ಅನುವಾದ
ಒಂದು ನೂರು ವರ್ಷಗಳ ಏಕಾಂತ
ಲೇಖಕ: ಡಾ. ವಿಜಯಾ ಸುಬ್ಬರಾಜ್
₹400₹45011% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಈ ಕಾದಂಬರಿಯ ಪಾತ್ರಗಳು ತಮ್ಮ ನೂರು ವರ್ಷಗಳ ಏಕಾಂತದಲ್ಲಿ ಎಲ್ಲವೂ ದೂಳು ಮತ್ತು ಕಸದ ಬಿರುಗಾಳಿಯಲ್ಲಿ ನಿರ್ನಾಮವಾಗುತ್ತದೆಯೆಂದು ಪ್ರಾರಂಭದಲ್ಲೇ ನುಡಿಯಲಾದ ಭವಿಷ್ಯವನ್ನು ಸಮರ್ಥಿಸುತ್ತವೆ. ಭವಿಷ್ಯವಾಣಿಯ ಮತ್ತು ರಕ್ತಸಂಬಂಧಗಳ ನಿಯತಿವಾದ, ಅನೇಕ ಪೀಳಿಗೆಗಳ ಜನರ ಅದೇ ಹೆಸರುಗಳು, ಮಾತುಗಳು ಮತ್ತು ಘಟನೆಗಳು ವಾಸ್ತವಿಕತೆಗೆ ಭ್ರಮಾಲೋಕದ ಬಣ್ಣ ಬಳಿಯುತ್ತವೆ. ಮಾರ್‌ಕೆಸ್ ಸೃಷ್ಟಿಸಿರುವ ಭ್ರಮಾಲೋಕ ವಾಸ್ತವಕ್ಕೆ ತೀರ ಹತ್ತಿರವಾದದ್ದು. ಫ್ಯಾಂಟ್ಯಾಸ್ಟಿಕ್ ಧಾಟಿಯಲ್ಲಿ ಬರೆಯುವ ಲೇಖಕ ಕಣ್ಣಿಗೆ ಕಾಣುವ ವಿವರಗಳನ್ನು ಬರೆಯುವ ಲೇಖಕನಿಗಿಂತ ಹೆಚ್ಚು ಎಚ್ಚರಿಗೆ ವಹಿಸಬೇಕು. ಯಾಕೆಂದರೆ ಆ ಧಾಟಿಯ ಪ್ರಬಂಧ ಧ್ವನಿಗೆ ವಾಸ್ತವ ವಿವರಗಳೇ ಭದ್ರಬುನಾದಿ. ಮಾರ್‌ಕೆಸ್‌ನದು ಎಂಥ ಅನನ್ಯ ರೀತಿಯ ಬರವಣಿಗೆಯೆಂಬುದಕ್ಕೆ ಈ ಕೆಳಗಿನ ಕೆಲವು ಸಾಲುಗಳೇ ನಿದರ್ಶನ:
ಅನೇಕ ತಿಂಗಳ ಕಾಲ ಅವರೆಲ್ಲರ ಜ್ಞಾಪಕಶಕ್ತಿ ಕಳೆದುಹೋಗದಂತೆ ಮಾಡುವ ಸೂತ್ರವನ್ನು ಕಂಡುಹಿಡಿದವನು ಔರೇಲಿಯಾನೊ. ಅದನ್ನವನು ಕಂಡುಹಿಡಿದದ್ದು ಕೇವಲ ಆಕಸ್ಮಿಕವಾಗಿ. ನಿದ್ರೆಯಿಲ್ಲದಿರುವಿಕೆಯಲ್ಲಿ ಅತ್ಯಂತ ಪರಿಣತನೂ ಮೊಟ್ಟ ಮೊದಲಿಗರಲ್ಲೊಬ್ಬನೂ ಆಗಿದ್ದ ಅವನು ಬೆಳ್ಳಿಲೇಪ ಹಾಕುವ ಕಲೆಯನ್ನು ಕರಗತಮಾಡಿಕೊಂಡಿದ್ದ. ಒಂದು ದಿನ ಲೋಹಗಳನ್ನು ಲಟ್ಟಿಸಲು ಬಳಸುವ ಅಡಿಗಲ್ಲನ್ನು ಹುಡುಕುತ್ತಿದ್ದಾಗ ಅವನಿಗೆ ಆದರ ಹೆಸರು ನೆನಪಾಗಲಿಲ್ಲ. ಅವನ ತಂದೆ ಅದನ್ನು ಸ್ಟೇಕ್ ಎಂದ. ಔರೇಲಿಯಾನೊ ಚೂರು ಕಾಗದದಲ್ಲಿ ಸ್ಟೇಕ್ ಎಂದು ಬರೆದು, ಅದನ್ನು ಸಣ್ಣ ಅಡಿಗಲ್ಲಿನ ಬುಡಕ್ಕೆ ಅಂಟಿಸಿದ. ಈ ರೀತಿಯಲ್ಲಿ ಅವನು ಮುಂದೆಂದೂ ಅದರ ಹೆಸರನ್ನು ಮರೆಯುವಂತಿರಲಿಲ್ಲ... ಕೆಲವು ದಿನಗಳ ನಂತರ ಅವನಿಗೆ ಪ್ರಯೋಗಶಾಲೆಯ ಪ್ರತಿಯೊಂದು ವಸ್ತುವನ್ನೂ ನೆನಪಿಸಿಕೊಳ್ಳುವುದು ಕಷ್ಟವೆಂದು ತಿಳಿಯಿತು. ಆಮೇಲೆ ಆ ಎಲ್ಲ ವಸ್ತುಗಳ ಮೇಲೂ ಅವುಗಳ ಹೆಸರುಗಳನ್ನು ಬರೆದು ಅಂಟಿಸಿದ. ಈಗ ಆ ವಸ್ತುಗಳನ್ನು ಗುರುತಿಸಲು ಆ ಚೀಟಿಗಳನ್ನು ಓದಿದರೆ ಸಾಕು. ಅವನ ತಂದೆ ತನ್ನ ಬಾಲ್ಯಕಾಲದ ಪ್ರತಿಯೊಂದು ಘಟನೆಯನ್ನೂ ಮರೆತುಬಿಟ್ಟಿರುವುದಾಗಿ ಹೇಳಿದಾಗ ಔರೇಲಿಯಾನೊ ಅವನಿಗೆ ತನ್ನ ವಿಧಾನವನ್ನು ವಿವರಿಸಿದ. ಹೋಸೆ ಅರ್ಕಾದಿಯೊ ಬುಯೆಂದಿಯಾ ಇಡೀ ಮನೆಯಲ್ಲಿ ಆ ವಿಧಾನವನ್ನು ಬೆಳಕಿಗೆ ತಂದುದಲ್ಲದೆ, ಅದನ್ನು ಇಡೀ ಊರಿನ ಮೇಲೂ ಹೇರಿದ. ಒಂದು ಕುಂಚದಿಂದ ಅವನು ಪ್ರತಿಯೊಂದು ವಸ್ತುವಿನ ಮೇಲೂ ಆಯಾ ಹೆಸರುಗಳನ್ನು ಬರೆದ: ಮೇಜು, ಕುರ್ಚಿ, ಗಡಿಯಾರ, ಬಾಗಿಲು, ಗೋಡೆ, ಹಾಸಿಗೆ, ಕಾವಲಿ, ಕೊಟ್ಟಿಗೆ, ಹೀಗೆ. ಜಾನುವಾರುಗಳ ಹಾಗೂ ಸಸ್ಯಗಳ ಹೆಸರುಗಳನ್ನೂ ಬರೆದ: ಹಸು, ಮೇಕೆ, ಕೋಳಿ, ಮರಗೆಣಸು, ಕಲಾಡಿಯಮ್, ಬಾಳೆ ಇತ್ಯಾದಿ. ಮರೆವಿನ ಅಪಾರ ಸಾಧ್ಯತೆಗಳನ್ನು ಅಭ್ಯಾಸ ಮಾಡುತ್ತ ಅವನು ಚೀಟಿಗಳ ಮೂಲಕ ಮಾತ್ರ ವಸ್ತುಗಳ ಹೆಸರುಗಳನ್ನು ಗುರುತಿಸುವಂಥ ದಿನ ಬರಬಹುದೆಂದೂ ಆಗ ಯಾರಿಗೂ ಆ ವಸ್ತುಗಳ ಉಪಯೋಗ ಏನೆಂದು ತಿಳಿಯಲಾರದೆಂದೂ ಅರಿತುಕೊಂಡ. ಆಮೇಲೆ ಇನ್ನಷ್ಟು ಸ್ಪಷ್ಟವಾಗಿ ವಿವರಗಳನ್ನು ಬರೆಯತೊಡಗಿದ. ಹಸುವಿನ ಕೊರಳಿಗೆ ಕಟ್ಟಿದ ಈ ಸೂಚನೆಗಳು ಮಕಾಂಡೋದ ನಿವಾಸಿಗಳು ಮರೆವಿನ ವಿರುದ್ಧ ಹೋರಾಡಲು ಸಿದ್ಧರಾದ ರೀತಿಗೆ ನಿಜಕ್ಕೂ ಒಂದು ಅತ್ಯುತ್ತಮ ನಿದರ್ಶನ: ಇದು ಹಸು. ಪ್ರತಿದಿನ ಬೆಳಗ್ಗೆ ಇದರ ಹಾಲು ಕರೆಯಬೇಕು. ಅಂದರೆ ಇದು ಹಾಲು ಕೊಡುತ್ತದೆ. ಹಾಲನ್ನು ಕಾಫಿಗೆ ಬೆರೆಸುವುದಕ್ಕಾಗಿ ಕಾಯಿಸಬೇಕು. ಹೀಗೆ ಅವರು ಬೇಗಬೇಗನೆ ನುಣುಸಿಕೊಳ್ಳುತ್ತಿದ್ದ ವಾಸ್ತವಲೋಕದಲ್ಲಿ ಬದುಕತೊಡಗಿದರು. ಅ ವಾಸ್ತವಲೋಕ ಕೆಲವು ಕ್ಷಣಗಳವರೆಗಾದರೂ ಪದಗಳಲ್ಲಿ ಉಳಿದಿರುತ್ತಿತ್ತೆನ್ನಿ. ಆದರೂ ಅವರು ಬರವಣಿಗೆಯ ಬೆಲೆಯನ್ನೇ ಮರೆತುಹೋದ ಮೇಲೆ ಏನು ಪ್ರಯೋಜನ?
ಈ ಕೃತಿಯಲ್ಲಿ ವಾಸ್ತವ ಮತ್ತು ಅದ್ಭುತಗಳು ನಮ್ಮ ಅರಿವಿಗೇ ಬಾರದ ರೀತಿಯಲ್ಲಿ ಒಂದರೊಳಗೊಂದು ಹಾಸುಹೊಕ್ಕಾಗಿವೆ. ಮೊದಲು ಒಂದು ಕುಟುಂಬ, ನಂತರ ಪುರಾಣ ಕತೆಗಳಿಂದ ತುಂಬಿದ ಅರಾಕಾಟಕ ಎಂಬ ಪುಟ್ಟ ಊರು, ಮೂರನೆಯ ಹಂತದಲ್ಲಿ ಇಡೀ ಕೊಲಂಬಿಯ ದೇಶ, ನಾಲ್ಕನೆಯದಾಗಿ ಇಡೀ ಲ್ಯಾಟಿನ್ ಅಮೆರಿಕ, ಕಡೆಗೆ ಮನುಕುಲದ ಚರಿತ್ರೆ - ಹೀಗೆ ಕಾದಂಬರಿಯ ಭಿತ್ತಿ ತುಂಬ ವಿಶಾಲವಾದದ್ದು. ಒಂದು ಜನಸಮುದಾಯಕ್ಕೇ ಮರೆವಿನ ರೋಗ ತಗಲುವುದು, ಬುಯೆಂದಿಯಾ ಎಂಬ ಪೂರ್ವಜ ನೂರಾರು ವರ್ಷ ಬದುಕುವುದು, ರೆಮಿಡಿಯೋಸ್ ಎಂಬ ಸುಂದರಿ ಆಕಾಶಕ್ಕೆ ಹಾರಿಕೊಂಡು ಹೋಗುವುದು, ಜಗಳದಿಂದಾಗಿ ಸಾಯುವವನೊಬ್ಬನ ರಕ್ತ ಊರನ್ನೆಲ್ಲ ಸುತ್ತಿ ಕಡೆಗೆ ಅವನ ತಾಯಿಯಿರುವ ಮನೆಗೆ ಬರುವುದು, ಅಸಂಬದ್ಧ ಸಾಹಸಗಳು, ಅಲೌಕಿಕ ಎನ್ನಬಹುದಾದ ಘಟನೆಗಳು. ಇವೆಲ್ಲವನ್ನೂ ಓದುವ ನಮಗೆ ನಾವೊಂದು ಅದ್ಭುತಲೋಕದಲ್ಲಿ ಸುತ್ತಾಡಿದ ಅನುಭವವಾಗುತ್ತದೆ.
ವಿಶೇಷತೆಗಳು
| ISBN | 978-93-81244-41-594 |
| ಭಾಷೆ | ಕನ್ನಡ |
| ಪುಟಗಳು | 428 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 5 |
| ತೂಕ | 525 ಗ್ರಾಂ |
| ಆಯಾಮಗಳು | - |





