವರು, ಕೊಸ್ಸಾಕ್ಸ್ ಮತ್ತು ಸೆವಸ್ತೋಪೋಲ್ ಕತೆಗಳು ಕೃತಿಗಳನ್ನು ೧೮೫೫ರಿಂದ ೧೮೬೫ರ ನಡುವೆ ಅಂದರೆ ಮಹಾಕಾದಂಬರಿಗಳು ಪ್ರಕಟವಾಗುವ ಮುನ್ನ ಪ್ರಕಟಿಸಿದರು. ಹಾಜಿ ಮುರಾದ್ ಅವರ ಸೃಜನ ಶೀಲ ಬರವಣಿಗೆಯ ಕೊನೆಯ ಘಟ್ಟಕ್ಕೆ ಸೇರಿದ್ದು ಪ್ರಕಟವಾದದ್ದು ಅವರು ತೀರಿಕೊಂಡ ನಂತರ (೧೯೧೨ ರಲ್ಲಿ), ಮಹಾಕಾದಂಬರಿಗಳನ್ನು ಪ್ರಕಟಿಸಿದ ಮೇಲೆ ಅವರ ಒಲವಿದ್ದುದು ಶೈಕ್ಷಣಿಕ, ನೀತಿಪರ ಧಾರ್ಮಿಕ ಬರವಣಿಗೆಗಳ ಬಗ್ಗೆ, ಹೀಗಿದ್ದೂ ಹಾಜಿ ಮುರಾದ್ ಬರವಣಿಗೆ ಅವರ ಸೃಜನಶೀಲ ಶ್ರೇಷ್ಠತೆಯ ಸಕಲ ಲಕ್ಷಣಗಳನ್ನು ತೀವ್ರವಾಗಿಯೇ ಉಳಿಸಿಕೊಂಡಿದೆ ಎಂಬುದು ಚಿಂತಕರ ಅಭಿಪ್ರಾಯ, ಸೃಜನಶೀಲ ಪ್ರವೃತ್ತಿ, ಕಲಾತ್ಮಕ ಉದ್ದೇಶ ಎರಡನ್ನೂ ತೀವ್ರವಾಗಿ ವಿರೋಧಿಸುತ್ತಿದ್ದರೂ ಶ್ರೇಷ್ಠ ಬರಹಗಾರನ ಅಂತರಂಗದೊಳಗೆ ಕಲಾವಿದ ಯಾವಾಗಲೂ ಮಿಡಿಯುತ್ತಲೇ ಇರುತ್ತಾನೆ ಎಂಬುದಕ್ಕೆ ಹಾಜಿ ಮುರಾದ್ ಬರವಣಿಗೆಯ ಸೂಕ್ಷ್ಮತೆಯೇ ಸಾಕ್ಷಿಯಾಗಿದೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 596 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 950 ಗ್ರಾಂ |
| ಆಯಾಮಗಳು | - |





