ಮುಖ್ಯ ವಿಷಯಕ್ಕೆ ಹೋಗಿ (Skip to main content)
ಹಳ್ಳಿ ಹಕ್ಕಿಯ ಹಾಡು ಆತ್ಮಕಥ
ಹೊಸ ಬಿಡುಗಡೆ14% ರಿಯಾಯಿತಿ
ಆತ್ಮಕಥನ

ಹಳ್ಳಿ ಹಕ್ಕಿಯ ಹಾಡು ಆತ್ಮಕಥ

ಲೇಖಕ: ಅಡಗೂರು ಎಚ್. ವಿಶ್ವನಾಥ್

₹150₹17514% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಸದಾ ತಮಾಷೆಯಾಗಿ ಮಾತನಾಡಿ ಸದನದ ಬಿಗುವನ್ನು ತಿಳಿಗೊಳಿಸುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿಯ ಶಾಸಕರಾಗಿದ್ದ ಗಟ್ಟಿಚಂದ ಶೇಖರ್ ಆಡಿದ ಮಾತು ಮಜವಾಗಿತ್ತು. ನಿಗದಿಯಾಗಿದ್ದ ಮುನ್ನೂರ ಐವತ್ತು ರುಪಾಯಿಗಳು ಸಾಲದು, ಅದು ಇನ್ನೂ ಹೆಚ್ಚಾಗಬೇಕು ಎನ್ನುವುದು ಹಲವು ಶಾಸಕರ ಅಭಿಪ್ರಾಯವಾಗಿತ್ತು. ದಿ. ಚಂದ್ರಶೇಖರ್ ಅವರು ಎದ್ದು ನಿಂತು ಸನ್ಮಾನ್ಯ ಅಧ್ಯಕ್ಷರೇ, ತಿಂಗಳಿಗೆ ಮುನ್ನೂರ ಐವತ್ತು ರುಪಾಯಿ ತೆಗೆದುಕೊಂಡು ಮಾಡುವುದಾದರೂ ಏನು? ಅದಕ್ಕೆ ಬದಲು ನಮಗೆಲ್ಲಾ ಒಂದು ಗ್ರೀನ್‌ಕಾರ್ಡ್ ಕೊಡಿ. ಆ ಕಾರ್ಡನ್ನು ಈ ರಾಜ್ಯದಲ್ಲಿ ನಾವೆಲ್ಲಿ ತೋರಿಸಿದರೂ, ನಮಗೆ ಒಂದರ್ಧ ಬಟ್ಟಲು ವಿಸ್ಕಿ, ನೂರು ಗ್ರಾಂ ಚೌಚೌ ಕೊಡುವುದಕ್ಕೆ ಆದೇಶ ಮಾಡಿಬಿಡಿ ಎಂಬ ಅಮೋಘ ಸಲಹೆ ಇತ್ತರು. ಇಡೀ ಸದನ ನಗೆಗಡಲಲ್ಲಿ ಮುಳುಗಿತು. ಹೆಚ್ಚಿನ ಶಾಸಕರು, ಮಂತ್ರಿಗಳು ಒತ್ತಡ ನಿವಾರಣೆಯ ತಂತ್ರವಾಗಿ ದ್ರಾಕ್ಷಾರಸದ ಮೊರೆಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಇದೊಂದು ದುರಭ್ಯಾಸ ಎಂಬುದನ್ನು ನಾವೆಲ್ಲ ಬಹಿರಂಗವಾಗಿ ಹೇಳಿದರೂ ಒಳಗೊಳಗೆ ನಾವು ಕುಡಿಯುವುದನ್ನು ಸಮರ್ಥಿಸಿಕೊಳ್ಳುವ ದಾರಿ ಹುಡುಕುತ್ತಿದ್ದೆವು. ನನಗೆ ಒಬ್ಬಳೇ ಮಗಳು. ನನ್ನ ಅಂತರಂಗದ ಪ್ರೀತಿಗೆ ಪಾತ ಳಾದವಳು. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜಕೀಯವಾಗಿ ಬೆಳೆದ ನಾನು ಮಗಳಿಗಿಟ್ಟ ಹೆಸರು ಇಂದಿರಾ’ ಎಂದೇ. ಬೆಳೆದ ಮಗಳಿಗೆ ಮದುವೆ ಮಾಡುವ ತೀರ್ಮಾನವಾಯಿತು. ಅಬ್ಬಾ ಮನೆಯ ಮಲ್ಲಿಗೆ ಲತೆಯನ್ನು ಪರರ ಅಂಗಳಕ್ಕೊಪ್ಪಿಸುವುದು ಎಷ್ಟು ಕಷ ! ಇದನ್ನೆ ಪಂಚತಂತ್ರದ ಕರ್ತೃ ಕನ್ಯಾಪಿತೃತ್ವ ಖಲುನಾಮ ಕಷ್ಟಮ್’ ಎಂದು ಮಿತ್ರಭೇದದಲ್ಲಿ ಹೇಳುತ್ತಾನೆ. ಮಗಳು ಹುಟ್ಟಿದಳೆಂಬುದೇ ಚಿಂತೆಗೆ ಕಾರಣ. ಇವಳನ್ನು ಯಾರಿಗೆ ಮದುವೆ ಮಾಡಿ ಒಪ್ಪಿಸುವುದು? ಹಾಗೆ ಕೊಟ್ಟ ಕಡೆ ಸುಖವಾಗಿರುತ್ತಾಳೋ ಇಲ್ಲವೋ ಎಂದು ಬಹಳ ಯೋಚಿಸಬೇಕಾಗುವುದು. ನಿಜವಾಗಿಯೂ ಹೆಣ್ಣುಮಗಳೊಬ್ಬಳ ತಂದೆಯಾಗಿರುವುದು ಬಹಳ ಕಷ್ಟ ಎನ್ನುವುದು ಕವಿಯ, ಹಾಗೂ ಹೆಚ್ಚಿನ ಅನುಭವಿಗಳ ತಳಮಳ, ಎಲ್ಲ ಮದುವೆಗಳಂತೆ ನನ್ನ ಮಗಳ ಮದುವೆಯೂ ದೈವಬಲದಿಂದ ಸ್ವರ್ಗದಲ್ಲಿ ತೀರ್ಮಾನವಾದರೂ, ನನ್ನ ಅಳಿಯನಾಗುವವರು ನಮ್ಮ ಕಣ್ಣಿಗೆ ಬಿದ್ದದ್ದು ಹುಣಸೂರಿನಲ್ಲಿ ಗಂಡು ಹೆಣ್ಣು ಒಪ್ಪಿದರು. ಎರಡೂ ಕುಟುಂಬಗಳೂ ಒಪ್ಪಿದವು. ನನ್ನ ಅಳಿಯ ಸs , ಸುಸಂಸ್ಕೃತ ಮನೆತನದ ತರುಣ ಇಂಜಿನಿಯರ್, ನನಗೆ ಹಳ್ಳಿ ಹಕ್ಕಿಯ ಹಾಡು | ೧೦೧ ಮಗಳ ಮದುವೆಯನ್ನು ಆಡಂಬರವಾಗಿ ನಡೆಸುವುದಕ್ಕಿಂತ, ಆ ಮದುವೆಯ ಜೊತೆ ಕೆಲವು ಜೋಡಿಗಳಿಗಾದರೂ ಮದುವೆ ಮಾಡಿಸಬೇಕೆಂಬ ಸಂಕಲ್ಪ ಇದ್ದಿತು. ಈ ಸಾಮೂಹಿಕ ಮದುವೆಯ ಪ್ರಸ್ತಾವನೆಯನ್ನು ಗಂಡಿನ ಕಡೆಯವರೂ ಒಪ್ಪಿ ಮಾನ್ಯ ಮಾಡಿದರು. ನನ್ನವ್ವನಿಗೆ ಅವ್ವ! ಎಲ್ಲ ಜಾತಿಯ ಮಕ್ಕಳ ಜೋಡಿಯಲ್ಲೇ ನಿನ್ನ ಮೊಮ್ಮಗಳ ಮದುವೆ ಮಾಡ್ತೀನಿ ಎಂದಾಗ ಸಂತೋಷಪಟ್ಟಳು. ನನ್ನ ಹೆಂಡತಿ, ಮಕ್ಕಳು ಎಲ್ಲರೂ ನನ್ನ ವಿಚಾರವನ್ನು ಒಪ್ಪಿ ಸಹಕರಿಸಿದರು. ಸಾಮೂಹಿಕ ಮದುವೆಗೆ ಸುಲಗ್ನ ನಿಶ್ಚಯವಾಯಿತು ನನ್ನ ಹುಡುಕಿಕೊಂಡು ಕೆಲವೊಮ್ಮೆ ಗ್ರಾಮಸ್ಥರು ಬೆಂಗಳೂರಿಗೂ ಬರುತ್ತಾರೆ. ಒಬ್ಬನ ಸಮಸ್ಯೆಯ ನಿವಾರಣೆಗಾಗಿ, ಅವನ ಖರ್ಚಿನಲೆ ಇನ್ನೊಬ್ಬನೂ ಬಂದಿರುತ್ತಾನೆ. ಒಬ್ಬ ವ್ಯಕ್ತಿ ತನ್ನ ಜಮೀನಿನ ಪಹಣೆ ಇನ್ನೊಬ್ಬನ ಹೆಸರಿಗೆ ಬದಲಾವಣೆ ಆಗಿರುವ ಸಮಸ್ಯೆಯನ್ನು ತನ್ನ ಸ್ನೇಹಿತರೊಂದಿಗೋ ಅಥವಾ ನಮ್ಮ ಶಿಷ್ಯರೊಂದಿಗೋ ಹೇಳಿಕೊಳ್ಳುತ್ತಾನೆ. ತಕ್ಷಣವೇ ಅವನಿಗೆ ಟೋಪಿಹಾಕಲು ಸೈಜ್ ರೆಡಿಯಾಗುತ್ತದೆ. ಆತನಿಂದ ಅವನ ಬಳಿ ಇರುವ ಕುರಿ ಅಥವಾ ದನಗಳನ್ನು ಮಾರಿಸುತ್ತಾರೆ. ರಾತ್ರಿಯೇ ಟ್ಯಾಕ್ಸಿ ಹಿಡಿದು ಬೆಂಗಳೂರಿಗೆ ಹೊರಡುತ್ತಾರೆ. ಅಲ್ಲಿಂದ ಹೊರಡುವಾಗ ಟ್ಯಾಕ್ಸಿಗೆ ಈueಟ ಹಾಕಿ ಅವರೂ ಈueಟ ಹಾಕಿಕೊಂಡು ಹೊರಟು ಅಲ್ಲಲ್ಲಿ ನಿಲ್ಲಿಸಿ ಮತ್ತನ್ನು ಹಾಗೇ ಮೆಯಿಂಟೇನ್ ಮಾಡಿಕೊಂಡು ಬೆಳಕು ಹರಿಯುವ ಹೊತ್ತಿಗೆ ಬೆಂಗಳೂರು ಸೇರಿ ನನ್ನ ಮನೆ ಮುಟ್ಟುತ್ತಾರೆ. ಬೆಳಗಿನ ಪತ್ರಿಕೆ ಓದುತ್ತಿರುವ ನನ್ನೆದುರು ನಿಂತು ಹರಿಯುತ್ತಾರೆ. ಏನಪ್ಪಾ, ಬೆಳಿಗ್ಗೆ ಬೆಳಿಗ್ಗೆನೇ ಬಂದ್ರಿ? ಅಂದಾಗ ಬಂದವನು ಆ ವ್ಯಕ್ತಿಯನ್ನು ತೋರಿಸುತ್ತಾ ಹುಸಿಗಾಬರಿಯನ್ನು ನಟಿಸುತ್ತಾ ಅಣ್ಣೋ, ಇವನ ಮನೆಯೇ ಹಾಳಾಗೋಯ್ತು ಕಣಣ್ಣೋ. ಅದ್ಕೆ ರಾತ್ರೋನ್‌ರಾತ್ರಿ ನಿನ್ನ ನೋಡಾಕೆ ಇಲ್ಲಿಗೇ ಬಂದುಬುಟ್ಟೋ ಅಂತಾರೆ. ಸರಿ ಮುಖತೊಳಕಳಿ ಅಂತ ಹೇಳಿ, ನಾನೂ ರೆಡಿಯಾಗಿ ಬರ‍್ತೀನಿ. ಮೊದಲ ಸಂದರ್ಶನ ಮತದಾರರಿಗೆ, ಹಾಗಾಗಿ ಅವರನ್ನೇ ಕರಿಯುತ್ತೇನೆ. ಏನಪ್ಪ, ಅನ್ನೋದೆ ತಡ, ಕುರಿಮರಿ ಮಾರಿ ಖರ್ಚು ಮಾಡಿದ ವ್ಯಕ್ತಿಯ ಮೆಚ್ಚುಗೆಗಾಗಿ ಹೀರೋಗಳ ಠೀವಿಯಿಂದ ಅಣ್ಣೋ! ಇವ್ನ ಮನೆ ಹಾಳಾಗಿ ಹೋಗದೆ ಕಣಣ್ಣೋ, ಆ ನನ್ಮಗ ಇಲೇಜ್ ಅಕೌಂಟೆಂಟ್ ಇವ್ನ ೧೪೬ | ಹಳ್ಳಿ ಹಕ್ಕಿಯ ಹಾಡು ಪಾಣಿನೆ ತಿದ್ದುಬಿಟ್ಟವ್ನೆ. ಆ ತಸೀಲ್ದಾರ್‌ಗೆ ವಸಿ ಹೇಳಬೇಕಣ್ಣ, ಅರ್ಜೆಂಟ್ ಅಂತಾರೆ. ಅಲ್ಲಯ್ಯಾ ನಿನ್ನೆ, ಮೊನ್ನೆ ನಾನು ಊರಲ್ಲೇ ಇದ್ದೆ. ಅಲ್ಲೆ ಹೇಳಕಾಗ್ತಾ ಇರ‍್ಲಿಲ್ವಾ? ಖರ್ಚು ಮಾಡ್ಕಂಡು ಇಷ್ಟು ದೂರ ಯಾಕೆ ಬಂದ್ರಯ್ಯಾ? ಅಂದ್ರೆ ಆ ಮಾತು ತಾಗಲೇ ಇಲ್ಲವೇನೋ ಎಂಬಂತೆ ಹಾವಭಾವಗಳೊಡನೆ ಹೋ! ನಿನ್ನ ಆ ಊರ‍್ನಲ್ಲಿ ನಾವು ನೋಡ್ದಂಗೆಯಾ ತೆಗಿ, ಒಳೆ ಯಂಕಟ್ರಮಣಸ್ವಾಮಿ ನೋಡ್ದಷ್ಟು ಕಷ್ಟ ನಿನ್ನೋಡದು. ಅದ್ಕೇ ಬೆಂಗ್ಳೂರಿಗೆ ಬಂದ್ವು ಕಣಣ್ಣಾ ಎಂದು ತಲೆ ಕೆರೆಯುತ್ತಾ ಅಣ್ಣೋ ಆ ಡಿಸಿ ಗೊಸಿ ಫೋನ್ ಮಾಡಿ, ಪಾಣಿ ಸರಿಮಾಡ್ಸಣ್ಣೋ ಅಂತ ಗೋಗರೆಯುತ್ತಾರೆ. ಸರಿ ಫೋನ್‌ನಲ್ಲಿ ಡಿ.ಸಿ. ಸಿಕ್ಕಿ, ಅವರಿಗೆ ಈ ವ್ಯಕ್ತಿ ಕಥೆ ಹೇಳಿಯಾಯಿತು. ಆಗ ಇವರು ಆಹಾ! ಏನ್ಲಾ ಈ ಬಡ್ಡೀಹೈದನ ಅದೃಷ್ಟ! ಡಿ.ಸಿ. ಸಾಹೇಬ್ರು ಸಿಕ್ಕಿಬುಟ್ರಲ್ಲ! ಇನ್ನೇನಪ್ಪಾ ಬೇಕು! ಅಂತ ಉದ್ಗಾರ ತೆಗೆದು ಹೀರೋಗಳಂತೆ ಯಜಮಾನಿಕೆಯಿಂದ ಯಾವ್ದುಕ್ಕೂ ಆ ಎ.ಸಿ. ಗೊಸಿ ಹೇಳಣ್ಣಾ, ಅವ್ನೂ ಬಂದೋಬಸ್ತ್ ಮಾಡ್‌ಬುಡಣ್ಣಾ ಅನ್ನುತ್ತಾರೆ. ಸರಿ ಎಸಿ ಸಾಹೇಬ್ರಿಗೂ ಹೇಳಿದ್ದಾಯಿತು. ಕುರಿ ಮಾರಿದವನನ್ನು ಸಂಪ್ರೀತಗೊಳಿಸಲು ಮತೆ ಇವರ ನಾಟಕೀಯ ಉದ್ಗಾರ ಏನ್ ನಸೀಬ್ಲಾ ಈ ನನ್ಮಗನಿಗೆ, ಏ.ಸಿ. ಸಾಹೇಬ್ರೂ ಸಿಕ್‌ಬುಟ್ರು. ಇನ್ನೇನಪ್ಪಾ! ಅಂತ. "ಸರಿಯಪ್ಪಾ, ನೀವಿನ್ನೂ ನಡೀರಿ’ ಅಂದ್ರೆ ನೋಟದಿಂದ ಚುಚ್ಚುತ್ತಾರೆ. ಸರಿ, ಅವರನ್ನು ಊರಿಗೆ ಕಳಿಸಲು ವ್ಯವಸ್ಥೆ ಮಾಡಿದ್ದಾಯಿತು. ಕುರಿಮಾರಿದವನನ್ನು ಸಾಗಹಾಕಿಕೊಂಡು ಅವರು ಅವರನ್ನು ಹಿಂಬಾಲಿಸುತ್ತಾನೆ. ಇಂತಹ ಅನೇಕ ದೃಶ್ಯಗಳನ್ನು ರಾಜಕಾರಣಿ ಪ್ರತಿದಿನ ನೋಡಬೇಕಾಗುತ್ತದೆ

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು176
ಪ್ರಕಟಣೆ ವರ್ಷ2022
ಆವೃತ್ತಿ2nd
ತೂಕ400 ಗ್ರಾಂ
ಆಯಾಮಗಳು-