ಮುಖ್ಯ ವಿಷಯಕ್ಕೆ ಹೋಗಿ (Skip to main content)
ಹಂಗರ್ - ಹಸಿವಿನಾಚೆಗಿನ ಮೌನ
ಹೊಸ ಬಿಡುಗಡೆ19% ರಿಯಾಯಿತಿ
ಅನುವಾದ

ಹಂಗರ್ - ಹಸಿವಿನಾಚೆಗಿನ ಮೌನ

ಲೇಖಕ: ಟಿ.ಡಿ. ರಾಜಣ್ಣ ತಗ್ಗಿ

₹210₹26019% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಹಂಗರ್ (ಹಸಿವು) ಕಾದಂಬರಿಯು ನಾರ್ವೇದೇಶದ ನೊಬೆಲ್ ಪ್ರಶಸ್ತಿ ವಿಜೇತ ‘ನಟ್ ಹಾಮ್ಸನ್’ ಬರೆದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಯು ಮೇಧಾವಿಯೊಬ್ಬನ ಹಸಿವು ಮತ್ತು ಬದುಕಿನ ತಳಮಳಗಳನ್ನು ಸಶಕ್ತ ಭಾಷೆಯಲ್ಲಿ ಮನಮುಟ್ಟುವಂತೆ ಕಟ್ಟಿಕೊಡುವ ಪ್ರಥಮ ಶ್ರೇಣಿಗೆ ಸೇರಿದ ಸರ್ವಶ್ರೇಷ್ಠ ಕೃತಿ. ‘ನಟ್ ಹಾಮ್ಸನ್’ ಒಬ್ಬ ಕಾದಂಬರಿಕಾರನಾಗಿ, ಕತೆಗಾರನಾಗಿ, ವಿಮರ್ಶಕನಾಗಿ ವಿಶ್ವವಿಖ್ಯಾತಿಯನ್ನು ಗಳಿಸಿದಂಥವನು. ನಾರ್ವೇ ದೇಶದವನಾದ ಈತ ತನ್ನ ದೇಶದ ಎಲ್ಲ ಯುವ ಲೇಖಕರಿಗೆ, ಕವಿಗಳಿಗೆ ಮತ್ತು ಬರಹಗಾರರಿಗೆ ಪ್ರೇರಣಾದಾಯಿಯಾಗಿ ಹೊರಹೊಮ್ಮಿದಂತಹ ಮಹಾನ್ ಲೇಖಕ. ಈತನ ಅನನ್ಯವಾದ ಸಾಹಿತ್ಯ ಸಂಪತ್ತು, ಬಳಸಿದ ಭಾಷಾ ಪ್ರೌಢಿಮೆ, ಬೆರಗುಗೊಳಿಸುವಂಥ ಪಾಂಡಿತ್ಯ, ವಿಶಿಷ್ಟ ಲಕ್ಷಣಗಳು, ವಿಕಸಿಸುವಂತೆ ಚಿಮ್ಮುವ ಕಟುವಾಸ್ತವದ ಸೃಜನಶೀಲ ಚಾತುರ್ಯ ? ಇವೆಲ್ಲವೂ ಈತನಿಗೆ ೧೯೨೦ರಲ್ಲಿ ‘ನೊಬೆಲ್’ ಪ್ರಶಸ್ತಿಯನ್ನು ತಂದುಕೊಟ್ಟವು. ಈತನ ಭಾಷೆಯಲ್ಲಿ ಒಂದು ಪ್ರತ್ಯೇಕತೆ ಕಾಣಿಸುತ್ತದೆ. ಈತ ಪ್ರತಿ ವಾಕ್ಯವನ್ನೂ ಸ್ಪಷ್ಟವಾಗಿ ಸ್ಪಟಿಕದಂತೆ ಸೃಜಿಸುವ ಲೇಖಕ. ಪ್ರತಿ ಮಾತಿನಲ್ಲೂ ಸೌಂದರ್ಯ, ಸಮಗ್ರತೆ ಮತ್ತು ಸಂಪೂರ್ಣತೆ ಎದ್ದು ಕಾಣುತ್ತಿರುತ್ತದೆ. ಈತ ಪದಗಳನ್ನು ತನ್ನ ಕೈಚಳಕ್ಕೆ ಒಗ್ಗಿಸಿಕೊಂಡು ಚೆಂಡಿನಂತೆ ಉರುಳಿಸುವವನಾಗಿಯೂ. ಮೇಲಕ್ಕೆಸೆದು ಆಟ ಆಡುವವನಾಗಿಯೂ. ಅವು ಪ್ರವಾಹದಂತೆ ಮೈದುಂಬಿ ಹರಿಯುವಂತೆ ಮಾಡುವವನಾಗಿಯೂ ಕಾಣಿಸುತ್ತಾನೆ. ಈತನ ಪದಗಳು ಕೆಲವೊಮ್ಮೆ ಪಕ್ಷಿಯಂತೆ ರೆಕ್ಕೆ ಬಿಚ್ಚಿ ಹಾರುತ್ತವೆ. ಒಂದೊಂದು ಕಡೆ ಬೆಂಕಿ ಉಂಡೆಯಂತೆ ಎದೆಗೆ ಬಿಸಿಯನ್ನು ಉಂಟು ಮಾಡುತ್ತವೆ. ಇವೆಲ್ಲವುಗಳ ಹಿಂದೆ ಯಾವುದೊ ವಿಶಿಷ್ಟತೆ, ಅವ್ಯಕ್ತವಾದ ಭಾವವು ಅಡಗಿಕೊಂಡು ಇಣುಕಿ ನೋಡುತ್ತಿರುತ್ತದೆ. ಹಾಗಾಗಿಯೇ ನಟ್ ಹಾಮ್ಸನ್ ಬರೆದ ಪ್ರತಿ ಸಾಲೂ ಒಂದು ಸೊಗಸಾದ ಕಾವ್ಯದಂತೆ ಕಾಣಿಸುವುದರಲ್ಲಿ ಯಾವ ಅನುಮಾನಗಳೂ ಇರುವುದಿಲ್ಲ. ಹಾಗಾಗಿಯೇ ಈತನ ಬರಹಗಳಲ್ಲಿ ಅಪೂರ್ವವಾದ ಶೈಲಿ, ಅನನ್ಯವಾದ ಪ್ರತಿಭೆ ಎದ್ದು ಕಾಣಿಸುತ್ತದೆ. ಕಥಾ ಸಂವಿಧಾನದಲ್ಲಿಯೂ, ಪಾತ್ರ ಸೃಷ್ಟಿಯಲ್ಲಿಯೂ, ರೂಪ ಕಲ್ಪನೆಯಲ್ಲಿಯೂ ಈತನದೊಂದು ವಿಶಿಷ್ಟ ಸ್ಥಾನ. ಇಂತಹ ಸೃಜನಾತ್ಮಕ ಶಕ್ತಿಯು ಪ್ರಪಂಚದ ಇತರ ಲೇಖಕರಲ್ಲಿ ಬಹು ಅಪರೂಪಕ್ಕೆ ಕಾಣಿಸುತ್ತದೆ. ಇದೆಲ್ಲ ಸೃಜನ ಮತ್ತು ರೂಪಕಾತ್ಮಕ ಭಾಷಿಕ ಶಕ್ತಿಯನ್ನು ‘ಹಂಗರ್’ ಎನ್ನುವ ಅಪೂರ್ವವಾದ ಕಲಾಕೃತಿಗೆ ಧಾರೆ ಎರೆದು ಅದಕ್ಕೊಂದು ವಾಸ್ತವದ ಕಲಾರೂಪವನ್ನು ಕೊಟ್ಟು ತಿದ್ದಿ ತೀಡಿ ತೋರಿಸಿದ್ದಾನೆ. ಈತನ ಕೃತಿಗಳೆಲ್ಲದರಲ್ಲೂ ‘ಹಂಗರ್’ (ಹಸಿವು) ಕಾದಂಬರಿ ಶಿಖರಪ್ರಾಯವಾಗಿ ನಿಲ್ಲುವಂಥದ್ದು. ಅಲ್ಲದೆ ಪ್ರಪಂಚದ ಬಹುಪಾಲು ಲೇಖಕರಿಂದ ಮುಕ್ತ ಕಂಠದಿಂದ ಪ್ರಶಂಸೆಗೆ ಒಳಪಟ್ಟ ಕೃತಿಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವಿಶೇಷತೆಗಳು

ISBN978-81-992174-0-9
ಭಾಷೆಕನ್ನಡ
ಪುಟಗಳು212
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ400 ಗ್ರಾಂ
ಆಯಾಮಗಳುBook Size : 1/4 Crown(23x15.5) (International Standarad Book Size)