ಮುಖ್ಯ ವಿಷಯಕ್ಕೆ ಹೋಗಿ (Skip to main content)
ಜಪಾನಿನ ಸಾಹಿತ್ಯ ಚರಿತ್ರೆ
ಹೊಸ ಬಿಡುಗಡೆ17% ರಿಯಾಯಿತಿ
ಅನುವಾದ

ಜಪಾನಿನ ಸಾಹಿತ್ಯ ಚರಿತ್ರೆ

ಲೇಖಕ: ವಿಜಯ ನಾಗ್ ಜಿ.

₹200₹24017% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಜಪಾನೀ ಸಾಹಿತ್ಯದ ಕಥೆಯು ಕಾಲ, ಸಂಸ್ಕೃತಿ ಮತ್ತು ರಾಷ್ಟ್ರದ ಆತ್ಮವಿಕಾಸದ ಯಾತ್ರೆಯಾಗಿದೆ. ಪ್ರಾಚೀನ ಮೌಕಿಕ ಸಂಪ್ರದಾಯಗಳಿಂದ ಹಿಡಿದು ಆಧುನಿಕ ಕಾಲ್ಪನಿಕ ಕಥನಗಳವರೆಗೆ ಜಪಾನಿನ ಸಾಹಿತ್ಯಕ ಪರಂಪರೆಯು ವಿಶ್ವ ಸಾಹಿತ್ಯದಲ್ಲಿ ಅತ್ಯಂತ ಸಂಕೀರ್ಣ ಮತ್ತು ಪ್ರಭಾವಶಾಲಿ ಸಂಪ್ರದಾಯಗಳಲ್ಲಿ ಒಂದಾಗಿ ನಿಲ್ಲುತ್ತದೆ. "ಜಪಾನಿನ ಸಾಹಿತ್ಯ ಚರಿತ್ರೆ" ಎಂಬ ಈ ಕೃತಿಯು ವಿಶಾಲ ಮತ್ತು ಕ್ರಿಯಾಶೀಲ ಸಂಪ್ರದಾಯದ ಸಮಗ್ರವಾದ ಅನ್ವೇಷಣೆಯೊಂದನ್ನು ನೀಡುವ ಪ್ರಯತ್ನವಾಗಿದೆ. ಶತಮಾನಗಳವರೆಗೆ ಅದರ ವಿಕಾಸವನ್ನು ಪತ್ತೆ ಹಚ್ಚುವ ಹಾಗೂ ಅದನ್ನು ರೂಪಿಸಿದ ಸಾಮಾಜಿಕ, ರಾಜಕೀಯ ಮತ್ತು ತಾತ್ವಿಕ ಪ್ರವಾಹಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಕೃತಿಸಲಾಗಿದೆ. ಜಪಾನಿ ಸಾಹಿತ್ಯ ಸಂಪ್ರದಾಯದ ಮೇಲಿನ ಗೌರವ ಮತ್ತು ಸಾಹಸಮಯವಾದ ಆಧುನಿಕತೆಯ ನಡುವೆ ಸಮತೋಲನವನ್ನು ಕಾಣುವ ಅನನ್ಯವಾದ ಸಾಮರ್ಥ್ಯವನ್ನು ಹೊಂದಿದೆ. ವಿಶ್ವದ ಮೊದಲ ಕಾದಂಬರಿ ಎಂದು ಪರಿಗಣಿಸಲಾಗಿರುವ ಮುರಸಾಕಿ ಶಿಕಿಬು ಎಂಬ ಮಹಿಳೆ ಬರೆದಿರುವ "ಗೆಂಜಿ ನೋ ಮಾನೋಗತಾರಿ" (ಗೆಂಜಿಯ ಕತೆ) ನಂತಹ ಶಾಸ್ತ್ರೀಯ ಕೃತಿಗಳು ಪ್ರಕೃತಿ, ಮಾನವ ಭಾವನೆ ಮತ್ತು ಬದುಕಿನ ಅಸ್ಥಿರವಾದ ಸೌಂದರ್ಯ (ಮೊನೋ ನೋ ಆವಾರೆ) ಗಳಿಗೆ ಅತ್ಯಂತ ಸೂಕ್ಷ್ಮ ಸಂವೇದನೆಯನ್ನು ಪ್ರದರ್ಶಿಸುತ್ತವೆ. ಇನ್ನು ಜಪಾನಿನ ಮಧ್ಯಯುಗದ ಅವಧಿಯಲ್ಲಿ ಯುದ್ಧ ಮಹಾಕಾವ್ಯಗಳು, ಬೌದ್ಧ ಚಿಂತನೆಗಳು ಮತ್ತು ನೋ ನಾಟಕಗಳ ಕಠೋರ ಸೌಂದರ್ಯವನ್ನು ನಾವು ಕಾಣಬಹುದು, ಅದೇ ರೀತಿ ಎದೋ ಕಾಲಘಟ್ಟದಲ್ಲಿ (೧೬೦೩-೧೮೬೮) ಜನಪ್ರಿಯವಾದ ಕಥನಗಳು, ಕಾವ್ಯಗಳು ಮತ್ತು ಕಬ್ಬುಕಿ ನಾಟಕಗಳ ಬೆಳವಣಿಗೆಯನ್ನು ಕಾಣುತ್ತೇವೆ. ಮೆಇಜಿ ಪುನರ್ಜೀವನ (೧೮೬೮)ವು ಪಾಶ್ಚ್ಯಾತ್ಯ ಪ್ರಭಾವ ಮತ್ತು ಜಪಾನಿನ ವೇಗವಾದ ರೂಪಾಂತರದೊಂದಿಗೆ ಹೋರಾಡುವ ಲೇಖಕರೊಂದಿಗೆ ಆಧುನೀಕರಣದ ಅಲೆಯನ್ನು ತಂದಿತು. ೨೦ ಮತ್ತು ೨೧ನೇ ಶತಮಾನಗಳಲ್ಲಿ ಯುದ್ಧೋತ್ತರ ಲೇಖಕರಾದ ದಜ಼ಾಯ್ ಒಸಾಮು ಮತ್ತು ಮಿಶಿಮಾ ಯೂಕಿಯೋರಂತಹವರ ಆತ್ಮಾವಲೋಕನ ಹಾಗೂ ಮುರಾಕಾಮಿ ಹರುಕಿಯ ಅತಿಭೌತಿಕ ಕಥನಗಳ ಜಾಗತಿಕ ವಿದ್ಯಮಾನದವರೆಗೆ ಹೆಚ್ಚಿನ ವೈವಿಧ್ಯತೆಯನ್ನು ಕಾಣುತ್ತೇವೆ. ಅದೇ ರೀತಿ ಮಾಂಗಾ ಮತ್ತು ಲಘು ಕಾದಂಬರಿಗಳು ಈಗ ಜಪಾನಿನ ಕಥನ ಸಂಪ್ರದಾಯವನ್ನು ಹೊಸ ಮಾಧ್ಯಮಗಳಿಗೆ ವಿಸ್ತರಿಸಿವೆ, ಅದರ ಸಾಹಿತ್ಯ ಸಂಸ್ಕೃತಿಯು ಇನ್ನೂ ಶಕ್ತಿಯುತವಾಗಿದೆ ಎಂದು ಸಾಬೀತುಪಡಿಸುತ್ತಿವೆ.

ವಿಶೇಷತೆಗಳು

ISBN978-81-992174-1-6
ಭಾಷೆಕನ್ನಡ
ಪುಟಗಳು204
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ350 ಗ್ರಾಂ
ಆಯಾಮಗಳು-