ಮುಖ್ಯ ವಿಷಯಕ್ಕೆ ಹೋಗಿ (Skip to main content)
ಪಂಪಭಾರತ
15% ರಿಯಾಯಿತಿ
ವಿಮರ್ಶೆ

ಪಂಪಭಾರತ

ಲೇಖಕ: ಕೇಶವ ಶರ್ಮ. ಕೆ

₹510₹60015% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಪಂಪ ಭಾರತವನ್ನು ಬರೆದ. ರನ್ನ ಸಾಹಸಭೀಮ ವಿಜಯವನ್ನು ಮರುರೂಪಿಸಿದ. ಚರಿತ್ರೆಯಲ್ಲಿ ಹೀಗೆ ಅನೇಕವು ಆಗಿದೆ. ಹಾಗೆಯೇ ಕೆಲವು ಮಾತ್ರ ನಮ್ಮ ನೆನಪಿಗೆ ಬಾರದೇ ಹೋಗಿರುವುದೂ ಸತ್ಯ. ಆದರೆ ಇವುಗಳನ್ನು ನೋಡಿದರೆ ನಮಗೆ ಒಂದು ಸತ್ಯದ ಅರಿವು ಉಂಟಾಗುತ್ತದೆ. ಚರಿತ್ರೆಯು ಈವತ್ತು ಪ್ರತಿಮೆಗಳೂ ಆಗಿದೆ. ಆದ್ದರಿಂದ ಈವತ್ತು ನಮಗೆ ಚರಿತ್ರೆಯು ಕಥನಗಳ ಥರ ಭಾಸವಾಗುತ್ತವೆ. ಚರಿತ್ರೆಯಲ್ಲಿ ನಾಯಕ ಮತ್ತು ಖಳನಾಯಕರು ಇದ್ದಾರೆ. ಸ್ತ್ರೀಯರೂ ಇದ್ದಾರೆ. ಅದರ ಜೊತೆಗೆ ಒಡೆಯನಿಗೆ ಆತ್ಮಾರ್ಪಣೆ ಮಾಡಿದ ಆಳು ಇದ್ದಾರೆ. ಸ್ವಾಮಿ ಭಕ್ತಿಯನ್ನು ಮೆರೆದ ನಾಯಿಗಳಿಗೆ ಸ್ಮಾರಕವೂ ಇದೆ. ಹೀಗೆ ಚರಿತ್ರೆಯು ನಮಗೆ ಕೆಲವು ಮಾಹಿತಿಗಳನ್ನು ಕೊಡುತ್ತದೆ. ಚರಿತ್ರೆ ಎಂದರೆ ಅದು ನಮ್ಮ ಆಲೋಚನೆಯ ಕ್ರಮದ ಸಂಘರ್ಷವಾಗುತ್ತದೆ. ಅದರಲ್ಲಿ ಮೌಲ್ಯದ ಪ್ರಶ್ನೆಗಳೂ ಇವೆ., ಚರಿತ್ರೆಯಲ್ಲಿ ನಮ್ಮ ಕನಸುಗಳ ರೂಪವೂ ಇದೆ. ಚರಿತ್ರೆ ಎಂದರೆ ಅದು ಬರೀ ವಸ್ತುಗಳ ವಿವರಣೆಯು ಅಲ್ಲ. ಅದರ ಬದಲು ಅದು ಪರಿಕಲ್ಪನೆಗಳ ದ್ವಂದ್ವಾತ್ಮಕವಾದ ಅಧ್ಯಯನವೂ ಆಗಿರುತ್ತದೆ. ಹಾಗೆ ನೋಡಿದರೆ ಒಂದ ಸಮಾಜದಲ್ಲಿ ವಿವಿಧ ಸಮಾಜದ ಒಕ್ಕೂಟಗಳು ಇರುತ್ತವೆ. ಜನಾಂಗಗಳಿಗೆ ಪರಸ್ಪರ ಸಂಬಂಧ ಮತ್ತು ವೈರತ್ವ ಇರುತ್ತವೆ. ಒಂದು ಜನಾಂಗವು ಇನ್ನೊಂದು ಸ್ವೀಕಾರ ಮಾಡುತ್ತದೆ. ಕೆಲವೊಮ್ಮೆ ವಿರೋಧಿಸುತ್ತದೆ. ಚರಿತ್ರೆಯಲ್ಲಿ ಇದು ಬಂದಿದೆ.ಆದ್ದರಿಂದ ಚರಿತ್ರೆ ಎಂದರೆ ಅದು ಜನಾಂಗದ ಇತಿಹಾಸವೂ ಹೌದು. ಅದು ಕುಟುಂಬದ ಇತಿಹಾಸವೂ ಆಗಿರುತ್ತದೆ. ಅದರಲ್ಲಿ ಜನರು ಇದ್ದಾರೆ. ಹಾಗೆಯೇ ಅದರಲ್ಲಿ ವಾಸ್ತವವೂ ಇರುತ್ತದೆ. ವ್ಯಕ್ತಿಗೆ ಚರಿತ್ರೆಯು ಇರುವ ಹಾಗೆ ಒಂದು ಗುಂಪಿಗೂ ಚರಿತ್ರೆಯು ಇರುತ್ತದೆ. ಆದ್ದರಿಂದ ವಾಸ್ತವ ಎನ್ನುವುದು ಈ ಸಂಗತಿಗಳನ್ನು ನಾವು ಹೇಗೆ ಗುರುತಿಸುತ್ತೇವೆ ಎನ್ನುವುದರಲ್ಲಿ ಇದೆ. ಒಂದು ಕ್ಷಣವು ದಾಟಿದ ಕೂಡಲೇ ಅದು ಇತಿಹಾಸವು ಆಗುತ್ತದೆ. ಆದ್ದರಿಂದ ಕಾಲ ಎನ್ನುವುದು ಚಲನಶೀಲವಾಗಿದೆ. ಅದು ಅರ್ಥಪೂರ್ಣವೂ ಹೌದು. ಪಂಪನ ಕೃತಿಗಳ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಅನೇಕ ವಿದ್ವಾಂಸರು ನಮ್ಮ ಮಧ್ಯೆ ಇದ್ದಾರೆ. ಅವರು ಹೇಳಿಕೊಟ್ಟಿದ್ದಾರೆ. ದಾರಿ ತೋರಿಸಿದ್ದಾರೆ. ಅವನ ಕಾವ್ಯವನ್ನು ವಿವಿಧ ರೀತಿಯಲ್ಲಿ ಪ್ರವೇಶಮಾಡಲು ಸಾಧ್ಯ ಎಂದು ಹೇಳಿಕೊಟ್ಟಿದ್ದಾರೆ. ಅದುವೇ ಈ ಕಾವ್ಯದ ವಿಶಿಷ್ಟತೆ. ನನಗೆ ಏನು ದಕ್ಕಿದೆಯೋ ಅದನನ್ನು ಇಲ್ಲಿ ಬರೆದಿದ್ದೇನೆ. ಕೆಲವು ನನ್ನ ಹಿಂದಿನ ಲೇಖನಗಳನ್ನು ಇಲ್ಲಿ ಅನ್ವಯಮಾಡಿದ್ದೇನೆ. ಅನೇಕರು ಹೇಳುತ್ತಾರೆ- ಪಶ್ಚಿಮದ ಸಿದ್ಧಾಂತಗಳು ಇಲ್ಲಿ ಅನ್ವಯವಾಗುವುದಿಲ್ಲ. ಬಹುಶಃ ಅವರ ಮಾತು ಅವರ ಮಟ್ಟಿಗೆ ಸರಿ. ಆದರೆ ಬೇರೆ ಸಾಧ್ಯತೆಗಳು ಇವೆ ಎನ್ನುವುದನ್ನು ಹೇಳಲು ಈ ಪುಸ್ತಕವನ್ನು ಬರೆದಿದ್ದೇನೆ. ಹಳೆಗನ್ನಡದ ಕಾವ್ಯಗಳು ತೆರೆಯದ ಕವಾಟದಲ್ಲಿ ಭದ್ರವಾಗಿ ಕುಳಿತಿವೆ. ಪಂಪಭಾರತವನ್ನು ಈಗಲೂ ನನಗೆ ಸರಿಯಾಗಿ ಓದಲು ಬರುವುದಿಲ್ಲ. ಪಂಪನಿಗೆ ಅನಿಸಿದೆ- ತಾನು ಬರೆಯುತ್ತಿರುವುದು ಲೌಕಿಕದ ಕಾವ್ಯ. ಅದು ಅತ್ಯಂತ ದೊಡ್ಡದಾದ ಕಾವ್ಯವನ್ನು ಅದರ ಅಂದಗೆಡದಂತೆ ಹೇಳುತ್ತಿದ್ದೇನೆ. ನಾವೂ ಲೌಕಿಕದಲ್ಲಿ ಮುಳುಗಿದ್ದೇವೆ. ಆದ್ದರಿಂದಲೇ ನಮಗೆ ಪಂಪಭಾರತವು ಇಷ್ಟವಾಗುತ್ತದೆ. ಕನ್ನಡದ ಅತ್ಯಂತ ಮಹತ್ವದ ವಿದ್ವಾಂಸರು ಈ ಕಾವ್ಯವನ್ನು ಕುರಿತು ಬರೆದಿದ್ದಾರೆ. ಮುಳಿಯರು ನಾಡೋಜ ಪಂಪ ಎಂಬ ಕೃತಿಯನ್ನು ಬರೆದರು. ಅವರ ಪಾಂಡಿತ್ಯದ ಎದುರು ನಿಲ್ಲುವುದೇ ಅತ್ಯಂತ ಕಷ್ಟ. ಆದ್ದರಿಂದ ಇದನ್ನು ಒಂದು ಪ್ರಯತ್ನ ಎಂದು ಭಾವಿಸಿ ಓದಬೇಕೆಂದು ವಿನಂತಿಸುತ್ತೇನೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು516
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ800 ಗ್ರಾಂ
ಆಯಾಮಗಳು-