ಮುಖ್ಯ ವಿಷಯಕ್ಕೆ ಹೋಗಿ (Skip to main content)
ಲವ್ ಇನ್ ದ  ಟೈಮ್ ಆಫ್ ಕಾಲರಾ
ಹೊಸ ಬಿಡುಗಡೆ16% ರಿಯಾಯಿತಿ
ಅನುವಾದ

ಲವ್ ಇನ್ ದ ಟೈಮ್ ಆಫ್ ಕಾಲರಾ

ಲೇಖಕ: ಟಿ.ಡಿ. ರಾಜಣ್ಣ ತಗ್ಗಿ

₹320₹38016% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಪ್ರೇಮಕತೆಗಳೆಲ್ಲವೂ ಯೌವನದಲ್ಲಿರುವವೇ ಆಗಬೇಕಿಲ್ಲ ಎಂಬಂತೆ ಎಪ್ಪತ್ತೆರಡು ವರ್ಷದ ಮುದಿ ವಯಸ್ಸಿನಲ್ಲೂ ಪ್ರೇಮದ ತೀವ್ರತೆಯನ್ನು ಅತಿ ಕಾಳಜಿಯಿಂದ ಚಿತ್ರಿಸಿದ್ದಾನೆ ಮಾರ್ಕ್ವೆಜ್. ಪ್ರೇಮ, ದಾಂಪತ್ಯ ಮತ್ತು ವ್ಯಭಿಚಾರ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಒಳಿತು ಕೆಡುಕುಗಳೊಂದಿಗೆ ನಿಮಿತ್ತವಿಲ್ಲದೆ ಸಾಗಿ ಹೋಗುವ ಪ್ರೇಮ ಸಂಬಂಧಗಳು ಸರಳ ವ್ಯಾಖ್ಯಾನಗಳಿಗೆ, ಕ್ಷಿಪ್ರ ನಿರ್ಣಯಗಳಿಗೆ ಸಿಗುವಂಥವಲ್ಲ. ‘ನನಗೆ ಪ್ರೀತಿಯ ಹೊರತು ಬೇರಾವುದರ ಮೇಲೂ ಆಸಕ್ತಿಯಿಲ್ಲ’ ಎಂದು ಹೇಳುವ ಫ್ಲೊರೆಂಟಿನೊ ತನ್ನ ಪ್ರೇಯಸಿಯ ಕರುಣಾ ಕಟಾಕ್ಷಕ್ಕಾಗಿ ಐವತ್ತು ವರ್ಷ ಕಣ್ಣಿನಲ್ಲಿ ಎಣ್ಣೆಬಿಟ್ಟುಕೊಂಡು ಕಾಯುತ್ತಲೇ ನೂರಾರು ಹೆಣ್ಣುಗಳ ಜೊತೆ ಪ್ರಣಯ ಸಂಬಂಧದಲ್ಲಿ ಮುಳುಗುತ್ತಾನೆ. ಗಂಡನನ್ನು ಪ್ರಾಣ ಸಮಾನವಾಗಿ ಪ್ರೀತಿಸಿದ ಫರ್ಮಿನಾ ಸಂಸಾರಕೂಪದಲ್ಲಿ ಸಿಕ್ಕಿಕೊಂಡು ದಾಂಪತ್ಯದಲ್ಲಿ ವಿಲವಿಲ ಒದ್ದಾಡುತ್ತಾಳೆ. ಊರನ್ನು ಉದ್ದರಿಸುವುದಕ್ಕೆ ಫಣ ತೊಟ್ಟ ಕುಲೀನ ಮನುಷ್ಯ ಉರ್ಬಿನೊ ಬಲಹೀನ ಕ್ಷಣದಲ್ಲಿ ಬೇರೊಂದು ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳುವ ಮೂಲಕ ತನ್ನ ಸಂಸಾರದಲ್ಲಿ ಸಮಸ್ಯೆ ತಂದುಕೊಳ್ಳುತ್ತಾನೆ. ಈ ಕಾದಂಬರಿಯಲ್ಲಿ ಫರ್ಮಿನಾಳ ದೃಢವಾದ ವ್ಯಕ್ತಿತ್ವವೇ ಕತೆಗೆ ಬಲ. ಆಕೆಗಾಗಿ ಪರಿತಪಿಸುವ ಉರ್ಬಿನೊ ಮತ್ತು ಫ್ಲೊರೆಂಟಿನೊ ಇಬ್ಬರೂ ಒಂದೇ ಗೂಟಕ್ಕೆ ಕಟ್ಟಿಹಾಕಿದ ಎರಡು ಪ್ರಾಣಿಗಳು. ಹದಿನೆಂಟು ವರ್ಷದ ಫರ್ಮಿನಾ ತನ್ನನ್ನು ಬೇಡವೆಂದ ನಂತರ ಐವತ್ತು ವರ್ಷ ಒಂಬತ್ತು ತಿಂಗಳ ನಾಲ್ಕು ದಿನಗಳ ನಂತರ ಆಕೆಯ ಮುಂದೆ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುವ ಅವಕಾಶ ಸಿಕ್ಕ ನಂತರದ ಎರಡು ವರ್ಷಗಳ ಪ್ರೇಮೋನ್ಮಾದದ ಕತೆ ಇದು.

ವಿಶೇಷತೆಗಳು

ISBN978-81-972194-3-6
ಭಾಷೆಕನ್ನಡ
ಪುಟಗಳು356
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ600 ಗ್ರಾಂ
ಆಯಾಮಗಳು-