ಮುಖ್ಯ ವಿಷಯಕ್ಕೆ ಹೋಗಿ (Skip to main content)
ಫಿಲಾಸಫಿ (ಎ ಬುಕ್ ಫಾರ್ ನನ್ ಅಂಡ್ ಆಲ್) “ಇದು ಎಲ್ಲರಿಗಾಗಿ ಮತ್ತು ಯಾರಿಗಾಗಿಯೂ ಅಲ್ಲದ ಪುಸ್ತಕ”
ಹೊಸ ಬಿಡುಗಡೆ4% ರಿಯಾಯಿತಿ
ಅನುವಾದ

ಫಿಲಾಸಫಿ (ಎ ಬುಕ್ ಫಾರ್ ನನ್ ಅಂಡ್ ಆಲ್) “ಇದು ಎಲ್ಲರಿಗಾಗಿ ಮತ್ತು ಯಾರಿಗಾಗಿಯೂ ಅಲ್ಲದ ಪುಸ್ತಕ”

ಲೇಖಕ: ಟಿ.ಡಿ. ರಾಜಣ್ಣ ತಗ್ಗಿ

₹260₹2704% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

‘ಎ ಬುಕ್ ಫಾರ್ ನನ್ ಅಂಡ್ ಆಲ್’ ಎಂಬುದು ಈ ಬರಹದ ಕ್ಯಾಪ್ಷನ್. ಅಂದರೆ ‘ಈ ಪುಸ್ತಕ ಯಾರಿಗಾಗಿಯೂ ಅಲ್ಲ ಮತ್ತು ಎಲ್ಲರಿಗಾಗಿ’ ಎಂದರ್ಥ. ನೀಷೆ ತನ್ನ ಜೀವನವನ್ನು ಬಹುಕಾಲ ಒಂಟಿಯಾಗಿಯೇ ಬದುಕಿದವನು. ಅವನ ಸಮಕಾಲೀನರಲ್ಲಿ ಈತನನ್ನು ಬುದ್ಧಿವಂತನೆಂದು ಅರ್ಥಮಾಡಿಕೊಂಡವರಾರೂ ಇಲ್ಲ. ತನ್ನ ಬರಹಗಳು ತಪ್ಪಾಗಿ ಅರ್ಥ ಮಾಡಿಕೊಳ್ಳಲ್ಪಡುತ್ತವೆಂದು ಅವು ಮೂರ್ಖರ ಕೈಗೆ ಸಿಗುತ್ತವೆಂದು ಮೊದಲೇ ಊಹಿಸಿದ್ದ ನೀಷೆ. ಅವನ ಬರಹಗಳು, ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳದೆ, ಜೀವನದಲ್ಲಿ ಎಂತಹ ಉನ್ನತಾಶಯವೂ ಇಲ್ಲದೆ ಜೀವನ ಸಾಗಿಸುತ್ತಿರುವ ಸಾಮಾನ್ಯರನ್ನು ತೀವ್ರವಾಗಿ ಖಂಡಿಸುವ ರೀತಿಯಲ್ಲಿ ಇರುತ್ತವೆ. ಅದಕ್ಕೇ ಈ ಕೋನದಲ್ಲಿ ಈ ಬರಹ ಯಾರಿಗಾಗಿಯೂ ಅಲ್ಲ ಎನ್ನಬಹುದು. ಇದರಲ್ಲಿ ಜರತೂಸ್ತ್ರ ಬೋಧಿಸುವ ಬೋಧನೆಗಳು ಮನುಕುಲವು ತಮ್ಮನ್ನು ತಾವು ಮೀರಿ ನಿಲ್ಲಬೇಕು. ಪರಿಣಾಮಕ್ರಮದಲ್ಲಿ ಇದ್ದಲ್ಲಿಯೇ ನಿಂತುಬಿಡಕೂಡದು. ಅವರು ತಲುಪಬೇಕಾಗಿರುವುದು ಅತ್ಯುನ್ನತ ಸ್ಥಾನವಾದ ಮಹಾ ಮನುಜನಾಗುವ ಅವಸ್ಥೆಗೆ ಎಂದಾಗಿರುವುದರಿಂದ ಈ ಬರಹ ಎಲ್ಲರಿಗಾಗಿಯೂ ಆಗುತ್ತದೆ. ಆದರೂ ಓದುವುದಕ್ಕೆ ಮತ್ತು ಅರ್ಥಮಾಡಿಕೊಳ್ಳವುದಕ್ಕೆ ಇಷ್ಟೊಂದು ಕಠಿಣವಾದ ಈ ಬರವಣಿಗೆಯನ್ನು ಅರ್ಥ ಮಾಡಿಕೊಂಡವರಿಗಿಂತ ಅಪಾರ್ಥ ಮಾಡಿಕೊಂಡವರೇ ಹೆಚ್ಚು. ಮುಖ್ಯವಾಗಿ ನಾಜಿಗಳು. ಮೊದ ಮೊದಲು ನಾಜಿಗಳ ಕೈಯಲ್ಲಿ ಅತ್ಯಂತ ವ್ಯಂಗ್ಯಕ್ಕೆ ಒಳಗಾದ ರಚನೆಯಾಗಿ ಇದು ಪ್ರಸಿದ್ಧಿ ಹೊಂದಿತು. ಆ ನಂತರ ನಾಜಿಗಳ ಮೇಲೆ ಇದರ ಪ್ರಭಾವ ಎಷ್ಟಾಯಿತು ಎಂದರೆ, ಎರಡನೇ ಜಾಗತಿಕ ಯುದ್ಧದಲ್ಲಿ ‘ದಸ್ ಸ್ಪೋಕ್ ಜರತೂಸ್ತ್ರ’ ಪುಸ್ತಕದ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಿ, ಸೈನ್ಯಕ್ಕೆ ರವಾನೆ ಮಾಡಬೇಕೆಂದು ಹಿಟ್ಲರ್ ಆದೇಶಿಸುವಷ್ಟರ ಮಟ್ಟಿಗೆ...

ವಿಶೇಷತೆಗಳು

ISBN978-81-992174-6-1
ಭಾಷೆಕನ್ನಡ
ಪುಟಗಳು228
ಪ್ರಕಟಣೆ ವರ್ಷ2025
ಆವೃತ್ತಿ1st
ತೂಕ380 ಗ್ರಾಂ
ಆಯಾಮಗಳುBook Size : 1/4 Crown(23x15.5) (International Standard Book Size)