ಮುಖ್ಯ ವಿಷಯಕ್ಕೆ ಹೋಗಿ (Skip to main content)
ಹೃದಯ
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಅನುವಾದ

ಹೃದಯ

ಲೇಖಕ: ಡಾ. ವಿಜಯ ನಾಗ್ ಜಿ.

₹212₹25015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಹೃದಯ ಎಂಬ ಜಪಾನಿನಿಂದ ಅನುವಾದಿಸಲ್ಪಟ್ಟ ಕಾದಂಬರಿ ಕೂಡ ಮೇಲ್ನೋಟಕ್ಕೆ ಹೀಗೆ ಎರಡು ತಲೆಮಾರುಗಳ ವೈರುದ್ಯವನ್ನು ಹೇಳುತ್ತಿರುವಂತೆ ಅನ್ನಿಸಿದರೂ ಅದು ಹೇಳುತ್ತಿರುವುದು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಆಗುತ್ತಿರುವ ಸಾಮಾಜಿಕ ಭಿನ್ನತೆಯನ್ನು ಹಾಗೂ ಅದರ ಜೊತೆಜೊತೆಗೆ ಬೇರೆಬೇರೆ ಕಾಲದಲ್ಲಿಯೂ ಒಂದು ಪ್ರದೇಶದ ಜನಸಾಮಾನ್ಯರ ಆಲೋಚನೆಗಳಲ್ಲಿರುವ ಸಾಮ್ಯತೆಯನ್ನು. ಕಾದಂಬರಿಯ ನಿರೂಪಣೆಕಾರ ಒಬ್ಬ ವಿಶ್ವವಿದ್ಯಾಲಯದಲ್ಲಿ ಇನ್ನೂ ಓದುತ್ತಿರುವ ವಿದ್ಯಾರ್ಥಿ. ಆತ ತನಗಿಂತ ಅದೆಷ್ಟೋ ಹಿರಿಯರಾದ ವ್ಯಕ್ತಿಯೊಬ್ಬರೆಡೆಗೆ ಗೌರವದ ಭಾವನೆ ಬೆಳೆಸಿಕೊಂಡು ಸ್ನೇಹಹಸ್ತ ಚಾಚುವುದರೊಂದಿಗೆ ಪ್ರಾರಂಭವಾಗುವ ಕಾದಂಬರಿ ನಿರೂಪಣೆಕಾರ ಸೆನ್ಸೈ ಎಂದು ಕರೆಯುವ ಆ ಹಿರಿಯರ ಇಡೀ ಬದುಕನ್ನು ಓದುತ್ತ ನಮ್ಮೆದುರಿಗೆ ತೆರೆದಿಡುತ್ತ ಅವರ ಅಂತ್ಯದವರೆಗಿನ ಕಥೆಯನ್ನು ಹೇಳುತ್ತದೆ. ಇಬ್ಬರ ಕಥೆಗಳಲ್ಲಿರುವ ಎಳೆಗಳು ಈಗಾಗಲೆ ನಾವು ಹಲವಾರು ಕಡೆಗಳಲ್ಲಿ ಕಂಡಂತಹ ಜೀವನ ಚಿತ್ರಣವೇ ಆದರೂ ಅದು ಒಂದು ಕಾಲದ ಜಪಾನಿನ ಜನಸಾಮಾನ್ಯನ ಬದುಕನ್ನು ವಿವರಿಸುತ್ತ ಹೋಗುವುದರಿಂದ ಬಹುಮುಖ್ಯ ಎಂದೆನಿಸುತ್ತದೆ. ನಿರೂಪಕ ಇರಬಹುದು ಅಥವಾ ಅವನು ಅತಿಯಾಗಿ ಗೌರವಿಸುವ ಸೆನೈ ಇರಬಹುದು ಹೇಗೆ ತಮ್ಮ ಉನ್ನತ ವ್ಯಾಸಂಗದ ಪದವಿಯನ್ನು ಪಡೆದದ್ದರ ಪಾರ್ಟಿಯನ್ನು ತಪ್ಪಿಸಿಕೊಂಡರು, ಹೇಗೆ ತಮ್ಮ ತಂದೆಯ ಅನಾರೋಗ್ಯದಿಂದ ಇಡೀ ಬದುಕನ್ನು ತೂಗುಯ್ಯಾಲೆಯಂತೆ ಕಳೆಯಬೇಕಾಯಿತು ಎಂಬುದನ್ನು ಹೇಳುತ್ತಲೇ ಆಯಾ ಕಾಲದಲ್ಲಿ ವಿಶ್ವವಿದ್ಯಾಲಯದ ಪದವಿಗಳಿಗಿರುವ ಗೌರವದಲ್ಲಾದ ಬದಲಾವಣೆಯನ್ನು ಸೂಕ್ಷ್ಮವಾಗಿ ಹೇಳುತ್ತದೆ. ಬದುಕನ್ನು ತುಂಬ ಧನಾತ್ಮಕವಾಗಿ ನೋಡುತ್ತ, ತಂದೆಯ ಅನಾರೋಗ್ಯದ ಕಾರಣವನ್ನು ತಿಳಿದು, ತನ್ನ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಕನಸು ಕಾಣುತ್ತಿರುವ ನಿರೂಪಕ ಒಂದೆಡೆಯಾದರೆ, ತನ್ನ ವಿದ್ಯಾರ್ಥಿ ಜೀವನದಲ್ಲಿ ಚಿಕ್ಕಪ್ಪನಿಂದಲೇ ಮೋಸಕ್ಕೊಳಗಾಗಿ ಇಡಿ ಮಾನವ ಜನಾಂಗದ ಮೇಲೇಯೇ ಅಪನಂಬಿಕೆಯನ್ನು ಬೆಳೆಸಿಕೊಂಡ ಸೆನ್ಸೈ ಒಂದು ಕಡೆ. ಇವರಿಬ್ಬರ ನಡುವಣ ಕಥೆ ಜಪಾನಿನಲ್ಲಿ ಆಯಾ ಕಾಲದ ಘನತೆಯನ್ನು ಹಾಗೂ ಅಂದಿನ ದುರ್ಬಲತೆಯನ್ನು ಹೇಳುತ್ತಲೇ ಜನಜೀವನದ ಚಿತ್ರಣವನ್ನು ಬಿಚ್ಚಿಡುತ್ತ ಸಾಗುತ್ತದೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು220
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ400 ಗ್ರಾಂ
ಆಯಾಮಗಳು-