ಮುಖ್ಯ ವಿಷಯಕ್ಕೆ ಹೋಗಿ (Skip to main content)
ಆರನೇ ಹೆಂಡತಿಯ ಆತ್ಮಕಥೆ
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್8% ರಿಯಾಯಿತಿ
ಅನುವಾದ

ಆರನೇ ಹೆಂಡತಿಯ ಆತ್ಮಕಥೆ

ಲೇಖಕ: ರಾಹು

₹550₹6008% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಪಾಕಿಸ್ತಾನದ ಲೇಖಕಿ ತೆಹಮಿನಾ ದುರ್ರಾನಿಯ ‘ಮಾಯ್ ಫ್ಯೂಡಲ್ ಲಾರ್ಡ್’ ಎಂಬ ಕೃತಿ ಕನ್ನಡದ ಸಾಹಿತ್ಯ ಲೋಕಕ್ಕೆ ಒಂದು ಹೊಸ ಅನುಭವವನ್ನು ತೆರೆದಿಡುವ ಸಾಮರ್ಥ್ಯ ಹೊಂದಿದೆ. ಇದು ತೆಹಮಿನಾಳ ಆತ್ಮಚರಿತ್ರೆಯೂ ಹೌದು; ಅವಳು ಸಕ್ರಿಯವಾಗಿ ತೊಡಗಿಕೊಂಡಿದ್ದ ಪಾಕಿಸ್ತಾನಿ ರಾಜಕಾರಣದ ದಾಖಲೆಯೂ ಹೌದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಪಡುವ ಪಾಡು, ದಾಂಪತ್ಯದ ಪರಿಧಿಯೊಳಗೇ ಎದುರಿಸಬೇಕಾದ ಸಮಸ್ಯೆ ಸವಾಲುಗಳು, ಕೊನೆಗೆ ಗೆದ್ದರೂ ಗೆಲುವಿನಲ್ಲಿಯೂ ಸೋಲಿನ ಅನುಭವ-ಮುಂತಾದ ಸಂಗತಿಗಳನ್ನು ತೆಹಮಿನಾ ದುರ್ರಾನಿಯವರಷ್ಟು ಸಮರ್ಥವಾಗಿ ದಾಖಲಿಸಿದವರು ತುಂಬ ವಿರಳ. ಪುರುಷ ಲೋಕದ ಪಾಶವೀತನವನ್ನು ನಿರ್ಭಿಡೆಯಿಂದ ಬಿಚ್ಚಿಡುವ ದುರ್ರಾನಿಯವರ ಆತ್ಮಚರಿತ್ರೆ, ‘ಆರನೆಯ ಹೆಂಡತಿಯ ಆತ್ಮಕಥೆ’ ಈಗಾಗಲೇ ಅನೇಕ ಭಾಷೆಗಳಿಗೆ ಅನುವಾದಗೊಂಡು ಕೋಟ್ಯಾಂತರ ಪ್ರತಿಗಳು ಮಾರಾಟವಾಗಿರುವ ಕೃತಿ-ಒಂದು ಅರ್ಥದಲ್ಲಿ ಪಾಕಿಸ್ತಾನದ ಪ್ರತಿಯೊಬ್ಬರ ಮನೆಯ ಮಾತಾಗಿರುವ ಕೃತಿ. ತನ್ನ ಪತಿ ಮುಸ್ತಾಫಾಖಾರ್‌ನ ಐದು ಜನ ಹೆಂಡಂದಿರು ಅವನೆಲ್ಲಾ ರಕ್ಕಸತನವನ್ನು ಸಹಿಸಿ ತಿಕಾಮುಖ ಮುಚ್ಚಿಕೊಂಡು ಮೌನದಿಂದಲೇ ನಿರ್ಗಮಿಸಿದರೆ, ಅವನ ಆರನೇ ಹೆಂಡತಿಯಾಗಿದ್ದ ತೆಹಮಿನಾ ದುರ್ರಾನಿ ಕೊನೆಗೂ ಶಕ್ತಿ ಸಂಚಯಿಸಿಕೊಂಡು, ಧೈರ್ಯಸಮನಿಸಿಕೊಂಡು ಹೊಟ್ಟೆ ಬಿಚ್ಚಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ- ತಾನು ಮಾಡಿದ ಪಾಪ, ಮೋಸ ಹಾಗೂ ಧೀಮಂತಿಕೆಯ ಹೋರಾಟದ ಜೊತೆಗೆ ತನ್ನ ಪತಿ ಹಾಗೂ ತಾಯಿಯ ಅಸಹಜ್ಯ, ಅಮಾನವೀಯ ನಡವಳಿಕೆಗಳಿಗೆ ಬೆಲ್ಜಿಯಮ್ ಕನ್ನಡಿ ಹಿಡಿದಿದ್ದಾಳೆ. ಹಾಗಾಗಿ ಇದು ಸ್ವ-ಸಮರ್ಥನೆಗಾಗಿ ಮಾತ್ರ ರಚಿಸಿದ ಕೃತಿಯಲ್ಲ. ಕೃತಿಯುದ್ದಕ್ಕೂ ಇತರರ ಬಗೆಗಿನ ಕಹಿ ಸತ್ಯಗಳನ್ನು ಬರೆದಷ್ಟೇ ನಿಷ್ಠುರವಾಗಿ, ಸತ್ಯನಿಷ್ಠಳಾಗಿ ತನ್ನ ಚ್ಯುತಿ ನ್ಯೂನತೆಗಳನ್ನು ಕೂಡ ದಾಖಲಿಸಿದ್ದಾಳೆ. ಹಾಗಾಗಿ ಇದು ಕನ್ನಡ ಲೋಕಕ್ಕೆಂತೋ ಅಂತೆಯೇ ಭಾರತೀಯ ಭಾಷೆಗಳ ಸಾಹಿತ್ಯ ಲೋಕದಲ್ಲಿಯೂ ಒಂದು ಅನನ್ಯ ಕೃತಿ ಎನಿಸದಿರಲಾರದು

ವಿಶೇಷತೆಗಳು

ISBN978-93-81244-27-2978-9
ಭಾಷೆಕನ್ನಡ
ಪುಟಗಳು608
ಪ್ರಕಟಣೆ ವರ್ಷ2026
ಆವೃತ್ತಿ8
ತೂಕ1099 ಗ್ರಾಂ
ಆಯಾಮಗಳು-